ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ರಿಲಯನ್ಸ್ ರಿಟೇಲ್ ಶೀಘ್ರದಲ್ಲೇ ಭಾರತದಲ್ಲಿ ದೇಶದ ಮೊದಲ ರೂಫ್‌ಟಾಪ್, ಹವಾನಿಯಂತ್ರಿತ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾಗಿದೆ ಎಂದು ವರದಿಯಾಗಿದೆ. ಕಂಪನಿಯು ಮುಂಬೈನಲ್ಲಿ ಜಿಯೋ ವರ್ಲ್ಡ್ ಡ್ರೈವ್ ಎಂಬ ಪ್ರೀಮಿಯಂ ಗುಣಮಟ್ಟದ ಶಾಪಿಂಗ್ ಮಾಲ್ ಅನ್ನು ಹೊಂದಿದೆ. ಕಂಪನಿಯು ಈ ಶಾಪಿಂಗ್ ಮಾಲ್‌ನಲ್ಲಿ ಹೊಸ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಮುಂದಾಗಿದೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ಈ ಶುಕ್ರವಾರ ಥಿಯೇಟರ್ ಆರಂಭವಾಗಲಿದೆ ಎಂದು ರಿಲಯನ್ಸ್ ರಿಟೇಲ್ ಪ್ರಕಟಿಸಿದೆ. ಈ ಥಿಯೇಟರ್ ಅನ್ನು ಪಿವಿಆರ್ ಸಿನಿಮಾಸ್ ನಿರ್ವಹಿಸಲಿದೆ. ಡ್ರೈವ್ ಇನ್ ಥಿಯೇಟರ್ ಒಂದು ರೀತಿಯ ಥಿಯೇಟರ್ ಆಗಿದ್ದು, ಅದು ಕಾರಿನಲ್ಲಿ ಕುಳಿತುಕೊಂಡು ಸಿನಿಮಾಗಳನ್ನು ನೋಡುವ ಅನುಕೂಲವನ್ನು ನೀಡುತ್ತದೆ. ರಿಲಯನ್ಸ್ ರಿಟೇಲ್ ಭಾರತದಲ್ಲಿ ಮೊದಲ ಬಾರಿಗೆ ಈ ರೀತಿಯ ಥಿಯೇಟರ್ ಅನ್ನು ತೆರೆಯುತ್ತಿದೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ಈ ಥಿಯೇಟರ್ ಒಂದು ಬಾರಿಗೆ 290 ಕಾರುಗಳಿಗೆ ಅವಕಾಶ ಕಲ್ಪಿಸುತ್ತದೆ. ಇಷ್ಟು ಸಂಖ್ಯೆಯ ಕಾರುಗಳಿರುವ ಈ ಥಿಯೇಟರ್ ನಲ್ಲಿ ದೊಡ್ಡ ಪರದೆಯನ್ನೇ ಬಳಸಲಾಗುತ್ತದೆ. ಇದು ಅತಿ ದೊಡ್ಡ ಸ್ಕ್ರೀನ್ ಥಿಯೇಟರ್ ಕೂಡ ಆಗಲಿದೆ. ಇದರ ನಂತರ ಪಿವಿಆರ್ ಸಿನಿಮಾಸ್ ತನ್ನ ಪರಿಕಲ್ಪನೆಯ ಪ್ರಾಜೆಕ್ಟ್ ಮೈಸನ್ ಪಿವಿಆರ್ ಅನ್ನು ಇಲ್ಲಿ ಆರಂಭಿಸಲು ನಿರ್ಧರಿಸಿದೆ. ಮಲ್ಟಿಪ್ಲೆಕ್ಸ್ ಥಿಯೇಟರ್, ಪ್ರಿವ್ಯೂ ಥಿಯೇಟರ್ ಹಾಗೂ ವಿಐಪಿಗಳಿಗಾಗಿ ಪ್ರತ್ಯೇಕ ಪ್ರವೇಶ ದ್ವಾರದಂತಹ ವಿವಿಧ ಸೌಲಭ್ಯಗಳನ್ನು ಪಿವಿಆರ್ ಒದಗಿಸಲಿದೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ಜಿಯೋ ವರ್ಲ್ಡ್ ಡ್ರೈವ್ ಮಾಲ್ ಸುಮಾರು 17.5 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದು ಮುಂಬೈನ ಅತಿದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಹಾಗೂ ಭಾರತೀಯ ಪ್ರೀಮಿಯಂ ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ. ಆಧುನಿಕ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಜಿಯೋ ವರ್ಲ್ಡ್ ಡ್ರೈವ್ ಅನ್ನು ರಚಿಸಲಾಗಿದೆ ಎಂದು ರಿಲಯನ್ಸ್ ರಿಟೇಲ್ ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ಈ ಮಾಲ್‌ನಲ್ಲಿ ಮೋಜು, ಮಸ್ತಿಯಂತಹ ಅನುಭವಕ್ಕೆ ಯಾವುದೇ ಕೊರತೆಯಿಲ್ಲವೆಂದು ಅವರು ಹೇಳಿದ್ದಾರೆ. ಕರೋನಾ ವೈರಸ್ ವಿಶ್ವದಾದ್ಯಂತ ನಾನಾ ಬದಲಾವಣೆಗಳನ್ನು ತಂದಿದೆ. ಅವುಗಳಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಆರಂಭವಾಗುತ್ತಿರುವ ಓಪನ್ ರೂಫ್ ಟಾಪ್ ಡ್ರೈವ್ ಇನ್ ಥಿಯೇಟರ್ ಸಹ ಒಂದು. ರೆಸ್ಟೋರೆಂಟ್‌ಗಳಿಂದ ಹಿಡಿದು ಕ್ಲಿನಿಕಲ್ ಪ್ರಯೋಗಗಳವರೆಗೆ ಹಲವು ಸಂಗತಿಗಳನ್ನು ಡ್ರೈವ್ ಇನ್'ಗೆ ಅಪ್‌ಗ್ರೇಡ್ ಮಾಡಲಾಗಿದೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ಈ ಥಿಯೇಟರ್ ಗೆ ಬರುವ ಅತಿಥಿಗಳಿಗೆ ಬೇಕಾದ ಎಲ್ಲಾ ತಿಂಡಿ ಹಾಗೂ ಇತರೆ ಸೇವೆಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು. ಇದರಿಂದ ಸಂದರ್ಶಕರು ಕಾರಿನಿಂದ ಹೊರ ಬರುವ ಅಗತ್ಯವಿಲ್ಲ. ಗ್ರಾಹಕರಿಗೆ ಆಹಾರ ಹಾಗೂ ಪಾನೀಯಗಳನ್ನು ಒದಗಿಸಲು ದಾಲ್ಮಿಯಾ ಕಂಪನಿಯ ಜೊತೆಗೆ ಸಹಭಾಗಿತ್ವ ಮಾಡಿಕೊಳ್ಳಲಾಗಿದೆ. ಈ ಕಂಪನಿಯು ಇಟಾಲಿಯನ್ ನಂತಹ ವಿವಿಧ ಭಕ್ಷ್ಯಗಳನ್ನು ಪೂರೈಸುತ್ತದೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ರಿಲಯನ್ಸ್ ಕಂಪನಿಯು ಹಲವು ಕ್ಷೇತ್ರಗಳಲ್ಲಿ ತೊಡಗಿದೆ. ಜನಪ್ರಿಯ ದೂರ ಸಂಪರ್ಕ ಕಂಪನಿಯಾದ ರಿಲಯನ್ಸ್ ಜಿಯೋ ತನ್ನ ಕೈಗೆಟುಕುವ ಇಂಟರ್ ನೆಟ್ ಸೇವೆಗೆ ಹೆಸರುವಾಸಿಯಾಗಿದೆ. ಭಾರತ ಮೂಲದ ರಿಲಯನ್ಸ್ ಜಿಯೋ ಕಂಪನಿಯು ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗಾಗಿ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಬ್ಯಾಟರಿ ಸ್ಥಾವರವನ್ನು ನಿರ್ಮಿಸುವ ಯೋಜನೆಯ ಬಗ್ಗೆ ಘೋಷಿಸಿತ್ತು.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ಈ ಹಿನ್ನೆಲೆಯಲ್ಲಿ ಕಂಪನಿಯು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು ಇನ್ನೂ ಹಲವು ಹೊಸ ಚಟುವಟಿಕೆಗಳನ್ನು ಆರಂಭಿಸಿದೆ. ಅದರಂತೆ, ಕಂಪನಿಯು ದೇಶಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಈ ಉದ್ದೇಶಕ್ಕಾಗಿ ರಿಲಯನ್ಸ್ ಜಿಯೋ ಬ್ರಿಟಿಷ್ ಪೆಟ್ರೋಲಿಯಂ ಕಂಪನಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ಬ್ಲೂಸ್ಮಾರ್ಟ್ ಸಹ ಈ ಕಂಪನಿಗಳ ಜೊತೆಗೆ ಮೈತ್ರಿಕೂಟಕ್ಕೆ ಸೇರಿಕೊಂಡಿದೆ. ಈ ಮೂರು