ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

By Manoj Bk

ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಶೀಘ್ರದಲ್ಲಿಯೇ ಕಾರುಗಳಲ್ಲಿ ಫ್ಲೆಕ್ಸ್ ಎಂಜಿನ್ ಕಡ್ಡಾಯಗೊಳಿಸುವ ಸುಳಿವು ನೀಡಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಸನ್ನಿವೇಶ ಆಧರಿಸಿ ವಿವಿಧ ಕಾರು ಕಂಪನಿಗಳು ಫ್ಲೆಕ್ಸ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಫ್ಲೆಕ್ಸ್ ಇಂಧನವು ಗ್ಯಾಸೋಲಿನ್, ಮೆಥನಾಲ್ ಅಥವಾ ಎಥೆನಾಲ್ ಸಂಯೋಜನೆಯಿಂದ ಮಾಡಿದ ಪರ್ಯಾಯ ಇಂಧನವಾಗಿದೆ. ಭಾರತವು ಪ್ರತಿ ವರ್ಷ ರೂ. 8 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ದೇಶವು ಪೆಟ್ರೋಲ್, ಡೀಸೆಲ್ ಇಂಧನಗಳ ಮೇಲೆ ಅವಲಂಬಿತವಾಗಿದ್ದರೆ, ಮುಂದಿನ ಐದು ವರ್ಷಗಳಲ್ಲಿ ಅದರ ಆಮದು ವೆಚ್ಚವು ರೂ. 25 ಲಕ್ಷ ಕೋಟಿಗಳಿಗೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಪೆಟ್ರೋಲ್, ಡೀಸೆಲ್ ಇಂಧನಗಳ ಆಮದನ್ನು ಕಡಿಮೆ ಮಾಡಲು, ನಾನು ಮುಂದಿನ 2 - 3 ದಿನಗಳಲ್ಲಿ ಆದೇಶವನ್ನು ಹೊರಡಿಸಲಿದ್ದೇನೆ. ಕಾರು ತಯಾರಕ ಕಂಪನಿಗಳು ಫ್ಲೆಕ್ಸ್ ಇಂಧನ ಎಂಜಿನ್ ವಾಹನಗಳನ್ನು (ಒಂದಕ್ಕಿಂತ ಹೆಚ್ಚು ಇಂಧನದಿಂದ ಚಲಾಯಿಸಬಹುದು) ಹೊಂದುವಂತೆ ಕೇಳಿ ಕೊಳ್ಳುತ್ತೇನೆ. ವಾಹನ ತಯಾರಕ ಕಂಪನಿಗಳು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ, ಗ್ರಾಹಕರಿಗೆ ಫ್ಲೆಕ್ಸ್ ಎಂಜಿನ್ ಆಯ್ಕೆಯನ್ನು ನೀಡುತ್ತಾರೆ ಎಂದು ಅವರು ಭಾವಿಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ವಾಹನ ತಯಾರಕ ಕಂಪನಿಗಳು 100% ಪೆಟ್ರೋಲ್ ಅಥವಾ ಜೈವಿಕ ಎಥೆನಾಲ್‌ನಿಂದ ಚಲಿಸುವಂತಹ ವಾಹನಗಳ ಆಯ್ಕೆಯನ್ನು ನೀಡಬೇಕು ಎಂದು ಗಡ್ಕರಿ ಹೇಳಿದರು. ಅಂತಹ ವಾಹನಗಳಿಗೆ ಅನುಮತಿ ನೀಡಲು ಸರ್ಕಾರವು ಸಂಪೂರ್ಣ ಸಿದ್ಧವಾಗಿದೆ. ಫ್ಲೆಕ್ಸ್ ಫ್ಯುಯಲ್ ಇಂಜಿನ್ ತಂತ್ರಜ್ಞಾನವು ಸುಲಭವಾಗಿ ಲಭ್ಯವಿದ್ದು, ಆಟೋ ಕಂಪನಿಗಳು ಬಯಸಿದರೆ, ಭಾರತೀಯ ಆಟೋ ಉದ್ಯಮವು ಶುದ್ಧ ಇಂಧನದತ್ತ ದೊಡ್ಡ ಹೆಜ್ಜೆ ಇಡಬಹುದು ಎಂದು ಅವರು ಹೇಳಿದರು.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಫ್ಲೆಕ್ಸ್ ಇಂಧನ ಬಳಕೆಗೆ ಒತ್ತು ನೀಡುತ್ತಿದೆ. ಇದಕ್ಕಾಗಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸಲು ಸರ್ಕಾರ ಅನುಮೋದನೆ ನೀಡಿದೆ. ಕಳೆದ ಮಾರ್ಚ್ 8 ರಂದು, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು E20 ಇಂಧನ ಬಳಕೆಯನ್ನು ಅನುಮೋದಿಸುವ ಅಧಿಸೂಚನೆಯನ್ನು ಹೊರಡಿಸಿತ್ತು. E20 ಇಂಧನವು 20% ಎಥೆನಾಲ್ ಹಾಗೂ 80% ಪೆಟ್ರೋಲ್ ಮಿಶ್ರಣವನ್ನು ಹೊಂದಿರುತ್ತದೆ.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಫ್ಲೆಕ್ಸ್ ಇಂಧನದಿಂದಾಗುವ ಪ್ರಯೋಜನಗಳು

