ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ ಜನಪ್ರಿಯ ಕ್ಯಾಬ್ ಸೇವಾ ಕಂಪನಿಯಾದ Ola ಈಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಲು ಸಜ್ಜಾಗಿದೆ ಎಂದು ವರದಿಯಾಗಿದೆ. ಈ ಮೂಲಕ Maruti Suzuki ಹಾಗೂ Mahindra and Mahindra ಕಂಪನಿಗಳಿಗೆ ಪೈಪೋಟಿ ನೀಡಲು ಮುಂದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಹಲವು ವರ್ಷಗಳಿಂದ ಕ್ಯಾಬ್ ಸೇವೆ ನೀಡುತ್ತಿದ್ದ Ola ಕೆಲವು ತಿಂಗಳ ಹಿಂದಷ್ಟೇ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಮುಂದಾಯಿತು. ಕಂಪನಿಯು ಕೆಲ ದಿನಗಳ ಹಿಂದಷ್ಟೇ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. Ola ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು S 1 ಹಾಗೂ S 1 Pro ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಗ್ರಾಹಕರು ರೂ. 499 ಪಾವತಿಸಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಬಹುದು. Ola ಆಪ್ ಹಾಗೂ ವೆಬ್‌ಸೈಟ್ ಮೂಲಕ ಈ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಬಹುದು. ಈಗ Ola ಕಂಪನಿಯು ಮತ್ತೊಂದು ವ್ಯವಹಾರವನ್ನು ಆರಂಭಿಸಲು ಮುಂದಾಗಿರುವ ಬಗ್ಗೆ ವರದಿಯಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಬಳಸಿದ ಕಾರುಗಳ ಖರೀದಿ ಹಾಗೂ ಮಾರಾಟದಲ್ಲಿ Ola ಕಂಪನಿಯು ಪರಿಣತಿ ಹೊಂದಿದೆ. ಕಂಪನಿಯು ಈ ವ್ಯವಹಾರಕ್ಕಾಗಿ ವೆಬ್ ಸೈಟ್ ಅನ್ನು ರಚಿಸುವ ಪ್ರಕ್ರಿಯೆಯಲ್ಲಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಹೊಸ ಕಾರುಗಳ ಮಾರಾಟದ ಜೊತೆಗೆ ಬಳಸಿದ ಕಾರುಗಳ ಮಾರಾಟವೂ ಸಹ ಹೆಚ್ಚು ಜನಪ್ರಿಯವಾಗುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಈ ಕಾರಣಕ್ಕಾಗಿಯೇ ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳು ಸಹ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿವೆ. Maruti Suzuki ಹಾಗೂ Mahindra and Mahindra ಕಂಪನಿಗಳು ಈ ಉದ್ಯಮದಲ್ಲಿ ತೊಡಗಿಸಿ ಕೊಂಡು ಯಶಸ್ಸು ಕಂಡಿವೆ. ಇತ್ತೀಚೆಗೆ Mahindra and Mahindra ಕಂಪನಿಯು ಒಂದೇ ದಿನ 75 ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಳಿಗೆಗಳನ್ನು ತೆರೆಯಿತು.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಈ ಮಾರಾಟ ಮಳಿಗೆಗಳನ್ನು ಬಳಸಿದ ಕಾರುಗಳ ಮಾರಾಟಕ್ಕಾಗಿಯೇ ಮೀಸಲಿಡಲಾಗಿದೆ. ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳು ಆಸಕ್ತಿ ತೋರಿಸುತ್ತಿವೆ. Ola ಕಂಪನಿಯು ಈ ಕಂಪನಿಗಳಿಗೆ ಪೈಪೋಟಿ ನೀಡುವ ಸಲುವಾಗಿ ಉದ್ಯಮಕ್ಕೆ ಪ್ರವೇಶಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

