ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಪಿಯಾಜಿಯೊ (Piaggio) ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ (PVPL) ಕಂಪನಿಯು ಬಾರಾಮತಿಯಲ್ಲಿರುವ ತನ್ನ ಉತ್ಪಾದನಾ ಘಟಕಕ್ಕೆ ಏಪ್ ಎಲೆಕ್ಟ್ರಿಕ್ ತ್ರಿ ವ್ಹೀಲರ್ ಸರಣಿಯನ್ನು ಜೋಡಿಸಲು ಮಹಿಳಾ ಉದ್ಯೋಗಿಗಳನ್ನು ನೇಮಿಸಿದೆ. ಬಾರಾಮತಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ವಿವಿಧ ತಾಂತ್ರಿಕ ಸಂಸ್ಥೆಗಳಿಂದ ತರಬೇತಿ ಪಡೆದ ಮಹಿಳಾ ಉದ್ಯೋಗಿಗಳನ್ನು ನೇಮಿಸಲಾಗಿದೆ ಎಂದು ಕಂಪನಿ ಹೇಳಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಈ ಮಹಿಳಾ ಉದ್ಯೋಗಿಗಳಿಗೆ ಅಸೆಂಬ್ಲಿ ಲೈನ್‌ಗೆ ಬರುವ ಮೊದಲು ಸುರಕ್ಷತಾ ಕಾರ್ಯವಿಧಾನಗಳು, ಉಪಕರಣಗಳ ಬಳಕೆ, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಇತ್ತೀಚಿನ ತಂತ್ರಜ್ಞಾನ, ಬಿಎಂಎಸ್, ಮೋಟಾರ್‌ಗಳು, ಇ-ಬಾಕ್ಸ್‌ಗಳ ಕುರಿತು ತರಬೇತಿ ನೀಡಲಾಗುತ್ತದೆ. ಪಿಯಾಜಿಯೊದ ಬಾರಾಮತಿ ಉತ್ಪಾದನಾ ಘಟಕದಲ್ಲಿ ಮಹಿಳಾ ಕಾರ್ಯಪಡೆಯು ಏಪ್‌ನ ಎಲೆಕ್ಟ್ರಿಕ್ ಮಾದರಿಗಳನ್ನು ಜೋಡಿಸಲಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಇವುಗಳಲ್ಲಿ ಏಪ್ ಇ-ಸಿಟಿ ಹಾಗೂ ಏಪ್ ಇ-ಎಕ್ಸ್‌ಟ್ರಾ ವಾಹನಗಳು ಸೇರಿವೆ. ಈ ವಾಹನಗಳು ಸ್ಥಿರ ಹಾಗೂ ಬದಲಾಯಿಸಬಹುದಾದ ಬ್ಯಾಟರಿ ಮಾದರಿಗಳಾಗಿವೆ. ಏಪ್ ಎಲೆಕ್ಟ್ರಿಕ್ ಅಸೆಂಬ್ಲಿ ಲೈನ್‌ನಲ್ಲಿ ಕೆಲಸ ಮಾಡುವ ಮಹಿಳೆಯರು ಗುಣಮಟ್ಟದ ನಿಯಂತ್ರಣ ತಪಾಸಣೆ, ಫಿಟ್ಟಿಂಗ್‌ಗಳು, ಅಸೆಂಬ್ಲಿ, ಎಲೆಕ್ಟ್ರಿಕಲ್ ಹಾಗೂ ಒಟ್ಟಾರೆ ವಸ್ತು ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಈ ಯೋಜನೆಯಿಂದ ಬಾರಾಮತಿಯಲ್ಲಿ ಮಹಿಳೆಯರಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ. ಜೊತೆಗೆ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸ್ಟೀರಿಯೊಟೈಪ್‌ಗಳ ವಿರುದ್ಧ ಹೋರಾಡಲು ಸಾಧ್ಯವಾಗಲಿದೆ ಎಂದು ಪಿಯಾಜಿಯೊ ಕಂಪನಿ ಹೇಳಿಕೊಂಡಿದೆ. ಉದ್ಯೋಗಿಗಳ ಆಯ್ಕೆಯ ಮಾನದಂಡವು, ಕೌಶಲ್ಯ ಹಾಗೂ ಸರಿಯಾದ ತಂತ್ರಜ್ಞಾನದ ತಿಳುವಳಿಕೆಯೇ ಹೊರತು ಅವರ ಲಿಂಗವಲ್ಲ ಎಂದು ಕಂಪನಿ ಹೇಳಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಈ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಿಯಾಗೋ ಗ್ರಾಫಿ, ನಮ್ಮ ಗುಂಪಿನ ತತ್ವಶಾಸ್ತ್ರಕ್ಕೆ ಅನುಗುಣವಾಗಿ, ನಾವು ಸಂಪೂರ್ಣವಾಗಿ ಮಹಿಳಾ ಉದ್ಯೋಗಿಗಳಿಂದ ನಡೆಸಲ್ಪಡುವ ಇವಿ ಅಸೆಂಬ್ಲಿ ಲೈನ್ ಅನ್ನು ರಚಿಸಿದ್ದೇವೆ. ಇದು ಹೊಸ ಆರಂಭವಾಗಿದೆ. ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ನಾವು ಹೆಚ್ಚು ಹೆಚ್ಚು ಮಹಿಳೆಯರನ್ನು ವಾಹನಗಳು, ಸ್ಥಾವರ ಆವರಣಗಳು ಹಾಗೂ ಕಚೇರಿಗಳ ಅಸೆಂಬ್ಲಿ ಸಾಲುಗಳಲ್ಲಿ ನೇಮಿಸುತ್ತಿದ್ದೇವೆ. ಇದರಿಂದ ಮಹಿಳೆಯರ ಸಬಲೀಕರಣವಾಗುವುದು ಮಾತ್ರವಲ್ಲದೆ ಆಟೋ ವಲಯದಲ್ಲಿ ಉದ್ಯೋಗಿಗಳ ಸಮಾನತೆಯನ್ನು ತರಲು ಸಹ ಸಾಧ್ಯವಾಗಲಿದೆ. ಈ ಯೋಜನೆಯು ಹಲವಾರು ದಿನಗಳಿಂದ ಜಾರಿಯಾಗದೇ ಬಾಕಿ ಉಳಿದಿತ್ತು ಎಂದು ಹೇಳಿದರು.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಪಿಯಾಜಿಯೊ ವೆಹಿಕಲ್ಸ್ ಕಂಪನಿಯು ಭಾರತದಲ್ಲಿ ತನ್ನ ದ್ವಿಚಕ್ರ ವಾಹನ ಹಾಗೂ ತ್ರಿ ಚಕ್ರ ವಾಹನಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಭಾರತದಲ್ಲಿ ತನ್ನ ತ್ರಿ ಚಕ್ರ ವಾಣಿಜ್ಯ ವಾಹನಗಳ ವ್ಯಾಪ್ತಿಯನ್ನು ವಿಸ್ತರಿಸಲು ಕಂಪನಿಯು ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿದೆ. ಕಂಪನಿಯು ಈಗ ವಾಣಿಜ್ಯ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್‌ಗೆ ಕಾಲಿಟ್ಟಿದೆ ಎಂಬುದು ಗಮನಾರ್ಹ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಇನ್ನು ಪಿಯಾಜಿಯೊ ಡೀಲರ್‌ಶಿಪ್‌ಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಭಾರತದಲ್ಲಿ 725 ಡೀಲರ್‌ಶಿಪ್‌ ಹಾಗೂ 1,100 ಗ್ರಾಹಕ ಟಚ್‌ಪಾಯಿಂಟ್‌ಗಳನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಪಿಯಾಜಿಯೊ ವೆಹಿಕಲ್ಸ್ ಎಪ್ರಿಲಿಯಾ, ವೆಸ್ಪಾ ಹಾಗೂ ಆಪೆಯಂತಹ ವಾಹನಗಳನ್ನು ಮಾರಾಟ ಮಾಡುತ್ತದೆ. ಪಿಯಾಜಿಯೊ ಕಂಪನಿಯು ಶೀಘ್ರದಲ್ಲೇ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಪಿಯಾಜಿಯೊ ಒನ್ ಅನ್ನು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಕಂಪನಿಯು ಈ ವರ್ಷದ ಮೇ ತಿಂಗಳಿನಲ್ಲಿ ಈ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹಿರಂಗಪಡಿಸಿತ್ತು. ಪಿಯಾಜಿಯೊ ಒನ್, ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಸವಾರರಿಗೆ ಆರಾಮ ನೀಡಲು ದೊಡ್ಡ ಫುಟ್‌ರೆಸ್ಟ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಪ್ರಯಾಣಿಕರಿಗೆ ತೆಗೆಯಬಹುದಾದ ಫುಟ್‌ಬೋರ್ಡ್‌ ಸೌಲಭ್ಯವನ್ನು ಸಹ ನೀಡಲಾಗಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಮಾಹಿತಿಗಳ ಪ್ರಕಾರ, ಪಿಯಾಜಿಯೊ ಎಲೆಕ್ಟ್ರಿಕ್ ಸ್ಕೂಟರ್, ಒನ್ ಹಾಗೂ ಆಕ್ಟಿವ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಲಿದೆ. ಆಕ್ಟಿವ್ ಮಾದರಿಯಲ್ಲಿ ಒಂದಕ್ಕಿಂತ ಹೆಚ್ಚು ಶ್ರೇಣಿ ಹಾಗೂ ವೇಗವನ್ನು ನೀಡಬಹುದು. ಪಿಯಾಜಿಯೊ ಒನ್‌ನಲ್ಲಿ 1.2 ಕಿ.