ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದ್ದು, ಸೆಮಿ ಕಂಡಕ್ಟರ್ ಪೂರೈಕೆಯಲ್ಲಿ ಆಗುತ್ತಿರುವ ಏರಿಳಿತವು ಕಾರು ಕಂಪನಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಕೋವಿಡ್ ಪರಿಣಾಮ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ನಿರಂತರವಾಗಿ ಏರಿಳಿತ ಉಂಟಾಗುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯಕವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದ್ದು, ಇದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಭಾರೀ ಹೊಡೆತ ನೀಡುತ್ತದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸುತ್ತಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಗಳು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಎಲೆಕ್ಟ್ರಾನಿಕ್ ಚಿಪ್ ಮೂಲಕವೇ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಪ್ರಮುಖ ಪಾತ್ರ ವಹಿಸಲಿದ್ದು, ಹೊಸ ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್, ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳ ಕಾರ್ಯನಿರ್ವಹಣೆಗೆ ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ ಜಪಾನ್ ಬ್ರಾಂಡ್ ಟೊಯೊಟಾ ಕಂಪನಿಯು ಸಹ ಕಾರು ಉತ್ಪಾದನೆ ಪ್ರಮಾಣದಲ್ಲಿ ಕಳೆದ ಕೆಲ ತಿಂಗಳಿನಿಂದ ಹಿನ್ನಡೆ ಅನುಭವಿಸುತ್ತಿದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ವಿಶ್ವದಲ್ಲಿಯೇ ಸದ್ಯ ಕಾರು ಉತ್ಪಾದನೆಯಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಟೊಯೊಟಾ ಕಂಪನಿಯು ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಪ್ರಮುಖ ಕಾರು ಮಾದರಿಗಳ ಉತ್ಪಾದನೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಸ್ಟಾಕ್ ಆಧಾರದ ಮೇಲೆ ಜನವರಿ ತಿಂಗಳಿನಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಮುಖ ಐದು ಕಾರು ಉತ್ಪಾದನಾ ಘಟಕಗಳಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಜಪಾನ್‌ನಲ್ಲಿರುವ ಐದು ಘಟಕಗಳನ್ನು ಜನವರಿ ತಿಂಗಳಿನಲ್ಲಿ ತಾತ್ಕಾಲಿಕವಾಗಿ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಸೆಮಿಕಂಡಕ್ಟರ್ ಪೂರೈಕೆಯು ಸುಧಾರಿಸಿದ ನಂತರವಷ್ಟೇ ಕಾರು ಉತ್ಪಾದನೆಯನ್ನು ಪುನಾರಂಭಿಸುವುದಾಗಿ ಅಧಿಕೃತ ಮಾಹಿತಿ ನೀಡಿದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ವಾರ್ಷಿಕವಾಗಿ ಜಗತ್ತಿನಾದ್ಯಂತ 10 ಮಿಲಿಯನ್(1 ಕೋಟಿ) ಕಾರು ಮಾರಾಟ ಮಾಡುವ ಟೊಯೊಟಾ ಕಂಪನಿಯು ಭಾರತದಲ್ಲೂ ಪ್ರಮುಖ ಕಾರು ಮಾದರಿಗಳೊಂದಿಗೆ ಉತ್ತಮ ಸ್ಥಾನ ಕಾಯ್ದುಕೊಂಡಿದ್ದು, ಕಾರು ಮಾರಾಟ ಹೆಚ್ಚುತ್ತಿರುವ ಸಂದರ್ಭದಲ್ಲಿ ಸೆಮಿ ಕಂಡಕ್ಟರ್ ಕೊರತೆಯು ಕಾರು ಮಾರಾಟಕ್ಕೆ ಹೊಡೆತ ನೀಡುತ್ತಿದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಎಲೆಕ್ಟ್ರಾನಿಕ್ ಚಿಪ್ ಅಗತ್ಯ ಪ್ರಮಾಣದಲ್ಲಿ ಸ್ಟಾಕ್ ಇಲ್ಲದಿರುವ ಕಾರಣಕ್ಕೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳಲ್ಲಿ ಕೇವಲ ಒಂದೇ ಶಿಫ್ಟ್ ಮೂಲಕ ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದು, ಭಾರತದಲ್ಲೂ ಪ್ರಮುಖ ಕಾರು ಕಂಪನಿಗಳು ತೀವ್ರ ಹಿನ್ನಡೆ ಅನುಭವಿಸುತ್ತಿವೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಭಾರತದಲ್ಲಿ ಬುಕ್ಕಿಂಗ್ ದಾಖಲಾಗಿರುವ ಸುಮಾರು 7 ಲಕ್ಷ ಕಾರುಗಳು ಸೆಮಿ ಕಂಡಕ್ಟರ್ ಕೊರತೆಯ ಪರಿಣಾಮ ವಿತರಣೆ ಮಾಡಲು ಸಾಧ್ಯವಾಗದೆ ಕಾರು ಕಂಪನಿಗಳು ನಷ್ಟ ಭಯ ಎದುರಿಸುತ್ತಿದ್ದು, ಸೆಮಿ ಕಂಡಕ್ಟರ್ ಸಮಸ್ಯೆ ಬಗೆಹರಿಸಲು ಹಲವಾರು ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಸೆಮಿಕಂಡಕ್ಟರ್ ಕೊರತೆಯ ಪರಿಣಾಮವೇ ಕಳೆದ ಆರು ತಿಂಗಳಿನಲ್ಲಿ ಪ್ರಮುಖ ಕಾರು ಉತ್ಪಾದನಾ ಪ್ರಮಾಣದಲ್ಲಿ ಶೇ.40ರಿಂದ ಶೇ.60 ರಷ್ಟು ಇಳಿಕೆ ಕಂಡುಬಂದಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಕಾರುಗಳ ಪೂರೈಕೆಗೆ ಆಟೋ ಕಂಪನಿಗಳು ಹರಸಾಹಸ ಪಡುತ್ತಿವೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಕಾರು ಉತ್ಪಾದನಾ ಕಂಪನಿಗಳ ಬೇಡಿಕೆಗೆ ತಕ್ಕಂತೆ ಸೆಮಿಕಂಡಕ್ಟರ್ ಪೂರೈಕೆಯು ಹೆಚ್ಚಳವಾಗಲು ಕನಿಷ್ಠ ಐದರಿಂದ ಆರು ತಿಂಗಳು ಕಾಲಾವಕಾಶ ತೆಗೆದುಕೊಳ್ಳಲಿದ್ದು, ಪ್ರಸಕ್ತ ವರ್ಷದ ಕಾರು ಮಾರಾಟವು ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣುವ ಸಾಧ್ಯತೆಗಳಿವೆ.

ಸೆಮಿ ಕಂಡಕ್ಟರ್ ಬಿಕ್ಕಟ್ಟು: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಟೊಯೊಟಾ

ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಈ ವರ್ಷ ಮಾತ್ರವಲ್ಲ ಕಳೆದ ವರ್ಷ ಕೂಡಾ ಕಾರು ಉತ್ಪಾದನೆಗೆ ಹೊಡೆತ ನೀಡಿತ್ತು. ಕಳೆದ ವರ್ಷವು ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇಲ್ಲದ ಪರಿಣಾಮ ಕೆಲ ಕಾರು ಕಂಪನಿಗಳು ಕೆಲ ವಾರಗಳ ಕಾಲ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದವು.

Most Read Articles

Kannada
Read more on ಟೊಯೊಟಾ toyota
English summary
Semiconductor shortage crisis toyota to halt production temporary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X