ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಕೆಲವು ತಿಂಗಳುಗಳ ಹಿಂದೆ ತನ್ನ ನಾಲ್ಕನೇ ತಲೆಮಾರಿನ ಫ್ಯಾಬಿಯಾ ಹ್ಯಾಚ್‌ಬ್ಯಾಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಫ್ಯಾಬಿಯಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ಗೆ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿರುವ ಫ್ಯಾಬಿಯಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಹಿಟ್ ಆಗುತ್ತದೆ ಎಂಬ ವದಂತಿಗಳಿತ್ತು. ಈ ಎಲ್ಲಾ ವದಂತಿಗಳಿಗೆ ಸ್ಕೋಡಾ ಆಟೋ ಇಂಡಿಯಾದ ಸೇಲ್ಸ್ ಮತ್ತು ಸರ್ವಿಸ್ ವಿಭಾಗದ ನಿರ್ದೇಶಕರಾದ ಝ್ಯಾಕ್ ಹೋಲಿಸ್ ಅವರು ಉತ್ತರಿಸಿದ್ದಾರೆ. ಭಾರತದಲ್ಲಿ ಸ್ಕೋಡಾ ಫ್ಯಾಬಿಯಾ ಬಿಡುಗಡೆಗೊಳಿಸುವ ಯೋಜನೆ ಏನಾದರೂ ಇದೆಯಾ ಎಂದು ಟ್ವಿಟರ್ ನಲ್ಲಿ ಒಬ್ಬರು ಪ್ರಶ್ನಿಸಿದ್ದರು.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಇದಕ್ಕೆ ಉತ್ತರವಾಗಿ ಝ್ಯಾಕ್ ಹೋಲಿಸ್ ಅವರು, ಭಾರತಕ್ಕೆ ಹೊಸ ಮಾದರಿಗಳನ್ನು ತರುವ ಯೋಜನೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದೇವೆ ಆದರೆ ಸದ್ಯಕ್ಕೆ ಫ್ಯಾಬಿಯಾ ಕಾರನ್ನು ಭಾರತಕ್ಕೆ ತರುವ ಯಾವುದೇ ಯೋಜನೆಗಳಿಲ್ಲ ಎಂದು ಟ್ವಿಟ್ಟರ್ ನಲ್ಲಿ ಉತ್ತರಿಸಿದ್ದಾರೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಹೊಸ ಸ್ಕೋಡಾ ಫ್ಯಾಬಿಯಾ ಕಾರಿನ ಬಗ್ಗೆ ಹೇಳುವುದಾದರೆ, ಇದು ಫೋಕ್ಸ್‌ವ್ಯಾಗನ್ ಗ್ರೂಪ್ಸ್ ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಫೋಕ್ಸ್‌ವ್ಯಾಗನ್ ಪೊಲೊ, ವರ್ಟಸ್, ನಿವಸ್ ಕೂಪೆ ಎಸ್‌ಯುವಿ, ಟಿ-ಕ್ರಾಸ್ ಮತ್ತು ಸ್ಕೋಡಾ ಕಾಮಿಕ್ ಮಾದರಿಗಳು ಕೂಡ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಭಾರತದಲ್ಲಿ ಈ ಪ್ಲಾಟ್‌ಫಾರ್ಮ್ ಅನ್ನು ಎಂಕ್ಯೂಬಿ ಎಒ ಐಎನ್ ಎಂದು ಕರೆಯಲಾಗುತ್ತದೆ. ಹೊಸ ಫೋಕ್ಸ್‌ವ್ಯಾಗನ್ ಟೈಗಮ್ ಮತ್ತು ಸ್ಕೋಡಾ ಕುಶಾಕ್ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಸ್ಕೋಡಾ ಫ್ಯಾಬಿಯಾ 4,108 ಎಂಎಂ ಉದ್ದ, 1,780 ಎಂಎಂ ಅಗಲ ಮತ್ತು 1,459 ಎಂಎಂ ಎತ್ತರದಲ್ಲಿದೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಈ ಹ್ಯಾಚ್‌ಬ್ಯಾಕ್ 380-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದು ಈಗ ಹಿಂದಿನ ಮಾದರಿಗಿಂತ 50-ಲೀಟರ್ ಹೆಚ್ಚಾಗಿದೆ. ಇನ್ನು ಕಾರಿನ ಎರಡನೇ ಸಾಲಿನ ಸೀಟ್ ಗಳನ್ನು ಮಡಿಚಿದರೆ 1,190-ಲೀಟರ್‌ಗೆ ವಿಸ್ತರಿಸಬಹುದು. ಇನ್ನು ಈ ಕಾರಿನಲ್ಲಿ ವ್ಹೀಲ್‌ಬೇಸ್‌ನ್ನು 94 ಎಂಎಂ ನಿಂದ 2,564 ಎಂಎಂಗೆ ಹೆಚ್ಚಿಸಲಾಗಿದೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಸ್ಕೋಡಾ ಫ್ಯಾಬಿಯಾವನ್ನು ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ 3 ರೂಪಾಂತರಗಳಲ್ಲಿದೆ. ನಾಲ್ಕನೇ ತಲೆಮಾರಿನ ಸ್ಕೋಡಾ ಫ್ಯಾಬಿಯಾ ಕಾರು ಹೊಸ ಮತ್ತು ಹೆಚ್ಚು ಆಧುನಿಕ ವಿನ್ಯಾಸದೊಂದಿಗೆ ಬರುತ್ತದೆ, ಇದರಲ್ಲಿ ಬಾನೆಟ್‌ನಲ್ಲಿ ಸ್ಕಪಡ್ಡ್ ಮತ್ತು ಬಾಡಿ ಸುತ್ತಲೂ ತೀಕ್ಷ್ಣವಾದ ಕ್ರೀಸ್‌ಗಳಿವೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಹ್ಯಾಚ್‌ಬ್ಯಾಕ್ ಕ್ರೋಮ್ ಔಟ್ ಲೈನ್‌ನೊಂದಿಗೆ ದೊಡ್ಡ ಸಿಗ್ನೇಚರ್ ಗ್ರಿಲ್ ಅನ್ನು ಪಡೆಯುತ್ತದೆ. ಇದು ಸಮಗ್ರ ಎಲ್-ಆಕಾರದ ಎಲ್ಇಡಿ ಡಿಆರ್ಎಲ್ ತೀಕ್ಷ್ಣವಾಗಿ ಕಾಣುವ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್ ಗಳೊಂದಿಗೆ ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಂ ಅನ್ನು ಪಡೆಯುತ್ತದೆ. ಸ್ಕೋಡಾ ಕ್ರಿಸ್ಟ್ ಲೈನ್ ಅಂಶಗಳೊಂದಿಗೆ ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಪಡೆಯುತ್ತದೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಇನ್ನು ಹೊಸ ಸ್ಕೋಡಾ ಫ್ಯಾಬಿಯಾ ಕಾರಿನ ಇಂಟಿರಿಯರ್ ನಲ್ಲಿ ಕಾಂಟ್ರಾಸ್ಟಿಂಗ್ ಹೊಲಿಗೆ ಪಡೆಯುತ್ತದೆ. ಹೊಸ ಎಲ್ಇಡಿ ಆಂಬಿಯೆಂಟ್ ಲೈಟಿಂಗ್ ಡ್ರೈವರ್‌ಗೆ ಡ್ಯಾಶ್‌ಬೋರ್ಡ್‌ನಲ್ಲಿ ಅಲಂಕಾರಿಕ ಟ್ರಿಮ್ ಅನ್ನು ಹೊಂದಿದೆ. ಆಂಬಿಯೆಂಟ್ ಲೈಟಿಂಗ್ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್ಇಡಿ ರೀಡಿಂಗ್ ಲ್ಯಾಂಪ್ ಗಳನ್ನು ಒಳಗೊಂಡಿದೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಇದು ಡಿಎಸ್‌ಜಿಗೆ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಹೊಸ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ. ಸ್ಟೀಯರಿಂಗ್ ವ್ಹೀಲ್ ಮತ್ತು ಹೀಟಡ್ ವಿಂಡ್‌ಸ್ಕ್ರೀನ್ ಅನ್ನು ಸಹ ಹೊಂದಿದೆ. ಹೊಸ ಫ್ಯಾಬಿಯಾ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಪಡೆಯುತ್ತದೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಹೊಸ ಸ್ಕೋಡಾ ಫ್ಯಾಬಿಯಾ ಕಾರಿನಲ್ಲಿ 5 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.0-ಲೀಟರ್, 3-ಸಿಲಿಂಡರ್ ಎಂಪಿಐ ಇವಿಒ ಎಂಜಿನ್ ಅನ್ನು ಪಡೆಯುತ್ತದೆ, ಈ ಎಂಜಿನ್ ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಇದು 64 ಬಿಹೆಚ್‌ಪಿ ಮತ್ತು 79 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸಲಾಗುತ್ತದೆ.

ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಫ್ಯಾಬಿಯಾ ಕಾರು

ಇನ್ನು 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಇದರೊಂದಿಗೆ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ 148 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಎಸಿಟಿ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Unlikely To Bring New Gen Fabia In India Anytime Soon. Read In Kannada.
Story first published: Thursday, July 22, 2021, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X