ಸ್ಥಗಿತಗೊಳಿಸಲಾಗಿದ್ದ ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ಸ್ಥಗಿತಗೊಂಡಿದ್ದ ಸ್ಕೋಡಾ ರ‍್ಯಾಪಿಡ್ ರೈಡರ್ ಮಾದರಿಯು ಮಾರುಕಟ್ಟೆಗೆ ಮರಳಿ ಪ್ರವೇಶ ಪಡೆದಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.79 ಲಕ್ಷ ಬೆಲೆಯೊಂದಿಗೆ ರಸ್ತೆಗಿಳಿದೆ.

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ಸ್ಕೋಡಾ ಇಂಡಿಯಾ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ತನ್ನ ಜನಪ್ರಿಯ ಸೆಡಾನ್ ಮಾದರಿಯಾದ ರ‍್ಯಾಪಿಡ್ ಆವೃತ್ತಿಯಲ್ಲಿ ಆರಂಭಿಕ ಮಾದರಿಯಾದ ರೈಡರ್ ಪೆಟ್ರೋಲ್ ಮ್ಯಾನುವಲ್ ಮಾದರಿಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಅದೇ ಮಾದರಿಯನ್ನು ಮರುಬಿಡುಗಡೆ ಮಾಡಿರುವ ಕಂಪನಿಯು ಹೊಸ ಮಾದರಿಯೊಂದಿಗೆ ರ‍್ಯಾಪಿಡ್ ಮಾದರಿಯ ಇನ್ನುಳಿದ ಆವೃತ್ತಿಗಳ ಬೆಲೆ ಏರಿಕೆ ಮಾಡಿದೆ.

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ರ‍್ಯಾಪಿಡ್ ಬಿಎಸ್-6 ಮಾದರಿಯನ್ನು ಕಳೆದ ಜೂನ್‌ನಲ್ಲಿ ರೈಡರ್, ರೈಡರ್ ಪ್ಲಸ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ಆವೃತ್ತಿಗಳೊಂದಿಗೆ ಬಿಡುಗಡೆ ಮಾಡಿದ್ದ ಸ್ಕೋಡಾ ಕಂಪನಿಯು ಗ್ರಾಹಕರ ಬೇಡಿಕೆ ಆಧಾರ ಮೇಲೆ ಕಳೆದ ತಿಂಗಳು ಆರಂಭಿಕ ಮಾದರಿಯಾದ ರೈಡರ್ ಆವೃತ್ತಿಯ ಮಾರಾಟವನ್ನು ಸ್ಥಗಿತಗೊಳಿಸಿತ್ತು.

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ಸೆಡಾನ್ ಕಾರು ಮಾದರಿಯಲ್ಲೇ ರ‍್ಯಾಪಿಡ್ ಕಾರು ಮಾದರಿಯನ್ನು ಅತಿ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳಿಸುವ ಸಂಬಂಧ ರೈಡರ್ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಸ್ಕೋಡಾ ಕಂಪನಿಯು ಬೇಡಿಕೆಯಿಲ್ಲದ ಇಲ್ಲದ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿತ್ತು. ಆದರೆ ಇದೀಗ ಮತ್ತೆ ಅದೇ ಮಾದರಿಯನ್ನು ಮರುಬಿಡುಗಡೆ ಮಾಡಿರುವ ಕಂಪನಿಯು ಹೊಸ ಮಾದರಿಯ ಮೂಲಕ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ರೈಡರ್ ವೆರಿಯೆಂಟ್ ಸೇರ್ಪಡೆ ನಂತರ ರೈಡರ್ ಪ್ಲಸ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ಆವೃತ್ತಿಗಳ ಮಾರಾಟವು ಎಂದಿನಂತೆ ಮುಂದುವರಿಯಲಿದ್ದು, ಪ್ರತಿ ಮಾದರಿಯಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ನೀಡಲಾಗಿದೆ. ಹೊಸ ರೈಡರ್ ಬಿಡುಗಡೆಯೊಂದಿಗೆ ರ‍್ಯಾಪಿಡ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.79 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯ ರೂ. 13.69 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ರ‍್ಯಾಪಿಡ್ ರೈಡರ್ ಮಾದರಿಯು ಮರುಬಿಡುಗಡೆಯ ನಂತರ ರೂ. 30 ಸಾವಿರದಷ್ಟು ಹೆಚ್ಚುವರಿ ಪಡೆದುಕೊಂಡರೆ ಇನ್ನುಳಿದ ಮಾದರಿಗಳ ಬೆಲೆಯಲ್ಲಿ ರೂ.20 ಸಾವಿರ ಹೆಚ್ಚಿಸಲಾಗಿದ್ದು, ಬೆಲೆ ಹೆಚ್ಚಳ ನಂತರ ಯಾವುದೇ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡದೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯೆಂತೆಯೇ ಮುಂದುವರಿಸಲಾಗಿದೆ.

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ಇನ್ನು ಬಿಎಸ್-6 ಎಮಿಷನ್‌ನಿಂದಾಗಿ ರ‍್ಯಾಪಿಡ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, ಹೊಸ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಮಾದರಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

1.0-ಲೀಟರ್(999 ಸಿಸಿ) ಟಿಎಸ್ಐ ಟರ್ಬೋ ಪೆಟ್ರೋಲ್ ಮಾದರಿಯು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು ಗರಿಷ್ಠ 18.97ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು 16.24 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ಹೊಸ ರ‍್ಯಾಪಿಡ್ ಕಾರಿನಲ್ಲಿ ಎಂಜಿನ್ ಬದಲಾವಣೆ ಹೊರತುಪಡಿಸಿ ತಾಂತ್ರಿಕ ಅಂಶಗಳನ್ನು ಈ ಹಿಂದಿನ ಮಾದರಿಯೆಂತೆ ಮುಂದುವರಿಸಲಾಗಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಕಫ್ ಪ್ಲೇಟ್, ಫ್ಲ್ಯಾಟ್ ಬಾಟಮ್ ಸ್ಟ್ರೀರಿಂಗ್ ವೀಲ್ಹ್, ಎಲ್‌ಇಡಿ ಲೈಟ್‌ಗಳು, ಲೆದರ್ ಸೀಟ್‌ಗಳು ಪ್ರಮುಖ ಆಕರ್ಷಣೆಯಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ರ‍್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ

ಹಾಗೆಯೇ ಪ್ರಯಾಣಿಕ ಸುರಕ್ಷತೆಗಾಗಿ ಕ್ರೂಸ್ ಕಂಟ್ರೋಲ್, 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ವ್ಯೂ ಕ್ಯಾಮೆರಾ ಮತ್ತು ಸೆನ್ಸಾರ್, ಬ್ರೇಕ್ ಅಸಿಸ್ಟ್ ಮತ್ತು 16-ಇಂಚಿನ ಅಲಾಯ್ ವೀಲ್ಹ್‌ನೊಂದಿಗೆ ಪ್ರಮುಖ ಆರು ಬಣ್ಣಗಳ ಆಯ್ಕೆ ಹೊಂದಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Rapid Rider Variant Relaunched In India. Read in Kannada.
Story first published: Wednesday, January 20, 2021, 13:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X