ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗಲಿದೆ Skoda Slavia ಸೆಡಾನ್ ಕಾರು

Skoda ಕಂಪನಿಯು ತನ್ನ ಹೊಸ ಮಧ್ಯಮ ಗಾತ್ರದ ಸೆಡಾನ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. Skoda ಕಂಪನಿಯು ಈ ಹೊಸ ಸೆಡಾನ್ ಕಾರಿಗೆ Slavia ಎಂದು ಹೆಸರಿಟ್ಟಿದೆ. 1895 ರಲ್ಲಿ Skoda ಕಂಪನಿಯ ಸಂಸ್ಥಾಪಕರಾದ ವೆಕ್ಲಾವ್ ಲೌರಿನ್ ಹಾಗೂ ವಾಕ್ಲಾವ್ ಕ್ಲೇಮೆಂಟ್ ರಚಿಸಿದ ಬೈಸಿಕಲ್ ನಿಂದ ಈ ಹೆಸರನ್ನು ಪಡೆಯಲಾಗಿದೆ.

ಹೊಸ ಸೆಡಾನ್ ಕಾರಿಗೆ Slavia ಹೆಸರನ್ನಿಡುವ ಮೂಲಕ ಕಂಪನಿಯು ತನ್ನ ಸಂಸ್ಥಾಪಕರಿಗೆ ಗೌರವ ನೀಡುತ್ತಿದೆ ಎಂದು ಹೇಳಲಾಗಿದೆ. ಉತ್ಪಾದನೆಗೆ ಸಿದ್ದವಾಗಿರುವ Slavia ಸಿದ್ಧವಾಗಿರುವ ಮಾದರಿಯು ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. Slavia ಸೆಡಾನ್ ಕಾರ್ ಅನ್ನು ಸ್ಥಳೀಯ MQB A0 IN ಪ್ಲಾಟ್‌ಫಾರಂನಲ್ಲಿ ಉತ್ಪಾದಿಸಲಾಗುವುದು. ಇತ್ತೀಚೆಗೆ ನವೀಕರಿಸಿದ Octavia ಹಾಗೂ Superb ಕಾರುಗಳಿಂದ ಅದರ ವಿನ್ಯಾಸ ಸ್ಫೂರ್ತಿಯನ್ನು ಪಡೆಯಲಾಗಿದೆ.

Skoda ಕಂಪನಿಯು ಈಗಾಗಲೇ ಭಾರತದಲ್ಲಿ Kushaq ಎಸ್‌ಯುವಿ ಮೂಲಕ ಈ ಸೆಗ್ ಮೆಂಟಿನಲ್ಲಿ ಯಶಸ್ವಿಯಾಗಿದೆ. ಈಗ Slavia ಸೆಡಾನ್ ಕಾರು ಬಿಡುಗಡೆಗೊಳಿಸಲು ಮುಂದಾಗಿದೆ. Skoda ಕಂಪನಿಯು ಬಹಿರಂಗಪಡಿಸಿರುವ ಕೆಲವು ವಿವರಗಳನ್ನು ನೋಡಿದರೆ Slavia ಸೆಡಾನ್ ಕಾರು ಈಗಿರುವ Rapid ಮಾದರಿಗಿಂತ ದೊಡ್ಡದಾಗಿರುವುದು ದೃಢಪಟ್ಟಿದೆ.

ಈ ಕಾರಿನ ಬಾಹ್ಯ ವಿನ್ಯಾಸದ ಬಗ್ಗೆ ಹೇಳುವುದಾದರೆ Slavia ಸೆಡಾನ್ ಕಾರು ಪ್ರೊಜೆಕ್ಟರ್ ಹೆಡ್‌ಲೈಟ್‌, ಸಿಗ್ನೇಚರ್ ಬಟರ್‌ಫ್ಲೈ ಆಕಾರದ ಗ್ರಿಲ್, ಅಲಾಯ್ ವ್ಹೀಲ್‌, ಶಾರ್ಕ್ ಫಿನ್ ಆಂಟೆನಾ ಹಾಗೂ ಬೂಟ್ ಮೌಂಟೆಡ್ ನಂಬರ್ ಪ್ಲೇಟ್ ಗಳನ್ನು ಹೊಂದಿರಲಿದೆ. Skoda ಆಟೋ ಇಂಡಿಯಾ Slavia ಸೆಡಾನ್ ಕಾರಿನಲ್ಲಿ 1.0 ಲೀಟರ್ ಹಾಗೂ 1.5 ಲೀಟರ್ ಟಿ‌ಎಸ್‌ಐ ಪೆಟ್ರೋಲ್‌ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

