ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

ಜನಪ್ರಿಯ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಐಷಾರಾಮಿ ಎಂಪಿವಿಯನ್ನು ಖರೀದಿಸಿದ್ದಾರೆ. ಶಿಲ್ಪಾ ಶೆಟ್ಟಿ ಈಗಾಗಲೇ ಬಿಎಂಡಬ್ಲ್ಯು ಐ 8, ಲ್ಯಾಂಡ್ ರೋವರ್ ರೇಂಜ್ ರೋವರ್ ಸೇರಿದಂತೆ ವಿವಿಧ ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ.

ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಈ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಶಿಲ್ಪಾ ಶೆಟ್ಟಿ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಐಷಾರಾಮಿ ಎಂಪಿವಿಯನ್ನು ಖರೀದಿಸಿದ್ದಾರೆ. ಶಿಲ್ಪಾ ಶೆಟ್ಟಿ ಈ ಕಾರಿನ ಎಕ್ಸ್‌ಪ್ರೆಶನ್ ಮಾದರಿಯನ್ನು ಆಯ್ಕೆ ಮಾಡಿದ್ದಾರೆ. ಇದು ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿನ ಮೂಲ ಮಾದರಿಯಾಗಿದೆ. ಮೂಲ ಮಾದರಿಯಾಗಿದ್ದರೂ ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.71.10 ಲಕ್ಷಗಳಾಗಿದೆ.

ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

ಮುಂಬೈನಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಸುಮಾರು ರೂ.89.16 ಲಕ್ಷಗಳಾಗಿದೆ. ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಭಾರತದಲ್ಲಿ ಮಾರಾಟವಾಗುವ ಅತಿ ದುಬಾರಿ ಬೆಲೆಯ ಎಂಪಿವಿಗಳಲ್ಲಿ ಒಂದಾಗಿದೆ. ಈ ಕಾರಿನ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.46 ಕೋಟಿಗಳಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಂಪಿವಿಯ ಎಕ್ಸ್‌ಪ್ರೆಶನ್ ಮಾದರಿಯಲ್ಲಿ ಲಾಂಗ್-ವ್ಹೀಲ್ ಬೇಸ್ ಆವೃತ್ತಿಯನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಈ ಮಾದರಿಯಲ್ಲಿ 7 ಜನರು ಕುಳಿತುಕೊಳ್ಳಬಹುದು. ಉಳಿದ ಎಲ್ಲಾ ಮಾದರಿಗಳು 6 ಸೀಟುಗಳನ್ನು ಮಾತ್ರ ಹೊಂದಿವೆ.

ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

ಎಕ್ಸ್‌ಪ್ರೆಶನ್ ಮಾದರಿಯು 3,430 ಎಂಎಂ ವ್ಹೀಲ್‌ಬೇಸ್, 5,370 ಎಂಎಂ ಉದ್ದವನ್ನು ಹೊಂದಿದ್ದರೆ, ಇತರ ಮಾದರಿಗಳು 3,200 ಎಂಎಂ ಹಾಗೂ 5,140 ಎಂಎಂ ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿವೆ. ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಐಷಾರಾಮಿ ಎಂಪಿವಿಯ ಎಂಜಿನ್ ಆಯ್ಕೆಗಳೂ ವಿಭಿನ್ನವಾಗಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

2.1-ಲೀಟರ್ ಡೀಸೆಲ್ ಎಂಜಿನ್ ಅನ್ನು ಎಕ್ಸ್‌ಪ್ರೆಶನ್, ಮಾರ್ಕೊ ಪೊಲೊ, ಮಾರ್ಕೊ ಪೊಲೊ ಹ್ಯಾರಿಸನ್ ಹಾಗೂ ಎಕ್ಸ್‌ಕ್ಲೂಸಿವ್ ಮಾದರಿಗಳಲ್ಲಿ ನೀಡಲಾಗುತ್ತದೆ. ಈ ಎಂಜಿನ್ ಗರಿಷ್ಠ 160 ಬಿಹೆಚ್‌ಪಿ ಪವರ್ ಹಾಗೂ 380 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

ಈ ಎಂಜಿನ್'ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಯುನಿಟ್ ಜೋಡಿಸಲಾಗಿದೆ. ಎಲೈಟ್ ಮಾದರಿಯಲ್ಲಿ ಅಳವಡಿಸಿರುವ 2.0 ಲೀಟರ್ ಡೀಸೆಲ್ ಎಂಜಿನ್ ಸಹ 160 ಬಿಹೆಚ್‌ಪಿ ಪವರ್ ಹಾಗೂ 380 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

ಈ ಎಂಜಿನ್'ನೊಂದಿಗೆ 9 ಜಿ-ಟ್ರೋನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎರಡೂ ಎಂಜಿನ್'ಗಳನ್ನು ಬಿಎಸ್-6 ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಅಪ್ ಡೇಟ್ ಮಾಡಲಾಗಿದೆ.

ದುಬಾರಿ ಬೆಲೆಯ ಐಷಾರಾಮಿ ಎಂಪಿವಿ ಖರೀದಿಸಿದ ಬಾಲಿವುಡ್ ನಟಿ

ಶಿಲ್ಪಾ ಶೆಟ್ಟಿಗಿಂತ ಮೊದಲು ಹಲವು ಸೆಲೆಬ್ರಿಟಿಗಳು ಈ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಐಷಾರಾಮಿ ಎಂಪಿವಿಯನ್ನು ಖರೀದಿಸಿದ್ದಾರೆ. ಈ ಕಾರು ಸಮಂಜಸವಾದಬೆಲೆಯಲ್ಲಿ ಆರಾಮದಾಯಕವಾದ ಸವಾರಿಯನ್ನು ನೀಡುತ್ತದೆ. ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಐಷಾರಾಮಿ ಎಂಪಿವಿಯು ಹಲವಾರು ಫೀಚರ್'ಗಳನ್ನು ಹೊಂದಿದೆ.

Most Read Articles

Kannada
English summary
Shilpa Shetty buys luxurious Mercedes Benz V Class MPV. Read in Kannada.
Story first published: Friday, February 12, 2021, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X