Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 5 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 15 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- News
ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು!
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೇಂದ್ರದ ಗುಜುರಿ ನೀತಿ: ಮಾಲೀಕರಿಗೆ ಬಿಸಿತುಪ್ಪವಾಗಿ ಪರಿಣಮಿಸಲಿವೆ ಹಳೆಯ ವಾಹನಗಳ ನಿರ್ವಹಣೆ
ಆರ್ಥಿಕ ಉತ್ತೇಜನ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಅವಧಿ ಮೀರಿದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುವ ಮಹತ್ವದ ನಿರ್ಣಯ ಪ್ರಕಟಿಸಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಹಳೆಯ ವಾಹನಗಳ ನಿರ್ವಹಣೆ ಮತ್ತಷ್ಟು ದುಬಾರಿಯಾಗಲಿದೆ.

ವಿವಿಧ ಹಂತದ ಮಾತುಕತೆ ಮತ್ತು ತಜ್ಞರ ಅಭಿಪ್ರಾಯದಂತೆ 2021-22ರ ಕೇಂದ್ರ ಸರ್ಕಾರ ಬಜೆಟ್ ಮಂಡನೆ ವೇಳೆ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಯನ್ನು ಪ್ರಸ್ತಾಪಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸದಾಗಿ ಜಾರಿಗೆ ತರಲಾಗುತ್ತಿರುವ ವಾಹನ ಸ್ಕ್ರ್ಯಾಪೇಜ್ ನೀತಿಯು ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ಮತ್ತು ಆರ್ಥಿಕವಾಗಿ ಭಾರೀ ನಷ್ಟದಲ್ಲಿರುವ ಆಟೋ ಉದ್ಯಮಕ್ಕೆ ವರವಾಗಲಿದೆ ಎಂದಿದ್ದಾರೆ.

ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಪ್ರಕಟಿಸುವುದಾಗಿ ಹೇಳಿರುವ ವಿತ್ತ ಸಚಿವರು ಹಳೆಯ ವಾಹನಗಳಿಗೆ ಮತ್ತು ಅನರ್ಹ ವಾಹನಗಳಿಗೆ ಪ್ರತ್ಯೇಕ ಸ್ಕ್ರ್ಯಾಪೇಜ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಯು 2022ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ.

20 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ವಾಹನಗಳನ್ನು ಹೊಸ ನೀತಿಯಡಿಯಲ್ಲಿ ಸ್ಕ್ರ್ಯಾಪ್‌ಗೊಳ್ಳಲಿದ್ದು, ಅವಧಿ ಮುಗಿದ ನಂತರವೂ ಹಳೆಯ ವ್ಯಯಕ್ತಿಕ ಬಳಕೆಯ ವಾಹನಗಳ ಸಂಚಾರವನ್ನು ಮುಂದುವರಿಸಬೇಕಿದ್ದಲ್ಲಿ ಹಲವಾರು ಕಠಿಣ ಕ್ರಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಅವಧಿ ಮುಗಿದ ವ್ಯಯಕ್ತಿಕ ವಾಹನಗಳ ಬಳಕೆಯನ್ನು ಮುಂದುವರಿಸುವ ಆಸಕ್ತಿ ಇದ್ದಲ್ಲಿ ವಿವಿಧ ಹಂತದ ಮಾಲಿನ್ಯ ಪರೀಕ್ಷೆಗಳನ್ನು ಎದುರಿಸಬೇಕಲ್ಲದೆ ದುಬಾರಿ ಮೊತ್ತದ ಹಸಿರು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಆಗ ವಾಹನ ನಿರ್ವಹಣೆಯು ಸಾಮಾನ್ಯ ವಾಹನದ ನಿರ್ವಹಣೆಗಿಂತಲೂ ದುಪ್ಪಟ್ಟು ಹೆಚ್ಚಳವಾಗಲಿದ್ದು, ನಿರ್ವಹಣೆ ಹೆಚ್ಚಳವಾಗುವುದರೊಂದಿಗೆ ಮಾಲೀಕರೇ ಸ್ವಯಂಪ್ರೇರಿತರಾಗಿ ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳಲಿದೆ ಎನ್ನುವುದೇ ಈ ನೀತಿಯ ಉದ್ದೇಶವಾಗಿದೆ.

ಹೊಸ ನೀತಿಯಿಂದಾಗಿ ಕೇವಲ ಆಟೋ ಉದ್ಯಮಕ್ಕೆ ಮಾತ್ರವಲ್ಲ ಮಾಲಿನ್ಯ ಮತ್ತು ತೈಲ ಆಮದು ತಗ್ಗಿಸಲು ಪರಿಣಾಮಕಾರಿಯಾದ ನೀತಿಯಾಗಿದ್ದು, ಅತಿ ಹೆಚ್ಚು ಇಂಧನ ದಹಿಸುವ ಹಳೆಯ ವಾಹನಗಳ ಬಳಕೆಗೆ ಬ್ರೇಕ್ ಹಾಕಿದ್ದಲ್ಲಿ ಅತಿ ಹೆಚ್ಚು ಇಂಧನ ಕಾರ್ಯಕ್ಷಮತೆಯ ಹೊಂದಿರುವ ಹೊಸ ವಾಹನಗಳ ಉತ್ತೇಜನ ನೀಡಲು ಸಹಕಾರಿಯಾಗಲಿದೆ.

