ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಸೆಡಾನ್ ಅನ್ನು ಬದಲಾಯಿಸಿ ಹೊಸ ಮಿಡ್‌ಸೈಜ್ ಸೆಡಾನ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಮಿಡ್ ಸೈಜ್ ಸೆಡಾನ್ ಕಾರಿಗೆ ಸ್ಲಾವಿಯಾ ಎಂಬ ಹೆಸರನ್ನು ನೀಡಬಹುದು.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಸ್ಕೋಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಈ ವರ್ಷದ ಅಂತ್ಯದ ಮೊದಲು ಅನಾವರಣಗೊಳಿಸಿಸಲಿದೆ ಎಂದು ಹೇಳಿದೆ. ಸ್ಕೋಡಾ ಸ್ಲಾವಿಯಾ ಸೆಡಾನ್ ಮಾದರಿಯನ್ನು ಹೊಸ ವಿನ್ಯಾಸ ರೂಪದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಮಿಡ್ ಸೆಡಾನ್ ವಿನ್ಯಾಸಗೊಳಿಸಲು ಉದಯೋನ್ಮುಖ ಭಾರತೀಯ ವಿನ್ಯಾಸಕರನ್ನು ಆಹ್ವಾನಿಸಿದ್ದಾರೆ. ಮುಂಬರುವ ಮಿಡ್ ಸೈಜ್ ಸೆಡಾನ್‌ನ ವಿನ್ಯಾಸ ರೇಖಾಚಿತ್ರವನ್ನು ಕಂಪನಿಯು ಬಿಡುಗಡೆ ಮಾಡಿದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಮುಂಬರುವ ಸ್ಲಾವಿಯಾ ಸೆಡಾನ್ ಇಂಡಿಯನ್ 2.0 ಕಾರ್ಯತಂತ್ರದ ಅಡಿಯಲ್ಲಿ ಬಿಡುಗಡೆಯಾದ ಬ್ರಾಂಡ್‌ನ ಎರಡನೇ ಮಾದರಿಯಾಗಿದೆ. ಇದರ ಪರಿಣಾಮವಾಗಿ ಸೆಡಾನ್ ಅದೇ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಇದು ಇತ್ತೀಚೆಗೆ ಬಿಡುಗಡೆಯಾದ ಸ್ಕೋಡಾ ಕುಶಾಕ್ ಎಸ್‍ಯುವಿಗೆ ಆಧಾರವಾಗಿದೆ. ಇದರ ಒಳಭಾಗದಲ್ಲಿ ಹೆಚ್ಚಿನ ಸ್ಪೇಸ್ ಅನ್ನು ಹೊಂದಿರುತ್ತದೆ. ಇದು ಅತಿದೊಡ್ಡ ಬೂಟ್‌ಸ್ಪೇಸ್ ಮತ್ತು ವಿಭಾಗದ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಸದ್ಯ ಮಾರಾಟವಾಗುತ್ತಿರುವ ರ‍್ಯಾಪಿಡ್ ಕಾರು ಪಿಕ್ಯೂ 25 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿ ಕುಸಿತವಾಗಿದೆ. ರ‍್ಯಾಪಿಡ್ ಕಾರು 2011ರಲ್ಲಿ ಭಾರತದಲ್ಲಿ ಬಿಡುಗಡೆಯಾದಗಿನಿಂದ ಯಾವುದೇ ಬದಲಾಗದೆ ಉಳಿದಿವೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಹೊಸ ಸ್ಲಾವಿಯಾ ಕಾರು ವಿದೇಶದಲ್ಲಿ ಮಾರಾಟವಾಗುವ ಮಾದರಿಗಳ ಅಂಶಗಳನ್ನು ಹೊಸ ಸೆಡಾನ್ ಹೊಂದಿರುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಬಟರ್‌ಫ್ಲೈ ಫ್ರಂಟ್ ಗ್ರಿಲ್, ಸ್ಪೋರ್ಟಿ ಫಾಗ್ ಲ್ಯಾಂಪ್‌ಗಳು ಮತ್ತು ವಿಶಾಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ತೆಳ್ಳನೆಯ ಹೆಡ್‌ಲ್ಯಾಂಪ್ ಕ್ಲಸ್ಟರ್ ಹೊಂದಿರಲಿದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಸ್ಲಾವಿಯಾದ ಒಳಭಾಗದಲ್ಲಿ ಇತ್ತೀಚಿನ ಕನೆಕ್ಟಿವಿಟಿ ತಂತ್ರಜ್ಞಾನ ಮತ್ತು ಕುಶಾಕ್ ಮಾದರಿಯಿಂದ ಎರವಲು ಪಡೆಯಬಹುದಾದ ಟಚ್‌ಸ್ಕ್ರೀನ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಅಲ್ಲದೇ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿರುತ್ತದೆ.