ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

By Manoj Bk

ಲಾಕ್‌ಡೌನ್ ಹಾಗೂ ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಹೊಸ ಕಾರು ಬಿಡುಗಡೆ ಹಾಗೂ ಮಾರಾಟದ ವಿಷಯದಲ್ಲಿ ಕಾರು ತಯಾರಕ ಕಂಪನಿಗಳು ಕಳೆದ ಕೆಲ ವರ್ಷಗಳಿಂತಲೂ ಹೆಚ್ಚಿನ ಮುನ್ನಡೆ ಕಾಯ್ದುಕೊಂಡಿವೆ. ಕಳೆದ ವರ್ಷ ಕೆಲವು ಕಾರು ಕಂಪನಿಗಳು ಹೊಸ ವಿಭಾಗವನ್ನು ಪ್ರವೇಶಿಸಿದ್ದು, ಹೊಸ ಹಾಗೂ ಆಧುನಿಕ ಫೀಚರ್ ಗಳನ್ನು ಹೊಂದಿರುವ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುತ್ತವೆ. ಮಾರುಕಟ್ಟೆಯಲ್ಲಿರುವ ಹಲವು ಕಾರುಗಳು ಬಹುತೇಕ ಒಂದೇ ರೀತಿಯ ಫೀಚರ್ ಗಳನ್ನು ಹೊಂದಿರುತ್ತವೆ. ಸಾಮೂಹಿಕ ಮಾರುಕಟ್ಟೆಯ ಕಾರುಗಳಲ್ಲಿ ಕಂಡು ಬರುವ ಪ್ರೀಮಿಯಂ ಫೀಚರ್ ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

1. ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS)

2021ರಲ್ಲಿ ಹೆಚ್ಚು ಗಮನ ಸೆಳೆದ ಫೀಚರ್ ಎಂದರೆ ADAS. ಈ ಫೀಚರ್ ಅನ್ನು ಮೊದಲು ಮಹೀಂದ್ರಾ ಕಂಪನಿಯು XUV 700 ಹಾಗೂ ಎಂಜಿ ಮೋಟಾರ್ ಕಂಪನಿಯ ಆಸ್ಟರ್‌ನಲ್ಲಿ ನೀಡಲಾಯಿತು. ಈ ಕಾರುಗಳು ತಮ್ಮ ವಿಭಾಗದಲ್ಲಿ ಮೊದಲ ಬಾರಿಗೆ ಈ ಫೀಚರ್ ಪಡೆದಿವೆ. ADAS ಫೀಚರ್ ಅನ್ನು ಎಂಜಿ ಆಸ್ಟರ್‌ನ ಟಾಪ್ ಎಂಡ್ ಮಾದರಿಗಳಾದ ಶಾರ್ಪ್ ಹಾಗೂ ಸ್ಯಾವಿಗಳಲ್ಲಿ ಮಾತ್ರ ನೀಡಲಾಗುತ್ತದೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

ಇನ್ನು ಮಹೀಂದ್ರಾ ಕಂಪನಿಯು ಈ ಫೀಚರ್ ಅನ್ನು XUV 700 ಕಾರಿನ ಟಾಪ್ ಎಂಡ್ ಮಾದರಿಯಾದ AX7 ನಲ್ಲಿ ಮಾತ್ರ ನೀಡುತ್ತದೆ. ಈ ಎರಡೂ ಕಾರುಗಳಲ್ಲಿರುವ ADAS ಫೀಚರ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಸೇರಿದಂತೆ ಹಲವಾರು ಫೀಚರ್ ಗಳೊಂದಿಗೆ ಬರುತ್ತದೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

2. 64 ಕಲರ್ ಆಂಬಿಯೆಂಟ್ ಲೈಟಿಂಗ್

ಈ ಹಿಮೆ 64 ಕಲರ್ ಆಂಬಿಯೆಂಟ್ ಲೈಟಿಂಗ್ ಗಳನ್ನು ಮರ್ಸಿಡಿಸ್ ಬೆಂಝ್ ಸೇರಿದಂತೆ ಕೆಲವು ಐಷಾರಾಮಿ ಕಾರುಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಈ ಫೀಚರ್ ಅನ್ನು ಹ್ಯುಂಡೈ ಅಲ್ಕಾಜರ್‌ನಂತಹ ಕೆಲವು ಪ್ರೀಮಿಯಂ ಕಾರುಗಳ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗುತ್ತದೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

