ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ವಾಹನಗಳ ಬಗ್ಗೆ ಅರಿವಿದ್ದರೂ ಕೆಲವೊಮ್ಮೆ ನಾವೀನ್ಯತೆಯ ಹೆಸರಿನಲ್ಲಿ ಜನರು ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕುತ್ತಾರೆ. ಇದರಿಂದ ಹಲವು ಬಾರಿ ತಪ್ಪಾಗಿ, ಅನಗತ್ಯ ವೆಚ್ಚಕ್ಕೆ ಕಾರಣವಾಗಬಹುದು. ಅದರಲ್ಲೂ ಎಂಜಿನ್ ಸಿಸ್ಟಂನಲ್ಲಿ ಏನಾದರೂ ತೊಂದರೆಯಾದರೆ, ಒಟ್ಟಾರೆಯಾಗಿ ವಾಹನವನ್ನೇ ಮೂಲೆಗಿಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಬಹುದು.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಸರಿಯಾದ ಇಂಧನವನ್ನು ಬಳಸದೇ ಇದ್ದರೆ ಎಂಜಿನ್‌ಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗುತ್ತದೆ. ಆದರೆ ಬೇರೆ ಇಂಧನದಿಂದ ಉಂಟಾಗುವ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸುವುದರಿಂದ ಅನಗತ್ಯ ಖರ್ಚನ್ನು ಕಡಿಮೆ ಮಾಡಬಹುದು. ಪೆಟ್ರೋಲ್ ಎಂಜಿನ್ ವಾಹನಗಳಲ್ಲಿ ಡೀಸೆಲ್ ತುಂಬಿಸಿದರೆ, ಅಥವಾ ಡೀಸೆಲ್ ಎಂಜಿನ್ ವಾಹನಗಳಲ್ಲಿ ಪೆಟ್ರೋಲ್ ತುಂಬಿಸಿದರೆ ಅದರಿಂದ ವಾಹನದ ಎಂಜಿನ್ ಹಾಳಾಗುವುದು ಖಚಿತ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಇದೇ ರೀತಿಯ ಘಟನೆಯೊಂದು ಇತ್ತೀಚಿಗೆ ವರದಿಯಾಗಿದೆ. 2021 ರಲ್ಲಿ ಖರೀದಿಸಲಾದ ಹೊಸ ಮಹೀಂದ್ರ ಥಾರ್ ಪೆಟ್ರೋಲ್ ಎಂಜಿನ್ ಮಾದರಿಗೆ ಅಚಾತುರ್ಯದಿಂದ ಡೀಸೆಲ್‌ ತುಂಬಿಸಲಾಗಿದೆ. ತಕ್ಷಣವೇ ಇದನ್ನು ಗಮನಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಡೀಸೆಲ್ ಹೊರ ತೆಗೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಯುಟ್ಯೂಬ್ ಚಾನೆಲ್ ಒಂದರಲ್ಲಿ ಅಪ್ ಲೋಡ್ ಮಾಡಲಾಗಿದೆ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಮಹೀಂದ್ರ ಥಾರ್ ಎಸ್‌ಯು‌ವಿ ಪೆಟ್ರೋಲ್ ಬಂಕ್‌ಗೆ ಪ್ರವೇಶಿಸುವುದರಿಂದ ಈ ವೀಡಿಯೊ ಆರಂಭವಾಗುತ್ತದೆ. ನಂತರ ಪೆಟ್ರೋಲ್ ಬಂಕ್ ಉದ್ಯೋಗಿಯೊಬ್ಬ ಈ ಎಸ್‌ಯು‌ವಿಗೆ ಡೀಸೆಲ್ ತುಂಬಿಸುತ್ತಾನೆ. ಇದನ್ನು ಕಂಡ ವಾಹನ ಮಾಲೀಕರು ಕೂಡಲೇ ಇಂಧನ ತುಂಬಿಸುವುದನ್ನು ನಿಲ್ಲಿಸಿದ್ದಾರೆ. ಅವರು ಪೆಟ್ರೋಲ್ ಬಂಕ್ ಪ್ರವೇಶಿಸಿದ ತಕ್ಷಣವೇ ತಮ್ಮ ಕಾರಿಗೆ ಪೆಟ್ರೋಲ್ ಹಾಕಿ ಎಂದು ಹೇಳಿದ್ದಾರೆ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಆದರೂ ಪೆಟ್ರೋಲ್ ಬಂಕ್ ಸಿಬ್ಬಂದಿ ಥಾರ್ ಎಸ್‌ಯು‌ವಿಗೆ ಡೀಸೆಲ್ ತುಂಬಿಸಿದ್ದಾನೆ. ಮಹೀಂದ್ರಾ ಥಾರ್ ಡೀಸೆಲ್ ಎಂಜಿನ್‌ ಹೊಂದಿದೆ ಎಂದು ಅಭಿಪ್ರಾಯ ಪಟ್ಟು ಆತ ಈ ರೀತಿ ಮಾಡಿದ್ದಾನೆ. ಅಷ್ಟೇ ಅಲ್ಲದೇ ಈ ವಾಹನ ಡೀಸೆಲ್ ಎಂಜಿನ್ ನಲ್ಲಿ ಮಾತ್ರ ಮಾರಾಟವಾಗುತ್ತದೆ ಎಂದು ಪೆಟ್ರೋಲ್ ಬಂಕ್ ಮಾಲೀಕ ಸಹ ಬೊಬ್ಬೆ ಹೊಡೆದಿದ್ದಾನೆ. ನಂತರ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಡೀಸೆಲ್ ಹೊರ ತೆಗೆದು ಆ ಥಾರ್ ಎಸ್‌ಯು‌ವಿಗೆ ಪೆಟ್ರೋಲ್ ತುಂಬಿಸಿದ್ದಾರೆ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ವಾಹನದ ಕೆಳಗೆ ಹೋಗಿ ಅಲ್ಲಿದ್ದ ಇಂಧನವನ್ನೆಲ್ಲ ಸಂಪೂರ್ಣವಾಗಿ ಹೊರ ತೆಗೆದಿದ್ದಾರೆ. ಈ ಮಹೀಂದ್ರಾ ಥಾರ್ ಎಸ್‌ಯು‌ವಿ ಮೊದಲೇ 20 ಲೀಟರ್ ಪೆಟ್ರೋಲ್ ಹೊಂದಿತ್ತು. ಹೆಚ್ಚುವರಿಯಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿ ಸುಮಾರು 2.5 ಲೀಟರ್ ಡೀಸೆಲ್ ತುಂಬಿಸಿದ್ದಾನೆ. ಈ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ಎಲ್ಲಾ ಇಂಧನವನ್ನು ಹೊರ ತೆಗೆಯಲಾಗಿದೆ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ನಂತರ 5 ಲೀಟರ್ ಪೆಟ್ರೋಲ್ ಅನ್ನು ಟ್ಯಾಂಕ್ ಮೇಲೆ ಸಿಂಪಡಿಸಲಾಗಿದೆ. ಇದರಿಂದ ಒಳಗಿರುವ ಎಲ್ಲಾ ಡೀಸೆಲ್ ಹೊರಬರುತ್ತದೆ. ನಂತರ ಈ ಎಸ್‌ಯು‌ವಿಗೆ ಪೆಟ್ರೋಲ್ ತುಂಬಿಸಲಾಗಿದೆ. ಈ ಎಸ್‌ಯು‌ವಿಯ ಫ್ಯೂಯಲ್ ಟ್ಯಾಂಕ್‌ಗೆ ಅರ್ಧದಷ್ಟು ಮಾತ್ರ ಪೆಟ್ರೋಲ್ ತುಂಬಿಸಲಾಗಿದೆ. ನಂತರ ಅಲ್ಲಿದ್ದ ಎಲ್ಲಾ ಸಿಬ್ಬಂದಿ ತಮ್ಮ ತಮ್ಮ ಕೆಲಸಗಳತ್ತ ತೆರಳಿದ್ದಾರೆ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

