ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಭಾರತದಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. 2020 ರ ಜುಲೈ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣವು 1,82,779 ಯುನಿಟ್‌ಗಳಾಗಿದ್ದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಈ ಪ್ರಮಾಣವು 45% ನಷ್ಟು ಏರಿಕೆಯಾಗಿ 2,64,442 ಯೂನಿಟ್‌ಗಳಿಗೆ ತಲುಪಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಇನ್ನು ದ್ವಿಚಕ್ರ ವಾಹನ ಸಗಟು ಮಾರಾಟ ಪ್ರಮಾಣವು ಜುಲೈ ತಿಂಗಳಿನಲ್ಲಿ 12,81,354 ಯುನಿಟ್‌ಗಳಿಂದ 2% ನಷ್ಟು ಕಡಿಮೆಯಾಗಿ 12,53,937 ಯೂನಿಟ್‌ಗಳಿಗೆ ಇಳಿದಿದೆ ಎಂದು ಆಟೋ ಇಂಡಸ್ಟ್ರಿ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್'ನ (ಎಸ್‌ಐಎಎಂ) ಇತ್ತೀಚಿನ ವರದಿ ತಿಳಿಸಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ದ್ವಿಚಕ್ರ ವಾಹನಗಳ ಮಾರಾಟ

ಮೋಟಾರ್‌ಸೈಕಲ್ ಮಾರಾಟ ಪ್ರಮಾಣವು ಕಳೆದ ತಿಂಗಳು 6% ನಷ್ಟು ಇಳಿಕೆಯಾಗಿದೆ. ಈ ಪ್ರಮಾಣವು 2020 ರ ಜುಲೈ ತಿಂಗಳಿನಲ್ಲಿ 8,88,520 ಯೂನಿಟ್‌ಗಳಾಗಿತ್ತು. ಈ ಪ್ರಮಾಣವು ಕಳೆದ ತಿಂಗಳು 8,37,096 ಯೂನಿಟ್‌ಗಳಿಗೆ ಇಳಿದಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಇನ್ನು ಇದೇ ವೇಳೆ ಸ್ಕೂಟರ್‌ಗಳ ಮಾರಾಟ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸ್ಕೂಟರ್‌ಗಳ ಮಾರಾಟ ಪ್ರಮಾಣವು 2020 ರ ಜುಲೈ ತಿಂಗಳಿನಲ್ಲಿ 3,34,288 ಯೂನಿಟ್‌ಗಳಾಗಿತ್ತು. ಈ ಪ್ರಮಾಣವು ಈ ಬಾರಿ 10% ನಷ್ಟು ಏರಿಕೆಯಾಗಿ ಕಳೆದ ತಿಂಗಳು 3,66,292 ಯೂನಿಟ್‌ ಸ್ಕೂಟರ್‌ಗಳು ಮಾರಾಟವಾಗಿವೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಮೂರು ಚಕ್ರ ವಾಹನಗಳ ಮಾರಾಟ

