ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ಕನ್ನಡ ಕಿರುತೆರೆಯ ಜನಪ್ರಿಯ ನಟ ದಿಲೀಪ್ ಶೆಟ್ಟಿ ಅವರು ಹೊಚ್ಚ ಹೊಸ ಕಾರನ್ನು ಖರೀದಿಸಿದ್ದಾರೆ. ಇದೀಗ ನಟ ದಿಲೀಪ್ ಶೆಟ್ಟಿ ತಮ್ಮ ಕನಸಿನ ಕಾರು ಕಿಯಾ ಸೆಲ್ಟೋಸ್ ಒಡೆಯರಾಗಿದ್ದಾರೆ. ಇವರು ಹೊಸ ಕಾರಿನ ಮುಂದೆ ನಿಂತಿರುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ನಟ ದಿಲೀಪ್ ಶೆಟ್ಟಿ ಅವರು ಖರೀದಿಸಿದ ಕಿಯಾ ಸೆಲ್ಟೋಸ್ ಎಸ್‍ಯುವಿ ಮಾದರಿಯು ಬಿಳಿ ಬಣ್ಣವನ್ನು ಹೊಂದಿದೆ. ಅವರು ಕಿಯಾ ಸೆಲ್ಟೋಸ್ ಎಸ್‍ಯುವಿಯ ಯಾವ ವೆರಿಯೆಂಟ್ ಅನ್ನು ಖರೀದಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಕಿಯಾ ಸೆಲ್ಟೋಸ್ ಕೂಡ ಒಂದಾಗಿದೆ. ಇನ್ನು ದಿಲೀಪ್ ಶೆಟ್ಟಿ ಅವರು ಹೊಸ ಕಾರಿನ ಮುಂದೆ ನಿಂತಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರ ಅಭಿಮಾನಿಗಳು ಕಾಮೆಂಟ್ ಮೂಲಕ ಶುಭಕೋರಿದ್ದಾರೆ.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ನಟ ದಿಲೀಪ್ ಶೆಟ್ಟಿ ಅವರು ಸದ್ಯಕ್ಕೆ ಕಸ್ತೂರಿ ನಿವಾಸ ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಇನ್ನು ಇವರು ವಿದ್ಯಾ ವಿನಾಯಕ ಎಂಬ ಸೀರಿಯಲ್‌ನಲ್ಲೂ ಕೂಡ ನಟಿಸಿದ್ದಾರೆ. ಕನ್ನಡ ಅಷ್ಟೇ ಅಲ್ಲದೇ ಕೃಷ್ಣ ತುಳಸಿ ಎಂಬ ತೆಲಗು ಸೀರಿಯಲ್‌ನಲ್ಲಿಯು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ನಟ ದಿಲೀಪ್ ಶೆಟ್ಟಿ ಅವರು ಖರೀದಿಸಿದ ಕಿಯಾ ಸೆಲ್ಟೋಸ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಂದ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

2021ರ ಕಿಯಾ ಸೆಲ್ಟೋಸ್ ಹೊಸ ಲೊಗೊ ಪಡೆದುಕೊಂಡಿದೆ. ಈ ಸೆಲ್ಟೊಸ್ ಹೊಸ ಕಾರಿನಲ್ಲಿ ಕಂಪನಿಯು ಸ್ಯಾಂಡ್, ಮಡ್, ಸ್ನೋ ಎನ್ನುವ ಮೂರು ಟ್ರಾಕ್ಷನ್ ಸೌಲಭ್ಯದೊಂದಿಗೆ ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ಸೆಲ್ಟೋಸ್ ಹಲವು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್ , 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಗಳಾಗಿವೆ.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ಈ ಎಸ್‍ಯುವಿ ಮಾದರಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ಎಲ್ಲಾ ಎಂಜಿನ್ ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, 1.5 ಲೀಟರ್ ಪೆಟ್ರೋಲ್ ಸಿವಿ‍ಟಿ, 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಹಾಗೂ 7 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ಕಿಯಾ ಸೆಲ್ಟೋಸ್ ನಲ್ಲಿ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನದ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ಸೆಲ್ಟೋಸ್‍‍ನ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಚಾಲಕನ ಸೀಟು, ರೇರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಅನ್ನು ನೀಡಲಾಗಿದೆ.

ಹೊಸ ಕಿಯಾ ಸೆಲ್ಟೋಸ್ ಕಾರನ್ನು ಖರೀದಿಸಿದ ಕಿರುತೆರೆ ನಟ ದಿಲೀಪ್ ಶೆಟ್ಟಿ

ಕಿಯಾ ಸೆಲ್ಟೊಸ್ ಮಾದರಿಯು ಭಾರತೀಯು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಎಂಜಿ ಹೆಕ್ಟರ್, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಡಸ್ಟರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.

Article Published On: Tuesday, July 27, 2021, 15:37 [IST]
English summary
Actor Dileep Shetty Buys New Kia Seltos. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+