ಈ ಎಂಜಿನ್ ಗಳನ್ನು Kusahq ಎಸ್‌ಯುವಿಯಲ್ಲಿಯೂ ಬಳಸಲಾಗುತ್ತಿದೆ. ಈ ಸೆಡಾನ್ ಕಾರ್ ಅನ್ನು ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು. ಭಾರತದಲ್ಲಿ ಬಿಡುಗಡೆಯಾದ ನಂತರ Skoda Slavia ಸೆಡಾನ್ ಕಾರು Honda City, Hyundai Verna, Maruti Suzuki Ciaz ಕಾರುಗಳಿಗೆ ಪೈಪೋಟಿ ನೀಡಲಿದೆ.

ಈ ಬಗ್ಗೆ ಮಾತನಾಡಿದ Skoda ಆಟೋ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಜಾಕ್ ಹೋಲಿಸ್ ರವರು Skoda ಕಂಪನಿಯು 125 ವರ್ಷಗಳ ಶ್ರೀಮಂತ ಜಾಗತಿಕ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು. Slavia ಎಂಬ ಹೆಸರು ಯಶಸ್ಸಿನ ಕಥೆಯ ಆರಂಭವನ್ನು ಪ್ರತಿನಿಧಿಸುತ್ತದೆ. ಈ ಕಾರು Skoda ಕಂಪನಿಯನ್ನು ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿಸುತ್ತದೆ ಎಂದು ಹೇಳಿದರು.

Slavia ಸೆಡಾನ್ ಕಾರು ಮತ್ತೊಮ್ಮೆ ದೇಶಿಯ ಮಾರುಕಟ್ಟೆಯಲ್ಲಿ Skoda ಕಂಪನಿಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ. Skoda Slavia ಸೆಡಾನ್ ಕಾರ್ ಅನ್ನು ಅತ್ಯುತ್ತಮ ನಿರ್ಮಾಣ ಗುಣಮಟ್ಟ, ವಿಶ್ವಾಸಾರ್ಹತೆ ಹಾಗೂ ಚಾಲನಾ ಅನುಭವದೊಂದಿಗೆ ನೀಡಲಾಗುವುದು ಎಂದು ಜಾಕ್ ಹೋಲಿಸ್ ರವರು ತಿಳಿಸಿದರು. Skoda ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಹಾಗೂ ಎಸ್‌ಯುವಿಗಳೊಂದಿಗೆ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ.

Slavia ಸೆಡಾನ್ ಕಾರಿನ ಒಳಗೆ ಹೆಚ್ಚು ವಿಶಾಲವಾದ ಜಾಗವನ್ನು ನಿರೀಕ್ಷಿಸಬಹುದು. ಹೊಸ Slavia ಕಾರು ದೊಡ್ಡ ಗಾತ್ರವನ್ನು ಹೊಂದಿರಲಿದೆ. Slavia ಕಾರು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ಹೊಸ Honda City ಕಾರಿನೊಂದಿಗೆ ಹೊಂದಾಣಿಕೆಯಾಗಲಿದೆ. Slavia ಕಾರಿನ ಬೆಲೆ ಮಾರುಕಟ್ಟೆಯಲ್ಲಿರುವ Skoda Rapid ಕಾರಿಗಿಂತ ತುಸು ಹೆಚ್ಚಿರಬಹುದು.

