ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಕೋವಿಡ್ 19 ಎರಡನೇ ಅಲೆ ದೇಶಾದ್ಯಂತ ಆರ್ಭಟಿಸುತ್ತಿದೆ. ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವವರಿಗೆ ಆಟೋ ಮೊಬೈಲ್ ಕಂಪನಿಗಳು ನೆರವು ನೀಡುತ್ತಿವೆ. ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಇನ್ನು ಕೆಲವು ವಾಹನ ತಯಾರಕ ಕಂಪನಿಗಳು ತಮ್ಮ ಸಿಬ್ಬಂದಿಗಳ ನೆರವಿಗೆ ಧಾವಿಸಿವೆ.

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಈಗ ಸೋನಾಲಿಕಾ ಟ್ರ್ಯಾಕ್ಟರ್ ಕೋವಿಡ್ 19 ಚಿಕಿತ್ಸಾ ವೆಚ್ಚಗಳನ್ನು ಭರಿಸುವ ಮೂಲಕ ತನ್ನ ಡೀಲರ್'ಗಳ ಹಾಗೂ ಉದ್ಯೋಗಿಗಳ ನೆರವಿಗೆ ಧಾವಿಸಿದೆ. ಕೋವಿಡ್ 19ನಿಂದ ಮೃತಪಡುವ ನೌಕರರ ಕುಟುಂಬಸ್ಥರಿಗೆ ಹಣಕಾಸಿನ ನೆರವು ನೀಡುವ ಭರವಸೆ ನೀಡಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಮೊದಲಿಗೆ ಕೋವಿಡ್ 19 ಸೋಂಕಿಗೆ ತುತ್ತಾಗುವ ಡೀಲರ್ ಹಾಗೂ ಸಿಬ್ಬಂದಿಗಳಿಗೆ ವೈದ್ಯಕೀಯ ವೆಚ್ಚವಾಗಿ ರೂ.25,000ಗಳವರೆಗೆ ಹಣಕಾಸು ನೆರವು ನೀಡಲು ಸೋನಾಲಿಕಾ ಟ್ರ್ಯಾಕ್ಟರ್ ನಿರ್ಧರಿಸಿದೆ.

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಡೀಲರ್ ಹಾಗೂ ಸಿಬ್ಬಂದಿಗಳ ನೌಕರರ ಮಕ್ಕಳಿಗೆ ವೈದ್ಯಕೀಯ ನೆರವು ಹಾಗೂ ಶಿಕ್ಷಣಕ್ಕಾಗಿ ಈಗ ಪ್ರತಿ ವರ್ಷ ರೂ.50,000ಗಳವರೆಗೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಕೋವಿಡ್ 19 ಚಿಕಿತ್ಸೆಗಾಗಿ ರೂ.25,000ಗಳ ಹಣಕಾಸು ನೆರವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಈ ಎಲ್ಲಾ ಸೌಲಭ್ಯಗಳ ಜೊತೆಗೆ ಯಾವುದೇ ಡೀಲರ್ ಅಥವಾ ಯಾವುದೇ ಸಿಬ್ಬಂದಿಗಳು ಮೃತ ಪಟ್ಟ ಸಂದರ್ಭದಲ್ಲಿ ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ರೂ.2 ಲಕ್ಷಗಳ ಹಣಕಾಸಿನ ನೆರವು ನೀಡಲಾಗುತ್ತದೆ.

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಈ ಬಗ್ಗೆ ಮಾತನಾಡಿದ ಸೋನಾಲಿಕಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಮನ್ ಮಿತ್ತಲ್, ಕೋವಿಡ್ 19 ಎರಡನೇ ಅಲೆ ಅನಿರೀಕ್ಷಿತವಾಗಿದೆ. ದುರದೃಷ್ಟವಶಾತ್ ಇದು ನಮ್ಮ ಡೀಲರ್'ಗಳ ಮೇಲೆ, ಚಾನೆಲ್ ಪಾರ್ಟ್ ನರ್'ಗಳ ಮೇಲೆ ವಿಶೇಷವಾಗಿ ಡೀಲರ್ ನೌಕರರ ಮೇಲೆ ಪರಿಣಾಮ ಬೀರಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಈ ಹಿನ್ನೆಲೆಯಲ್ಲಿ ಆರೋಗ್ಯ ಸಮಸ್ಯೆ ಎದುರಿಸುವ ಅಥವಾ ಅಕಾಲಿಕ ಮರಣಕ್ಕೆ ತುತ್ತಾಗುವ ನೌಕರರಿಗೆ ಹಣಕಾಸಿನ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ವೈದ್ಯಕೀಯ ವೆಚ್ಚವಾಗಿ ರೂ.25,000 ಹಾಗೂ ಸಾವಿನ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ರೂ.2 ಲಕ್ಷಗಳ ಹಣಕಾಸಿನ ನೆರವು ನೀಡಲಾಗುವುದು ಎಂದು ಅವರು ಹೇಳಿದರು.

ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕುವ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸೋನಾಲಿಕಾ ಟ್ರ್ಯಾಕ್ಟರ್

ಕೋವಿಡ್ 19ನಿಂದಾಗಿ ಉಂಟಾಗಿರುವ ಸಂಕಷ್ಟದ ಸಂದರ್ಭದಲ್ಲಿ ನಾವು ದೇಶಾದ್ಯಂತವಿರುವ ನಮ್ಮ ಎಲ್ಲಾ ಸಿಬ್ಬಂದಿಗಳಿಗೆ ಮಾನಸಿಕ ಬೆಂಬಲವನ್ನು ನೀಡುವುದರ ಜೊತೆಗೆ ಅವರೊಂದಿಗೆ ನಿಲ್ಲಲು ಬದ್ಧರಾಗಿದ್ದೇವೆ ಎಂದು ರಾಮನ್ ಮಿತ್ತಲ್ ಹೇಳಿದರು.

Most Read Articles

Kannada
English summary
Sonalika Tractor offers financial support to dealers and employees. Read in Kannada.
Story first published: Friday, May 21, 2021, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X