ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಅಕ್ಟೋಬರ್ ತಿಂಗಳಿನಲ್ಲಿ ವಿಶ್ವದಾದ್ಯಂತ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಪ್ರಯಾಣಿಕ ವಾಹನಗಳ ಮಾರಾಟ ಕುಸಿತಕ್ಕೆ ಸೆಮಿಕಂಡಕ್ಟರ್ ಚಿಪ್ ಕೊರತೆ ಪ್ರಮುಖ ಕಾರಣವಾಗಿದೆ. ಬಹುತೇಕ ವಾಹನ ತಯಾರಕ ಕಂಪನಿಗಳು ಸೆಮಿ ಕಂಡಕ್ಟರ್ ಚಿಪ್ ಕೊರತೆಯನ್ನು ಆಟೋ ಮೊಬೈಲ್ ಉದ್ಯಮಕ್ಕೆ ಪ್ರಮುಖ ಸವಾಲೆಂದು ಪರಿಗಣಿಸಿವೆ.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಉತ್ಪಾದನೆ ಕುಸಿದಿರುವುದರಿಂದ ಪ್ರಯಾಣಿಕ ವಾಹನಗಳ ಪೂರೈಕೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿಲ್ಲವೆಂದು ಆಟೋ ಮೊಬೈಲ್ ಕಂಪನಿಗಳು ಹೇಳುತ್ತಿದ್ದರೂ ವಾಹನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಕಳೆದ ತಿಂಗಳು ಬೇರೆ ದೇಶಗಳಲ್ಲಿ ವಾಹನಗಳ ಮಾರಾಟ ಹೇಗಿತ್ತು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಅಮೆರಿಕಾ - ವಾಹನ ಮಾರಾಟದಲ್ಲಿ 20% ನಷ್ಟು ಇಳಿಕೆ

ಅಮೆರಿಕಾ, ಪ್ರಯಾಣಿಕ ವಾಹನಗಳ ಬಹು ದೊಡ್ಡ ಮಾರುಕಟ್ಟೆಯಾಗಿದೆ. ಆದರೆ ಕರೋನಾ ಸಾಂಕ್ರಾಮಿಕ ಹಾಗೂ ಸೆಮಿಕಂಡಕ್ಟರ್ ಕೊರತೆಯು ಅಮೆರಿಕಾದ ಆಟೋ ಕಂಪನಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಅಮೆರಿಕಾದಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು 20% ನಷ್ಟು ಕಡಿಮೆಯಾಗಿದೆ. ಪ್ರಮುಖ ಪ್ರಯಾಣಿಕ ವಾಹನ ತಯಾರಕ ಕಂಪನಿಯಾದ ಫೋರ್ಡ್‌ನ ಮಾರಾಟವು ಚಿಪ್ ಕೊರತೆಯಿಂದ 4% ನಷ್ಟು ಕುಸಿದಿದೆ.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಹೋಂಡಾ ಹಾಗೂ ಹ್ಯುಂಡೈ ಕಂಪನಿಗಳ ಮಾರಾಟವು ಸತತ ಮೂರನೇ ತಿಂಗಳೂ ಕಡಿಮೆಯಾಗಿದೆ. ಕರೋನಾ ಸಾಂಕ್ರಾಮಿಕದ ಜೊತೆಗೆ ದೇಶದ ಪ್ರತಿ ವಾಹನ ತಯಾರಕ ಕಂಪನಿಗಳು ಚಿಪ್ ಕೊರತೆಯಿಂದಲೂ ಕಡಿಮೆ ಮಾರಾಟವನ್ನು ಎದುರಿಸುವಂತಾಗಿದೆ ಎಂದು ಅಮೆರಿಕಾದ ಪ್ರಮುಖ ಹೂಡಿಕೆ ಸಂಶೋಧನಾ ಸಂಸ್ಥೆಯಾದ ಸಿ‌ಎಫ್‌ಆರ್‌ಎ ಹೇಳಿದೆ. ಇದೇ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ವಾಹನ ತಯಾರಕ ಕಂಪನಿಗಳಿಗೆ ತೊಂದರೆಯಾಗಬಹುದು.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಚೀನಾ - ವಾಹನ ಮಾರಾಟದಲ್ಲಿ 12% ನಷ್ಟು ಇಳಿಕೆ