ಫ್ಲೆಕ್ಸ್ ಇಂಧನದಿಂದ ಭಾರತದಲ್ಲಿ ಪ್ರತಿ ವರ್ಷ ರೂ. 1 ಲಕ್ಷ ಕೋಟಿಗೂ ಹೆಚ್ಚು ಎಥೆನಾಲ್ ವ್ಯವಹಾರ ಮಾಡಬಹುದು. ಎಥೆನಾಲ್ ಬಳಕೆಯಿಂದ ಪೆಟ್ರೋಲ್ ಆಮದು ಕಡಿಮೆಯಾಗಲಿದ್ದು, ಕೋಟ್ಯಂತರ ರೂಪಾಯಿ ಆದಾಯ ಉಳಿತಾಯವಾಗಲಿದೆ. ಇದಲ್ಲದೇ ಎಥೆನಾಲ್ ಮಿಶ್ರಿತ ಫ್ಲೆಕ್ಸ್ ಇಂಧನ ಬಳಕೆಯಿಂದ ವಾಯು ಮಾಲಿನ್ಯವೂ ಕಡಿಮೆಯಾಗಲಿದೆ.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಬ್ರೆಜಿಲ್, ಕೆನಡಾ ಹಾಗೂ ಅಮೆರಿಕಾದಂತಹ ದೇಶಗಳು ಫ್ಲೆಕ್ಸ್ ಇಂಧನದಲ್ಲಿ ಚಲಿಸುವ ವಾಹನಗಳನ್ನು ಉತ್ಪಾದಿಸುತ್ತವೆ. ಇಲ್ಲಿ ಗ್ರಾಹಕರು 100% ಪೆಟ್ರೋಲ್ ಅಥವಾ 100% ಎಥೆನಾಲ್'ನಲ್ಲಿ ಚಲಿಸುವ ವಾಹನಗಳನ್ನು ಆಯ್ಕೆ ಮಾಡಬಹುದು.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಎಥೆನಾಲ್ ಇಂಧನದ ಬೆಲೆ ಪೆಟ್ರೋಲ್ ಗಿಂತ ರೂ. 30 ರಿಂದ ರೂ. 35 ಗಳಷ್ಟು ಕಡಿಮೆಯಾಗಲಿದೆ. ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆಯಿಂದ ಸಂಪೂರ್ಣವಾಗಿ ಎಥೆನಾಲ್'ನಲ್ಲಿ ಚಲಿಸುವ ವಾಹನಗಳು ಪರಿಣಾಮ ಬೀರುವುದಿಲ್ಲ. ಎಥೆನಾಲ್ ತಯಾರಿಸಲು ನಮ್ಮ ದೇಶದಲ್ಲಿ ಸಾಕಷ್ಟು ಪ್ರಮಾಣದ ಜೋಳ, ಕಬ್ಬು ಮತ್ತು ಗೋಧಿಯನ್ನು ಬೆಳೆಯಬಹುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ವಾಹನ ತಯಾರಕ ಕಂಪನಿಗಳು ಫ್ಲೆಕ್ಸ್ ಇಂಜಿನ್ ವಾಹನಗಳನ್ನು ಪರಿಚಯಿಸಿದರೆ, ಅಗ್ಗದ ಇಂಧನದ ಪ್ರಯೋಜನವನ್ನು ಪಡೆಯುತ್ತೇವೆ. ಜೊತೆಗೆ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಮುಂದಿನ ಕೆಲವೇ ವರ್ಷಗಳಲ್ಲಿ ಭಾರತದ ರಸ್ತೆಗಳು ಅಮೆರಿಕಾದ ರಸ್ತೆಗಳಿಗೆ ಸಮಾನಾಂತರವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಕೆಲವು ದಿನಗಳ ಹಿಂದಷ್ಟೇ ಹೇಳಿದ್ದರು. ಮುಂದಿನ 3 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಪಶ್ಚಿಮ ಯುರೋಪ್‌ನ ರಸ್ತೆಗಳಿಗೆ ಸಮಾನಾಂತರವಾಗಲಿದೆ ಎಂದು ಅವರು ಹೇಳಿದ್ದರು.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಜಮ್ಮು ಮತ್ತು ಕಾಶ್ಮೀರದಲ್ಲಿ 25 ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಶಿಲಾನ್ಯಾಸ ಸಮಾರಂಭದಲ್ಲಿ ಸಚಿವ ನಿತಿನ್ ಗಡ್ಕರಿ ಹೇಳಿದರು. ಈ ಯೋಜನೆಗೆ ಅಂದಾಜು ರೂ. 