Just In
Don't Miss!
- News
ಏಪ್ರಿಲ್ 22ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Movies
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹಿಳೆಯರಿಗಾಗಿಯೇ ಶುರುವಾಯ್ತು ಪಿಂಕ್ ಸಿಟಿ ಬಸ್
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ಸಂಚಾರ ನೀಡಲು ರಾಂಚಿ ಮಹಾನಗರ ಪಾಲಿಕೆಯು ಪಿಂಕ್ ಸಿಟಿ ಬಸ್ ಸೇವೆಯನ್ನು ಆರಂಭಿಸಿದೆ. ರಾಂಚಿ ನಗರದ ಮೇಯರ್ ಹಾಗೂ ಪಾಲಿಕೆ ಆಯುಕ್ತರು ಈ ವಿಶೇಷ ಬಸ್ ಸೇವೆಗೆ ಚಾಲನೆ ನೀಡಿದ್ದಾರೆ.

ಈ ಸೇವೆಯಡಿಯಲ್ಲಿ ಸದ್ಯಕ್ಕೆ ಎರಡು ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಈ ಬಸ್ ಸೇವೆಯನ್ನು ಮಹಿಳೆಯರಿಗಾಗಿ ಮಾತ್ರ ಕಾಯ್ದಿರಿಸಲಾಗಿದೆ. ಈ ಪಿಂಕ್ ಸಿಟಿ ಬಸ್‌ನಲ್ಲಿ ಕಂಡಕ್ಟರ್‌ನಿಂದ ಕ್ಲೀನರ್'ವರೆಗೆ ಕೇವಲ ಮಹಿಳೆಯರು ಮಾತ್ರ ಇರಲಿದ್ದಾರೆ.

ಈ ಎಲ್ಲರೂ ಪಿಂಕ್ ಬಣ್ಣದ ಉಡುಪಿನಲ್ಲಿರುತ್ತಾರೆ. ಈ ಬಸ್ಸಿನ ಪ್ರಯಾಣ ದರವನ್ನು ರೂ.5ಗಳಿಗೆ ನಿಗದಿಪಡಿಸಲಾಗಿದೆ. ಈ ಬಸ್ ಸೇವೆಯಿಂದ ನಗರದ ಮಹಿಳೆಯರು ಆರಾಮವಾಗಿ, ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ವಿಶೇಷ ಬಸ್‌ನಲ್ಲಿ ಒಂದು ಬಾರಿಗೆ 30 ಮಹಿಳಾ ಪ್ರಯಾಣಿಕರು ಪ್ರಯಾಣಿಸಬಹುದು. ಇನ್ನೊಂದು ಪ್ರಮುಖ ಸಂಗತಿಯೆಂದರೆ ಮಹಿಳೆಯರ ಜೊತೆಗೆ ಮಕ್ಕಳೂ ಸಹ ಈ ಬಸ್‌ನಲ್ಲಿ ಪ್ರಯಾಣಿಸಬಹುದು.

ಇಂತಹ ಇನ್ನಷ್ಟು ಬಸ್‌ಗಳನ್ನು ಹಲವು ಮಾರ್ಗಗಳಲ್ಲಿ ಓಡಿಸಲು ರಾಂಚಿ ಪಾಲಿಕೆಯು ನಿರ್ಧರಿಸಿದೆ. ರಾಂಚಿಯಲ್ಲಿ ಮಹಿಳೆಯರಿಗಾಗಿ ಈಗಾಗಲೇ ಪಿಂಕ್ ಆಟೋಗಳಿಗೆ ಚಾಲನೆ ನೀಡಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಹಿಳೆಯರಿಗಾಗಿಯೇ ಮೀಸಲಾಗಿರುವ ಈ ಆಟೋಗಳ ಚಾಲಕರು ಸಹ ಮಹಿಳೆಯರೇ ಎಂಬುದು ವಿಶೇಷ. ಪಿಂಕ್ ಬಸ್‌ನ ಕೆಲವು ನಿಲ್ದಾಣಗಳಲ್ಲಿ ಪುರುಷ ಚಾಲಕರಿರುತ್ತಾರೆ.

ಆದರೆ ಹೆಚ್ಚಿನ ನಿಲ್ದಾಣಗಳಲ್ಲಿ ಮಹಿಳಾ ಚಾಲಕರನ್ನು ನೇಮಿಸಿಕೊಳ್ಳಲಾಗಿದೆ. ಮಹಿಳೆಯರಿಗಾಗಿಯೇ ವಿಶೇಷ ಬಸ್ ಆರಂಭಿಸಿರುವ ರಾಂಚಿ ಮಹಾನಗರ ಪಾಲಿಕೆಯ ಈ ಕಾರ್ಯವು ನಿಜಕ್ಕೂ ಶ್ಲಾಘನೀಯ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸುವಾಗ ಹಲವು ತೊಂದರೆಗಳನ್ನು ಎದುರಿಸುತ್ತಾರೆ. ಆದರೆ ಈ ಪಿಂಕ್ ಬಸ್'ನಿಂದಾಗಿ ಮಹಿಳೆಯರಿಗೆ ಪ್ರಯಾಣದ ವೇಳೆ ತೊಂದರೆಯಾಗುವುದು ತಪ್ಪಲಿದೆ.

ಜೊತೆಗೆ ಪ್ರಯಾಣಕ್ಕಾಗಿ ಕಡಿಮೆ ವೆಚ್ಚವಾಗುತ್ತದೆ. ಈ ಬಸ್ ಸೇವೆಗೆ ಇಂದು ಚಾಲನೆ ನೀಡಲಾಗಿದೆ ಎಂದು ರಾಂಚಿ ಮೇಯರ್ ಆಶಾ ಲಕ್ರಾ ತಿಳಿಸಿದ್ದಾರೆ. ಈ ಬಸ್ಸಿಗೆ ಪಿಂಕ್ ಸಿಟಿ ಬಸ್ ಸೇವೆ ಎಂಬ ಹೆಸರಿಡಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸದ್ಯಕ್ಕೆ ಈ ಸೇವೆಯಲ್ಲಿ ಎರಡು ಬಸ್‌ಗಳು ಸಂಚರಿಸಲಿವೆ. ಮುಂಬರುವ ದಿನಗಳಲ್ಲಿ ಈ ರೀತಿಯ 10 ಬಸ್‌ಗಳಿಗೆ ಚಾಲನೆ ನೀಡಲಾಗುವುದು ಎಂದು ರಾಂಚಿ ಪಾಲಿಕೆ ತಿಳಿಸಿದೆ.

ಈ ಬಸ್ ಪ್ರತಿದಿನ ಬೆಳಿಗ್ಗೆ 7ರಿಂದ ರಾತ್ರಿ 8 ರವರೆಗೆ ಚಲಿಸಲಿದೆ ಎಂದು ರಾಂಚಿ ಮೇಯರ್ ಹೇಳಿದರು. ಈ ಬಸ್ ಕಚ್ರಿ ಚೌಕ್‌ನಿಂದ ಬಿರ್ಸಾ ಚೌಕ್‌ವರೆಗೆ 7 ಕಿ.ಮೀ ಚಲಿಸುತ್ತದೆ. ಇದಕ್ಕಾಗಿ ಮಹಿಳೆಯರು ಕೇವಲ ರೂ.5 ಶುಲ್ಕ ನೀಡಿದರೆ ಸಾಕು.
ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.