Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- News
ಪಶ್ಚಿಮ ಬಂಗಾಳ ಕಾಶ್ಮೀರವಾದರೆ ತಪ್ಪೇನು ಹೇಳಿ; ಸುವೇಂದುಗೆ ಒಮರ್ ತಿರುಗೇಟು
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೇಶದ ಮೊದಲ ಸಿಎನ್‌ಜಿ ಚಾಲಿತ ಟ್ರಾಕ್ಟರ್ ಬಿಡುಗಡೆಗೊಳಿಸಿದ ನಿತಿನ್ ಗಡ್ಕರಿ
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ದೇಶದ ಮೊದಲ ಸಿಎನ್‌ಜಿ ಚಾಲಿತ ಟ್ರಾಕ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಸಿಎನ್‌ಜಿ ಕಿಟ್ ಹೊಂದಿರುವ ದೇಶದ ಮೊದಲ ಡೀಸೆಲ್ ಟ್ರಾಕ್ಟರ್ ಇದಾಗಿದೆ.

ಈ ಸಿಎನ್‌ಜಿ ಟ್ರಾಕ್ಟರ್ ಅನ್ನು ರಾಮಾತ್ ಟೆಕ್ನೋ ಸೊಲ್ಯೂಷನ್ಸ್ ಹಾಗೂ ಟೊಮಾಸಿಟೊ ಅಚಿಲ್ಲೆ ಇಂಡಿಯಾ ಜಂಟಿಯಾಗಿ ವಿನ್ಯಾಸಗೊಳಿಸಿವೆ. ಈ ಟ್ರ್ಯಾಕ್ಟರ್'ನಿಂದ ವಾರ್ಷಿಕ ರೂ.1.50 ಲಕ್ಷ ಡೀಸೆಲ್ ಉಳಿತಾಯವಾಗಲಿದೆ. ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ ಕೃಷಿಯಿಂದ ಬರುವ ಆದಾಯವನ್ನು ಹೆಚ್ಚಿಸುವುದು ಈ ಟ್ರಾಕ್ಟರ್ ಉತ್ಪಾದನೆಯ ಹಿಂದಿರುವ ಮುಖ್ಯ ಉದ್ದೇಶ.

ಈ ಸಿಎನ್‌ಜಿ ಟ್ರ್ಯಾಕ್ಟರ್ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಧರ್ಮೇಂದ್ರ ಪ್ರಧಾನ್, ಪುರುಷೋತ್ತಮ್ ರೂಪಾಲ ಹಾಗೂ ನಿವೃತ್ತ ಸೇನಾ ಜನರಲ್ ವಿ.ಕೆ ಸಿಂಗ್ ಹಾಜರಿದ್ದರು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟ್ರಾಕ್ಟರುಗಳನ್ನು ಸಿಎನ್‌ಜಿಗೆ ಬದಲಿಸುವ ಕೇಂದ್ರಗಳನ್ನು ಸರ್ಕಾರವು ಸ್ಥಾಪಿಸುತ್ತಿದೆ. ಅಲ್ಲಿ ಸಿಎನ್‌ಜಿ ಕಿಟ್‌ಗಳನ್ನು ಟ್ರಾಕ್ಟರುಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಳವಡಿಸಬಹುದು ಎಂದು ನಿತಿನ್ ಗಡ್ಕರಿ ಹೇಳಿದರು. ದೇಶದ ಪ್ರತಿ ಜಿಲ್ಲೆಯಲ್ಲೂ ಇಂತಹ ಕೇಂದ್ರಗಳನ್ನು ತೆರೆಯುವ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.

ಸಿಎನ್‌ಜಿ ಕಿಟ್ ಅಳವಡಿಸಲಾದ ಮೊದಲ ಟ್ರ್ಯಾಕ್ಟರ್ ಸ್ವತಃ ನಿತಿನ್ ಗಡ್ಕರಿರವರಿಗೆ ಸೇರಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಟ್ರಾಕ್ಟರ್ ನೋಂದಣಿ ಪ್ರಮಾಣಪತ್ರವನ್ನು ನಿತಿನ್ ಗಡ್ಕರಿ ಅವರಿಗೆ ಹಸ್ತಾಂತರಿಸುವ ಮೂಲಕ ಟ್ರ್ಯಾಕ್ಟರ್ ಅನ್ನು ಅನಾವರಣಗೊಳಿಸಿದರು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಿಎನ್‌ಜಿ ಕಿಟ್ ಅಳವಡಿಸಿದ ನಂತರ ಈ ಟ್ರಾಕ್ಟರ್ ಅನ್ನು 6 ತಿಂಗಳ ಕಾಲ ಜಮೀನುಗಳಲ್ಲಿ ಪರೀಕ್ಷಿಸಲಾಗಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು. ಈ ಟ್ರಾಕ್ಟರ್ ಡೀಸೆಲ್‌ನಲ್ಲಿ ಚಲಿಸುವ ಟ್ರಾಕ್ಟರ್‌ನಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಈ ಟ್ರಾಕ್ಟರ್ ಡೀಸೆಲ್ ಟ್ರಾಕ್ಟರುಗಳಿಗಿಂತ 75%ನಷ್ಟು ಕಡಿಮೆ ಮಾಲಿನ್ಯವನ್ನು ಹೊರಸೂಸುತ್ತದೆ. ಸಿಎನ್‌ಜಿ ಟ್ರಾಕ್ಟರುಗಳು ರೈತರಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿವೆ. ಸಿಎನ್‌ಜಿ ಟ್ರಾಕ್ಟರ್ ಡೀಸೆಲ್ ಟ್ರ್ಯಾಕ್ಟರ್‌ಗೆ ಸಮನಾದ ಅಥವಾ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಿಎನ್‌ಜಿ ಟ್ರಾಕ್ಟರುಗಳಿಂದ ಇಂಧನ ವೆಚ್ಚದ ಮೇಲೂ 50%ನಷ್ಟು ಉಳಿತಾಯ ಮಾಡಬಹುದು ಎಂದು ಅವರು ಹೇಳಿದರು. ಈಗ ಒಂದು ಲೀಟರ್ ಡೀಸೆಲ್ ಬೆಲೆ ಸುಮಾರು ರೂ.77.43ಗಳಾದರೆ, 1 ಕೆಜಿ ಸಿಎನ್‌ಜಿ ಬೆಲೆ ರೂ.42 ಗಳಾಗಿದೆ. ಒಬ್ಬ ರೈತ ವರ್ಷದಲ್ಲಿ ಡೀಸೆಲ್‌ಗಾಗಿ ರೂ.3 ಲಕ್ಷದಿಂದ ರೂ.3.5 ಲಕ್ಷಗಳವರೆಗೆ ಖರ್ಚು ಮಾಡಬೇಕಾಗುತ್ತದೆ. ಸಿಎನ್‌ಜಿ ಟ್ರಾಕ್ಟರ್ ಬಳಸುವುದರಿಂದ ವಾರ್ಷಿಕವಾಗಿ ರೂ.1.5 ಲಕ್ಷ ಉಳಿತಾಯವಾಗುತ್ತದೆ.

ಸಿಎನ್‌ಜಿ, ಡೀಸೆಲ್'ನಂತೆಯೇ ಭಾರವಾದ ಲೋಹಗಳನ್ನು ಹೊಂದಿರುವುದಿಲ್ಲ. ಇದರಿಂದ ಟ್ರಾಕ್ಟರ್ ಎಂಜಿನ್‌ಗೆ ತೀರಾ ಕಡಿಮೆ ಹಾನಿಯಾಗುತ್ತದೆ. ಜೊತೆಗೆ ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ವಿಶ್ವಾದ್ಯಂತ 1.20 ಲಕ್ಷಕ್ಕೂ ಹೆಚ್ಚು ಸಿಎನ್‌ಜಿ ವಾಹನಗಳು ಕಾರ್ಯನಿರ್ವಹಿಸುತ್ತಿವೆ ಎಂದು ನಿತಿನ್ ಗಡ್ಕರಿ ಹೇಳಿದರು. ಸಿಎನ್‌ಜಿ ಟ್ರಾಕ್ಟರುಗಳು ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆರಂಭವಾದರೆ ರೈತರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ. ಸಿಎನ್‌ಜಿ ಟ್ರಾಕ್ಟರುಗಳಿಗೆ ಮಾನದಂಡಗಳನ್ನು ನಿಗದಿಪಡಿಸಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು. ಶೀಘ್ರದಲ್ಲೇ ಸಿಎನ್‌ಜಿ ಟ್ರಾಕ್ಟರುಗಳು ಮಾರಾಟಕ್ಕೆ ಲಭ್ಯವಾಗಲಿವೆ.