ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಮಹೀಂದ್ರಾ ಕಂಪನಿಯು ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸುವ ಮೂಲಕ ಜನಪ್ರಿಯತೆ ಹೊಂದುತ್ತಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಜಾಗತಿಕ ಆಟೋಮೊಬೈಲ್ ವಿಭಾಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವ ಮಹೀಂದ್ರಾ ಕಂಪನಿಯು ಹೊಸ ಕಾರುಗಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸುತ್ತಿದ್ದು, ಹೊಸ ವಾಹನ ವಿನ್ಯಾಸ ಅಭಿವೃದ್ದಿಗಾಗಿಯೇ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಮುಖ ಕಂಪನಿಗಳೊಂದಿಗೆ ಸಹಭಾಗಿತ್ವ ಘೋಷಣೆ ಮಾಡಿದೆ. ಜೊತೆಗೆ ಹೊಸ ಯೋಜನೆಗಾಗಿ ನುರಿತ ಉದ್ಯೋಗಿಗಳ ತಂಡವನ್ನು ಸಿದ್ದಪಡಿಸುತ್ತಿರುವ ಮಹೀಂದ್ರಾ ವಿನ್ಯಾಸ ವಿಭಾಗಕ್ಕೆ ಪ್ರತಾಪ್ ಬೋಸ್ ನೇಮಕಗೊಳಿಸಿದೆ.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಆಟೋ ಮೊಬೈಲ್ ವಿನ್ಯಾಸ ವಿಭಾಗದಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿರುವ ಪ್ರತಾಪ್ ಬೋಸ್ ಹೆಗಲಿಗೆ ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಜವಾಬ್ದಾರಿ ನೀಡಲಾಗಿದ್ದು, ಪ್ರತಾಪ್ ಬೋಸ್ ಇತ್ತೀಚೆಗೆ 14 ವರ್ಷಗಳ ಕಾರ್ಯನಿರ್ವಹಣೆಯೊಂದಿಗೆ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನಗಳ ವಿನ್ಯಾಸ ವಿಭಾಗಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಟಾಟಾ ಮೋಟಾರ್ಸ್‌‌ನಲ್ಲಿ 14 ವರ್ಷಗಳ ಕಾಲ ವಿನ್ಯಾಸ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಪ್ರತಾಪ್ ಬೋಸ್ ಅವರು ಅದಕ್ಕೂ ಮುನ್ನ ಪಿಯಾಜಿಯೊ ಮತ್ತು ಡೈಮ್ಲರ್ ಕ್ಲೈಸರ್ ಕಂಪನಿಗಳಲ್ಲಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ಇದೀಗ ಹೊಸ ಯೋಜನೆಗಳೊಂದಿಗೆ ಕಾರು ಮಾರಾಟದಲ್ಲಿ ಭಾರೀ ನೀರಿಕ್ಷೆಯಿಟ್ಟುಕೊಂಡಿರುವ ಮಹೀಂದ್ರಾ ತಂಡದ ಕೈ ಜೋಡಿಸಿದ್ದಾರೆ.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಪ್ರತಾಪ್ ಬೋಸ್ ಅವರು ಮಹೀಂದ್ರಾ ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನದ ಎರಡು ವಿಭಾಗದ ವಿನ್ಯಾಸಗಳ ಮೇಲ್ವಿಚಾರಣೆ ವಹಿಸಿಕೊಂಡಿದ್ದು, ಮಹೀಂದ್ರಾ ಹೊಸ ಕಾರುಗಳ ವಿನ್ಯಾಸ ಬದಲಾವಣೆಯಲ್ಲಿ ಪ್ರತಾಪ್ ಬೋಸ್ ಮಹತ್ವದ ಪಾತ್ರ ವಹಿಸಿಲಿದ್ದಾರೆ.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿರುವ ಮಹೀಂದ್ರಾ ಕಂಪನಿಯು 2026ರ ವೇಳೆಗೆ ಒಟ್ಟು 9 ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಹೊಸ ಯೋಜನೆ ಅಡಿ ಮೊದಲ ಕಾರು ಮಾದರಿಯಾಗಿ ಎಕ್ಸ್‌ಯುವಿ700 ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿಯೇ ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯು ಇದೀಗ ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ಐದು ಹೊಸ ಕಾರುಗಳನ್ನು ಮತ್ತು ವಿವಿಧ ಕಾರು ಸರಣಿಯಲ್ಲಿ ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳಲ್ಲದೆ ಶೇ.75 ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರು ಮಾದರಿಗಳನ್ನು ಸಹ ಅಭಿವೃದ್ದಿಪಡಿಸುತ್ತಿದ್ದು, ಇಎಕ್ಸ್‌ಯುವಿ300, ಇಕೆಯುವಿ100 ನಂತರ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯೊಂದರಲ್ಲೇ ಎಕ್ಸ್‌‌ಯುವಿ700 ಮಾದರಿಯ ಜೊತೆಗೆ ಎಕ್ಸ್‌ಯುವಿ100, ಎಕ್ಸ್‌‌ಯುವಿ400, ಎಕ್ಸ್‌ಯುವಿ900 ಎಸ್‌ಯುವಿ ಮತ್ತು ಎಕ್ಸ್‌ಯುವಿ900 ಎಸ್‌ಯುವಿ ಕೂಪೆ ಸೇರಿ ಒಟ್ಟು ಐದು ಎಕ್ಸ್‌ಯುವಿ ಸರಣಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಮಹೀಂದ್ರಾ ಕಾರುಗಳ ವಿನ್ಯಾಸ ವಿಭಾಗದ ಉಸ್ತುವಾರಿ ವಹಿಸಿಕೊಂಡ ಪ್ರತಾಪ್ ಬೋಸ್

ಎಲೆಕ್ಟ್ರಿಕ್ ವಾಹನ ಉದ್ಯಮದ ಮೇಲೂ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಮಹೀಂದ್ರಾ ಕಂಪನಿಯು ಇತ್ತೀಚೆಗೆ ಹೆಚ್ಚುವರಿಯಾಗಿ ರೂ.3 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಹೊಸ ಬಂಡವಾಳದೊಂದಿಗೆ ಕಂಪನಿಯು ಇದುವರೆಗೆ ಸುಮಾರು ರೂ.12 ಸಾವಿರ ಕೋಟಿ ಹೂಡಿಕೆಯೊಂದಿಗೆ ಇವಿ ವಾಹನ ಮಾರಾಟದಲ್ಲೂ ಗಮನಸೆಳೆಯಲಿದೆ.

Most Read Articles
v

Kannada
English summary
Pratap Bose Appointed By Mahindra To Lead New Global Design Organization. Read in Kannada.
Story first published: Friday, June 11, 2021, 20:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X