ಪ್ರಯಾಣಿಕ ವಾಹನಗಳಿಗೆ ಚೀನಾ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಚೀನಾ ಸೆಮಿಕಂಡಕ್ಟರ್ ಚಿಪ್‌ಗಳನ್ನು ಸ್ವತಃ ಉತ್ಪಾದಿಸುತ್ತದೆ. ಆದರೂ ಚೀನಾದಲ್ಲಿ ಈ ವರ್ಷ ವಾಹನಗಳ ಮಾರಾಟ ಕಡಿಮೆಯಾಗಿದೆ. ಚೀನಾ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(CADA) ಪ್ರಕಾರ, ಅಕ್ಟೋಬರ್ ತಿಂಗಳಿನಲ್ಲಿ ಚೀನಾದಲ್ಲಿ ವಾಹನ ಮಾರಾಟವು 12% ನಷ್ಟು ಕಡಿಮೆಯಾಗಿದೆ.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಚೀನಾದ ಆರ್ಥಿಕತೆಯಲ್ಲಿನ ಮಂದಗತಿಯೇ ವಾಹನ ಮಾರಾಟದಲ್ಲಿ ಇಳಿಕೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಚೀನಾದ ರಿಯಲ್ ಎಸ್ಟೇಟ್ ಹಾಗೂ ಆಟೋ ಮೊಬೈಲ್ ವಲಯವು ಕರೋನಾ ಸಾಂಕ್ರಾಮಿಕದಿಂದ ತತ್ತರಿಸಿ ಹೋಗಿವೆ. ವಾಹನಗಳು ಕಡಿಮೆ ಮಾರಾಟವಾಗುತ್ತಿರುವುದರಿಂದ ಕಂಪನಿಗಳು ಉತ್ಪಾದನೆಯನ್ನು ಕಡಿಮೆ ಮಾಡಿವೆ. ಇದಲ್ಲದೇ ಕಡಿಮೆ ಬೇಡಿಕೆಯಿಂದಾಗಿ ಚೀನಾದ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲೂ ರಫ್ತು ಪ್ರಮಾಣವನ್ನು ಕಡಿಮೆ ಮಾಡಿವೆ.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಯುರೋಪ್‌ನಲ್ಲಿ ಬಳಸಿದ ವಾಹನಗಳಿಗೆ ಹೆಚ್ಚಾದ ಬೇಡಿಕೆ

ಯುರೋಪ್‌ನಲ್ಲಿ ಕರೋನಾ ಸಾಂಕ್ರಾಮಿಕದಿಂದಾಗಿ ಹಲವು ವಾಹನ ತಯಾರಕ ಕಂಪನಿಗಳು ಕೆಲವು ತಿಂಗಳುಗಳವರೆಗೆ ಉತ್ಪಾದನೆಯನ್ನು ಕಡಿತಗೊಳಿಸಿದ್ದರೆ, ಹಲವು ಕಂಪನಿಗಳು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಇದರಿಂದಾಗಿ ಯುರೋಪ್ ಮಾರುಕಟ್ಟೆಗಳಲ್ಲಿ ಈಗ ಹೊಸ ವಾಹನಗಳಿಗೆ ಕೊರತೆ ಉಂಟಾಗಿದ್ದು, ಹಳೆ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಳಸಿದ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದು, ಕೆಲವೆಡೆ ಹೊಸ ಕಾರುಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಆಟೋಮೋಟಿವ್ ನ್ಯೂಸ್ ಯುರೋಪ್ ಪ್ರಕಾರ, ಕಳೆದ ತಿಂಗಳು (ಅಕ್ಟೋಬರ್‌ನಲ್ಲಿ) ವಾಹನ ಮಾರಾಟ ಪ್ರಮಾಣವು 37% ನಷ್ಟು ಕುಸಿತ ದಾಖಲಿಸಿದ್ದರೆ ಸ್ಪೇನ್‌ನಲ್ಲಿ ಕೇವಲ 59,044 ಯುನಿಟ್‌ ಹೊಸ ವಾಹನಗಳು ಮಾರಾಟವಾಗಿ ಮಾರಾಟ ಪ್ರಮಾಣವು 21% ನಷ್ಟು ಕುಸಿದಿದೆ. ಯುರೋಪಿಯನ್ ವಾಹನ ಮಾರುಕಟ್ಟೆಯಲ್ಲಿ ಈ ವರ್ಷವನ್ನು ಕಪ್ಪು ವರ್ಷ ಎಂದು ಕರೆಯಲಾಗುತ್ತಿದೆ.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಇನ್ನು ಫ್ರಾನ್ಸ್ ದೇಶದ ಬಗ್ಗೆ ಹೇಳುವುದಾದರೆ, ಅಕ್ಟೋಬರ್ ತಿಂಗಳಿನಲ್ಲಿ 1,18,521 ಯುನಿಟ್ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಈ ಪ್ರಮಾಣವು 2020ರ ಅಕ್ಟೋಬರ್ ತಿಂಗಳಿಗಿಂತ 31% ನಷ್ಟು ಕಡಿಮೆಯಾಗಿದೆ. ಕಳೆದ ತಿಂಗಳು ಜರ್ಮನಿಯಲ್ಲಿ ಕಾರು ಮಾರಾಟ ಪ್ರಮಾಣವು 34% ನಷ್ಟು ಕಡಿಮೆಯಾಗಿದೆ.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ಭಾರತದಲ್ಲಿ 22% ನಷ್ಟು ಕಡಿಮೆಯಾದ ಪ್ರಯಾಣಿಕ ವಾಹನ ಮಾರಾಟ

