ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಸ್ಕೋಡಾ ಇಂಡಿಯಾ(SKoda India) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ಹೊಸ ಯೋಜನೆಗಳನ್ನು ಆರಂಭಿಸಿದ್ದು, ಸಿ ಸೆಗ್ಮೆಂಟ್ ಸೆಡಾನ್ ವಿಭಾಗದಲ್ಲಿ ಹೊಸ ಉತ್ಪನ್ನಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಿದ್ದತೆಯಲ್ಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ವಿವಿಧ ಕಾರು ಮಾದರಿಗಳ ಮಾರಾಟದೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಕೋಡಾ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಉತ್ಪನ್ನಗಳೊಂದಿಗೆ ಪ್ರಬಲ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ. ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕುಶಾಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಿರುವ ಸ್ಕೋಡಾ ಕಂಪನಿಯು ಇದೀಗ ಸಿ ಸೆಗ್ಮೆಂಟ್ ಸೆಡಾನ್ ಮಾದರಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಸ್ಥಗಿತಗೊಳಿಸಿ ರ‍್ಯಾಪಿಡ್‌ಗಿಂತಲೂ ಉತ್ತಮ ವಿನ್ಯಾಸದ ಸ್ಲಾವಿಯಾ ಕಾರು ಮಾದರಿಯೊಂದನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಸ್ಕೋಡಾ ರ‍್ಯಾಪಿಡ್ ಮಾತ್ರವಲ್ಲದೆ ಮಾತೃಸಂಸ್ಥೆಯ ಫೋಕ್ಸ್‌‌ವ್ಯಾಗನ್ ವೆಂಟೊ ಕಾರು ಮಾದರಿಯು ಕೂಡಾ ಮಾರಾಟದಿಂದ ಸ್ಥಗಿತಗೊಳ್ಳುತ್ತಿದ್ದು, ರ‍್ಯಾಪಿಡ್ ಮತ್ತು ವೆಂಟೊ ಸ್ಥಾನಕ್ಕೆ ಹೊಸ ವಿನ್ಯಾಸ ಮತ್ತು ಪವರ್‌ಫುಲ್ ಎಂಜಿನ್ ಆಯ್ಕೆ ಹೊಸ ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿವೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಕಾರು ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಮಾರಾಟದಿಂದ ಸ್ಥಗಿತಗೊಳಿಸುವ ಬಗೆಗೆ ಈಗಾಗಲೇ ಮಾಹಿತಿ ಹಂಚಿಕೊಂಡಿರುವ ಸ್ಕೋಡಾ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ರ‍್ಯಾಪಿಡ್ ಸ್ಥಾನದಲ್ಲಿ ಸಂಪೂರ್ಣವಾಗಿ ಹೊಸ ಮಾದರಿಯಾದ ಸ್ಲಾವಿಯಾ ಪರಿಚಯಿಸುತ್ತಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಗೊಳ್ಳುತ್ತಿರುವ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಹೊಸ ಸೆಡಾನ್ ಕಾರು ಮಾದರಿಯು ತಾಂತ್ರಿಕವಾಗಿ ಮತ್ತು ಎಂಜಿನ್ ಆಯ್ಕೆಯಲ್ಲಿ ಬಹುತೇಕ ಒಂದೇ ಆಗಿರಲಿದ್ದು, ವಿನ್ಯಾಸದಲ್ಲಿ ತುಸು ಬದಲಾವಣೆಯೊಂದಿಗೆ ತಮ್ಮದೇ ಆದ ಗ್ರಾಹಕ ವರ್ಗವನ್ನು ಸೆಳೆಯಲಿವೆ. ಹೊಸ ಸೆಡಾನ್ ಕಾರನ್ನು ಸ್ಕೋಡಾ ಕಂಪನಿಯು ಈಗಾಗಲೇ ಭಾರತದಲ್ಲಿ ಸ್ಲಾವಿಯಾ ಟೆಸ್ಟಿಂಗ್ ಆವೃತ್ತಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್‌ಗಿಂತಲೂ ಆಕರ್ಷಕ ವಿನ್ಯಾಸದೊಂದಿಗೆ ಲಾಂಗ್‌ವೀಲ್ಹ್ ಬೆಸ್ ಪಡೆದುಕೊಂಡಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಕುಶಾಕ್ ಕಾಂಪ್ಯಾಕ್ಟ್ ಎಸ್‍ಯುವಿಯು ಇದೇ ಪ್ಲಾಟ್‌ಫಾರ್ಮ್ ಆಧಾರವಾಗಿದೆ. ಸ್ಕೋಡಾ ಕಂಪನಿಯು ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಸ್ಲಾವಿಯಾ ಸೆಡಾನ್ ಕಾರಿನ ಟೀಸರ್ ಅನ್ನು ಅಧಿಕೃತವಾಗಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಇದೀಗ ಹೊಸ ಕಾರನ್ನು ಮುಂದಿನ ತಿಂಗಳು 18ರಂದು ಅನಾವರಣಗೊಳಿಸುವುದಾಗಿ ಕಂಪನಿಯೇ ಮಾಹಿತಿ ನೀಡಿದ್ದು, ಹೊಸ ಕಾರನ್ನು ಸ್ಕೋಡಾ ಕಂಪನಿಯು ಸ್ಲಾವಿಯಾ ಎಂದು ಕರೆದರೆ ಫೋಕ್ಸ್‌ವ್ಯಾಗನ್ ಕಂಪನಿಯು ಅದೇ ಕಾರನ್ನು ಕೆಲವು ಬದಲಾವಣೆಗಳೊಂದಿಗೆ ವರ್ಚಸ್ ಎಂದು ಕರೆಯಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಸ್ಲಾವಿಯಾ ಹೊಸ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಮೊದಲ ಸೆಡಾನ್ ಆಗಿದ್ದು, ಇದು ಸ್ಕೋಡಾ ಆಟೋ ಇಂಡಿಯಾ ಹೊಸ ಸ್ಲಾವಿಯಾದ ತಾಂತ್ರಿಕ ವಿಶೇಷಣಗಳು ಮತ್ತು ಎಂಜಿನ್ ವಿವರಗಳನ್ನು ಸಹ ಬಿಡುಗಡೆ ಮಾಡಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ ಸೆಡಾನ್ ಆಯಾಮಗಳ ಬಗ್ಗೆ ಹೇಳುವುದಾದರೆ, ಇದು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರವನ್ನು ಹೊಂದಿದ್ದು, 2,651 ಎಂಎಂ ವ್ಹೀಲ್‌ಬೇಸ್‌ ಅನ್ನು ಒಳಗೊಂಡಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಹೊಸ ಕಾರು ಹೋಂಡಾ ಸಿಟಿ ಸೆಡಾನ್ ಮಾದರಿಗಿಂತೂ ಹೆಚ್ಚು ಉದ್ದವಾಗಿರುವುದಲ್ಲದೆ ಎತ್ತರವಾಗಿದ್ದು, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಸ್ಲಾವಿಯಾ ಕಾರು ಕುಶಾಕ್ ಮಾದರಿಯಂತೆ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ TSI ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆಯಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಇದರಲ್ಲಿನ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ನೀಡಲಾಗುತ್ತದೆ. ಹೈಎಂಡ್ ಮಾದರಿಯಲ್ಲಿರುವ 1.5-ಲೀಟರ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಅಲ್ಲದೆ ಹೊಸ ಕಾರು ಕುಶಾಕ್‌ನಲ್ಲಿರುವಂತೆ 1.5-ಲೀಟರ್ ಎಂಜಿನ್ ಹೊಂದಿರುವ ಸ್ಲಾವಿಯಾ ಸಕ್ರಿಯ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತದೆ (ACT) ಇದು ಎಂಜಿನ್ ವೇಗದಲ್ಲಿದ್ದಾಗ ಎರಡು ಸಿಲಿಂಡರ್‌ಗಳನ್ನು ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳಿಸುತ್ತದೆ. ಹೀಗಾಗಿ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಬಹುನಿರೀಕ್ಷಿತ ಸ್ಲಾವಿಯಾ ಸೆಡಾನ್ ನಾಚ್ ಬ್ಯಾಕ್ ತರಹದ ಸ್ಟೈಲಿಂಗ್ ಅನ್ನು ಹೊಂದಿರುತ್ತದೆ. ಇದು ಕ್ರೋಮ್ ಸರೌಂಡ್‌ನೊಂದಿಗೆ ಸಿಗ್ನೆಚರ್ ಬಟರ್‌ಫ್ಲೈ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಚೂಪಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವಿಭಿನ್ನ ಕ್ಯಾರೆಕ್ಟರ್ ಲೈನ್‌ಗಳು, ಸ್ಲೋಪಿಂಗ್ ರೂಫ್‌ಲೈನ್, ಎಲ್‌ಇಡಿ ಟೈಲ್-ಲೈಟ್ಸ್ ಮತ್ತು ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಕೂಡಾ ಪಡೆಯಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಈ ಸ್ಕೋಡಾ ಸ್ಲಾವಿಯಾ ಕಾರು ಫಾಕ್ಟರಿ ಫಿಟೆಡ್ ಎಲೆಕ್ಟ್ರಿಕ್ ಸನ್ ರೂಫ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಮತ್ತು ಆಟೋಮ್ಯಾಟಿಕ್ ವೈಪರ್ ಗಳು ಒಳಗೊಂಡಿರುತ್ತದೆ, ಇದರೊಂದಿಗೆ ಹಲವು ಹೊಸ ತಂತ್ರಜ್ಙಾನಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿನ ರ‍್ಯಾಪಿಡ್ ಕಾರು ಸಿಂಗಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.29 ಲಕ್ಷ ಬೆಲೆ ಹೊಂದಿದ್ದು, ಹೊಸ ಸೆಡಾನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.10 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಹೋಂಡಾ ಸಿಟಿ ಪ್ರತಿಸ್ಪರ್ಧಿ ಸ್ಕೋಡಾ ಸ್ಲಾವಿಯಾ ಸೆಡಾನ್

