ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಸೆಗ್ ಮೆಂಟ್ ಭಾರತದ ಜನಪ್ರಿಯ ಸೆಗ್ ಮೆಂಟ್ ಆಗಿದೆ. ಈ ಸೆಗ್ ಮೆಂಟಿನಲ್ಲಿರುವ ಕಾರುಗಳಿಗೆ ಭಾರತೀಯ ಗ್ರಾಹಕರು ಹೆಚ್ಚು ಆದ್ಯತೆ ನೀಡುತ್ತಾರೆ. ಸದ್ಯಕ್ಕೆ ಈ ಸೆಗ್ ಮೆಂಟಿನಲ್ಲಿ Hyundai i 20, Maruti Suzuki Baleno, Tata Altroz ಹಾಗೂ Honda Jazz ನಂತಹ ಕಾರುಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ ಮೆಂಟಿನಲ್ಲಿ ಪ್ರತಿ ತಿಂಗಳು ಹೆಚ್ಚು ಕಾರುಗಳು ಮಾರಾಟವಾಗುತ್ತವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

ಈ ಸೆಗ್ ಮೆಂಟಿನಲ್ಲಿ Maruti Suzuki Baleno ಪ್ರಾಬಲ್ಯವನ್ನು ಹೊಂದಿದೆ, ಪ್ರತಿ ತಿಂಗಳು Maruti Suzuki Baleno ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಕಳೆದ ತಿಂಗಳು ಈ ಸೆಗ್ ಮೆಂಟಿನಲ್ಲಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ಮಾರಾಟವಾಗಿದ್ದವು. ಆದರೂ ಈ ಸೆಗ್ ಮೆಂಟಿನಲ್ಲಿರುವ ಕಾರು ತಯಾರಕ ಕಂಪನಿಗಳು ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಕಾರುಗಳ ಮೇಲೆ ಹಲವು ಕೊಡುಗೆಗಳನ್ನು ನೀಡುತ್ತಿವೆ. ಮಾಹಿತಿಗಳ ಪ್ರಕಾರ, ಈ ತಿಂಗಳು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ ಮೆಂಟಿನಲ್ಲಿರುವ ಕಾರುಗಳ ಮೇಲೆ ರೂ. 40,000 ವರೆಗಿನ ಪ್ರಯೋಜನಗಳು ದೊರೆಯಲಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

1. Hyundai i 20

Hyundai ಮೋಟಾರ್ ಇಂಡಿಯಾ ಈ ತಿಂಗಳು i 20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮೇಲೆ ರೂ. 40,000 ವರೆಗಿನ ಕೊಡುಗೆಗಳನ್ನು ನೀಡುತ್ತಿದೆ. i 20 ಕಾರಿನ ಮೇಲೆ ರೂ. 25,000 ನಗದು ರಿಯಾಯಿತಿ, ರೂ. 10,000 ವಿನಿಮಯ ಬೋನಸ್ ಹಾಗೂ ರೂ. 5,000 ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

ಆದರೆ i 20 ಕಾರಿನ iMT Turbo ಮಾದರಿಯ ಮೇಲೆ ಈ ಕೊಡುಗೆ ನೀಡಲಾಗುತ್ತದೆ. ಡೀಸೆಲ್ ಮಾದರಿಯ ಮೇಲೆ ಯಾವುದೇ ನಗದು ರಿಯಾಯಿತಿ ನೀಡಲಾಗುವುದಿಲ್ಲ. ಆದರೆ ಈ ಮಾದರಿಯ ಮೇಲೆ ವಿನಿಮಯ ಬೋನಸ್ ಹಾಗೂ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತದೆ. ಪೆಟ್ರೋಲ್ ಹಾಗೂ ಟರ್ಬೊ ಪೆಟ್ರೋಲ್ ಡಿಸಿಟಿ ಮಾದರಿಗಳ ಮೇಲೆ ಯಾವುದೇ ಕೊಡುಗೆಗಳನ್ನು ನೀಡುತ್ತಿಲ್ಲ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

2. Tata Altroz

Tata Motors ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್ ಬ್ಯಾಕ್ Tata Altroz ಕಾರಿನ ಮೇಲೆ ರೂ. 15,000 ಗಳ ನಗದು ರಿಯಾಯಿತಿ ನೀಡುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಕಾರಿನ XZ ಟಾಪ್ ಎಂಡ್ ಮಾದರಿಯ ಮೇಲೆ ಮಾತ್ರ ಈ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ, ಬೇರೆ ಯಾವುದೇ ಮಾದರಿಗಳ ಮೇಲೆ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

