ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾವಿನಾ ಪಟೇಲ್ ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಎಂಜಿ ಮೋಟಾರ್ ಇಂಡಿಯಾ ತನ್ನ ಕಾರನ್ನು ಬಹುಮಾನವಾಗಿ ನೀಡಿ ಅಭಿನಂದಿಸುವುದಾಗಿ ಆಗಸ್ಟ್ ತಿಂಗಳಿನಲ್ಲಿ ಘೋಷಿಸಿತು.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಭರವಸೆ ನೀಡಿದಂತೆ ವಿಶೇಷ ಎಂಜಿ ಹೆಕ್ಟರ್ ಎಸ್‍ಯುವಿಯನ್ನು ಭಾವಿನಾ ಪಟೇಲ್‌ಗೆ ಹಸ್ತಾಂತರಿಸಿದ್ದು, ಅದನ್ನು ಅಂಗವಿಕಲ ವ್ಯಕ್ತಿಯ ಡ್ರೈವಿಂಗ್ ಅವಶ್ಯಕತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾಗಿದೆ. ಈ ಯೋಜನೆಯನ್ನು ವಡೋದರ ಮ್ಯಾರಥಾನ್ ಸಹಯೋಗದೊಂದಿಗೆ ನಡೆಸಲಾಯಿತು ಮತ್ತು ಕಸ್ಟಮೈಸ್ ಮಾಡಿದ ಹೆಕ್ಟರ್ ಅನ್ನು ಎಂಜಿ ಮೋಟಾರ್ ಇಂಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ಜಯಂತ ದೇಬ್ ಅವರು ಭಾವಿನಾ ಪಟೇಲ್ ಅವರಿಗೆ ಹಸ್ತಾಂತರಿಸಿದರು.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಸೆಮಿಫೈನಲ್ ಮತ್ತು ಫೈನಲ್ ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಮಹಿಳೆಯರ ಸಿಂಗಲ್ಸ್ ಫೈನಲ್-ಕ್ಲಾಸ್ 4 ರಲ್ಲಿ ಚೀನಾದ ಝ್ಯೂ ಯಿಂಗ್ ವಿರುದ್ಧ 3-0 ಅಂತರದಲ್ಲಿ ಸೋಲುಂಡಿದ್ದಾರೆ. ಆದರೆ ಭಾರತದ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿಯಾಗಿ ಭಾವಿನಾ ಪಟೇಲ್ ಹೊಸ ಇತಿಹಾಸ ನಿರ್ಮಸಿದರು.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಪದಕ ವಿಜೇತ ಭಾವಿನಾ ಪಟೇಲ್ ಮಾತನಾಡಿ, ಎಂಜಿ ಮೋಟಾರ್ ಮತ್ತು ವಡೋದರಾ ಮ್ಯಾರಥಾನ್‌ನ ಈ ಚಿಂತನಶೀಲ ಗೆಸ್ಚರ್ ಅನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಈ ಸಂಪೂರ್ಣ ಕಸ್ಟಮೈಸ್ ಮಾಡಿದ ಹೆಕ್ಟರ್ ಅನ್ನು ನನ್ನದು ಎಂದು ಕರೆಯುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಚಲನಶೀಲತೆಯ ಪರಿಸರ ವ್ಯವಸ್ಥೆ, ಮತ್ತು ಚಾಲಕನ ಸೀಟಿನಿಂದ ಅದರ ಶಕ್ತಿಯನ್ನು ಅನುಭವಿಸಲು ನಾನು ಎದುರು ನೋಡುತ್ತಿದ್ದೇನೆ. ಚಲನಶೀಲತೆಯ ಜೊತೆಗೆ, ಈ ಅದ್ಭುತ ಕಾರು ನನಗೆ ಸ್ವಾತಂತ್ರ್ಯ ಅನುಭವನ್ನು ನೀಡುತ್ತದೆ ಎಂದು ಹೇಳಿದರು.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಭಾವಿನಾಗೆ ಸುರಕ್ಷಿತ ಮತ್ತು ಆನಂದದಾಯಕ ಚಾಲನೆಯ ಅನುಭವವನ್ನು ನೀಡಲು ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಎಂಜಿ ಮೋಟಾರ್ ಇಂಡಿಯಾ ಹೇಳಿದೆ. ಹೀಗಾಗಿ, ಇದು ಎಕ್ಸಲೇಟರ್ ಮತ್ತು ಬ್ರೇಕ್‌ಗಳನ್ನು ನಿರ್ವಹಿಸಲು ಕೈಯಿಂದ ನಿಯಂತ್ರಿತ ಲಿವರ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಜೊತೆಗೆ ನಿಖರವಾಗಿ ವಿನ್ಯಾಸಗೊಳಿಸಿದ ವೀಲ್‌ಚೇರ್ ಹೊಂದಿದೆ. ಇದು ಡಿಸಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಸ್ಟಾರ್ಟ್/ಸ್ಟಾಪ್ ಬಟನ್‌ನ ಅನುಕೂಲತೆಯೊಂದಿಗೆ ಬರುತ್ತದೆ, ಅಂದರೆ ಈ ಎಸ್‍ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 141 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಮಾತನಾಡಿ, ಟೋಕಿಯೊದಲ್ಲಿ ದೇಶಕ್ಕೆ ಪ್ರಶಸ್ತಿ ತಂದ ಭಾವಿನಾ ಅವರಿಗಾಗಿ ನಮ್ಮ ಎಂಜಿ ಹೆಕ್ಟರ್ ಅನ್ನು ಕಸ್ಟಮೈಸ್ ಮಾಡುವುದು ನಮಗೆ ಒಂದು ಸೌಭಾಗ್ಯವಾಗಿದೆ. ಭಾವಿನಾ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾಳೆ. ಮಹಿಳಾ ಸಬಲೀಕರಣದ ಕಡೆಗೆ ಅವರ ಕೊಡುಗೆ ಅಪ್ರತಿಮವಾಗಿದೆ ಮತ್ತು ಅವರು ನಮ್ಮ ಮೆಚ್ಚುಗೆಯ ಸಂಕೇತವನ್ನು ಆನಂದಿಸುತ್ತಾರೆ ಎಂದು ನಾವು ಭಾವಿಸುತ್ತೇವೆ.