ವ್ಯಾ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟರ್ 1.6 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಈ ಸ್ಕೂಟರ್ ಪ್ರತಿ ಗಂಟೆಗೆ ಗರಿಷ್ಠ 43 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ 55ರಿಂದ 60 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಸ್ಕೂಟರ್ ಮೊಪೆಡ್‌ನಂತಹ ಕಾರ್ಯಕ್ಷಮತೆಯನ್ನು ಹೊಂದಿದೆ. ಇನ್ನು ಟಾಪ್ ಎಂಡ್ ಮಾದರಿಯಾದ ಆಕ್ಟಿವ್ ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು, 2.6 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಈ ಮಾದರಿಯ ಬೆಲೆ ಪಿಯಾಜಿಯೊ ಒನ್ ಗಿಂತಲೂ ಹೆಚ್ಚಾಗಿರುತ್ತದೆ. ಕಂಪನಿಯು ಈ ಎರಡೂ ಸ್ಕೂಟರ್‌ಗಳಲ್ಲಿ ಕೈನೆಟಿಕ್ ಎನರ್ಜಿ ರಿಕವರಿ ಸಿಸ್ಟಮ್ (ಕೆಇಆರ್‌ಎಸ್) ಅನ್ನು ಬಳಸುತ್ತಿದೆ. ಇದು ಕಂಪನಿಯ ಸ್ವಂತ ಅಭಿವೃದ್ಧಿಪಡಿಸಿದ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಆಗಿದೆ. ಈ ಸ್ಕೂಟರ್ 5.5 ಇಂಚಿನ ಕಲರ್ ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ.

ಮಹಿಳಾ ಉದ್ಯೋಗಿಗಳಿಂದಲೇ ಸಿದ್ಧವಾಗಲಿದೆ ಏಪ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ

ಈ ಡಿಸ್ಪ್ಲೇ ಗೋಚರತೆಯನ್ನು ಹೆಚ್ಚಿಸಲು ಹೊರಾಂಗಣ ಬೆಳಕು ಹಾಗೂ ಬಣ್ಣಕ್ಕೆ ಅನುಗುಣವಾಗಿ ಡಿಸ್ಪ್ಲೇ ಬಣ್ಣವನ್ನು ಆಟೋಮ್ಯಾಟಿಕ್ ಆಗಿ ಬದಲಾಯಿಸುತ್ತದೆ. ಈ ಸ್ಕೂಟರ್ ಇಕೋ ಹಾಗೂ ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ರೈಡಿಂಗ್ ಮೋಡ್‌ಗೆ ಅನುಗುಣವಾಗಿ ಸ್ಕೂಟರ್‌ನ ಶ್ರೇಣಿಯು ಬದಲಾಗುತ್ತದೆ. ಸ್ಕೂಟರ್‌ನ ಡಿಸ್‌ಪ್ಲೇಯಲ್ಲಿ ವೇಗ, ಬ್ಯಾಟರಿ ಮಟ್ಟ, ಶ್ರೇಣಿ ಹಾಗೂ ಚಾರ್ಜಿಂಗ್ ಕುರಿತು ಮಾಹಿತಿ ಲಭ್ಯವಿರುತ್ತದೆ.

Most Read Articles

Kannada
English summary
Piaggio deploys women employees in baramati assembly plant details
Story first published: Tuesday, November 30, 2021, 13:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X