3. Honda Jazz

Honda Cars India ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಪ್ರೀಮಿಯಂ Honda Jazz ಕಾರಿನ ಮೇಲೆ ರೂ. 39,950 ವರೆಗಿನ ಕೊಡುಗೆಗಳನ್ನು ನೀಡುತ್ತಿದೆ. ಈಕಾರಿನ ಮೇಲೆ Honda ಕಂಪನಿಯು ರೂ 10,000 ನಗದು ರಿಯಾಯಿತಿ, ಆಕ್ಸೆಸರಿಸ್ ಮೇಲೆ ರೂ. 11,950, ರೂ. 10,000 ವಿನಿಮಯ ರಿಯಾಯಿತಿ, ಲಾಯಲ್ಟಿ ಬೋನಸ್ ರೂ. 5,000 ಹಾಗೂ ರೂ. 9,000 ವಿನಿಮಯ ಬೋನಸ್ ನೀಡುತ್ತಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

ಇದರ ಹೊರತಾಗಿ ಕಂಪನಿಯು ಈ ಕಾರಿನ ಮೇಲೆ ರೂ. 4,000 ಗಳ ಕಾರ್ಪೊರೇಟ್ ರಿಯಾಯಿತಿಯನ್ನು ಸಹ ನೀಡುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ ಗ್ರಾಹಕರು ರೂ. 10,000 ನಗದು ರಿಯಾಯಿತಿ ಅಥವಾ ರೂ. 11,947 ರವರೆಗಿನ ಉಚಿತ ಪರಿಕರಗಳ ನಡುವೆ ಆಯ್ಕೆ ಮಾಡಬಹುದು. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 7.65 ಲಕ್ಷಗಳಿಂದ ರೂ. 9.89 ಲಕ್ಷಗಳಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

4. Maruti Suzuki Baleno

Maruti Suzuki Baleno ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಕಾರ್ ಆಗಿದೆ. Maruti Suzuki ಕಂಪನಿಯು ಸೆಪ್ಟೆಂಬರ್ ತಿಂಗಳಲ್ಲಿ ಈ ಕಾರಿನ ಮೇಲೆ ರೂ. 23,000 ಗಳವರೆಗೆ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ ರೂ 10,000 ನಗದು ರಿಯಾಯಿತಿ, ರೂ. 10,000 ವಿನಿಮಯ ಬೋನಸ್ ಹಾಗೂ ರೂ. 3,000 ಕಾರ್ಪೋರೇಟ್ ಬೋನಸ್ ಸೇರಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

ಗಮನಿಸಬೇಕಾದ ಸಂಗತಿಯೆಂದರೆ ಮ್ಯಾನುಯಲ್ ಮಾದರಿಗಳನ್ನು ಖರೀದಿಸುವವರಿಗೆ ಮಾತ್ರ ಈ ಕೊಡುಗೆಗಳನ್ನು ನೀಡಲಾಗುತ್ತದೆ. Baleno ಕಾರಿನ CVT ಮಾದರಿಯ ಮೇಲೆ ಯಾವುದೇ ನಗದು ರಿಯಾಯಿತಿಯನ್ನು ನೀಡಲಾಗುವುದಿಲ್ಲ. ಆದರೆ ಈ ಮಾದರಿಯ ಮೇಲೆ ವಿನಿಮಯ ಹಾಗೂ ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡಲಾಗುತ್ತದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾಹನ ತಯಾರಕ ಕಂಪನಿಗಳು ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕೆಲವು ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಬಾರಿ ಎಸ್‌ಯು‌ವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

ಕೆಲವು ಕಂಪನಿಗಳು ಹೊಸ ಹೊಸ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದರೆ, ಇನ್ನೂ ಕೆಲವು ಕಂಪನಿಗಳು ಈಗಿರುವ ವಾಹನಗಳನ್ನು ಅಪ್ ಡೇಟ್ ಮಾಡಿ ಅವುಗಳ ಫೇಸ್ ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತಿವೆ. ಈಗ ಬಿಡುಗಡೆಯಾಗುತ್ತಿರುವ ಬಹುತೇಕ ವಾಹನಗಳು ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳ ಅನುಸಾರವಾಗಿಯೇ ತಯಾರಾಗುತ್ತಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯಾಚ್‌ಬ್ಯಾಕ್ ಕಾರು ಖರೀದಿಸುವವರಿಗೆ ದೊರೆಯುವ ಕೊಡುಗೆಗಳಿವು

ಈ ಮಾನದಂಡಗಳಲ್ಲಿ ಸುರಕ್ಶತಾ ಫೀಚರ್ ಗಳ ಕಡ್ಡಾಯ ಅಳವಡಿಕೆಯು ಸಹ ಸೇರಿದೆ. ಕೇಂದ್ರ ಸರ್ಕಾರವು ಇನ್ನು ಮುಂದೆ ಬಿಡುಗಡೆಯಾಗುವ ಎಲ್ಲಾ ಕಾರುಗಳು ಕಡ್ಡಾಯವಾಗಿ ಫ್ರಂಟ್ ಏರ್ ಬ್ಯಾಗ್ ಗಳನ್ನು ಹೊಂದಿರ ಬೇಕೆಂದು ತಿಳಿಸಿದೆ.

Most Read Articles

Kannada
English summary
Offers available on premium hatchback cars for september 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X