100 ಕಿ.ಮೀ ಚಲಿಸಿದ ನಂತರವೂ ವಾಹನದಲ್ಲಿ ಯಾವುದೇ ದೋಷ ಕಾಣಿಸಿಕೊಂಡಿಲ್ಲ. ಎಂಜಿನ್ ಎಂದಿನಂತೆ ಚಾಲನೆಯಲ್ಲಿದೆ ಎಂದು ಕಾರಿನ ಮಾಲೀಕರು ತಿಳಿಸಿದ್ದಾರೆ. ಹೊಂದಾಣಿಕೆಯಾಗದ ಇಂಧನವನ್ನು ವಾಹನಕ್ಕೆ ತುಂಬಿಸಿದಾಗ ಮಾಡಬೇಕಾದ ಮೊದಲನೆ ಕೆಲಸವೆಂದರೆ ವಾಹನವನ್ನು ತಕ್ಷಣವೇ ನಿಲ್ಲಿಸಬೇಕು ಅಥವಾ ವಾಹನ ಆಫ್ ಆಗಿದ್ದರೆ ಸ್ಟಾರ್ಟ್ ಮಾಡಬಾರದು.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ನಂತರ ಮೆಕ್ಯಾನಿಕ್ ಅನ್ನು ಕರೆದು ಎಂಜಿನ್'ಗೆ ಸರಬರಾಜು ಆಗುವ ಪ್ರಾಥಮಿಕ ಇಂಧನ ಪೈಪಿನ ಸಂಪರ್ಕವನ್ನು ಕಡಿತಗೊಳಿಸಬೇಕು. ಇದರ ಬಗ್ಗೆ ತಿಳಿದಿದ್ದರೆ ವಾಹನ ಮಾಲೀಕರೇ ಈ ರೀತಿ ಮಾಡಬಹುದು. ನಂತರ ಇಂಧನ ಟ್ಯಾಂಕ್ ಅನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಈ ಕಾರಣಕ್ಕೆ ಸೂಕ್ತವಾದ ಮೆಕ್ಯಾನಿಕ್ ಅನ್ನು ಕರೆಯುವುದು ಉತ್ತಮ.