ಭಾರತದಲ್ಲಿ ಹಬ್ಬ ಹರಿ ದಿನಗಳು ಶುರುವಾದ ನಂತರ ಮಾರುಕಟ್ಟೆಯಲ್ಲಿ ಉತ್ಸಾಹ ತುಂಬಿದ್ದರೂ ಕಳೆದ ವರ್ಷದಂತೆ ಈ ವರ್ಷ ಹೊಸ ಕಾರುಗಳ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿಲ್ಲ. 2021 ರ ಅಕ್ಟೋಬರ್‌ನಲ್ಲಿ ದೇಶದಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು 22% ನಷ್ಟು ಕಡಿಮೆಯಾಗಿ 2.60 ಲಕ್ಷ ಯುನಿಟ್‌ಗಳಿಗೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3.33 ಲಕ್ಷ ಯುನಿಟ್‌ ವಾಹನಗಳು ಮಾರಾಟವಾಗಿದ್ದವು.

ವಿಶ್ವದಾದ್ಯಂತ ಕುಸಿತ ಕಂಡ ಪ್ರಯಾಣಿಕ ವಾಹನ ಮಾರಾಟ

ದೇಶದ ಎರಡು ದೊಡ್ಡ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕ್ರಮವಾಗಿ 33.40% ಹಾಗೂ 34.60% ನಷ್ಟು ಕುಸಿತವನ್ನು ದಾಖಲಿಸಿವೆ. ಫೆಡರೇಶನ್ ಅಂಡ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​ಪ್ರಕಾರ, ಭಾರತದಲ್ಲಿ ಈ ಹಬ್ಬದ ಋತುವಿನಲ್ಲಿ ಕಳೆದ 10 ವರ್ಷಗಳಲ್ಲಿಯೇ ಕಡಿಮೆ ಪ್ರಮಾಣದ ವಾಹನಗಳು ಮಾರಾಟವಾಗಿವೆ. ಸೆಮಿ ಕಂಡಕ್ಟರ್ ಗಳ ಕೊರತೆಯು ಇನ್ನಷ್ಟು ತಿಂಗಳುಗಳವರೆಗೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸೆಮಿ ಕಂಡಕ್ಟರ್ ಗಳ ಪೂರೈಕೆ ಯಥಾ ಸ್ಥಿತಿ ತಲುಪಿದ ನಂತರ ಕಾರು ಉತ್ಪಾದನೆಯಲ್ಲಿಯೂ ಹೆಚ್ಚಳವಾಗಿ ಮಾರಾಟವೂ ಸಹ ಯಥಾ ಸ್ಥಿತಿ ತಲುಪುವ ಸಾಧ್ಯತೆಗಳಿವೆ.

Most Read Articles

Kannada
English summary
Passenger vehicle sales declines through out the world in october 2021 details
Story first published: Friday, November 5, 2021, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X