ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಸೋನಾಲಿಕಾ ಟ್ರ್ಯಾಕ್ಟರ್ಸ್ 2021ರ ಜನವರಿ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಕಂಪನಿಯು 2021ರ ಜನವರಿ ತಿಂಗಳಿನಲ್ಲಿ 10,158 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿದೆ. 2020ರ ಜನವರಿ ತಿಂಗಳಿನಲ್ಲಿ 7,220 ಯುನಿಟ್ ಟ್ರಾಕ್ಟರ್'ಗಳನ್ನು ಮಾರಾಟ ಮಾಡಲಾಗಿತ್ತು.

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಸೋನಾಲಿಕಾ ಟ್ರ್ಯಾಕ್ಟರ್ಸ್ ಕಂಪನಿಯ ಪ್ರಕಾರ ಕಂಪನಿಯ ಟ್ರಾಕ್ಟರ್ ಮಾರಾಟವು ವಾರ್ಷಿಕವಾಗಿ 40%ನಷ್ಟು ಹೆಚ್ಚಾಗಿದೆ. ಕಂಪನಿಯು 2021ರ ಜನವರಿ ತಿಂಗಳಿನಲ್ಲಿದೇಶಿಯ ಮಾರುಕಟ್ಟೆಯಲ್ಲಿ 8,154 ಟ್ರಾಕ್ಟರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಕಂಪನಿಯು 5,585 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿತ್ತು. ಆಲೂಗೆಡ್ಡೆ ಕೃಷಿಗಾಗಿ ಕಂಪನಿಯು ಕಳೆದ ತಿಂಗಳು ಅಲೆಕ್ಸಾಂಡರ್ ಡಿಎಲ್ಎಕ್ಸ್ ವಿಶೇಷ ಆವೃತ್ತಿ ಟ್ರಾಕ್ಟರ್ ಅನ್ನು ಬಿಡುಗಡೆಗೊಳಿಸಿದೆ.

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಈ ಟ್ರ್ಯಾಕ್ಟರ್ ಅನ್ನು ಹೈಡ್ರಾಲಿಕ್ಸ್ ಹಾಗೂ ಹೆಚ್ಚು ಫೀಚರ್'ಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ. ಸೋನಾಲಿಕಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಮನ್ ಮಿತ್ತಲ್ ಮಾತನಾಡಿ, ಟ್ರಾಕ್ಟರುಗಳು ಹಾಗೂ ಸಲಕರಣೆಗಳ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಜವಾಬ್ದಾರಿಯುತ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸೋನಾಲಿಕಾ ಬದ್ಧವಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಗ್ರಾಹಕರಿಗೆ ಸುಧಾರಿತ ಕೃಷಿ ಉಪಕರಣಗಳನ್ನು ಒದಗಿಸುವುದಲು ಯಾವುದೇ ಹೆಚ್ಚುವರಿ ವೆಚ್ಚವನ್ನು ವಿಧಿಸುವುದಿಲ್ಲ. ಕರೋನಾ ಸಾಂಕ್ರಾಮಿಕ ಸಮಯದಲ್ಲಿಯೂ ಜನವರಿ ತಿಂಗಳಿನಲ್ಲಿ 10,158 ಯುನಿಟ್ ಟ್ರಾಕ್ಟರ್ ಮಾರಾಟ ಮಾಡಿದ್ದೇವೆ ಎಂದು ಹೇಳಿದರು.

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಕಂಪನಿಯು ಕಳೆದ ವರ್ಷದ ಜನವರಿ ತಿಂಗಳಿನ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ಜನವರಿ ತಿಂಗಳ ಮಾರಾಟದಲ್ಲಿ 46%ನಷ್ಟು ಪ್ರಗತಿ ಸಾಧಿಸಿದೆ. ನಮ್ಮ ಪೋರ್ಟ್ ಫೋಲಿಯೊದಲ್ಲಿ ನೀಡಲಾಗುವ ಆಕರ್ಷಕ ಟ್ರಾಕ್ಟರುಗಳು ಈ ಬೆಳವಣಿಗೆಗೆ ಕಾರಣವಾಗಿವೆ ಎಂದು ಅವರು ಹೇಳಿದರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯು ಕುಸಿದಾಗ ಕೃಷಿ ಕ್ಷೇತ್ರವು ಪುನರುಜ್ಜೀವನವನ್ನು ಹೊಂದಿತು ಎಂದು ಅವರು ಹೇಳಿದರು. ಲಾಕ್‌ಡೌನ್ ಅವಧಿಯಲ್ಲಿ ವಾಹನಗಳ ಮಾರಾಟವು ಕುಸಿದು ಆಟೋಮೊಬೈಲ್ ಉದ್ಯಮವು ಆರ್ಥಿಕ ಸಂಕಷ್ಟವನ್ನು ಎದುರಿಸಿತು.