ಈ ವೀಡಿಯೊದಲ್ಲಿರುವಂತೆ ಉದ್ದದ ಪೈಪ್ ಮೂಲಕ ವಾಹನದಿಂದ ಸಾಧ್ಯವಾದಷ್ಟು ಇಂಧನವನ್ನು ತೆಗೆದುಹಾಕಬೇಕು. ಹೊಂದಿಕೆಯಾಗದ ಇಂಧನವಿದ್ದರೆ ಅದು ಎಂಜಿನ್'ಗೆ ಹೋಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಮುಖ್ಯ ಇಂಧನ ಪೈಪ್‌ನಲ್ಲಿ ಯಾವುದೇ ಇಂಧನವಿದ್ದರೆ ಅವುಗಳನ್ನು ಹೊರತೆಗೆಯಬೇಕು.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಎಲ್ಲಾ ಇಂಧನವನ್ನು ಬಿಡುಗಡೆ ಮಾಡಿದ ನಂತರ, ಎಂಜಿನ್ ಅನ್ನು ಕೆಲವು ಬಾರಿ ಸ್ಟಾರ್ಟ್ ಮಾಡಬೇಕು. ಆಗ ಎಂಜಿನ್ ಸಿಸ್ಟಂ ಯಾವುದೇ ಇಂಧನವನ್ನು ಹೊರಹಾಕುತ್ತದೆ. ಇದೆಲ್ಲವನ್ನೂ ಮಾಡಿದ ನಂತರ, ಸೂಕ್ತವಾದ ಇಂಧನವನ್ನು ಸುಮಾರು ಎರಡು ಲೀಟರ್'ನಷ್ಟು ತುಂಬಿಸಿ ಎಂಜಿನ್ ಸ್ಟಾರ್ಟ್ ಮಾಡಬೇಕು. ಈ ಇಂಧನವನ್ನು ಸಹ ಬಿಡುಗಡೆ ಮಾಡಿದ ನಂತರ ವಾಹನದ ಫ್ಯೂಯಲ್ ಟ್ಯಾಂಕ್ ಅನ್ನು ತುಂಬಿಸಿ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಇನ್ನು ಮಹೀಂದ್ರಾ ಥಾರ್ ಎಸ್‌ಯು‌ವಿಯ ಬಗ್ಗೆ ಹೇಳುವುದಾದರೆ ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಆಫ್ ರೋಡ್ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಸದ್ದು ಮಾಡುತ್ತಿರುವ ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯು‌ವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಒಂದು ವರ್ಷ ಪೂರೈಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆಫ್ ರೋಡ್ ಎಸ್‌ಯುವಿ ತನ್ನ ಸೆಗ್ ಮೆಂಟಿನಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಮಹೀಂದ್ರಾ ಕಂಪನಿಯು 2020ರ ಅಕ್ಟೋಬರ್ 2ರಂದು ಥಾರ್ ಎಸ್‌ಯುವಿಯನ್ನು ಹೊಸ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಿತ್ತು. ಹೊಸ ಎಸ್‌ಯು‌ವಿಯು ಇದುವರೆಗೂ ಸುಮಾರು 75 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದಿದೆ. ಪ್ರತಿ ದಿನ 200 ರಿಂದ 250 ಗ್ರಾಹಕರು ಈ ಎಸ್‌ಯು‌ವಿಯನ್ನು ಬುಕ್ಕಿಂಗ್ ಮಾಡುತ್ತಿದ್ದಾರೆ.

ಪೆಟ್ರೋಲ್ ಎಂಜಿನ್ ಕಾರಿಗೆ ಡೀಸೆಲ್ ತುಂಬಿಸಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಹೊಸ ಮಹೀಂದ್ರಾ ಥಾರ್ ಎಸ್‌ಯು‌ವಿಯು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ ಪಡೆದಿದೆ. ಈ ಹಿನ್ನೆಲೆಯಲ್ಲಿ ಹಾಗೂ ಹೊಸ ಫೀಚರ್ ಗಳನ್ನು ಹೊಂದಿರುವ ಕಾರಣಕ್ಕೆ ಗ್ರಾಹಕರು ಹೊಸ ಥಾರ್ ಎಸ್‌ಯು‌ವಿ ಖರೀದಿಸಲು ಮುಗಿ ಬೀಳುತ್ತಿದ್ದಾರೆ.

Most Read Articles

Kannada
English summary
Petrol bunk staff fills diesel in mahindra thar petrol version video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X