ಜೊತೆಗೆ ಹೊಸ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ನಿಯಮದಲ್ಲಿ ಹಳೆಯ ವಾಹನಗಳಿಗೆ ಮತ್ತು ಬಳಕೆ ಯೋಗ್ಯವಲ್ಲದ ಅನರ್ಹ ವಾಹನಗಳಿಗೆ ಪ್ರತ್ಯೇಕವಾಗಿ ಸ್ಕ್ರ್ಯಾಪೇಜ್ ನಿಯಮಗಳು ಅನ್ವಯವಾಗಲಿವೆ.

ಬಜೆಟ್ ಮಂಡನೆ ವೇಳೆ ಕೇವಲ ಹೊಸ ಸ್ಕ್ರ್ಯಾಪೇಜ್ ನೀತಿ ಪ್ರಮುಖಾಂಶಗಳನ್ನು ಮಾತ್ರ ಪ್ರಸ್ತಾಪಿಸಲಾಗಿದ್ದು, ಹೊಸ ನೀತಿಯ ಕುರಿತು ಅಂತಿಮ ಹಂತದ ವರದಿಯು ಶೀಘ್ರದಲ್ಲೇ ಪ್ರಕಟವಾಗಲಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯಲ್ಲಿ ಹಳೆಯ ವಾಹನಗಳನ್ನು ಮಾಲೀಕರೇ ನೇರವಾಗಿ ಅಧಿಕೃತ ಸ್ಕ್ರ್ಯಾಪೇಜ್ ಕೇಂದ್ರಗಳಲ್ಲಿ ಸ್ಕ್ಯಾಪ್ ಮಾಡಿಸುವ ಮೂಲಕ ಹೊಸ ವಾಹನಗಳ ಖರೀದಿಗೆ ಕೆಲವು ವಿನಾಯ್ತಿ ಪಡೆದುಕೊಳ್ಳುವ ಅವಕಾಶ ನೀಡಲಿದೆ.

ಆದರೆ ಚಾಲನೆಗೆ ಅನರ್ಹವಾಗಿರುವ ವಾಹನಗಳಿಗೆ ಪ್ರತ್ಯೇಕ ಸ್ಕ್ಯಾಪೇಜ್ ನೀತಿಯು ಅನ್ವಯವಾಗಲಿದ್ದು, ಮರುಬಳಕೆಯ ಉದ್ಯಮವನ್ನೂ ಪ್ರೋತ್ಸಾಹಿಸಲು ಹೊಸ ನೀತಿಯು ಪ್ರಮುಖ ಪಾತ್ರವಹಿಸಲಿದೆ. ಸ್ಕ್ಯಾಪೇಜ್ ನೀತಿಯು ಜಾರಿಗೆ ಬಂದಲ್ಲಿ ಹಳೆಯ ವಾಹನಗಳಿಂದ ಬರುವ ಬಿಡಿಭಾಗಗಳ ನಿರ್ವಹಣೆ ಮತ್ತು ಮರುಬಳಕೆ ಉದ್ಯಮದಲ್ಲಿ ರೂ. 10 ಸಾವಿರ ಕೋಟಿ ಹೂಡಿಕೆಯಾಗಲಿದ್ದರೆ ವಾರ್ಷಿಕವಾಗಿ ರೂ. 43 ಸಾವಿರ ಕೋಟಿ ವ್ಯವಹಾರದ ನೀರಿಕ್ಷೆಯಿದೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಹೀಗಾಗಿ ಹೊಸ ನೀತಿಯಿಂದಾಗಿ ಆಟೋ ಉದ್ಯಮದಲ್ಲಿ ಮತ್ತಷ್ಟು ಹೊಸ ಯೋಜನೆಗಳು ಸಿದ್ದಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದ ವಿಶ್ವದ ಪ್ರಮುಖ ಆಟೋಮೊಬೈಲ್ ತಯಾರಿಕಾ ಕೇಂದ್ರವಾಗಿ ಬದಲಾಗಲಿದೆ. ಇದಕ್ಕೆ ಪೂರಕವಾಗಿ ಸ್ಕ್ರ್ಯಾಪೇಜ್ ನೀತಿಯು ಆಟೋ ಕಂಪನಿಗಳಿಗೆ ವರವಾಗುತ್ತಿದ್ದು, ಶೀಘ್ರದಲ್ಲೇ ಕೇಂದ್ರ ಮತ್ತು ರಸ್ತೆ ಸಾರಿಗೆ ಇಲಾಖೆಯು ವೆಹಿಕಲ್ ಸ್ಕ್ರಾಪ್ ಪಾಲಿಸಿ ಕುರಿತು ಇನ್ನಷ್ಟು ವಿವರಣೆಗಳನ್ನು ಹಂಚಿಕೊಳ್ಳಲಿದೆ.