ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

ಕೆಲವು ವರ್ಷಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರುಗಳಿಗೆ ಹೆಚ್ಚು ಬೇಡಿಕೆ ಇತ್ತು. ಆದರೆ ಈಗ ಸೆಡಾನ್ ಕಾರುಗಳಿಗೆ ಮೊದಲಿನಂತೆ ಬೇಡಿಕೆ ಇಲ್ಲ. ಆದರೆ ಈಗಲೂ ಸೆಡಾನ್ ಕಾರುಗಳನ್ನು ಖರೀದಿಸುವ ಗ್ರಾಹಕರಿದ್ದಾರೆ. ಕಾರು ತಯಾರಕ ಕಂಪನಿಗಳೂ ಸಹ ತಮ್ಮ ಸೆಡಾನ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಭಾರತದಲ್ಲಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಸೆಡಾನ್ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

1. Honda City Hybrid

Honda ಕಾರ್ಸ್ ಇಂಡಿಯಾ ತನ್ನ ಹೊಸ Honda City ಹೈಬ್ರಿಡ್ ಸೆಡಾನ್ ಕಾರ್ ಅನ್ನು 2022ರ ಮಧ್ಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಕಾರು ಕಂಪನಿಯ ಮೊದಲ ಸಮೂಹ ಮಾರುಕಟ್ಟೆ ಹೈಬ್ರಿಡ್ ಸೆಡಾನ್ ಕಾರ್ ಆಗಿರಲಿದೆ. ಸ್ಟ್ಯಾಂಡರ್ಡ್ ಹಾಗೂ ಸ್ಪೋರ್ಟಿಯರ್ ಲುಕ್ City ಕಾರ್ ಅನ್ನು RS ಮಾದರಿಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಅನ್ನು ಈ ಎಂಜಿನ್‌ಗೆ ಜೋಡಿಸಲಾಗುವುದು. ಈ ಎಂಜಿನ್ 109 ಬಿ‌ಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Honda City ಹೈಬ್ರಿಡ್ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 20 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಈ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 15 ಲಕ್ಷಗಳಾಗಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

2. Mercedes-Benz C Class

ಆರನೇ ತಲೆಮಾರಿನ Mercedes Benz C Class ಸೆಡಾನ್ ಕಾರ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಅನಾವರಣಗೊಳಿಸಲಾಗಿತ್ತು. ಈ ಕಾರಿನ ವಿನ್ಯಾಸವು ಹೊಸ E Class ಹಾಗೂ S Class ಕಾರಿಗೆ ಅನುಗುಣವಾಗಿದೆ. ಈ ಕಾರು ಮುಖ್ಯವಾಗಿ ಕಡಿಮೆ ಓವರ್‌ಹ್ಯಾಂಗ್‌, ಹೆಚ್ಚು ಕೋನೀಯ ಮುಂಭಾಗದ ತುದಿ ಹಾಗೂ ಹೊಸ ಲೈಟ್ ಕ್ಲಸ್ಟರ್ ವಿನ್ಯಾಸವನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

ಹೊಸ Mercedes-Benz C Class ಕಾರಿನಲ್ಲಿ 2.0 ಲೀಟರ್ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗುತ್ತದೆ. ಪ್ರತಿ ಮಾದರಿಯನ್ನು 48 ವೋಲ್ಟ್ ಬೆಲ್ಟ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್‌ಗೆ ಸ್ಟಾಂಡರ್ಡ್ ಆಗಿ ಜೋಡಿಸಲಾಗುತ್ತದೆ. ಈ ಕಾರ್ ಅನ್ನು 2022ರ ಅಂತ್ಯದ ವೇಳೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 45 ಲಕ್ಷಗಳಿಂದ ರೂ. 55 ಲಕ್ಷಗಳಾಗಬಹುದು.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

3. Mercedes Maybach S Class

Mercedes ಕಂಪನಿಯು ಶೀಘ್ರದಲ್ಲೇ ತನ್ನ Maybach S Class ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಐಷಾರಾಮಿ ಲಿಮೋಸಿನ್ ಕಾರು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ. ಈ ಕಾರು 5,469 ಎಂಎಂ ಉದ್ದವನ್ನು ಹೊಂದಿರಲಿದೆ. ಈ ಕಾರು ಸ್ಟ್ಯಾಂಡರ್ಡ್ S Class ವ್ಹೀಲ್‌ಬೇಸ್ ಆವೃತ್ತಿಗಿಂತ 180 ಎಂಎಂ ಉದ್ದವಾಗಿದೆ. ಈ ಕಾರ್ ಅನ್ನು 2022ರ ಆರಂಭದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

Maybach S Class S 580 ಮಾದರಿಯನ್ನು ಸ್ಥಳೀಯವಾಗಿ ಜೋಡಿಸಲಾಗುವುದು. ಈ ಕಾರಿನಲ್ಲಿರುವ 4.0 ಲೀಟರ್, ಟ್ವಿನ್ ಟರ್ಬೊ ವಿ 8 ಎಂಜಿನ್‌ 500 ಬಿ‌ಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು S 680 ಆವೃತ್ತಿಯು 6.0 ಲೀಟರ್ ವಿ 12 ಎಂಜಿನ್ ಹೊಂದಿದೆ. ಈ ಎಂಜಿನ್ 612 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಕಾರ್ ಅನ್ನು ಭಾರತದಲ್ಲಿ ಸಿಬಿಯು ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರಿನ ಬೆಲೆ ರೂ. 2 ಕೋಟಿಗಳಿಂದ ರೂ. 2.8 ಕೋಟಿಗಳಾಗಬಹುದು.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