ಅದೇ ರೀತಿ ಕಳೆದ ವರ್ಷ ಜುಲೈ ತಿಂಗಳಿನಲ್ಲಿ 12,728 ಯುನಿಟ್ ಗಳಿದ್ದ ತ್ರಿ ಚಕ್ರ ವಾಹನ ಮಾರಾಟ ಪ್ರಮಾಣವು ಕಳೆದ ತಿಂಗಳು 41% ನಷ್ಟು ಹೆಚ್ಚಳಗೊಂಡು 17,888 ಯುನಿಟ್ ಗಳಿಗೆ ಏರಿಕೆಯಾಗಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಇದೇ ವೇಳೆ ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 14,76,861 ಯುನಿಟ್‌ ಕಮರ್ಷಿಯಲ್ ವಾಹನಗಳು ಮಾರಾಟವಾಗಿದ್ದವು. ಈ ಬಾರಿ ಅಂದರೆ ಕಳೆದ ತಿಂಗಳು 15,36,269 ಯುನಿಟ್‌ ಕಮರ್ಷಿಯಲ್ ವಾಹನಗಳು ಮಾರಾಟವಾಗಿವೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಕಾರುಗಳ ಮಾರಾಟ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಫಾಡಾ)ದ ಇತ್ತೀಚಿನ ಮಾಹಿತಿಯ ಪ್ರಕಾರ, ಆಟೋ ಉದ್ಯಮವು ಕಳೆದ ಕೆಲವು ತಿಂಗಳುಗಳಿಂದ ಮಾರಾಟದಲ್ಲಿ ಹೆಚ್ಚಿನ ವೇಗವನ್ನು ಸಾಧಿಸುತ್ತಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಕಳೆದ ತಿಂಗಳು, ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 1,14,294 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇದೇ ವೇಳೆ ಹುಂಡೈ ಇಂಡಿಯಾ ಕಂಪನಿಯು 44,737 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇನ್ನು ಪ್ರಮುಖ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಒಟ್ಟು 24,953 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಜುಲೈ ತಿಂಗಳಿನಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು 16,326 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದರೆ, ಕಿಯಾ ಮೋಟಾರ್ಸ್ ಕಂಪನಿಯು 15,995 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇನ್ನು ಕಮರ್ಷಿಯಲ್ ವಾಹನಗಳ ಬಗ್ಗೆ ಹೇಳುವುದಾದರೆ, ಈ ವಾಹನಗಳ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ 165.9% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 52,130 ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಇನ್ನು 2020 ರ ಜುಲೈ ತಿಂಗಳಿನಲ್ಲಿ ಒಟ್ಟು 19,602 ಯುನಿಟ್‌ ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಭಾರತದಲ್ಲಿ ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟವು ಮತ್ತೊಮ್ಮೆ ವೇಗವನ್ನು ಪಡೆಯುತ್ತಿದೆ ಎಂದು ಸಿಯಾಮ್ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯ ಆರ್ಭಟದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಿದ ನಂತರ ಭಾರತದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಗ್ರಾಹಕರ ಖರೀದಿ ಮನೋಭಾವದಲ್ಲಿಯೂ ಸುಧಾರಣೆ ಕಂಡು ಬರುಟ್ಟಿದೆ. ಈ ಕಾರಣದಿಂದಾಗಿ, ವಾಹನಗಳ ಮಾರಾಟವು ನಿರಂತರವಾಗಿ ಹೆಚ್ಚುತ್ತಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಸಾರ್ವಜನಿಕ ವಾಹನಗಳಲ್ಲಿ ಸಂಚರಿಸಿದರೆ ಕರೋನಾ ವೈರಸ್ ಹರಡ ಬಹುದು ಎಂಬ ಕಾರಣಕ್ಕೆ ಜನರು ತಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸಲು ಆದ್ಯತೆ ನೀಡುತ್ತಿದ್ದಾರೆ. ಜನರು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಹಲವಾರು ಜನರು ಸ್ವಂತ ವಾಹನಗಳ ಬದಲು ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಗೂ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕೆ ಭಾರತದ ಹಲವು ನಗರಗಳಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.

ಜುಲೈ ತಿಂಗಳಿನಲ್ಲಿ ಏರಿಕೆ ಕಂಡ ಪ್ಯಾಸೆಂಜರ್ ವಾಹನ ಮಾರಾಟ

ಜನರು ಸ್ವಂತ ವಾಹನಗಳನ್ನು ಖರೀದಿಸುತ್ತಿರುವುದರಿಂದ ಹಲವು ನಗರಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಟ್ರಾಫಿಕ್ ದಟ್ಟಣೆ ಉಂಟಾಗುತ್ತಿದೆ.ಆದರೆ ಜನರು ಸುರಕ್ಷತೆಯ ಕಾರಣಕ್ಕೆ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಇದರ ಜೊತೆಗೆ ಸೈಕಲ್ ಖರೀದಿಸಲು ಸಹ ಜನರು ಒಲವು ತೋರುತ್ತಿದ್ದಾರೆ. ಸೈಕಲ್ ತುಳಿಯುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಪಾರಾಗಬಹುದು ಎಂಬುದು ಜನರ ಅಭಿಪ್ರಾಯ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹೆಚ್ಚಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Passenger vehicle sales increases in domestic market during july 2021 details
Story first published: Monday, August 16, 2021, 14:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X