ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಪಿಯಾಜಿಯೊ ಕಂಪನಿಯು ತನ್ನ ಅಪೆ ಪ್ಯಾಸೆಂಜರ್ ಮತ್ತು ಕಾರ್ಗೊ ವಾಹನ ಮಾದರಿಗಳಲ್ಲಿ ಎಲೆಕ್ಟ್ರಿಕ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಎಫ್ಎಕ್ಸ್ ಸರಣಿಯಲ್ಲಿ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ರಸ್ತೆಗಿಳಿದಿವೆ.

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಅಪೆ ಹೊಸ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮಾದರಿಯನ್ನು ಕಾರ್ಗೊ ವಿಭಾಗಕ್ಕೆ ಮತ್ತು ಇ-ಸಿಟಿ ಎಫ್ಎಕ್ಸ್ ಮಾದರಿಯನ್ನು ಪ್ರಯಾಣಿಕ ಸೇವೆಗಳ ವಿಭಾಗಕ್ಕೆ ಪರಿಚಯಿಸಲಾಗಿದ್ದು, ಹೊಸ ಎಲೆಕ್ಟ್ರಿಕ್ ವಾಹನಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 2.83 ಲಕ್ಷದಿಂದ ರೂ.3.12 ಲಕ್ಷ ಬೆಲೆ ಹೊಂದಿದೆ. ಹೊಸ ವಾಹನ ದರಗಳು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿಯನ್ನು ಸಹ ಒಳಗೊಂಡಿದ್ದು, ಆರಂಭಿಕ ಹಂತವಾಗಿ ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದಂತೆ ವಾಹನ ಮಾರಾಟವನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ಹೊಸ ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ವಾಹನಗಳ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ.

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಮಾದರಿಗಳಲ್ಲಿ ತೆಗೆದುಹಾಕಬಹುದಾದ ಬ್ಯಾಟರಿ ತಂತ್ರಜ್ಞಾನ ನೀಡಿರುವುದರಿಂದ ಬ್ಯಾಟರಿ ವಿನಿಯಮ ಚಾರ್ಜಿಂಗ್ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದ್ದು, ವಿನಿಯಮ ಕೇಂದ್ರಗಳಿಂದಾಗಿ ಚಾರ್ಜಿಂಗ್‌ಗಾಗಿ ಕಾಯುವ ಸಮಸ್ಯೆಗೆ ಸೂಕ್ತ ಪರಿಹಾರವಾಗಿದೆ.

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಪಿಯಾಜಿಯೊ ಕಂಪನಿಯು ಹೊಸ ಇವಿ ವಾಹನಗಳಲ್ಲಿ 9.5 kW ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ವಿವಿಧ ಡ್ರೈವಿಂಗ್ ಮೋಡ್‌ಗಳ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 110 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ. ಎರಡು ಎಲೆಕ್ಟ್ರಿಕ್ ವಾಹನದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಬೆಸ್ಟ್ ಇನ್ ಫೀಚರ್ಸ್‌ಗಳ ಮೂಲಕ ಆರಾಮದಾಯಕ ಪ್ರಯಾಣಕ್ಕೆ ಅನುಕೂಕವಾಗಿವೆ.