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಆದರೆ ಈ ಅವಧಿಯಲ್ಲಿ ಟ್ರಾಕ್ಟರುಗಳ ಮಾರಾಟವು ಹೆಚ್ಚಾಗಿತ್ತು. ಕೃಷಿ ಕ್ಷೇತ್ರವು ಆರ್ಥಿಕತೆಗೆ ಎಷ್ಟು ಕೊಡುಗೆ ನೀಡುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಸೋನಾಲಿಕಾ ಕಂಪನಿಯು ಹೈಟೆಕ್ ಉತ್ಪನ್ನಗಳ ಸರಣಿಯನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಕಂಪನಿಯು ವಿಶ್ವದ ಮೊದಲ ವರ್ಟಿಕಲಿ ಇಂಟಿಗ್ರೇಟೆಡ್ ಘಟಕದಲ್ಲಿ ರೈತರ ವಿವಿಧ ಅಗತ್ಯತೆಗಳನ್ನು ಪೂರೈಸಲು ಹಾಗೂ ಸಂಬಂಧಿಸಿದ ಪ್ರದೇಶಗಳಲ್ಲಿ ಕೃಷಿ ಸಮೃದ್ಧಿಯನ್ನು ತರಲು ಟ್ರಾಕ್ಟರುಗಳನ್ನು ಉತ್ಪಾದಿಸುತ್ತದೆ.

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಸೋನಾಲಿಕಾ ಕಂಪನಿಯು ಭಾರತದಲ್ಲಿ ವಿಶಾಲವಾದ ಮಾರಾಟ ಜಾಲ ಹಾಗೂ ಪೂರೈಕೆ ಸರಪಳಿಯನ್ನು ಹೊಂದಿದೆ. ಇದರ ನೆರವಿನಿಂದ ಕಂಪನಿಯು ವಿಶ್ವಾದ್ಯಂತ ಟ್ರಾಕ್ಟರುಗಳನ್ನು ಮಾರಾಟ ಮಾಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಕಳೆದ ವರ್ಷ ಕಂಪನಿಯು ಡೀಸೆಲ್ ಸೆಗ್'ಮೆಂಟಿನಲ್ಲಿ ಟೈಗರ್, ಸಿಕಂದರ್ ಡಿಎಲ್ಎಕ್ಸ್, ಮಹಾಬಲಿ ಹಾಗೂ ಛತ್ರಪತಿ ಸರಣಿಯ ಟ್ರಾಕ್ಟರುಗಳನ್ನು ಪರಿಚಯಿಸಿತ್ತು. ಈ ಟ್ರಾಕ್ಟರುಗಳು ಕೃಷಿಯಲ್ಲಿನ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ.

ಜನವರಿ ತಿಂಗಳಿನಲ್ಲಿ 40%ನಷ್ಟು ಏರಿಕೆ ಕಂಡ ಸೋನಾಲಿಕಾ ಟ್ರಾಕ್ಟರ್ ಮಾರಾಟ

ಇದರ ಜೊತೆಗೆ ಸೋನಾಲಿಕಾ ಕಂಪನಿಯು ಕಳೆದ ತಿಂಗಳು ಭಾರತದ ಮೊದಲ ಫೀಲ್ಡ್-ರೆಡಿ ಎಲೆಕ್ಟ್ರಿಕ್ ಟ್ರಾಕ್ಟರ್ ಆದ ಸೋನಾಲಿಕಾ ಟೈಗರ್ ಎಲೆಕ್ಟ್ರಿಕ್ ಅನ್ನು ಬಿಡುಗಡೆಗೊಳಿಸಿತು.

Most Read Articles

Kannada
English summary
Sonalika tractor sales increased by 40 percent in 2021 January. Read in Kannada.
Story first published: Wednesday, February 3, 2021, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X