ಈಗ ಕಿಯಾ ಸೆಲ್ಟೋಸ್ ಕಾರ್ ಅನ್ನು ಮಲ್ಟಿ ಕಲರ್ ಆಂಬಿಯೆಂಟ್ ಲೈಟಿಂಗ್ ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ಕಿಯಾ ಕ್ಯಾರೆನ್ಸ್ ಎಂಪಿವಿಯು ಸಹ 64 ಕಲರ್ ಆಂಬಿಯೆಂಟ್ ಲೈಟಿಂಗ್ ಹೊಂದಿರಲಿದೆ. ಇನ್ನು ಹ್ಯುಂಡೈ ಕಂಪನಿಯ ಟಾಪ್ ಎಂಡ್ ಮಾದರಿಗಳಲ್ಲಿಯೂ ಸಹ ಈ ಫೀಚರ್ ಅನ್ನು ನೀಡುವ ಸಾಧ್ಯತೆಗಳಿವೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

3. ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ

ಹ್ಯುಂಡೈ ಅಲ್ಕಾಜರ್, ಫೇಸ್‌ಲಿಫ್ಟೆಡ್ ಜೀಪ್ ಕಂಪಾಸ್ ಹಾಗೂ ಮಹೀಂದ್ರಾ ಎಕ್ಸ್‌ಯು‌ವಿ 700 ಕಾರುಗಳಲ್ಲಿರುವ ಹಲವು ಸಾಮಾನ್ಯ ಫೀಚರ್ ಗಳಲ್ಲಿ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸಹ ಸೇರಿದೆ. ಈ ಎಲ್ಲಾ ಮೂರು ಕಾರುಗಳು 10 ಇಂಚುಗಳಿಗಿಂತ ಹೆಚ್ಚು ಗಾತ್ರದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿವೆ. ಅಲ್ಕಾಜರ್‌ನಲ್ಲಿರುವ ಡಿಸ್‌ಪ್ಲೇ ಔಟ್‌ಸೈಡ್ ರೇರ್‌ ವೀವ್ ಮಿರರ್'ನಲ್ಲಿ (ORVM) ಅಳವಡಿಸಲಾಗಿರುವ ಕ್ಯಾಮೆರಾಗಳಿಂದ ಫೀಡ್ ಅನ್ನು ಪಡೆಯುತ್ತದೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

ಮತ್ತೊಂದೆಡೆ ಮಹೀಂದ್ರಾ ಎಕ್ಸ್‌ಯು‌ವಿ 700 ನಲ್ಲಿ ನ್ಯಾವಿಗೇಷನ್, ಡ್ರೈವ್ ಮಾಹಿತಿ ಹಾಗೂ ADAS ಅಸಿಸ್ಟೆಂಟ್'ಗಳು ಲಭ್ಯವಿದೆ. ಈ ಎಲ್ಲಾ ಮೂರು ಕಾರುಗಳು ತಮ್ಮ ಡಿಜಿಟಲ್ ಸ್ಕ್ರೀನ್'ಗಳಲ್ಲಿ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಬಗ್ಗೆ ಮಾಹಿತಿಯನ್ನು ಪಡೆಯುತ್ತವೆ. ಅಲ್ಕಾಜರ್‌ನ ಮಿಡ್ ಎಂಡ್ ಪ್ಲಾಟಿನಂ ಮಾದರಿಯಲ್ಲಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ನೀಡಲಾಗಿದೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