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಎಕ್ಸ್-ಟ್ರಾ ಎಫ್ಎಕ್ಸ್ ಮಾದರಿಯು ವಿಶೇಷವಾಗಿ ಕಾರ್ಗೊ ಅಪ್ಲಿಕೇಷನ್‌ಗಳಿಗಾಗಿ ಅಭಿವೃದ್ದಿಪಡಿಸಿದ್ದು, 6 ಅಡಿ ಕಾರ್ಗೊ ಡೆಕ್ ಮೂಲಕ ಗರಿಷ್ಠ ಪ್ರಮಾಣ ಸರಕು ಸಾಗಾಣಿಕೆ ಮಾಡಬಹುದಾಗಿದೆ. ಗ್ರಾಹಕರು ಈ ವಾಹನವನ್ನು ತಮ್ಮ ಬೇಡಿಕೆಯೆಂತೆ ಡೆಲಿವರಿ ವಾಹನವನ್ನಾಗಿ ಅಥವಾ ಕಸ ಸಂಗ್ರಹ ವಾಹನಗಳನ್ನಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಪ್ಯಾಸೆಂಜರ್ ವಾಹನವಾದ ಇ-ಸಿಟಿ ಎಫ್ಎಕ್ಸ್ ಮಾದರಿಯು ಕಂರ್ಫಟ್ ಫೀಚರ್ಸ್‌ಗಳೊಂದಿಗೆ ಹೆಚ್ಚಿನ ಮಟ್ಟದ ಟ್ರಿಪ್‌ ಓಡಿಸಬಹುದಾಗಿದ್ದು, ಎರಡು ವಾಹನಗಳಲ್ಲೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್, ಹಿಲ್ ಹೋಲ್ಡ್ ಅಸಿಸ್ಟ್, ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಡ್ಯುಯಲ್ ಟೋನ್ ಸೀಟ್, ಮಲ್ಟಿ ಇನ್‌ಫಾರ್ಮೆಷನ್ ಕ್ಲಸ್ಟರ್, ಬೂಸ್ಟ್ ಮೋಡ್ ಸೌಲಭ್ಯಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಇನ್ನು ಹೊಸ ವಾಹನಗಳ ಖರೀದಿ ಮೇಲೆ ಕಂಪನಿಯು ಸೂಪರ್ ವಾರಂಟಿ(3 ವರ್ಷ ಅಥವಾ 1 ಲಕ್ಷ ಕಿ.ಮೀ) ನೀಡುತ್ತಿದ್ದು, ಐ-ಕನೆಕ್ಟ್ ಟೆಲಿಮ್ಯಾಟಿಕ್ ಸಲ್ಯೂಷನ್ ಮೂಲಕ ಗ್ರಾಹಕರಿಗೆ ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡಲಾಗುತ್ತದೆ.

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಹೊಸ ಇವಿ ವಾಹನಗಳ ಬಿಡುಗಡೆ ಕುರಿತಂತೆ ಮಾತನಾಡಿದ ಪಿಯಾಜಿಯೊ ವೆಹಿಕಲ್ಸ್ ಪ್ರೈ.ಲಿ ಕಂಪನಿಯ ಅಧ್ಯಕ್ಷ ಮತ್ತು ಎಂಡಿ ಡಿಯಾಗೋ ಗ್ರಾಫಿ ಅವರು ಅಪೆ ಬ್ರಾಂಡ್‌ನೊಂದಿಗೆ ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಭವಿಷ್ಯದ ಯೋಜನೆಗಳಿಗಾಗಿ ನಮ್ಮ ನಾಲ್ಕು ದಶಕಗಳ ಪರಂಪರೆಯನ್ನು ಮುಂದುವರಿಸಲು ಹೊಸ ತಂತ್ರಜ್ಞಾನದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವುದೊಂದೆ ನಮ್ಮ ಪ್ರಮುಖ ಗುರಿಯಾಗಿದೆ ಎಂದಿದ್ದಾರೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಪಿಯಾಜಿಯೊ ಅಪೆ ಎಲೆಕ್ಟ್ರಿಕ್ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಬಿಡುಗಡೆ

ಹೊಸ ಗುರಿ ಯೋಜನೆಗಳಿಗೆ ಮೊದಲ ಹೆಜ್ಜೆಯಾಗಿ ಎಕ್ಸ್-ಟ್ರಾ ಎಫ್ಎಕ್ಸ್ ಮತ್ತು ಇ-ಸಿಟಿ ಎಫ್ಎಕ್ಸ್ ಇವಿ ವಾಹನಗಳನ್ನು ಪರಿಚಯಿಸುವ ಮೂಲಕ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆ ಹೊಸ ಎಲೆಕ್ಟ್ರಿಕ್ ವಾಹನಗಳು ಗ್ರಾಹಕರ ಪ್ರಮುಖ ಕಾರಣವಾಗುತ್ತಿವೆ.

More from DriveSpark

Article Published On: Wednesday, February 24, 2021, 20:35 [IST]
English summary
Piaggio Ape Electric E-Xtra FX & E-City FX Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+