ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

ವಿದ್ಯಾರ್ಥಿ ಜೀವನದಿಂದಲೇ ಒಂದು ಕಾರು ಖರೀದಿಸಬೇಕೆಂಬ ಕನಸನ್ನು ಸಾಮಾನ್ಯವಾಗಿ ಎಲ್ಲರೂ ಕಾಣುತ್ತಾರೆ. ನೀವು ಕೂಡ ಭವಿಷ್ಯದಲ್ಲಿ ಸ್ವಂತ ಕಾರು ಹೊಂದಬೇಕು ಎನ್ನುವ ಆಸೆ ಇದ್ದರೆ ಇತ್ತ ಕೊಂಚ ಗಮನ ಹರಿಸಿ. ಭಾರತೀಯ ಮಾರುಕಟ್ಟೆ ಹೊಸ ಬಗೆಯ ಕಾರುಗಳ ಆಗಮನವಾಗುತ್ತಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

ವಿಶ್ವದ ಕಾರು ತಯಾರಕರ ದೊಡ್ಡ ಮಾರುಕಟ್ಟೆಯಲ್ಲಿ ಭಾರತದ ವಾಹನ ಮಾರುಕಟ್ಟೆ ಕೂಡ ಒಂದಾಗಿದೆ. ಆರಂಭಿಕ ಹಂತದಲ್ಲಿ ಕೇವಲ ಸಾಮಾನ್ಯ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದ ಭಾರತದ ವಾಹನ ಮಾರುಕಟ್ಟೆಗೆ ಇದೀಗ ಕೋಟಿ ಕೋಟಿ ಬೆಲೆಬಾಳುವ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಕಾರುಗಳ ಆಯ್ಕೆಯನ್ನು ಹೊಂದಿರುದರಿಂದ ಯುವಕರಿಗೆ ಯಾವ ಕಾರನ್ನು ಖರೀದಿಸಬೇಕೆಂಬ ಗೊಂದಲವಿರುತ್ತದೆ. ಇದರಿಂದ ಯುವ ಜನರಿಗೆ ಸೂಕ್ತವಾದ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

Renault Kwid

ವಿದ್ಯಾರ್ಥಿಗಳು ಅಥವಾ ಯುವಕರು ಕೈಗೆಟುಕುವ ದರದಲ್ಲಿ ಕಾರನ್ನು ಖರೀದಿಸಲು ಬಯಸಿದರೆ, Renault Kwid ಉತ್ತಮ ಆಯ್ಕೆಯಾಗಿದೆ. ಈ ಕಾರಿನ ಬೆಲೆಯು ರೂ.3.18 ರಿಂದ ರೂ.5.39 ಲಕ್ಷಗಳಾಗಿದೆ. Renault Kwid ಕಾರಿಗೆ ಕೈಗೆಟುಕುವ ಬೆಲೆ, ಅತ್ಯಾಕರ್ಷಕ. ಲುಕ್, ನೂತನ ಫೀಚರ್ಸ್ ಗಳನ್ನು ಹೊಂದಿರುವ ಕಾರ್ ಆಗಿದೆ,

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

ರೆನಾಲ್ಟ್ ಕ್ವಿಡ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ 800-ಸಿಸಿ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 1.0 ಲೀಟರ್ ಎಂಜಿನ್ ಅನ್ನು ಹೊಂದಿದ್ದು, 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

Tata Tiago

ಈ Tata Tiago ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೊಂದಿರುವ ಮಾದರಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಯುವ ವೃತ್ತಿಪರರಿಗೆ ಈ Tata Tiago ಉತ್ತಮ ಆಯ್ಕೆಯಾಗಿದೆ. ಪರ್ಫಾಮೆನ್ಸ್ ಜೊತೆಗೆ ಉತ್ತಮ ಸುರಕ್ಷತೆಯನ್ನು ಒಳಗೊಂಡಿರುವ ಕಾರ್ ಆಗಿದೆ. ಈ ಎರಡು ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡುವರು ಈ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು,

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

ಈ Tata Tiago ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 4-ಸ್ಟಾರ್ ಅಡಲ್ಟ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್‌ಗಳು, (ಎಬಿಎಸ್) ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ವಿತ್ (ಸಿಎಸ್‌ಸಿ) ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು (ಇಬಿಡಿ), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡೆಲಿವೆರಿ ಮತ್ತು ಪಾರ್ಕಿಕ್ ಅಸಿಸ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

ಇನ್ನು ಈ ata Tiago ಕಾರಿನಲ್ಲಿ1.2-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್‍ಪಿ ಪವರ್ ಮತ್ತು 113 ಎನಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಫೀಡ್ ಎಎಂಟಿ ಯುನಿಟ್ ಅನ್ನು ಜೋಡಿಸಲಾಗಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

Hyundai Grand i10 Nios

Hyundai ಕಂಪನಿಯು ಅತ್ಯುತ್ತಮ ಹ್ಯಾಚ್‌ಬ್ಯಾಕ್ ಆಗಿದೆ, Grand i10 Nios ಯುವ ಗ್ರಾಹಕರನ್ನು ಸೆಳೆಯುವಂತಹ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಕಾರಿನಲ್ಲಿ ವಿವಿಧ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್, 1.2-ಲೀಟರ್ ಡೀಸೆಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಇದರ ಡೀಸೆಲ್ ಮಾದರಿಯು 26.2 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

Maruti Suzuki Baleno

ಮಾರಾಟದ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ಹ್ಯಾಚ್‌ಬ್ಯಾಕ್ ಆಗಿದೆ, ಈ Maruti Suzuki Baleno ಕಾರನ್ನು ಬಳಿಸಿದ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ, ಈ ಕಾರು ಸುರಕ್ಷತೆಯಲ್ಲಿ ಸ್ವಲ್ಪ ಹಿಂದಿದೆ. ಉಳಿದಂತೆ ಈ ಕಾರಿನ ಬಗ್ಗೆ ನೆಗ್ ಟಿವ್ ತುಂಬಾ ಕಡಿಮೆಯಾಗಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

Maruti Baleno ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಇನ್ನು ಈ ಕಾರು ಉತ್ತಮ ಮೈಲೇಜ್ ಅನ್ನು ಹೊಂದಿದೆ,

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

Volkswagen Polo

ಈ Volkswagen Polo ಯುವಕರ ಮೆಚ್ಚಿನ ಆಯ್ಕೆಯಾಗಿದೆ. ಈ ಕಾರಿನ ಪರ್ಫಾಮೆನ್ಸ್ ಗಾಗಿ ಯುವ ಗ್ರಾಹಕರು ಫಿದಾ ಆಗಿದ್ದಾರೆ. ಹಲವು ವರ್ಷಗಳಿಂದ ಈ Volkswagen Polo ಕಾರಿನಲ್ಲಿ ಯಾವುದೇ ಪ್ರಮುಖ ಅಪ್ಡೇತ್ ಪಡೆದುಕೊಂಡಿಲ್ಲ. ಆದರೂ ಇದರ ಪರ್ಫಾಮೆನ್ಸ್ ನಿಂದಾಗಿ ಇಂದಿಗೂ ಬಹುಜನಪ್ರಿಯ ಮಾದರಿಯಾಗಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

ಈ ಕಾರಿನ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ ಸ್ವಾಭಾವಿಕ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಕಾರು ವಿಧ್ಯಾರ್ಥಿಗಳಿಗೆ ಮತ್ತು ಯುವ ವೃತ್ತಿಪರರಿಗೆ ಉತ್ತಮ ಆಯ್ಕೆಯಾಗಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

Honda Amaze

ಈ Honda Amaze ಕಾರು ಉತ್ತಮ ಸ್ಪೇಸ್ ಅನ್ನು ಹೊಂದಿರುವ ಕಾರು ಆಗಿದೆ, ಈ ಕಾರು ಯುವ ವೃತ್ತಿಪರರಿಗೆ ಉತ್ತಮ ಆಯ್ಕೆಯಾಗಿದೆ. 2021ರ Amaze ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ. ಈ ಹೊಸ Honda Amaze ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷಗಳಾಗಿದೆ.

ಹೊಸ ಕಾರು ಖರೀದಿಸಲು ಬಯಸುವ ಯುವ ಜನರಿಗೆ ಸೂಕ್ತವಾದ ಕಾರುಗಳಿವು

ಈ Honda Amaze ಕಾರಿನಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.2ಎಲ್ ಪೆಟ್ರೋಲ್ ಮತ್ತು 1.5ಎಲ್ ಡೀಸೆಲ್ ಎಂಬ ಎಂಜಿನ್ ಗಳಾಗಿವೆ. ಇನ್ನು ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 110 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Renault kwid to honda amaze find out here some best cars for youngsters details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X