ಪ್ರತಿಸ್ಪರ್ಧಿ ಹೋಂಡಾ ಸಿಟಿ ಕಾರು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.03 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.88 ಲಕ್ಷ ಬೆಲೆ ಹೊಂದಿದ್ದು, ಸಿಟಿ ಕಾರಿಗೆ ಪೈಪೋಟಿಯಾಗಿ ಸ್ಕೋಡಾ ಕಂಪನಿಯು ಹೊಸ ಕಾರನ್ನು ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಅಭಿವೃದ್ದಿಗೊಳಿಸುತ್ತಿದೆ.

ಒಟ್ಟಿನಲ್ಲಿ ಹೊಸ ಸೆಡಾನ್ ಕಾರಿನೊಂದಿಗೆ ಹೋಂಡಾ ಸಿಟಿಗೆ ಪ್ರಬಲ ಪೈಪೋಟಿ ನೀಡಲು ನಿರ್ಧರಿಸಿರುವ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳು ಸ್ಕೋಡಾ ಕಾರು ಮಾರಾಟ ಸಂಖ್ಯೆಯಲ್ಲಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿವೆ.

Most Read Articles

Kannada
Read more on ಸ್ಕೋಡಾ skoda
English summary
Skoda slavia sedan unveil on 18th november details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X