4. Skoda Slavia

Skoda ಕಂಪನಿಯು ಅಸ್ತಿತ್ವದಲ್ಲಿರುವ ತನ್ನ Rapid ಕಾರಿನ ಬದಲು ಹೊಸ Slavia ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಹೊಸ Skoda Slavia ಕಂಪನಿಯ ಸ್ಥಳೀಯ MQB A0 IN ಪ್ಲಾಟ್‌ಫಾರಂನಲ್ಲಿ ಉತ್ಪಾದನೆಯಾಗುವ ಎರಡನೇ ಕಾರ್ ಆಗಿರಲಿದೆ. ಈ ಕಾರ್ ಅನ್ನು 2022 ರ ಫೆಬ್ರವರಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

ಇತ್ತೀಚೆಗೆ ಬಿಡುಗಡೆಯಾದ ಹೊಸ Skoda Kushaq ಕಾರಿನಂತೆ ಈ ಸೆಡಾನ್ ಕಾರು ಸಹ ಎರಡು ಟಿ‌ಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಪಡೆಯುತ್ತದೆ. ಇವುಗಳಲ್ಲಿ 1.0 ಲೀಟರ್ ಟಿ‌ಎಸ್‌ಐ ಎಂಜಿನ್, 115 ಬಿ‌ಹೆಚ್‌ಪಿ ಪವರ್ ಉತ್ಪಾದಿಸಿದರೆ, 1.5 ಲೀಟರ್ ಟಿ‌ಎಸ್‌ಐ ಎಂಜಿನ್ 150 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಸೆಡಾನ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 12 ಲಕ್ಷಗಳಿಂದ ರೂ. 15 ಲಕ್ಷಗಳಾಗಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

5. Volkswagen Virtus

ಹೊಸ Skoda Slavia ನಂತರ Volkswagen ಕಂಪನಿಯು MQB A0 IN ಪ್ಲಾಟ್‌ಫಾರಂ ಆಧಾರಿತ ಹೊಸ ಸೆಡಾನ್‌ನೊಂದಿಗೆ ದಶಕದಷ್ಟು ಹಳೆಯ Volkswagen Vento ಕಾರ್ ಅನ್ನು ಬದಲಿಸುತ್ತದೆ. Volkswagen Virtus ಕಾರು Skoda Slavia ಕಾರಿನ ಸಹೋದರಿ ಮಾದರಿಯಾಗಿರುತ್ತದೆ. Slavia ಕಾರಿನಂತೆ Vento ಕಾರಿಗಿಂತ ದೊಡ್ಡದಾಗಿರುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

Volkswagen Virtus ಸೆಡಾನ್ ಕಾರ್ ಅನ್ನು ಎರಡು ಟಿ‌ಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್‌ಗಳೊಂದಿಗೆ ನೀಡಲಾಗುವುದು. ಇವುಗಳಲ್ಲಿ 1.0 ಲೀಟರ್ ಟಿ‌ಎಸ್‌ಐ ಎಂಜಿನ್ 115 ಬಿ‌ಹೆಚ್‌ಪಿ ಪವರ್ ಉತ್ಪಾದಿಸಿದರೆ, 1.5 ಲೀಟರ್ ಟಿ‌ಎಸ್‌ಐ ಎಂಜಿನ್ 150 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಸೆಡಾನ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 12 ಲಕ್ಷಗಳಿಂದ ರೂ. 15 ಲಕ್ಷಗಳಾಗಿರಲಿದೆ. ಈ ಕಾರು 2022ರ ಏಪ್ರಿಲ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

6. Toyota Camry ಫೇಸ್‌ಲಿಫ್ಟ್

ಜಪಾನಿನ ಕಾರು ಕಂಪನಿಯಾದ Toyota ಭಾರತದಲ್ಲಿ ಕಳೆದ ವರ್ಷ ತನ್ನ Camry ಸೆಡಾನ್ ಕಾರ್ ಅನ್ನು ಮರು ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ಹೊಸ ಅಲಾಯ್ ವ್ಹೀಲ್, ಮರು ವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್-ಲ್ಯಾಂಪ್ ಗಳೊಂದಿಗೆ ನವೀಕರಿಸಿದೆ. ಕಂಪನಿಯು ಈ ಕಾರ್ ಅನ್ನು ಭಾರತದಲ್ಲಿ ಮಾತ್ರ ಬಿಡುಗಡೆಗೊಳಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸೆಡಾನ್ ಕಾರುಗಳಿವು

ಕಂಪನಿಯು ಈ ಕಾರಿನಲ್ಲಿರುವ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಕಾರಿನಲ್ಲಿ ಅಸ್ತಿತ್ವದಲ್ಲಿರುವ 2.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ಈ ಎಂಜಿನ್ 218 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಸೆಡಾನ್ ಕಾರ್ ಅನ್ನು 2022 ರ ಮಧ್ಯಭಾಗದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 35 ಲಕ್ಷಗಳಿಂದ ರೂ. 40 ಲಕ್ಷಗಳಾಗಲಿದೆ.

Most Read Articles

Kannada
English summary
Sedan cars launching in indian market soon details
Story first published: Friday, November 5, 2021, 11:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X