ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

2021ರ ಜನವರಿ ತಿಂಗಳ ಸೆಡಾನ್‌ ಕಾರು ಮಾರಾಟ ವರದಿಯು ಹೊರಬಂದಿದೆ. ಕಳೆದ ತಿಂಗಳು ಈ ಸೆಗ್'ಮೆಂಟಿನಲ್ಲಿ ಹೆಚ್ಚಿನ ಸಂಖ್ಯೆಯ ಕಾರುಗಳು ಮಾರಾಟವಾಗಿವೆ. ಜನವರಿ ತಿಂಗಳಿನಲ್ಲಿ 8,403 ಯುನಿಟ್‌ ಸೆಡಾನ್ ಕಾರುಗಳು ಮಾರಾಟವಾಗಿವೆ.

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ಈ ಅಂಕಿ ಅಂಶಗಳ ಪ್ರಕಾರ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿದ್ದರೆ ಹ್ಯುಂಡೈ ವರ್ನಾ, ಮಾರುತಿ ಸುಜುಕಿ ಸಿಯಾಜ್ ಕಾರುಗಳು ನಂತರದ ಸ್ಥಾನದಲ್ಲಿವೆ. ಕಳೆದ ತಿಂಗಳು ಹೋಂಡಾ ಸಿಟಿ ಕಾರಿನ 3667 ಯುನಿಟ್'ಗಳು ಮಾರಾಟವಾಗಿವೆ. 2020ರ ಜನವರಿಯಲ್ಲಿ 1734 ಯುನಿಟ್ ಹೋಂಡಾ ಸಿಟಿ ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷ ಈ ಕಾರ್ ಅನ್ನು ಅಪ್ ಡೇಟ್ ಮಾಡಿ ಬಿಡುಗಡೆಗೊಳಿಸಲಾಗಿತ್ತು.

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ನಂತರ ಈ ಕಾರಿನ ಮಾರಾಟ ಪ್ರಮಾಣವು ಹೆಚ್ಚಾಗಿದೆ. ಕಳೆದ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜನವರಿ ತಿಂಗಳಿನಲ್ಲಿ ಈ ಕಾರಿನ ಮಾರಾಟ ಪ್ರಮಾಣವು 111%ನಷ್ಟು ಏರಿಕೆಯಾಗಿದೆ. ಈ ಕಾರು ಹೋಂಡಾ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಕಂಪನಿಯ ವರ್ನಾ ಕಾರಿನ 2000 ಯುನಿಟ್'ಗಳು ಜನವರಿ ತಿಂಗಳಿನಲ್ಲಿ ಮಾರಾಟವಾಗಿವೆ. 2020ರ ಜನವರಿ ತಿಂಗಳಿನಲ್ಲಿ ಈ ಕಾರಿನ 957 ಯುನಿಟ್'ಗಳು ಮಾರಾಟವಾಗಿದ್ದವು. ಕಳೆದ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ ಈ ಕಾರಿನ ಮಾರಾಟವು ಈ ವರ್ಷದ ಜನವರಿಯಲ್ಲಿ 109%ನಷ್ಟು ಹೆಚ್ಚಳವಾಗಿದೆ.

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ಮಾರುತಿ ಸುಜುಕಿ ಕಂಪನಿಯ ಸಿಯಾಜ್ ಕಾರು 1347 ಯುನಿಟ್ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ. 2020ರ ಜನವರಿ ತಿಂಗಳಿನಲ್ಲಿ ಈ ಕಾರಿನ 835 ಯುನಿಟ್‌ಗಳು ಮಾರಾಟವಾಗಿದ್ದವು. ಈ ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜನವರಿ ತಿಂಗಳಿನಲ್ಲಿ 61%ನಷ್ಟು ಏರಿಕೆಯಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ಸ್ಕೋಡಾ ರಾಪಿಡ್ 757 ಯುನಿಟ್ ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷದ ಜನವರಿಯಲ್ಲಿ ಈ ಕಾರಿನ 815 ಯುನಿಟ್'ಗಳು ಮಾರಾಟವಾಗಿದ್ದವು. ಈ ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 7%ನಷ್ಟು ಕಡಿಮೆಯಾಗಿದೆ.

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ಟೊಯೊಟಾ ಯಾರಿಸ್ ಕಾರು 412 ಯುನಿಟ್‌ಗಳ ಮಾರಾಟದೊಂದಿಗೆ ಐದನೇ ಸ್ಥಾನದಲ್ಲಿದೆ. ಈ ಕಾರು ಕಳೆದ ವರ್ಷಕ್ಕಿಂತ ಈ ವರ್ಷದ ಮಾರಾಟದಲ್ಲಿ 43%ನಷ್ಟು ಕುಸಿತವನ್ನು ದಾಖಲಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ಫೋಕ್ಸ್‌ವ್ಯಾಗನ್‌ ಕಂಪನಿಯ ವೆಂಟೊ ಕಾರು 220 ಯುನಿಟ್‌ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ. 2020ರ ಜನವರಿಯಲ್ಲಿ ಈ ಕಾರಿನ 250 ಯುನಿಟ್‌ಗಳುಮಾರಾಟವಾಗಿದ್ದವು. ಈ ಮೂಲಕ ಈ ಕಾರಿನ ಮಾರಾಟದಲ್ಲಿ 12%ನಷ್ಟು ಇಳಿಕೆ ಕಂಡುಬಂದಿದೆ.

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ಕಳೆದ ಜನವರಿಯಲ್ಲಿ ಈ ಸೆಗ್'ಮೆಂಟಿನಲ್ಲಿ 5355 ಯುನಿಟ್ ಕಾರುಗಳು ಮಾರಾಟವಾಗಿದ್ದವು. ಈ ಸೆಗ್'ಮೆಂಟಿನಲ್ಲಿ ಈ ವರ್ಷ 57%ನಷ್ಟು ಬೆಳವಣಿಗೆ ದಾಖಲಾಗಿದೆ. ಹೋಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಕಾರುಗಳು ಹೊಸ ಮಾದರಿಯಲ್ಲಿ ಬಿಡುಗಡೆಯಾದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನವರಿ ತಿಂಗಳಿನಲ್ಲಿ ಏರಿಕೆ ಕಂಡ ಸೆಡಾನ್ ಕಾರು ಮಾರಾಟ

ಸದ್ಯಕ್ಕೆ ಈ ಸೆಗ್'ಮೆಂಟಿನಲ್ಲಿ ಯಾವುದೇ ಹೊಸ ಕಾರು ಬಿಡುಗಡೆಯಾಗುತ್ತಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಈ ಸೆಗ್'ಮೆಂಟಿನಲ್ಲಿ ಮಾರಾಟವು ಕಡಿಮೆಯಾಗಿತ್ತು. ಈಗ ಪರಿಸ್ಥಿತಿ ಚೇತರಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಈ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಕಾದು ನೋಡೋಣ. ಈ ಬಗ್ಗೆ ಆಟೋಪಂಡಿಟ್ಜ್ ವರದಿ ಪ್ರಕಟಿಸಿದೆ.

Article Published On: Monday, February 8, 2021, 17:06 [IST]
English summary
Sedan car sales increased in January 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+