ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಅಕ್ಟೋಬರ್ ತಿಂಗಳಿನಲ್ಲಿ ದೇಶಾದ್ಯಂತ ರೂ. 3,356 ಕೋಟಿ ಟೋಲ್ ಶುಲ್ಕ ಸಂಗ್ರಹಿಸಲಾಗಿದೆ. ಕೇಂದ್ರ ಸಾರಿಗೆ ಇಲಾಖೆಯ ವರದಿಗಳ ಪ್ರಕಾರ ಕಳೆದ ತಿಂಗಳು ದೇಶದಲ್ಲಿ 21.42 ಕೋಟಿ ಟೋಲ್ ವಹಿವಾಟು ನಡೆದಿದೆ. ದೇಶದಲ್ಲಿ ಹಬ್ಬಗಳು ಆರಂಭವಾಗಿರುವುದರಿಂದ ಹಾಗೂ ಆರ್ಥಿಕ ಚಟುವಟಿಕೆಗಳು ಹೆಚ್ಚಿರುವುದರಿಂದ ಟೋಲ್ ಸಂಗ್ರಹದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಕಳೆದ ವಾರ ಶನಿವಾರ ಒಂದೇ ದಿನ ರೂ. 122.81 ಕೋಟಿ ಟೋಲ್ ವಹಿವಾಟು ನಡೆದಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಫಾಸ್ಟ್‌ಟ್ಯಾಗ್ ಮೂಲಕ 10.93 ಕೋಟಿ ವಹಿವಾಟು ನಡೆದಿತ್ತು. ಈ ವಹಿವಾಟು ಮೂಲಕ ರೂ. 3,000 ಕೋಟಿ ಟೋಲ್ ಶುಲ್ಕ ಸಂಗ್ರಹಿಸಲಾಗಿತ್ತು ಎಂದು ವರದಿ ಹೇಳಿದೆ. ಆಗಸ್ಟ್‌ನಲ್ಲಿ ಫಾಸ್ಟ್‌ಟ್ಯಾಗ್ ಮೂಲಕ 20 ಕೋಟಿ ವಹಿವಾಟು ನಡೆದು, ರೂ. 3,076 ಕೋಟಿ ಟೋಲ್ ಶುಲ್ಕ ಸಂಗ್ರಹಿಸಲಾಗಿತ್ತು.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಈ ವರ್ಷದ ಫೆಬ್ರವರಿ 15 ರಿಂದ ಭಾರತದಾದ್ಯಂತ ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಿಗೂ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತದೆ. ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳು ದುಪ್ಪಟ್ಟು ಟೋಲ್ ಶುಲ್ಕ ವಿಧಿಸಲಾಗುತ್ತದೆ.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಫಾಸ್ಟ್‌ಟ್ಯಾಗ್ ಅಳವಡಿಕೆಯಿಂದಾಗಿ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಾಯುವ ಸಮಯವು ಗಣನೀಯವಾಗಿ ಕಡಿಮೆಯಾಗಿದ್ದು, ಪಾರದರ್ಶಕತೆ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಸುಮಾರು 722 ಟೋಲ್ ಪ್ಲಾಜಾಗಳು ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ 196 ಟೋಲ್ ಪ್ಲಾಜಾಗಳು ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಶುಲ್ಕ ವಿಧಿಸುತ್ತವೆ.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಒಟ್ಟು ಟೋಲ್ ಶುಲ್ಕದಲ್ಲಿ 82% ನಷ್ಟು ಶುಲ್ಕವು ಕಮರ್ಷಿಯಲ್ ವಾಹನಗಳಿಂದ ಬರುತ್ತಿದೆ. ಒಟ್ಟು ಟೋಲ್ ಶುಲ್ಕ ಸಂಗ್ರಹದಲ್ಲಿ ಕಾರುಗಳು 18% ನಷ್ಟು ಕೊಡುಗೆ ನೀಡುತ್ತವೆ. ಫಾಸ್ಟ್‌ಟ್ಯಾಗ್ ಜಾರಿಯಾದ ನಂತರ ಟೋಲ್ ಪ್ಲಾಜಾಗಳ ಆದಾಯ ಸಂಗ್ರಹವು ಗಣನೀಯವಾಗಿ ಹೆಚ್ಚಿದೆ. ವಾಹನಗಳ ವಿಂಡ್ ಶೀಲ್ಡ್ ಮೇಲೆ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಗಳನ್ನು ಅಂಟಿಸಲಾಗುತ್ತದೆ.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಈ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಗಳು ಬಳಕೆದಾರರ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ವ್ಯಾಲೆಟ್‌ಗೆ ಲಿಂಕ್ ಮಾಡಲಾದ ಚಿಪ್ ಅನ್ನು ಒಳಗೊಂಡಿರುತ್ತವೆ. ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದುಹೋದಾಗ, ಅಲ್ಲಿರುವ ಸಿಸ್ಟಂ ರೇಡಿಯೊ ಸಿಗ್ನಲ್ ಮೂಲಕ ಚಿಪ್ ಅನ್ನು ಪತ್ತೆ ಮಾಡಿ, ನಿಗದಿತ ಟೋಲ್ ಶುಲ್ಕವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ವ್ಯಾಲೆಟ್‌ನಿಂದ ಕಡಿತಗೊಳಿಸುತ್ತದೆ.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಫಾಸ್ಟ್‌ಟ್ಯಾಗ್ ವಿವಿಧ ವಲಯಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಡಿಜಿಟಲೀಕರಣದ ಭಾಗವಾಗಿದೆ. ಫಾಸ್ಟ್‌ಟ್ಯಾಗ್‌ಗಳನ್ನು ವಿವಿಧ ಬ್ಯಾಂಕ್‌ಗಳು ಹಾಗೂ ಡಿಜಿಟಲ್ ವ್ಯಾಲೆಟ್ ಕಂಪನಿಗಳು ನೀಡುತ್ತವೆ. ಫಾಸ್ಟ್‌ಟ್ಯಾಗ್ ಖರೀದಿಸಲು ವಾಹನದ ನೋಂದಣಿ ದಾಖಲೆ ಹಾಗೂ ಗ್ರಾಹಕರ ಐಡಿ ಅಗತ್ಯವಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್‌ಗಳ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಬಹುದು.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಪೇಟಿಎಂ, ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ನಂತಹ ಕೆಲವು ಇ ಕಾಮರ್ಸ್ ಪ್ಲಾಟ್‌ಫಾರಂಗಳು ತಮ್ಮ ಅಪ್ಲಿಕೇಶನ್‌ಗಳ ಮೂಲಕ ಫಾಸ್ಟ್‌ಟ್ಯಾಗ್ ಮಾರಾಟ ಮಾಡುತ್ತವೆ. ಎಲ್ಲಾ ಪ್ರಯಾಣಿಕರ ನಾಲ್ಕು ಚಕ್ರದ ವಾಹನಗಳು, ಬಸ್ಸುಗಳು, ಟ್ರಕ್'ಗಳು, ಲಾರಿಗಳು, ನಿರ್ಮಾಣದಲ್ಲಿ ಬಳಸಲಾಗುವ ವಾಣಿಜ್ಯ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯ ಗೊಳಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವ ಅಗತ್ಯವಿಲ್ಲ.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ದೇಶದ ಕೆಲವು ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರು ಫಾಸ್ಟ್‌ಟ್ಯಾಗ್ ಮೂಲಕ ಇಂಧನ ಖರೀದಿಸಬಹುದು. ಐಸಿಐಸಿಐ ಬ್ಯಾಂಕ್‌ನೊಂದಿಗೆ ಲಿಂಕ್ ಆಗಿರುವ ಫಾಸ್ಟ್‌ಟ್ಯಾಗ್ ಬಳಕೆದಾರರು, ದೇಶದಾದ್ಯಂತವಿರುವ ಇಂಡಿಯನ್ ಆಯಿಲ್ ರಿಟೇಲ್ ಔಟ್‌ಲೆಟ್‌ಗಳಲ್ಲಿ ಕ್ಯಾಶ್ ಲೆಸ್ ಹಾಗೂ ಕಾಂಟಾಕ್ಟ್ ಲೆಸ್ ಪಾವತಿಗಳ ಪ್ರಯೋಜನಗಳನ್ನು ಪಡೆಯಬಹುದು. ಈ ಸೌಲಭ್ಯವು ದೇಶಾದಾದ್ಯಂತ ಇರುವ ಸುಮಾರು 3,000 ಇಂಡಿಯನ್ ಆಯಿಲ್ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಇನ್ನು ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುವ ವಾಹನಗಳ ವೇಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ. ಕೆಲವು ದಿನಗಳ ಹಿಂದೆ ಈ ಬಗ್ಗೆ ಮಾತನಾಡಿದ್ದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಶೀಘ್ರದಲ್ಲೇ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಚಲಿಸುವ ವಾಹನಗಳ ವೇಗವನ್ನು ಹೆಚ್ಚಿಸುವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದರು.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ನಾವು ವೇಗದ ಮಿತಿಯನ್ನು ಹೆಚ್ಚಿಸುವುದರ ಪರವಾಗಿದ್ದೇವೆ ಆದರೆ ಸುಪ್ರೀಂ ಕೋರ್ಟ್ ಹಾಗೂ ಕೆಲವು ಹೈಕೋರ್ಟ್‌ಗಳಿಂದ ಕೆಲವು ಅಡೆ ತಡೆಗಳಿವೆ, ಇದರಿಂದಾಗಿ ನಾವು ಬಯಸಿದರೂ ವೇಗದ ಮಿತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಸಂಸತ್ತಿನಲ್ಲಿ ಮಸೂದೆಯ ಮೂಲಕ ವೇಗದ ಮಿತಿಯನ್ನು ಹೆಚ್ಚಿಸಲು ಸರ್ಕಾರವು ಸಿದ್ಧತೆ ನಡೆಸುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದರು.

ಫಾಸ್ಟ್‌ಟ್ಯಾಗ್ ಮೂಲಕ ರೂ. 3300 ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ವಾಹನಗಳ ವೇಗದ ಮಿತಿಯ ಭಾರತದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದರು. ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸಿದರೆ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ನಾವು ಈ ಮನಸ್ಥಿತಿಯಿಂದ ಹೊರ ಬರಬೇಕು. ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳ ವೇಗದ ಮಿತಿ ಪ್ರತಿ ಗಂಟೆಗೆ 140 ಕಿ.ಮೀ ಆಗಿರಬೇಕು ಎಂದು ತಾನು ವೈಯಕ್ತಿಕವಾಗಿ ನಂಬುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.

Most Read Articles

Kannada
English summary
Rs 3356 crore toll collected through fastag in october 2021 details
Story first published: Wednesday, November 3, 2021, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X