ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ - ಫಾಡಾ (ಎಫ್‌ಎಡಿಎ) 2021ರ ಜೂನ್ ತಿಂಗಳಿನಲ್ಲಿ ಮಾರಾಟವಾದ ಪ್ರಯಾಣಿಕ ವಾಹನಗಳ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಫಾಡಾ ವರದಿಗಳ ಪ್ರಕಾರ, ಪ್ರಯಾಣಿಕ ವಾಹನಗಳ ಮಾರಾಟವು 43.45%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ತಿಂಗಳು 1,84,134 ಯುನಿಟ್ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಕಳೆದ ತಿಂಗಳು ಒಟ್ಟಾರೆಯಾಗಿ 12,17,151 ಯುನಿಟ್ ವಾಹನಗಳು ನೋಂದಣಿಯಾಗಿವೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಈ ಪ್ರಮಾಣವು 2020ರ ಜೂನ್ ತಿಂಗಳಿಗೆ ಹೋಲಿಸಿದರೆ 22.62%ನಷ್ಟು ಹೆಚ್ಚಾಗಿದೆ. ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ವಾಹನಗಳ ಮಾರಾಟವು ಗಣನೀಯವಾಗಿ ಕುಸಿದಿತ್ತು. ಈಗ ಮಾರುಕಟ್ಟೆಯು ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

2019ರ ಜೂನ್‌ ತಿಂಗಳಿಗೆ ಹೋಲಿಸಿದರೆ ವಾಹನಗಳ ಮಾರಾಟ ಪ್ರಮಾಣದಲ್ಲಿ 28.32%ನಷ್ಟು ಇಳಿಕೆ ಕಂಡುಬಂದಿದೆ. 2021ರ ಜೂನ್ ತಿಂಗಳ ಮಾರಾಟದ ಬಗ್ಗೆ ಫಾಡಾ ಅಧ್ಯಕ್ಷರಾದ ವಿಂಕೇಶ್ ಗುಲಾಟಿ ಮಾತನಾಡಿದ್ದಾರೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ದಕ್ಷಿಣ ಭಾರತದ ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ವಾಹನ ಮಾರುಕಟ್ಟೆಗಳು ಮತ್ತೆ ಚೇತರಿಸಿ ಕೊಳ್ಳುತ್ತಿವೆ. ವಾಹನಗಳ ಮಾರಾಟದಲ್ಲಿ ಭಾರಿ ಬೆಳವಣಿಗೆ ದಾಖಲಿಸಲು ಇದು ಪ್ರಮುಖ ಕಾರಣವಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಜನರು ಕುಟುಂಬದ ಸುರಕ್ಷತೆಗಾಗಿ ಖಾಸಗಿ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.ದ್ವಿಚಕ್ರ ವಾಹನಗಳ ಮಾರಾಟವೂ ಸಹ ಹೆಚ್ಚಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಕೋವಿಡ್ 19ರ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಜನರು ವಾಹನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಾಣಿಜ್ಯ ವಾಹನಗಳ ಮಾರಾಟವು ಸಹ ಚೇತರಿಸಿ ಕೊಳ್ಳುತ್ತಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಕಳೆದ ವರ್ಷ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಿದ ನಂತರ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಆದರೆ 2019ರ ಜೂನ್ ತಿಂಗಳಿಗೆ ಹೋಲಿಸಿದರೆ ಒಟ್ಟು ಮಾರಾಟ ಪ್ರಮಾಣವು 28%ನಷ್ಟು ಕುಸಿತ ದಾಖಲಿಸಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಇದರಲ್ಲಿ ತ್ರಿಚಕ್ರ ಮಾರಾಟವು 28%ನಷ್ಟು, ವಾಣಿಜ್ಯ ವಾಹನ ಮಾರಾಟ ಪ್ರಮಾಣವು 70%ನಷ್ಟು ಹಾಗೂ ವಾಣಿಜ್ಯ ವಾಹನ ಮಾರಾಟ ಪ್ರಮಾಣವು 45%ನಷ್ಟು ಕಡಿಮೆಯಾಗಿದೆ. 2019ರ ಜೂನ್ ತಿಂಗಳಿಗೆ ಹೋಲಿಸಿದರೆ, ಟ್ರಾಕ್ಟರ್ ಮಾರುಕಟ್ಟೆ ಮಾತ್ರ 27%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

2020ರ ಜೂನ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜೂನ್ ತಿಂಗಳಿನಲ್ಲಿ ವಾಹನಗಳ ಮಾರಾಟ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದ್ವಿಚಕ್ರ ವಾಹನ ಮಾರಾಟ ಪ್ರಮಾಣವು 16.90%ನಷ್ಟು, ವಾಣಿಜ್ಯ ವಾಹನಗಳ ಮಾರಾಟ ಪ್ರಮಾಣವು 236.19%ನಷ್ಟು ಹಾಗೂ ಟ್ರಾಕ್ಟರ್ ಮಾರಾಟ ಪ್ರಮಾಣವು 14.27%ನಷ್ಟು ಹೆಚ್ಚಳವಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ದಕ್ಷಿಣ ಭಾರತದಲ್ಲಿ ಮಾರುಕಟ್ಟೆ ಚೇತರಿಸಿ ಕೊಳ್ಳುವುದರೊಂದಿಗೆ ವಾಹನ ಮಾರಾಟ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ ಎಂದು ಫಾಡಾ ಅಧ್ಯಕ್ಷರು ಹೇಳಿದರು. ಆದರೆ ಕೋವಿಡ್ 19ಗೂ ಮುನ್ನ ಇದ್ದ ಮಾರಾಟ ಪ್ರಮಾಣವನ್ನು ಸಾಧಿಸಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಕೋವಿಡ್ 19ನಿಂದ ಉಂಟಾಗಿರುವ ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿನ ಅಡೆ ತಡೆಗಳು ಹಾಗೂ ಸೆಮಿ ಕಂಡಕ್ಟರ್ ಚಿಪ್‌ಗಳ ಕೊರತೆ ವಾಹನ ಮಾರುಕಟ್ಟೆಯಬೆಳವಣಿಗೆಯನ್ನು ತಡೆಯುತ್ತಿವೆ ಎಂದು ವಿಂಕೇಶ್ ಗುಲಾಟಿ ಹೇಳಿದರು. ಈ ವರ್ಷ ವಾಹನ ಮಾರುಕಟ್ಟೆ ಮತ್ತಷ್ಟು ಚೇತರಿಸಿ ಕೊಳ್ಳುವ ನಿರೀಕ್ಷೆಗಳಿವೆ ಎಂದು ಅವರು ಹೇಳಿದರು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Passenger vehicle sales increases in June 2021. Read in Kannada.
Story first published: Thursday, July 8, 2021, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X