ಎಂದು ಹೇಳಿದರು.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಇನ್ನು ಎಂಜಿ ಮೋಟಾರ್ ಇಂಡಿಯಾ ಗುಜರಾತ್‌ನ ಹಲೋಲ್‌ನಲ್ಲಿರುವ ತನ್ನ ಅತ್ಯಾಧುನಿಕ ಉತ್ಪಾದನಾ ಘಟಕದಿಂದ ನೇಪಾಳಕ್ಕೆ ರಫ್ತು ಆರಂಭಿಸುವುದಾಗಿ ಘೋಷಿಸಿದೆ. ಕಂಪನಿಯ ಟಾಪ್-ಸೆಲ್ಲಿಂಗ್ ಮಾಡೆಲ್, ಎಂಜಿ ಹೆಕ್ಟರ್ ಎಸ್‍ಯುವಿಯು ಭಾರತದಿಂದ ನೇಪಾಳಕ್ಕೆ ರಫ್ತು ಮಾಡಲಾಗುವ ಬ್ರ್ಯಾಂಡ್‌ನ ಮೊದಲ ಮಾದರಿಯಾಗಿದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಭಾರತದಿಂದ ಇತರ ದಕ್ಷಿಣ ಏಷ್ಯಾದ ದೇಶಗಳಿಗೆ ಕಾರುಗಳನ್ನು ರಫ್ತು ಮಾಡುವ ತನ್ನ ವಿಸ್ತರಣಾ ಯೋಜನೆಗೆ ಇದು ಮೊದಲ ಹೆಜ್ಜೆಯಾಗಿದೆ ಎಂದು ಎಂಜಿ ಮೋಟಾರ್ ಇಂಡಿಯಾ ಹೇಳಿದೆ. ಹೆಕ್ಟರ್ ಎಸ್‍ಯುವಿಗಾಗಿ ಮಾರಾಟ ಮತ್ತು ಸೇವಾ-ಸಂಬಂಧಿತ ಚಟುವಟಿಕೆಗಳನ್ನು ನೇಪಾಳ ಮೂಲದ ಡೀಲರ್ ಪಾಲುದಾರ ಪ್ಯಾರಾಮೌಂಟ್ ಮೋಟಾರ್ಸ್ ಜೊತೆ ಕೈಜೋಡಿಸಿದೆ. ಇನ್ನು ಎಂಜಿ ಹೆಕ್ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಎಸ್‍ಯುವಿಯು ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಎಂಜಿ ಹೆಕ್ಟರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಮೇ 2019 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಕಳೆದ ಎರಡು ವರ್ಷಗಳಲ್ಲಿ, ಕಂಪನಿಯು ದೇಶದಲ್ಲಿ 72,500 ಯುನಿಟ್ ಎಸ್‍ಯುವಿಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ ಬಿಡುಗಡೆಯಾದ ಮೊದಲ ಸಂಪೂರ್ಣ ಕನೆಕ್ಟಿವಿಟಿ ಹೊಂದಿದ ವಾಹನಗಳಲ್ಲಿ ಹೆಕ್ಟರ್ ಕೂಡ ಒಂದಾಗಿದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಈ ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾವಿನಾ ಪಟೇಲ್‌ಗೆ ಕಸ್ಟಮೈಸ್ ಮಾಡಿದ ಕಾರು ನೀಡಿದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಉತ್ತಮ ಸ್ಪೇಸ್ ಅನ್ನು ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. ಈ ಎಂಜಿ ಹೆಕ್ಟರ್ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಜೀಪ್ ಕಂಪಾಸ್, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಟಾಟಾ ಹ್ಯಾರಿಯರ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

Most Read Articles

Kannada
English summary
Paralympian bhavina patel gets customized mg hector find here more details
Story first published: Tuesday, December 14, 2021, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X