Ola ಕಂಪನಿಯು ಟ್ರೈ ಅಂಡ್ ಬೈ ವ್ಯವಹಾರವನ್ನು ಶುರು ಮಾಡುತ್ತಿದ್ದೆ. ಕಂಪನಿಯು ಇದಕ್ಕಾಗಿ ಮೀಸಲಾದ ವೇದಿಕೆಯನ್ನು ಆರಂಭಿಸುತ್ತಿದೆ ಎಂದು ವರದಿಯಾಗಿದೆ. ಈ ಸೈಟ್ ಮೂಲಕ ಕಂಪನಿಯು ಬಳಸಿದ ವಾಹನಗಳ ಖರೀದಿ ಹಾಗೂ ಮಾರಾಟ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಲು ಉದ್ದೇಶಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಇದರ ಜೊತೆಗೆ Ola ಕಂಪನಿಯು ಈ ಬಳಸಿದ ಕಾರುಗಳಿಗೆ ವಾರಂಟಿ ಹಾಗೂ ಇಎಂಐ (ಕ್ರೆಡಿಟ್) ನೀಡಲು ನಿರ್ಧರಿಸಿದೆ. ಈ ಮೂಲಕ ಕ್ಯಾಬ್ ಸೇವೆಯಲ್ಲಿ ಜನಪ್ರಿಯವಾಗಿರುವ Ola ಕಂಪನಿಯು ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾರುಕಟ್ಟೆಯಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಗಳಿವೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಬಿ ಅಂಡ್ ಎಸ್ ಸಂಶೋಧನೆಗಳ ಪ್ರಕಾರ, ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಉಜ್ವಲ ಭವಿಷ್ಯವಿದೆ ಎಂದು ಹೇಳಲಾಗಿದೆ. ಕಂಪನಿಯ ಪ್ರಕಾರ ಬಳಸಿದ ಕಾರು ಮಾರುಕಟ್ಟೆಯ ವಹಿವಾಟು 2030 ರ ವೇಳೆಗೆ 70.8 ಬಿಲಿಯನ್‌ ಡಾಲರ್ ಗಳಿಗೆ ಏರಿಕೆಯಾಗಲಿದೆ. 2020 ರ ವೇಳೆಗೆ ಈ ಮಾರುಕಟ್ಟೆಯು 18.3 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿತ್ತು. ಈಗ ಈ ಪ್ರಮಾಣವು ಹಲವಾರು ಪಟ್ಟು ಹೆಚ್ಚಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಕಾರ್ 24, ಕಾರ್‌ಟ್ರೇಡ್, ಡ್ರಮ್, ಸ್ಪಿನ್ನಿ ಹಾಗೂ ಕಾರ್ಟೆಕೊ ಸೇರಿದಂತೆ ಹಲವು ಸ್ಟಾರ್ಟ್ ಅಪ್‌ ಕಂಪನಿಗಳಿಂದ ಈ ಮಾರುಕಟ್ಟೆಯು ಈಗಾಗಲೇ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಸನ್ನಿವೇಶದಲ್ಲಿ ಬಳಸಿದ ಕಾರುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು Ola ಕಂಪನಿಯು ಹೊಸ ವೇದಿಕೆಯನ್ನು ರಚಿಸಲು ಸಿದ್ದತೆ ನಡೆಸುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಕಳೆದ ತಿಂಗಳ 15 ರಂದು, Ola ಕಂಪನಿಯು ತನ್ನ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಮೊದಲೇ ಹೇಳಿದಂತೆ Ola ಕಂಪನಿಯ S 1 ಹಾಗೂ S 1 Pro ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಲಾಯಿತು. ಇವುಗಳಲ್ಲಿ S 1 ಮಾದರಿಯ ಬೆಲೆ ರೂ. 99,999 ಗಳಾದರೆ, S 1 Pro ಮಾದರಿಯ ಬೆಲೆ ರೂ. 1,29,999 ಗಳಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ನಂತರ ಹೊಸ ಉದ್ಯಮಕ್ಕೆ ಕೈ ಹಾಕಿದ Ola

ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಉತ್ಪಾದನೆಗೆ Ola ಕಂಪನಿಯು ತಮಿಳುನಾಡಿನ ಹೊಸೂರಿನಲ್ಲಿ ಉತ್ಪಾದನಾ ಘಟಕವನ್ನು ತೆರೆದಿದೆ. ಈ ಉತ್ಪಾದನಾ ಘಟಕವನ್ನುಸುಮಾರು 500 ಎಕರೆ ಪ್ರದೇಶದಲ್ಲಿ ಸಿದ್ಧಪಡಿಸಲಾಗುತ್ತಿದೆ. ಇಲ್ಲಿ ಮಾನವರು ಹಾಗೂ ಆಟೋಮ್ಯಾಟಿಕ್ ರೋಬೋಟ್‌ಗಳು ಒಟ್ಟಿಗೆ ಕೆಲಸ ಮಾಡಲಿವೆ.

Most Read Articles

Kannada
English summary
Ola to start marketplace for used cars through try and buy details
Story first published: Saturday, September 4, 2021, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X