Just In
Don't Miss!
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾಕ್‌ಡೌನ್ ಎಫೆಕ್ಟ್: ಕುಸಿದ ರಸ್ತೆ ಅಪಘಾತಗಳ ಸಂಖ್ಯೆ
2019ಕ್ಕೆ ಹೋಲಿಸಿದರೆ 2020ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ. ಗುರುಗ್ರಾಮ ಪೊಲೀಸರು ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ 2020ರಲ್ಲಿ ಗುರುಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 320 ಜನರು ಸಾವನ್ನಪ್ಪಿದ್ದರೆ, 2019ರಲ್ಲಿ 433 ಜನರು ಸಾವನ್ನಪ್ಪಿದ್ದರು.

ಇದರಿಂದ 2020ರಲ್ಲಿ ಈ ಪ್ರಮಾಣವು 26%ನಷ್ಟು ಕಡಿಮೆಯಾಗಿದೆ. ಕೋವಿಡ್ 19 ಕಾರಣದಿಂದ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್'ನಿಂದಾಗಿ 2020ರಲ್ಲಿ ರಸ್ತೆ ಅಪಘಾತಗಳ ಪ್ರಮಾಣವು ಕಡಿಮೆಯಾಗಿದೆ. ಗುರುಗ್ರಾಮದಲ್ಲಿ 2020ರ ಆರಂಭದಲ್ಲಿ 16 ಜನರು, ಮಾರ್ಚ್'ನಲ್ಲಿ 4 ಜನರು ಹಾಗೂ ಮೇ ತಿಂಗಳಿನಲ್ಲಿ 12 ಜನರು ಸಾವನ್ನಪ್ಪಿದ್ದಾರೆ.

2020ರಲ್ಲಿ ಒಟ್ಟು 704 ರಸ್ತೆ ಅಪಘಾತಗಳು ವರದಿಯಾಗಿದ್ದು, ಅದರಲ್ಲಿ 297 ಜನರು ಗಾಯಗೊಂಡಿದ್ದಾರೆ. 2019ರಲ್ಲಿ 1,205 ಅಪಘಾತಗಳು ವರದಿಯಾಗಿದ್ದು, ಅದರಲ್ಲಿ 807 ಮಂದಿ ಗಾಯಗೊಂಡಿದ್ದರು. ಐದು ವರ್ಷಗಳ ಹಿಂದೆ ಅಪಘಾತಗಳ ಸಾವಿನ ಸಂಖ್ಯೆ 400ಕ್ಕಿಂತ ಕಡಿಮೆಯಿತ್ತು ಎಂದು ವಾರ್ಷಿಕ ಅಂಕಿ ಅಂಶಗಳು ತಿಳಿಸಿವೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

2018ರಲ್ಲಿ ಗುರುಗ್ರಾಮದಲ್ಲಿ 446 ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪಿದ್ದರು. 2017ರಲ್ಲಿ 415 ಜನ ಹಾಗೂ 2016ರಲ್ಲಿ 435 ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದರು. 2015ರಲ್ಲಿ ಗುರುಗ್ರಾಮದ ಹಲವು ಭಾಗಗಳಲ್ಲಿ ಕನಿಷ್ಠ 400 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗುರುಗ್ರಾಮದ ಸಂಚಾರ ಪೊಲೀಸ್ ಆಯುಕ್ತ ಡಿ.ಕೆ.ಭಾರದ್ವಾಜ್, ಕಳೆದ ವರ್ಷದ ಆರಂಭದಲ್ಲಿ ಲಾಕ್‌ಡೌನ್ ಕಾರಣದಿಂದಾಗಿ ರಸ್ತೆ ಅಪಘಾತಗಳು ಕಡಿಮೆಯಾಗಿವೆ. ಜೊತೆಗೆ ಪೊಲೀಸರು ಜಾಗೃತಿ ಮೂಡಿಸಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವರದಿಗಳ ಪ್ರಕಾರ 2019ರಲ್ಲಿ ದೇಶದಲ್ಲಿ ಒಟ್ಟು 4,49,002 ರಸ್ತೆ ಅಪಘಾತಗಳು ಸಂಭವಿಸಿದ್ದವು. ಅತಿ ವೇಗದಲ್ಲಿ ವಾಹನ ಚಾಲನೆ ಮಾಡಿದ್ದರಿಂದ 3,19,028 (71%) ರಸ್ತೆ ಅಪಘಾತಗಳು ಸಂಭವಿಸಿವೆ. ದೇಶದಲ್ಲಿ ಪ್ರತಿವರ್ಷ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ.

ಈ ಸಂಖ್ಯೆಯು ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು. ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ರಸ್ತೆ ಅಪಘಾತಗಳು ವರದಿಯಾಗುತ್ತಿವೆ. ಈ ಪೈಕಿ 1.5 ಲಕ್ಷ ಜನರು ಪ್ರಾಣ ಕಳೆದುಕೊಂಡರೆ, 3 ಲಕ್ಷಕ್ಕೂ ಹೆಚ್ಚು ಜನರು ಗಂಭೀರವಾದ ಗಾಯದಿಂದಾಗಿ ಅಂಗವಿಕಲರಾಗುತ್ತಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಲಾಕ್‌ಡೌನ್ ಅವಧಿಯಲ್ಲಿ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಡಿಮೆಯಿದ್ದ ಕಾರಣಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. 24 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಮಾರ್ಚ್ 24 ಹಾಗೂ ಮೇ 31ರ ನಡುವೆ ದೇಶದಲ್ಲಿ 25 ಸಾವಿರಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ 8,976 ಜನರು ಸಾವನ್ನಪ್ಪಿದ್ದಾರೆ. 2019ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಿಗೆ ಹೋಲಿಸಿದರೆ ಈ ಪ್ರಮಾಣವು ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಾರಿಗೆ ಇಲಾಖೆಯ ವರದಿಯ ಪ್ರಕಾರ 2018ರಲ್ಲಿ ದೇಶದಲ್ಲಿ ಒಟ್ಟು 4.67 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ್ದು, 1.51 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 2020ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) 3,089 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರು.