ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ಆಂಫಿಬಿಯಸ್ ವಾಹನಗಳು ವಿಶ್ವದ ಕಠಿಣ ಭೂಪ್ರದೇಶದಲ್ಲಿಯೂ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ವಾಹನಗಳು ಭೂಮಿಯ ಮೇಲೆ ಮಾತ್ರವಲ್ಲದೆ ನೀರಿನ ಮೇಲೆಯೂ ಸಂಚರಿಸುತ್ತವೆ.

ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ರಷ್ಯಾದಲ್ಲಿ ತಯಾರಿಸಲಾದ ಶೆರ್ಪ್ ಮಾದರಿ, ಆಂಫಿಬಿಯಸ್ ವಾಹನಗಳಲ್ಲಿ ಜನಪ್ರಿಯ ಮಾದರಿಯಾಗಿದೆ. ಈಗ ಈ ವಾಹನವು ಭಾರತಕ್ಕೂ ಕಾಲಿಡುತ್ತಿದೆ. ಇದಕ್ಕಾಗಿ ಕಂಪನಿಯು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆದಿದೆ.

ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ಕಂಟೇನರ್‌ನಿಂದ ಹೊರಬರುವ ಎರಡು ಮಾದರಿಗಳ ವೀಡಿಯೊವನ್ನು ಬಿಡುಗಡೆಗೊಳಿಸಿದ ನಂತರ ಕಂಪನಿಯು ಈ ವಾಹನವು ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಹಂಚಿಕೊಂಡಿದೆ.

ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ಆಲ್-ಟೆರೈನ್ ವಾಹನವಾದ ಶೆರ್ಪ್, ಹರಿಯಾಣದ ಮಾನೇಸರ್ ಪ್ರವಾಸದ ಅಂಗವಾಗಿ ಜುಲೈ 5ರಿಂದ ಜುಲೈ 10ರವರೆಗೆ ಭಾರತಕ್ಕೆ ಆಗಮಿಸಿದೆ. ಒರಟು ಭೂಪ್ರದೇಶದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಕಂಪನಿಯು ಭಾರತಕ್ಕೆ ಬಂದಿದೆ.

ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ಶೆರ್ಪ್ ಅಸ್ತಿತ್ವದಲ್ಲಿರುವ ಅತ್ಯಂತ ಡರ್ಟ್ ಎಟಿವಿಯಾಗಿದೆ ಎಂದು ಹೇಳಲಾಗುತ್ತದೆ. 63 ಇಂಚಿನ ದೈತ್ಯ ಟಯರ್‌ಗಳ ನಡುವೆ ಈ ವಾಹನದ ಸಣ್ಣ ಕ್ಯಾಬಿನ್ ಕೂರುತ್ತದೆ. ಈ ಟಯರ್‌ಗಳ ಚಕ್ರದ ಹೊರಮೈ ಮಾದರಿಯನ್ನು ಹೆಚ್ಚು ಟ್ರಾಕ್ಷನ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ಈ ಕಾರಣಕ್ಕೆ ಶೆರ್ಪ್ ಯಾವುದೇ ಬೆಟ್ಟವನ್ನು ಹೆಚ್ಚು ತೊಂದರೆ ಇಲ್ಲದೆ ಏರಬಹುದು. ಶೆರ್ಪ್ ಒಂದು ಸಣ್ಣ ವಾಹನವಾಗಿದೆ. ಈ ವಾಹನವು 3,400 ಎಂಎಂ ಉದ್ದ, 2,300 ಎಂಎಂ ಅಗಲ, 2,520 ಎಂಎಂ ಎತ್ತರವನ್ನು ಹೊಂದಿದೆ.

ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ಕಠಿಣ ಭೂಪ್ರದೇಶದಲ್ಲಿ ಸಾಗುವಾಗ ಹಿಂದಕ್ಕೆ ಬರಬಾರದು ಎಂಬ ಕಾರಣಕ್ಕೆ ಈ ವಾಹನದಲ್ಲಿ ಟಯರ್ ಇನ್ ಪ್ಲೇಷನ್ ಸಿಸ್ಟಂನಂತಹ ಹಲವಾರು ಗ್ಯಾಜೆಟ್‌ಗಳನ್ನು ನೀಡಲಾಗಿದೆ. ಶೆರ್ಪ್‌ ವಾಹನದಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ಈ ಎಂಜಿನ್ 45 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಟಿವಿ 1300 ಕೆ.ಜಿ ತೂಕವನ್ನು ಹೊಂದಿದೆ. ಶೆರ್ಪ್ ಎಟಿವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 45 ಕಿ.ಮೀಗಳಾಗಿದೆ.

ಕಂಪನಿಯು ಶೆರ್ಪ್ ಎಟಿವಿಯಲ್ಲಿ ಸ್ಟೀಯರಿಂಗ್ ವ್ಹೀಲ್ ಬದಲು ಸ್ಕಿಡ್ ಸ್ಟೀಯರಿಂಗ್ ಸಿಸ್ಟಂ ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಶೆರ್ಪ್ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಅಮೆರಿಕಾದಲ್ಲಿ ಮಾರಾಟವಾಗುವ ಶೆರ್ಪ್ ಎಟಿವಿಯ ಬೆಲೆ ರೂ.43 ಲಕ್ಷಗಳಾಗಿದೆ.

ಭಾರತಕ್ಕೂ ಕಾಲಿಡಲಿದೆ ಕಠಿಣ ಭೂಪ್ರದೇಶಗಳಲ್ಲಿ ಚಲಿಸುವ ಶೆರ್ಪ್ ಎಟಿವಿ

ಶೆರ್ಪ್ ಎಂಟ್ರಿ ಲೆವೆಲ್ ಮಾದರಿಯನ್ನು ಸಾಫ್ಟ್ ರೂಫ್'ನೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ವಾಹನದಲ್ಲಿ ಹಾರ್ಡ್‌ಟಾಪ್, 50 ಲೀಟರ್ ಫ್ಯೂಯಲ್ ಟ್ಯಾಂಕ್ ಹಾಗೂ ಆನ್‌ಬೋರ್ಡ್ ಜನರೇಟರ್'ಗಳನ್ನು ನೀಡಲಾಗುತ್ತದೆ. ಈ ವಾಹನದಲ್ಲಿ ನಾಲ್ಕು ಪ್ರಯಾಣಿಕರು ಕುಳಿತುಕೊಳ್ಳಬಹುದು. ಆದರೆ ಎರಡು ಸೀಟುಗಳಲ್ಲಿ ಮಾತ್ರ ಸೀಟ್ ಬೆಲ್ಟ್‌ ನೀಡಲಾಗಿದೆ.

Most Read Articles

Kannada
English summary
Russian ATV Sherp to be launched in India soon. Read in Kannada.
Story first published: Wednesday, July 7, 2021, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X