4. AI ಚಾಲಿತ ಪರ್ಸ್ನಲೈಸ್ಡ್ ರೋಬೋಟ್

ಈ ಫೀಚರ್ ಅನ್ನು ಎಂಜಿ ಆಸ್ಟರ್‌ನಲ್ಲಿ ನೀಡಲಾಗಿದೆ. ಈ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ರೋಬೋಟಿಕ್ ಹೆಡ್ ತರಹದ ಸಾಧನವನ್ನು ಅಳವಡಿಸಲಾಗಿದೆ. ಈ ಫೀಚರ್ ಅನ್ನು ಹಲೋ ಆಸ್ಟರ್ ಎಂದು ಹೇಳುವ ಮೂಲಕ ಆಕ್ಟಿವೇಟ್ ಮಾಡಲಾಗುತ್ತದೆ. ಈ ಫೀಚರ್ ಇತ್ತೀಚಿನ ಸುದ್ದಿಗಳನ್ನು ಹಂಚಿಕೊಳ್ಳುವ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಹಾಗೂ ಜೋಕ್‌ಗಳನ್ನು ಹೇಳುವಂತಹ ಕಾರ್ಯಗಳನ್ನು ಮಾಡುತ್ತದೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

ಈ ಫೀಚರ್ ಸನ್‌ರೂಫ್, ಡ್ರೈವರ್ ಸೈಡ್ ವಿಂಡೋ, ಕ್ಲೈಮೇಟ್ ಕಂಟ್ರೋಲ್, ಫೋನ್ ಕರೆಗಳು, ನ್ಯಾವಿಗೇಷನ್ ಹಾಗೂ ಮಾಧ್ಯಮದಂತಹ ಕಾರ್ ಫಂಕ್ಷನ್ ಗಳನ್ನು ಸಹ ನಿಯಂತ್ರಿಸುತ್ತದೆ. ಎಂಜಿ ಮೋಟಾರ್ ಕಂಪನಿಯು ಈ ಪ್ರೀಮಿಯಂ ಫೀಚರ್ ಅನ್ನು ಆಸ್ಟರ್ ಕಾರಿನ ಟಾಪ್ ಎಂಡ್ ಮಾದರಿಯಾದ ಸ್ಯಾವಿಯಲ್ಲಿ ನೀಡಿದೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

5. 10 ಇಂಚಿನ ಅಪ್ ಟಚ್‌ಸ್ಕ್ರೀನ್

2021, ಅನೇಕ ಕಾರುಗಳಲ್ಲಿ ದೊಡ್ಡ ಗಾತ್ರದ ಉತ್ತಮ ಟಚ್‌ಸ್ಕ್ರೀನ್ ಸಿಸ್ಟಂಗಳನ್ನು ನೋಡಿದ ವರ್ಷವಾಗಿದೆ. ಜೀಪ್, ಮಹೀಂದ್ರಾ, ಫೋಕ್ಸ್‌ವ್ಯಾಗನ್, ಸ್ಕೋಡಾ ಹಾಗೂ ಹ್ಯುಂಡೈ ಕಂಪನಿಗಳು ತಮ್ಮ ಕಾರುಗಳಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಡಿಸ್ಪ್ಲೇಗಳನ್ನು ಪರಿಚಯಿಸಿವೆ.

ಸಾಮೂಹಿಕ ಮಾರುಕಟ್ಟೆ ಕಾರುಗಳಲ್ಲಿರುವ ಪ್ರೀಮಿಯಂ ಫೀಚರ್'ಗಳಿವು

ಅಲ್ಕಾಜರ್ ಕಾರ್ ಅನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಾರುಗಳು ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಕನೆಕ್ಟೆಡ್ ಕಾರ್ ಟೆಕ್ನಾಲಜಿಯನ್ನು ಹೊಂದಿವೆ.ಎಕ್ಸ್‌ಯು‌ವಿ 700 ಕಾರಿನಲ್ಲಿರುವ ಡಿಸ್ ಪ್ಲೇ ಭಾರತದ ಮೊದಲ ಅಮೆಜಾನ್ ಅಲೆಕ್ಸಾ ಇನ್ ಬಿಲ್ಟ್ ಇಂಟಿಗ್ರೇಷನ್ ಅನ್ನು ಹೊಂದಿದೆ. ಜೊತೆಗೆ Zomato, JustDial ಜಿ-ಮೀಟರ್, ಲ್ಯಾಪ್ ಟೈಮರ್ ನಂತಹ ಇನ್ ಬಿಲ್ಟ್ ಅಪ್ಲಿಕೇಶನ್‌ಗಳನ್ನು ಹೊಂದಿದೆ.

Most Read Articles

Kannada
English summary
Premium features available in domestic mass market cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X