11,721 ಕೋಟಿ ವೆಚ್ಚವಾಗಲಿದೆ. ಈ ಯೋಜನೆಯಡಿಯಲ್ಲಿ 259 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ಈ ಹೆದ್ದಾರಿಗಳು ಹಾಗೂ ಸುರಂಗಗಳು ಅಮೆರಿಕಾದ ಗುಣಮಟ್ಟಕ್ಕೆ ಸಮನಾಗಿರಲಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ ಎಂದು ಗಡ್ಕರಿ ಹೇಳಿದರು.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಈ ಹೊಸ ರಸ್ತೆಗಳಿಂದ ಜಮ್ಮುವಿನಿಂದ ಶ್ರೀನಗರಕ್ಕೆ ಕೇವಲ 4 ಗಂಟೆಗಳಲ್ಲಿ ಹಾಗೂ ದೆಹಲಿಯಿಂದ ಶ್ರೀನಗರಕ್ಕೆ ಕೇವಲ 8 ಗಂಟೆಗಳಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ. ಇತರ ರಾಜ್ಯಗಳ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇದರಿಂದ ಪ್ರಮುಖ ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಸಚಿವ ನಿತಿನ್ ಗಡ್ಕರಿ ರವರು ರಸ್ತೆಗಳ ಬಗ್ಗೆ ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನಗಳ ಬಗ್ಗೆಯೂ ಮಾತನಾಡಿದ್ದಾರೆ. ಅವರ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗಿರಲಿದೆ. ಇದು ನಿಜವಾದರೆ ಸಾರ್ವಜನಿಕರು ಸಂತಸಪಡುವುದರಲ್ಲಿ ಸಂಶಯವಿಲ್ಲ. ಈಗ ಎಲೆಕ್ಟ್ರಿಕ್ ವಾಹನಗಳು ದುಬಾರಿ ಬೆಲೆಯನ್ನು ಹೊಂದಿವೆ.

ಶೀಘ್ರದಲ್ಲಿಯೇ ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಎಂಜಿನ್

ಈ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಒಂದು ವೇಳೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾದರೆ, ಎಲೆಕ್ಟ್ರಿಕ್ ವಾಹನಗಳನ್ನು ಪೆಟ್ರೋಲ್ ವಾಹನಗಳ ರೀತಿಯಲ್ಲಿ ಖರೀದಿಸಲು ಜನರು ಮುಂದಾಗುತ್ತಾರೆ. ಇದರಿಂದ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಭಾರತದ ಪರಿಸರಕ್ಕೂ ಅನುಕೂಲವಾಗಲಿದೆ.

Most Read Articles

Kannada
English summary
Nitin gadkari to issue circular about flex engine in cars soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X