90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ಇಂಡಿಯನ್ ಬ್ಲೂ ಬುಕ್ 2021ರ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯು ಭಾರತದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯ ಬಗ್ಗೆ ನಿಖರ ವಿವರಗಳನ್ನು ಹಾಗೂ ವಿಶೇಷವಾದ ಮಾಹಿತಿಯನ್ನು ನೀಡುತ್ತದೆ.

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

2021ರ ಇಂಡಿಯನ್ ಬ್ಲೂ ಬುಕ್ ವರದಿಯಲ್ಲಿ ಮುಂಬರುವ ಐದು ವರ್ಷಗಳಲ್ಲಿ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತದೆ ಎಂದು ಹೇಳಲಾಗಿದೆ. 2020ರ ಹಣಕಾಸು ವರ್ಷದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯು ಹೊಸ ಕಾರುಗಳ ಮಾರುಕಟ್ಟೆಗಿಂತ 50%ನಷ್ಟು ಹೆಚ್ಚಾಗಿದೆ.

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

2025ರ ವೇಳೆಗೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯು 90%ನಷ್ಟು ಬೆಳೆಯುವ ನಿರೀಕ್ಷೆಗಳಿವೆ. ಈ ವೇಳೆ ಒಟ್ಟು 71 ಲಕ್ಷ ವಿಂಟೇಜ್ ಕಾರುಗಳು ಮಾರಾಟವಾಗುವ ನಿರೀಕ್ಷೆಗಳಿವೆ. ಮಾರಾಟ ಪ್ರಮಾಣವು 11%ನಷ್ಟು ಹೆಚ್ಚಾಗಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ಹೊಸ ಕಾರುಗಳಿಗಿಂತ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿರುವ ಅಂಕಿ ಅಂಶವು ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತದೆ.

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ಭಾರತದಲ್ಲಿ ಹೊಸ ಹಾಗೂ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯ ನಡುವಿನ ಅಂತರವು 2016ರಿಂದ 2019ರವರೆಗಿನ ಹಣಕಾಸು ವರ್ಷದಲ್ಲಿ ಒಂದೂವರೆ ಪಟ್ಟು ಹೆಚ್ಚಾಗಿದೆ. ಈ ಪ್ರಮಾಣವು ಕಳೆದ ಹಣಕಾಸು ವರ್ಷದಲ್ಲಿಯೇ ಒಂದೂವರೆ ಪಟ್ಟು ಹೆಚ್ಚಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ದೇಶದಲ್ಲಿ ಗ್ರಾಹಕರು ಹೊಸ ಕಾರುಗಳಿಗಿಂತ ಹಳೆಯ ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇದರಿಂದ ಸಾಬೀತಾಗಿದೆ. ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟವು 2021ರಲ್ಲಿಯೂ ಹೆಚ್ಚಾಗುವ ನಿರೀಕ್ಷೆಗಳಿವೆ.

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ಈ ಪ್ರಮಾಣವು ಈ ವರ್ಷದ ಅಂತ್ಯದ ವೇಳೆಗೆ 2.2 ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಕೋವಿಡ್ 19 ಹಿನ್ನೆಲೆಯಲ್ಲಿ ಜನರು ಸಾರ್ವಜನಿಕ ಸಾರಿಗೆಯ ಬದಲು ಸ್ವಂತ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಈ ವರದಿಯಲ್ಲಿ ಬಹಿರಂಗವಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ಇದೂ ಸಹ ಸೆಕೆಂಡ್ ಹ್ಯಾಂಡ್ ಕಾರುಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಎರಡನೆಯ ದೊಡ್ಡ ಅಂಶವೆಂದರೆ ಈ ಮಾರುಕಟ್ಟೆಯಲ್ಲಿನ ಮಾರಾಟವು ಈಗ ಕ್ರಮ ಬದ್ದವಾಗಿ ನಡೆಯುತ್ತಿದೆ.

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ಗ್ರಾಹಕರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹೊಸ ಕಾರು ಖರೀದಿಸುವ ರೀತಿಯಲ್ಲಿಯೇ ಖರೀದಿಸಬಹುದು. ಈಗ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಶೋ ರೂಂಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

90%ನಷ್ಟು ಹೆಚ್ಚಾಗಲಿದೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ಜೊತೆಗೆ ಅವುಗಳ ಮೇಲೆ ವಾರಂಟಿ ಸಹ ನೀಡಲಾಗುತ್ತಿದೆ. ಹಲವು ವಿಶ್ವ ವಿಖ್ಯಾತ ಕಂಪನಿಗಳು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಮಧ್ಯಮ ವರ್ಗದ ಗ್ರಾಹಕರು ಕರೋನಾ ಸಾಂಕ್ರಾಮಿಕದ ನಂತರ ಸಣ್ಣ ಬಜೆಟ್‌ನಲ್ಲಿ ಉತ್ತಮವಾಗಿರುವ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

Most Read Articles

Kannada
English summary
Second hand car market in India to grow by 90 percent. Read in Kannada.
Story first published: Saturday, April 24, 2021, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X