Slavia ಕಾರು ದೊಡ್ಡ ಗಾತ್ರವನ್ನು ಹೊಂದಿರುವುದರ ಜೊತೆಗೆ ಕೆಲವು ಹೆಚ್ಚುವರಿ ಫೀಚರ್ ಗಳನ್ನು ಪಡೆಯಲಿದೆ. ಈಗ ಮಾರುಕಟ್ಟೆಯಲ್ಲಿರುವ Skoda Rapid ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 7.80 ಲಕ್ಷಗಳಿಂದ ರೂ. 13.49 ಲಕ್ಷಗಳಾಗಲಿದೆ. ಕಂಪನಿಯು ಈ ವರ್ಷ ಭಾರತದಲ್ಲಿ ಎರಡು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಅವುಗಳಲ್ಲಿ ಹೊಸ Skoda Octavia ಹಾಗೂ Kushaq ಎಸ್‌ಯುವಿಗಳು ಸೇರಿವೆ.

ಇದರ ಜೊತೆಗೆ ಕಂಪನಿಯು ಮುಂದಿನ ವರ್ಷ ಭಾರತದಲ್ಲಿ Kodiaq ಫೇಸ್ ಲಿಫ್ಟ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. Skoda ಕಂಪನಿಯು ಭಾರತದಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸುವ ಕಾರ್ಯದಲ್ಲಿ ನಿರತವಾಗಿದೆ. Skoda ಆಟೋ ಭಾರತದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಲು 2022ರ ಅಂತ್ಯದ ವೇಳೆಗೆ 225 ಹೊಸ ಡೀಲರ್‌ಶಿಪ್‌ಗಳನ್ನು ತೆರೆಯಲಿದೆ.

ಕಂಪನಿಯು 2021ರ ಆಗಸ್ಟ್ ವೇಳೆಗೆ ದೇಶದ 100 ನಗರಗಳನ್ನು ತಲುಪಿದೆ. ಈ ವರ್ಷದ ಜೂನ್ ತಿಂಗಳಿನಲ್ಲಿ Skoda ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ Kushaq ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಕಂಪನಿಯು ಈ ಎಸ್‌ಯುವಿಯನ್ನು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. Skoda ಕಂಪನಿಯು Kushaq ಎಸ್‌ಯುವಿಯಲ್ಲಿ ಹಲವಾರು ಫೀಚರ್ ಗಳನ್ನು ನೀಡಿದೆ. Kushaq ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 10.50 ಲಕ್ಷಗಳಿಂದ ರೂ. 17.60 ಲಕ್ಷಗಳಾಗಿದೆ.

ಇನ್ನು Skoda ಕಂಪನಿಯು ಇತ್ತೀಚಿಗೆ Rapid ಕಾರಿನ Rider Plus ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಸ್ಥಗಿತಗೊಳಿಸಿದೆ. ಸ್ಖೋಡಾ ಕಂಪನಿಯು ಕಳೆದ ವರ್ಷವಷ್ಟೆ ರ‍್ಯಾಪಿಡ್ ರೈಡರ್ ಪ್ಲಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಈ ಮಾದರಿಯನ್ನು ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಸ್ಕೋಡಾ ರ‍್ಯಾಪಿಡ್ ಅನ್ನು ಶೀಘ್ರದಲ್ಲೇ ಹೊಸ ಸೆಡಾನ್ ಮಾದರಿಯೊಂದಿಗೆ ಬದಲಾಯಿಸಲಾಗುವುದು. ರ‍್ಯಾಪಿಡ್ ರೈಡರ್ ಪ್ಲಸ್ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಿದ ಹಿಂದಿನ ಕಾರಣವನ್ನು ಕಂಪನಿಯು ಅಧಿಕೃತವಾಗಿ ಘೋಷಿಸಲ್ಲ. ಆದರೆ ದೇಶದಲ್ಲಿ ಉದ್ಭವಿಸಿರುವ ಸೆಮಿ ಕಂಡಕ್ಟರ್‌ಗಳ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಸ್ಕೋಡಾ ಮಾತ್ರವಲ್ಲದೇ ಇತರ ಹಲವು ವಾಹನ ತಯಾರಕ ಕಂಪನಿಗಳು ಸೆಮಿ ಕಂಡಕ್ಟರ್‌ಗಳ ಕೊರತೆಯನ್ನು ಎದುರಿಸುತ್ತಿವೆ. ಸದ್ಯಕ್ಕೆ Rapid ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ Skoda ಕಂಪನಿಯ ಪ್ರಮುಖ ಮಾದರಿಯಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda to launch slavia sedan car in india soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X