ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಲಾವಿಯಾ ಸೆಡಾನ್ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಸ್ಕೋಡಾ ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಸ್ಲಾವಿಯಾ ಸೆಡಾನ್ ಕಾರಿನ ಟೀಸರ್ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಈ ವರ್ಷಾಂತ್ಯದಲ್ಲಿ ಅನಾವರಣಗೊಳಿಸಲು ನಿರ್ಧರಿಸಲಾಗಿರುವ ಹೊಸ ಸ್ಲಾವಿಯಾ ಸೆಡಾನ್ ಹೋಂಡಾ ಸಿಟಿ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ. ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಇದು ಬ್ರಾಂಡ್‌ನ ಎರಡನೇ ಮಾದರಿಯಾಗಿದೆ, ಇದು ಹೊಸ ಹೂಡಿಕೆ ಮತ್ತು ಉತ್ಪನ್ನಗಳ ಶ್ರೇಣಿಯನ್ನು ತರುತ್ತದೆ. ರ‍್ಯಾಪಿಡ್ ಸೆಡಾನ್ ಅನ್ನು ಬದಲಿಸಲು, ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಹೆಚ್ಚು ಸ್ಥಳೀಕರಿಸಿದ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಈ ಪ್ಲಾಟ್‌ಫಾರ್ಮ್ ವಿವಿಧ ದೇಹದ ಶೈಲಿಗಳು ಮತ್ತು ಎಂಜಿನ್ ಆಯ್ಕೆಗಳನ್ನು ಸರಿಹೊಂದಿಸಲು ಸಾಕಷ್ಟು ಬಹುಮುಖವಾಗಿದೆ. ಹೊಸದಾಗಿ ಪ್ರಾರಂಭಿಸಿದ ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಗಳನ್ನು ಈ ಪ್ಲಾಟ್‌ಫಾರ್ಮ್ ಅಡಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಮುಂಬರುವ ಫೋಕ್ಸ್‌ವ್ಯಾಗನ್ ಮಿಡ್ ಸೈಜ್ ಸೆಡಾನ್, ವರ್ಚಸ್ ಎಂದು ಕರೆಯಲ್ಪಡುತ್ತದೆ, ಈ ಪ್ಲಾಟ್‌ಫಾರ್ಮ್ ಆಧರಿಸಿದೆ.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಈ ಸ್ಕೋಡಾ ಸ್ಲಾವಿಯಾ ಸುಮಾರು 4.5 ಮೀಟರ್ ಉದ್ದವನ್ನು ಅಳೆಯಲಿದೆ ಎಂದು ವರದಿಯಾಗಿದೆ, ಇದು ಪ್ರಸ್ತುತ ತಲೆಮಾರಿನ ರ‍್ಯಾಪಿಡ್ 4,413 ಮಿಮೀ ಅಳತೆಗಿಂತ ಗಮನಾರ್ಹವಾಗಿ ಉದ್ದವಾಗಿದೆ. ಇದು 2,651 ಎಂಎಂ ಸೆಗ್‌ಮೆಂಟ್-ಅತಿದೊಡ್ಡ ವೀಲ್‌ಬೇಸ್ ಅನ್ನು ಹೊಂದಿರುತ್ತದೆ.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಇನ್ನು ಸದ್ಯ ಮಾರಾಟವಾಗುತ್ತಿರುವ ಸ್ಕೋಡಾ ರ‍್ಯಾಪಿಡ್ ಕಾರು ಪಿಕ್ಯೂ 25 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿ ಕುಸಿತವಾಗಿದೆ. ರ‍್ಯಾಪಿಡ್ ಕಾರು 2011ರಲ್ಲಿ ಭಾರತದಲ್ಲಿ ಬಿಡುಗಡೆಯಾದಗಿನಿಂದ ಯಾವುದೇ ಬದಲಾಗದೆ ಉಳಿದಿವೆ.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಹೊಸ ಸ್ಕೋಡಾ ರ‍್ಯಾಪಿಡ್ ಅನ್ನು ಶೀಘ್ರದಲ್ಲೇ ಹೊಸ ಸೆಡಾನ್ ಮಾದರಿಯೊಂದಿಗೆ ಬದಲಾಯಿಸಲಾಗುವುದು. ರ‍್ಯಾಪಿಡ್ ರೈಡರ್ ಪ್ಲಸ್ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಿದ ಹಿಂದಿನ ಕಾರಣವನ್ನು ಕಂಪನಿಯು ಅಧಿಕೃತವಾಗಿ ಘೋಷಿಸಲ್ಲ. ಆದರೆ ದೇಶದಲ್ಲಿ ಉದ್ಭವಿಸಿರುವ ಸೆಮಿ ಕಂಡಕ್ಟರ್‌ಗಳ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಇದು ಹೊಸ ಸ್ಕೋಡಾ ಸ್ಲಾವಿಯಾ ಕಾರಿನ ಕ್ಯಾಬಿನ್ ಒಳಗೆ ಹೆಚ್ಚಿನ ಜಾಗವನ್ನು ಹೊಂದಲು ಸಹಾಯ ಮಾಡುತ್ತದೆ. ಹೊಸ ಸೆಡಾನ್ ಹೊರಹೋಗುವ ಮಾದರಿಗಿಂತ ಅಗಲ ಮತ್ತು ಎತ್ತರವಾಗಿರುತ್ತದೆ ಎಂದು ಟೀಸರ್ ಸೂಚಿಸುತ್ತದೆ. ಉದ್ದವಾದ ವೀಲ್‌ಬೇಸ್‌ಗೆ ಅನ್ನು ಒಳಗೊಂಡಿದೆ. ಈ ಹೊಸ ಸ್ಲಾವಿಯಾ 500-ಲೀಟರ್‌ಗಿಂತ ಹೆಚ್ಚಿನ ಬೂಟ್ ಸ್ಪೇಸ್ ಅನ್ನು ನೀಡಬಹುದು.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಈ ಹೊಸ ಸ್ಕೋಡಾ ಸ್ಲಾವಿಯಾ ಸೆಡಾನ್ ನಾಚ್ ಬ್ಯಾಕ್ ತರಹದ ಸ್ಟೈಲಿಂಗ್ ಅನ್ನು ಹೊಂದಿರುತ್ತದೆ. ಇದು ಕ್ರೋಮ್ ಸರೌಂಡ್‌ನೊಂದಿಗೆ ಸಿಗ್ನೇಚರ್ ಬಟರ್‌ಫ್ಲೈ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಚೂಪಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವಿಭಿನ್ನ ಕ್ಯಾರೆಕ್ಟರ್ ಲೈನ್‌ಗಳು, ಸ್ಲೋಪಿಂಗ್ ರೂಫ್‌ಲೈನ್, ಎಲ್‌ಇಡಿ ಟೈಲ್-ಲೈಟ್ಸ್ ಮತ್ತು ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಪಡೆಯಲಿದೆ,

