ಟೊಯೊಟಾ ಬೆಲ್ಟಾ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಇತ್ತೀಚೆಗೆ ಭಾರತದಲ್ಲಿ ಬೆಲ್ಟಾ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಬೆಲ್ಟಾ ಎಂಬ ಹೆಸರನ್ನು ಮಾರುತಿ ಸುಜುಕಿ ಸಿಯಾಜ್ ರಿಬ್ಯಾಡ್ಜ್ ಸೆಡಾನ್‌ಗಾಗಿ ಬಳಸುವ ಸಾಧ್ಯತೆಯಿದೆ.

ಮಾರುತಿ ಸುಜುಕಿ ಸಿಯಾಜ್ ಕಾರನ್ನು ಟೊಯೊಟಾ ಕಂಪನಿಯು ರಿಬ್ಯಾಡ್ಜ್ ಮಾದರಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ. ಟೊಯೊಟಾ ಕಂಪನಿಯು ಯಾರೀಸ್ ಸೆಡಾನ್ ಸ್ಥಾನಕ್ಕೆ ಸಿಯಾಜ್ ಕಾರನ್ನು ರಿಬ್ಯಾಡ್ಜ್ ಮಾದರಿಯಾಗಿ ತರಲಿದೆ. ಎರಡು ದೈತ್ಯ ವಾಹನ ತಯಾರಕರ ನಡುವಿನ ಸಹಭಾಗಿತ್ವದಲ್ಲಿ ರಿಬ್ಯಾಡ್ಜ್ ಅಗಿ ಮಾರಾಟವಾಗುವ ಮೂರನೇ ಮಾದರಿ ಸಿಯಾಜ್ ಆಗಿರಬಹುದು.

ಟೊಯೊಟಾ ಬ್ಯಾಡ್ಜ್ ಒಳಗೊಂಡ ಸಿಯಾಜ್‌ನ ಗ್ರಿಲ್ ಚಿತ್ರ ಬಹಿರಂಗವಾಗಿದೆ. ಈ ಚಿತ್ರದಿಂದ ಟೊಯೊಟಾ ಸಿಯಾಜ್ ಕಾರನ್ನು ತನ್ನ ರಿಬ್ಯಾಡ್ ಮಾದರಿಯಾಗಿ ತರಬಹುದು ಎಂದು ವರದಿಗಳಾಗಿದೆ. ಮಾರುತಿ ಸುಜುಕಿ ಸಿಯಾಜ್ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.

ಟೊಯೊಟಾ ಪ್ರಸ್ತುತ ಯಾರಿಸ್ ಸೆಡಾನ್ ಅನ್ನು ಮಾರುತಿ ಸುಜುಕಿ ಸಿಯಾಜ್ ಒಂದೇ ವಿಭಾಗದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಯಾರಿಸ್ ಸ್ಥಾನಕ್ಕೆ ಜನಪ್ರಿಯ ಸಿಯಾಜ್ ಸೆಡಾನ್ ಕಾರನ್ನು ರಿಬ್ಯಾಡ್ಜ್ ಮಾದರಿಯಾಗಿ ತರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಸಿಯಾಜ್‌ನ ರಿಬ್ಯಾಡ್ ಮಾದರಿಯು ಕೂಡ ಅದೇ 1.5-ಲೀಟರ್ ಕೆ-ಸೀರೀಸ್ ಎಂಜಿನ್ ಅನ್ನು ಹೊಂದಿರುತ್ತದೆ. ಇದರೊಂದಿಗೆ ಅದೇ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದಿಂದ ಬ್ರ್ಯಾಂಡ್‌ನ (ಎಸ್‌ವಿಹೆಚ್ಎಸ್) ಸ್ಮಾರ್ಟ್ ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಇದು 104 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಫೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಟಾರ್ಕ್ ಕನ್ವಟರ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಜೆಯನ್ನು ನೀಡಲಾಗುತ್ತದೆ.

ಸಿಯಾಜ್ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಅಲಾಯ್ ವ್ಹೀಲ್‌ಗಳು, ಕ್ರೋಮ್-ಪಿನಿಶ್ ವಿಂಡೋ ಲೈನ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ. ಟೊಯೊಟಾದ ರಿಬ್ಯಾಡ್ಜ್ ಮಾದರಿಯಲ್ಲಿಯೂ ಇವೆಲ್ಲವನ್ನೂ ಉಳಿಸಿಕೊಳ್ಳಬಹುದು.

ರಿಬ್ಯಾಡ್ಜ್ ಮಾದರಿಯು ಕೂಡ ಡ್ಯಾಶ್‍ಬೋರ್ಡ್‍ನಲ್ಲಿ ಬ್ಲ್ಯಾಕ್ ಮತ್ತು ಸಿಲ್ವರ್ ಆಕ್ಸೆಂಟ್‍ಗಳು, ಡೋರ್ ಟ್ರಿಮ್ಸ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ. ಆಪಲ್ ಕರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಇರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

ಇನ್ನು ಈ ಕಾರಿನಲ್ಲಿ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಕೀ ಲೆಸ್ ಎಂಟ್ರಿ, ಮಲ್ಟಿಪಲ್ ಏರ್‍ಬ್ಯಾಗ್, ಇಬಿಡಿಯೊಂದಿಗೆ ಎಬಿಎಸ್, ಆಟೋಮ್ಯಾಟಿಕ್ ಕ್ಲೈಮೆಂಟ್, ರಿಯರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಮತ್ತು ಇತರ ಫೀಚರ್ಸ್‍ಗಳನ್ನು ಹೊಂದಿರಲಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ಸ್ ಗಳನ್ನು ನೀಡಬಹುದು.

ಸಿ-ಸೆಗ್‍ಮೆಂಟ್ ಸಿಯಾಜ್ ಸೆಡಾನ್ ಹೆಚ್ಚು ಸ್ಪೋರ್ಟಿ ಲುಕ್ ನಿಂದ ಕೂಡಿದೆ.. ಈ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದ್ದರು. ಮಿಡ್ ಸೆಡಾನ್ ಆದ ಮಾರುತಿ ಸಿಯಾಜ್ ಕಾರು ಸಿ ಸೆಗ್‍ಮೆಂಟ್‍ನಲ್ಲಿ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಸ್ಕೋಡಾ ರ್ಯಾಪಿಡ್ ಕಾರುಗಳಿಗೆ ಪೈಪೋಟಿ ನೀಡುತ್ತದೆ

ಟೊಯೊಟಾ ಯಾರಿಸ್ ಕೂಡ ಜನಪ್ರಿಯ ಸೆಡಾನ್ ಆಗಿದೆ. ಆದರೆ ಇತ್ತೀಚೆಗೆ ಇದರ ಜನಪ್ರಿಯತೆ ಕಡಿಮೆಯಾಗಿದೆ. ಮರಾಟದಲ್ಲಿಯು ಕುಸಿತ ಕಂಡಿದೆ. ಇದರಿಂದ ಯಾರಿಸ್ ಸ್ಥಾನಕ್ಕೆ ಜನಪ್ರಿಯ ಸಿಯಾಜ್ ಸೆಡಾನ್ ಅನ್ನು ತರಲು ನಿರ್ಧರಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ರಿಬ್ಯಾಡ್ಜ್ ಮಾದರಿಯು ಟೊಯೊಟಾ ಬೆಲ್ಟಾ ಎಂಬ ಹೆಸರಿನಲ್ಲಿ ಬಿಡುಗಡೆಯಾಗಬಹುದು.


Click it and Unblock the Notifications