ಇನ್ನು ಈ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ನಲ್ಲಿ 1.0-ಲೀಟರ್ ಮೂರು ಸಿಲಿಂಡರ್ ಟಿಎಸ್ಐ ಟರ್ಬೊ ಪೆಟ್ರೋಲ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಈ ಎಂಜಿನ್ 110 ಬಿಹೆಚ್‌ಪಿಗಿಂತ ಹೆಚ್ಚು ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಈ ಹೊಸ ಸೆಡಾನ್ ಟಾಪ್-ಎಂಡ್ ರೂಪಾಂತರಗಳಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್, 6-ಸ್ಪೀಡ್ ಟಾರ್ಕ್ ಕರ್ನ್'ವಾಟರ್ ಮತ್ತು 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ಇನ್ನು ಹೊಸ ಸ್ಲಾವಿಯಾ ಸೆಡಾನ್‌ಗಾಗಿ ಕಾಂಪ್ಲೇಜ್ ವಿನ್ಯಾಸಗೊಳಿಸಲು ಕಂಪನಿಯು ಹೇಳಿದೆ. ಕಾಂಪ್ಲೇಜ್ ವಿನ್ಯಾಸವು ಶ್ರೀಮಂತ ಭಾರತೀಯ ಸಂಸ್ಕೃತಿಯ ಬಣ್ಣಗಳು ಮತ್ತು ಲಕ್ಷಣಗಳಿಂದ ಸ್ಫೂರ್ತಿ ಪಡೆಯಬೇಕು. ಜೊತೆಗೆ ವಿನ್ಯಾಸ ಭಾಷೆಯನ್ನು ಒಳಗೊಂಡಿರಬೇಕು ಜೊತೆಗೆ ಆಧುನಿಕ ಗ್ರಾಫಿಕ್ ಕಲೆ/ಪಾಪ್ ಕಲೆಯನ್ನು ಹೊಂದಿರಬೇಕು.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

18 ಕ್ಕಿಂತ ಮೇಲ್ಪಟ್ಟವರು www.camowithskoda.com ನಲ್ಲಿ ಆನ್‍‍ಲೈನ್‍‍ನಲ್ಲಿ ನೋಂದಾಯಿಸಿ ಮತ್ತು ತಮ್ಮ ವಿನ್ಯಾಸವನ್ನು ಸಲ್ಲಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸ್ಲಾವಿಯಾ ಕಾರು

ವಿಜೇತರಿಗೆ ಸ್ಕೋಡಾ ಹೆಡ್ ಆಫ್ ಡಿಸೈನ್ ಆಲಿವರ್ ಸ್ಟೆಫಾನಿ ಅವರನ್ನು ಪ್ರೇಗ್‌ನಲ್ಲಿರುವ ಸ್ಕೋಡಾ ಆಟೋ ಪ್ರಧಾನ ಕಚೇರಿಯಲ್ಲಿ ಭೇಟಿಯಾಗುವ ಅವಕಾಶ ಸಿಗುತ್ತದೆ. ವಿಜೇತ ವಿನ್ಯಾಸವನ್ನು ಮುಂಬರುವ ಸ್ಕೋಡಾ ಸೆಡಾನ್‌ನಲ್ಲಿ ಅನ್ವಯಿಸಲಾಗುತ್ತದೆ ಮತ್ತು ಇದನ್ನು ದೇಶಾದ್ಯಂತ ಪ್ರದರ್ಶಿಸಲಾಗುತ್ತದೆ. ರನ್ನರ್ ಅಪ್ ಆದವರಿಗೆ ಟ್ಯಾಬ್ಲೆಟ್ ಅನ್ನು ನೀಡಲಾಗುತ್ತದೆ, ಕೊನೆಯ 3 ಅಭ್ಯರ್ಥಿಗಳಿಗೂ ಕೂಡ ವಿಶೇಷ ಉಡುಗೊರೆ ನೀಡಲಾಗುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
Skoda rapid replacement new salvia teased ahead of india launch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X