ಕಂಪನಿಗಳು ಒಟ್ಟಾಗಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿವೆ. ಈ ಕಂಪನಿಗಳು ಜಂಟಿಯಾಗಿ ತೆರೆಯಲಿರುವ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು ಇನ್ನು ಕೆಲವು ವರ್ಷಗಳಲ್ಲಿ ಬಳಕೆಗೆ ಬರಲಿವೆ ಎಂದು ವರದಿಯಾಗಿದೆ. ಈ ಕಂಪನಿಗಳು ಮೂಲ ಸೌಕರ್ಯ ಯೋಜನೆ, ಅಭಿವೃದ್ಧಿ ಹಾಗೂ ಕಾರ್ಯಾಚರಣೆಯಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆಗಳಿವೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ವರದಿಗಳ ಪ್ರಕಾರ ಈ ಸಹ ಭಾಗಿತ್ವವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಹಂತದ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಿದೆ. ಈ ಚಾರ್ಜಿಂಗ್ ಕೇಂದ್ರದಲ್ಲಿ ಏಕಕಾಲಕ್ಕೆ 30 ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಇಂಗ್ಲೆಂಡ್ ಮೂಲದ ಬ್ರಿಟಿಷ್ ಪೆಟ್ರೋಲಿಯಂ ತನ್ನ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ವಿಶ್ವಾದ್ಯಂತ ಆರಂಭಿಸಿದೆ. ಅದೇ ತಂತ್ರವನ್ನು ಬಳಸಿ ಕಂಪನಿಯು ಭಾರತದಲ್ಲೂ ವಿಶ್ವ ದರ್ಜೆಯ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಿದೆ.

ದೇಶದ ಮೊದಲ ಓಪನ್ ಡ್ರೈವ್ ಇನ್ ಥಿಯೇಟರ್ ತೆರೆಯಲು ಸಜ್ಜಾದ ರಿಲಯನ್ಸ್

ಈ ಹಿನ್ನೆಲೆಯಲ್ಲಿ ವಿಶ್ವದರ್ಜೆಯ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು ಶೀಘ್ರದಲ್ಲೇ ಭಾರತದಲ್ಲಿಯೂ ಬಳಕೆಗೆ ಬರುವ ನಿರೀಕ್ಷೆಗಳಿವೆ. ರಿಲಯನ್ಸ್ ಜಿಯೋ - ಬ್ರಿಟಿಷ್ ಪೆಟ್ರೋಲಿಯಂ ಸಹ ಭಾಗಿತ್ವವು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಮಾತ್ರವಲ್ಲದೆ ರಿಲಯನ್ಸ್ ಕಂಪನಿಯ ಪೆಟ್ರೋಲಿಯಂ ನೆಟ್ವರ್ಕ್ ಅನ್ನು ಸಹ ವಿಸ್ತರಿಸಲಿದೆ. ಈಗ ಸುಮಾರು 5,500 ಪೆಟ್ರೋಲ್ ಸ್ಟಾಕ್ ಗಳು ರಿಲಯನ್ಸ್ ಕಂಪನಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಐದು ವರ್ಷಗಳಲ್ಲಿ 1,400 ಕೇಂದ್ರಗಳು ಕಾರ್ಯ ನಿರ್ವಹಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Reliance to open india s first open air roof top drive in theatre details
Story first published: Tuesday, November 2, 2021, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X