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಇದು ಕುಶಾಕ್ ಮಿಡ್ ಸೈಜ್ ಎಸ್‌ಯುವಿಯೊಂದಿಗೆ ಒಳಭಾಗದ ಮಾದರಿಯಂತೇ ಇರುವ ಸಾಧ್ಯತೆಯಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಬೆಂಬಲದೊಂದಿಗೆ ದೊಡ್ಡ 10.1 ಇಂಚಿನ 'ಪ್ಲೇ' ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಸೆಡಾನ್ ಟಚ್ ಎಸಿ ಕಂಟ್ರೋಲ್ ಗಳು, 'ಮೈ ಸ್ಕೋಡಾ' ಕನೆಕ್ಟಿವಿಟಿ ಕಾರ್ ಟೆಕ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಸೀಟ್‌ಗಳು, ಲೆಥೆರೆಟ್ ಅಪ್‌ಹೋಲ್ಸ್ಟರಿ, ಆರು ಸ್ಪೀಕರ್ ಆಡಿಯೋ ಸಿಸ್ಟಂ, ಇತ್ಯಾದಿಗಳನ್ನು ಹೊಂದಿರುತ್ತದೆ.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಸ್ಕೋಡಾ ಸ್ಲಾವಿಯಾ ಕಾರು ಫಾಕ್ಟರಿ ಫಿಟಡ್ ಎಲೆಕ್ಟ್ರಿಕ್ ಸನ್ ರೂಫ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ಆಟೋಮ್ಯಾಟಿಕ್ ವೈಪರ್ ಗಳು ಮತ್ತು ಇನ್ನೂ ಹಲವು ಅಂಶಗಳನ್ನು ಒಳಗೊಂಡಿರುತ್ತದೆ, ಇದರೊಂದಿಗೆ ಹಲವು ಹೊಸ ತಂತ್ರಜ್ಙಾನಗಳನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ,

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಈ ಹೊಸ ಸ್ಕೋಡಾ ಸೆಡಾನ್ ನಲ್ಲಿ 1.0-ಲೀಟರ್ ಮೂರು ಸಿಲಿಂಡರ್ ಟಿಎಸ್ಐ ಟರ್ಬೊ ಪೆಟ್ರೋಲ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರೊಂದಿಗೆ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 147 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ Slavia ಕಾರಿನ ಟೀಸರ್ ಬಿಡುಗಡೆಗೊಳಿಸಿದ Skoda

ಸ್ಕೋಡಾ ಸ್ಲಾವಿಯಾ ಕಾರಿನ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಟಾರ್ಕ್ ಕರ್ನಾವಾಟರ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ.ಸ್ಕೋಡಾ ಕಂಪನಿಯು ಭಾರತದಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸುವ ಕಾರ್ಯದಲ್ಲಿ ನಿರತವಾಗಿದೆ. ಸ್ಕೋಡಾ ಆಟೋ ಭಾರತದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಲು 2022ರ ಅಂತ್ಯದ ವೇಳೆಗೆ 225 ಹೊಸ ಡೀಲರ್‌ಶಿಪ್‌ಗಳನ್ನು ತೆರೆಯಲಿದೆ. ಇದರ ಜೊತೆಗೆ ಕಂಪನಿಯು ಮುಂದಿನ ವರ್ಷ ಭಾರತದಲ್ಲಿ ಕೊಡಿಯಾಕ್ ಫೇಸ್ ಲಿಫ್ಟ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇನ್ನು ಹೊಸ ಸ್ಕೋಡಾ ಸ್ಲಾವಿಯಾ ಕಾರು ಬಿಡುಗಡೆಯಾದ ಬಳಿಕ ಮಿಡ್ ಸೈಜ್ ಸೆಡಾನ್ ಪ್ರಿಯರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಸ್ಕೋಡಾ skoda
English summary
Skoda teased new slavia sedan on official website details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X