ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಪಿಯಾಜಿಯೊ (Piaggio) ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ (PVPL), ಭಾರತದ ಪ್ರಮುಖ ತ್ರಿಚಕ್ರ ವಾಣಿಜ್ಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ತ್ರಿಚಕ್ರ ವಾಹನ ವಿಭಾಗದಲ್ಲಿ ಪ್ರಾಬಲ್ಯವನ್ನು ಹೊಂದಲು ಬಯಸಿದೆ. ಪಿಯಾಜಿಯೊ ಕಂಪನಿಯು ಈ ವರ್ಷದ ಏಪ್ರಿಲ್ - ನವೆಂಬರ್ ನಡುವೆ ಮಾರಾಟವಾದ ವಾಹನಗಳ ಮಾಹಿತಿಯನ್ನು ಹಂಚಿಕೊಂಡಿದೆ. ಈ ಅವಧಿಯಲ್ಲಿ ಕಂಪನಿಯು ಭಾರತದಲ್ಲಿ 15,206 ಯೂನಿಟ್ ವಾಣಿಜ್ಯ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಮಾರಾಟದ ಅಂಕಿ ಅಂಶಗಳನ್ನು ಹಂಚಿಕೊಂಡಿರುವ ಕಂಪನಿಯು, ಇ-ಕಾಮರ್ಸ್ ಹಾಗೂ ವಿತರಣಾ ವ್ಯವಹಾರಕ್ಕೆ ಹೆಚ್ಚುತ್ತಿರುವ ಬೇಡಿಕೆಯು ಕಾರ್ಗೋ ವಿಭಾಗವನ್ನು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಹೇಳಿದೆ. ಈ ಚೇತರಿಕೆಯು ಲಘು ಸಾರಿಗೆ ಉದ್ಯಮದಲ್ಲಿ ಮುಂಚೂಣಿಯಲ್ಲಿರಲು ಪಿಯಾಜಿಯೊ ಕಂಪನಿಗೆ ನೆರವಾಗಿದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಭಾರತದಲ್ಲಿ ಪಿಯಾಜಿಯೊ ವೆಹಿಕಲ್ಸ್ ಕಂಪನಿಯು ಡೀಸೆಲ್, ಪೆಟ್ರೋಲ್, ಸಿಎನ್‌ಜಿ, ಎಲ್‌ಪಿಜಿ ಎಂಜಿನ್ ಗಳಲ್ಲಿ ತನ್ನ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. ಭಾರತದಲ್ಲಿ ತನ್ನ ತ್ರಿಚಕ್ರ ವಾಹನ ವಾಣಿಜ್ಯ ವಾಹನಗಳ ವ್ಯಾಪ್ತಿಯನ್ನು ವಿಸ್ತರಿಸಲು ಕಂಪನಿಯು ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿದೆ. ವಾಣಿಜ್ಯ ವಿಭಾಗದಲ್ಲಿ, ಕಂಪನಿಯು ಬಹು ಲೋಡ್ ಸಾಮರ್ಥ್ಯದ ವಾಹನಗಳೊಂದಿಗೆ ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಪ್ರವೇಶಿಸಿದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಇನ್ನು ಪಿಯಾಜಿಯೊ ಡೀಲರ್‌ಶಿಪ್‌ಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಭಾರತದಲ್ಲಿ 725 ಡೀಲರ್‌ಶಿಪ್‌ ಹಾಗೂ 1,100 ಗ್ರಾಹಕ ಟಚ್‌ಪಾಯಿಂಟ್‌ಗಳನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಪಿಯಾಜಿಯೊ ವೆಹಿಕಲ್ಸ್ ಎಪ್ರಿಲಿಯಾ, ವೆಸ್ಪಾ ಹಾಗೂ ಆಪೆಯಂತಹ ಬ್ರ್ಯಾಂಡ್‌ಗಳನ್ನು ಮಾರಾಟ ಮಾಡುತ್ತದೆ. ಪಿಯಾಜಿಯೊ ಕಂಪನಿಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು ಏಪ್ ಇ-ಸಿಟಿ ಹಾಗೂ ಏಪ್ ಇ-ಎಕ್ಸ್ಟ್ರಾದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ಪಿಯಾಜಿಯೊ ಒನ್ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಸವಾರರಿಗೆ ಆರಾಮ ನೀಡಲು ದೊಡ್ಡ ಫುಟ್‌ರೆಸ್ಟ್ ಅನ್ನು ಹೊಂದಿದೆ. ಈ ಸ್ಕೂಟರ್ ಪ್ರಯಾಣಿಕರಿಗೆ ತೆಗೆಯಬಹುದಾದ ಫುಟ್‌ಬೋರ್ಡ್‌ನ ಸೌಲಭ್ಯವನ್ನು ಸಹ ನೀಡುತ್ತದೆ. ಮಾಹಿತಿಗಳ ಪ್ರಕಾರ, ಪಿಯಾಜಿಯೊ ಎಲೆಕ್ಟ್ರಿಕ್ ಸ್ಕೂಟರ್ - ಒನ್ ಹಾಗೂ ಆಕ್ಟಿವ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಲಿದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಆಕ್ಟಿವ್ ಮಾದರಿಯಲ್ಲಿ ಒಂದಕ್ಕಿಂತ ಹೆಚ್ಚಿನ ಶ್ರೇಣಿ ಹಾಗೂ ವೇಗವನ್ನು ನೀಡಬಹುದು. ಪಿಯಾಜಿಯೊ ಒನ್‌ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 1.2 ಕಿ.ವ್ಯಾ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟರ್ 1.6 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 43 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 55ರಿಂದ 60 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಸ್ಕೂಟರ್ ಮೊಪೆಡ್‌ನಂತಹ ಕಾರ್ಯಕ್ಷಮತೆಯನ್ನು ನೀಡುತ್ತದೆ. ಟಾಪ್ ಎಂಡ್ ಮಾದರಿಯಾದ ಆಕ್ಟಿವ್ ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸುತ್ತದೆ. ಈ ಮೋಟರ್ 2.6 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ ಪಿಯಾಜಿಯೊ ಒನ್ ಮಾದರಿಗಿಂತ ಹೆಚ್ಚಾಗಿರುತ್ತದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಕಂಪನಿಯು ಈ ಎರಡೂ ಮಾದರಿಗಳಲ್ಲಿ ಕೈನೆಟಿಕ್ ಎನರ್ಜಿ ರಿಕವರಿ ಸಿಸ್ಟಂ (ಕೆಇಆರ್‌ಎಸ್) ಅನ್ನು ಬಳಸಲಿದೆ. ಇದು ಕಂಪನಿಯೇ ಸ್ವಂತವಾಗಿ ಅಭಿವೃದ್ಧಿಪಡಿಸಿರುವ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಆಗಿದೆ. ಈ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ 5.5 ಇಂಚಿನ ಕಲರ್ ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು, ಗೋಚರತೆಯನ್ನು ಹೆಚ್ಚಿಸಲು ಹೊರಾಂಗಣ ಬೆಳಕು ಹಾಗೂ ಬಣ್ಣಕ್ಕೆ ಅನುಗುಣವಾಗಿ ಪ್ರದರ್ಶನದ ಬಣ್ಣವನ್ನು ಆಟೋಮ್ಯಾಟಿಕ್ ಆಗಿ ಬದಲಾಯಿಸುತ್ತದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಇಕೋ ಹಾಗೂ ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ರೈಡಿಂಗ್ ಮೋಡ್‌ಗೆ ಅನುಗುಣವಾಗಿ ಸ್ಕೂಟರ್‌ನ ಶ್ರೇಣಿಯು ಬದಲಾಗುತ್ತದೆ. ಸ್ಕೂಟರ್‌ನ ಡಿಸ್‌ಪ್ಲೇಯಲ್ಲಿ ವೇಗ, ಬ್ಯಾಟರಿ ಮಟ್ಟ, ಶ್ರೇಣಿ ಹಾಗೂ ಚಾರ್ಜಿಂಗ್ ಕುರಿತು ಮಾಹಿತಿ ಲಭ್ಯವಿರುತ್ತದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ಬಾರಾಮತಿಯಲ್ಲಿರುವ ತನ್ನ ಉತ್ಪಾದನಾ ಘಟಕಕ್ಕೆ ಏಪ್ ಎಲೆಕ್ಟ್ರಿಕ್ ತ್ರಿ ವ್ಹೀಲರ್ ಸರಣಿಯನ್ನು ಜೋಡಿಸಲು ಮಹಿಳಾ ಉದ್ಯೋಗಿಗಳನ್ನು ನೇಮಿಸಿದೆ. ಬಾರಾಮತಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ವಿವಿಧ ತಾಂತ್ರಿಕ ಸಂಸ್ಥೆಗಳಿಂದ ತರಬೇತಿ ಪಡೆದ ಮಹಿಳಾ ಉದ್ಯೋಗಿಗಳನ್ನು ನೇಮಿಸಲಾಗಿದೆ ಎಂದು ಕಂಪನಿ ಹೇಳಿದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಈ ಮಹಿಳಾ ಉದ್ಯೋಗಿಗಳಿಗೆ ಅಸೆಂಬ್ಲಿ ಲೈನ್‌ಗೆ ಬರುವ ಮೊದಲು ಸುರಕ್ಷತಾ ಕಾರ್ಯವಿಧಾನಗಳು, ಉಪಕರಣಗಳ ಬಳಕೆ, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಇತ್ತೀಚಿನ ತಂತ್ರಜ್ಞಾನ, ಬಿಎಂಎಸ್, ಮೋಟಾರ್‌ಗಳು, ಇ-ಬಾಕ್ಸ್‌ಗಳ ಕುರಿತು ತರಬೇತಿ ನೀಡಲಾಗುತ್ತದೆ. ಪಿಯಾಜಿಯೊದ ಬಾರಾಮತಿ ಉತ್ಪಾದನಾ ಘಟಕದಲ್ಲಿ ಮಹಿಳಾ ಕಾರ್ಯಪಡೆಯು ಏಪ್‌ನ ಎಲೆಕ್ಟ್ರಿಕ್ ಮಾದರಿಗಳನ್ನು ಜೋಡಿಸಲಿದೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಇವುಗಳಲ್ಲಿ ಏಪ್ ಇ-ಸಿಟಿ ಹಾಗೂ ಏಪ್ ಇ-ಎಕ್ಸ್‌ಟ್ರಾ ವಾಹನಗಳು ಸೇರಿವೆ. ಈ ವಾಹನಗಳು ಸ್ಥಿರ ಹಾಗೂ ಬದಲಾಯಿಸಬಹುದಾದ ಬ್ಯಾಟರಿ ಮಾದರಿಗಳಾಗಿವೆ. ಏಪ್ ಎಲೆಕ್ಟ್ರಿಕ್ ಅಸೆಂಬ್ಲಿ ಲೈನ್‌ನಲ್ಲಿ ಕೆಲಸ ಮಾಡುವ ಮಹಿಳೆಯರು ಗುಣಮಟ್ಟದ ನಿಯಂತ್ರಣ ತಪಾಸಣೆ, ಫಿಟ್ಟಿಂಗ್‌ಗಳು, ಅಸೆಂಬ್ಲಿ, ಎಲೆಕ್ಟ್ರಿಕಲ್ ಹಾಗೂ ಒಟ್ಟಾರೆ ವಸ್ತು ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ.

ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ರಿಚಕ್ರ ವಾಹನ ಮಾರಾಟ ಮಾಡಿದ ಪಿಯಾಜಿಯೊ

ಈ ಯೋಜನೆಯಿಂದ ಬಾರಾಮತಿಯಲ್ಲಿ ಮಹಿಳೆಯರಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ. ಜೊತೆಗೆ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸ್ಟೀರಿಯೊಟೈಪ್‌ಗಳ ವಿರುದ್ಧ ಹೋರಾಡಲು ಸಾಧ್ಯವಾಗಲಿದೆ ಎಂದು ಪಿಯಾಜಿಯೊ ಕಂಪನಿ ಹೇಳಿಕೊಂಡಿದೆ. ಉದ್ಯೋಗಿಗಳ ಆಯ್ಕೆಯ ಮಾನದಂಡವು, ಕೌಶಲ್ಯ ಹಾಗೂ ಸರಿಯಾದ ತಂತ್ರಜ್ಞಾನದ ತಿಳುವಳಿಕೆಯೇ ಹೊರತು ಅವರ ಲಿಂಗವಲ್ಲ ಎಂದು ಕಂಪನಿ ಹೇಳಿದೆ.

More from DriveSpark

Article Published On: Thursday, December 16, 2021, 12:43 [IST]
English summary
Piaggio sold 15206 units three wheeler cargo vehicles during april november 2021 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+