ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಕಾರಣಕ್ಕೆ ವಾಹನ ತಯಾರಕ ಕಂಪನಿಗಳು ತಮ್ಮ ಶೋರೂಂ ಹಾಗೂ ಸರ್ವೀಸ್ ಸೆಂಟರ್'ಗಳನ್ನು ಮುಚ್ಚಿವೆ.

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಗ್ರಾಹಕರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ವಾಹನ ತಯಾರಕ ಕಂಪನಿಗಳು ವಾರಂಟಿ ಹಾಗೂ ಫ್ರೀ ಸರ್ವೀಸ್ ಅವಧಿಯನ್ನು ವಿಸ್ತರಿಸಿವೆ. ದೇಶದ ಪ್ರಮುಖ ಟ್ರ್ಯಾಕ್ಟರ್ ತಯಾರಕ ಕಂಪನಿಗಳಲ್ಲಿ ಒಂದಾದ ಸೋನಾಲಿಕಾ ಸಹ ಈ ಸಾಲಿಗೆ ಸೇರಿದೆ.

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಸೋನಾಲಿಕಾ ಟ್ರ್ಯಾಕ್ಟರ್ಸ್ ತನ್ನ ಟ್ರಾಕ್ಟರ್'ಗಳ ವಾರಂಟಿ ಹಾಗೂ ಫ್ರೀ ಸರ್ವೀಸ್ ಅವಧಿಯನ್ನು ವಿಸ್ತರಿಸಿದೆ. ಮೇ 1ರಿಂದ ಜೂನ್ 30ರವರೆಗೆ ಮುಕ್ತಾಯವಾಗಲಿದ್ದ ಸೋನಾಲಿಕಾ ಟ್ರಾಕ್ಟರ್'ಗಳ ವಾರಂಟಿ ಅವಧಿಯನ್ನು ಎರಡು ತಿಂಗಳು ವಿಸ್ತರಿಸಲಾಗಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ವಾರಂಟಿ ವಿಸ್ತರಣೆಯ ಬಗೆಗಿನ ಮಾಹಿತಿಯನ್ನು ಗ್ರಾಹಕರಿಗೆ ಇ-ಮೇಲ್ ಅಥವಾ ಎಸ್‌ಎಂಎಸ್ ಮೂಲಕ ಕಳುಹಿಸಲಾಗುವುದು ಎಂದು ಸೋನಾಲಿಕಾ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಈ ಸಂಕಷ್ಟದ ಸಮಯದಲ್ಲಿ ಗ್ರಾಹಕರ ಬೆಂಬಲಕ್ಕೆ ನಿಲ್ಲುವುದಾಗಿ ಕಂಪನಿ ಹೇಳಿದೆ. ಲಾಕ್‌ಡೌನ್‌ನಿಂದ ವಾರಂಟಿಯ ಬಗ್ಗೆ ಗ್ರಾಹಕರಲ್ಲಿ ಉಂಟಾಗಿದ್ದ ಕಳವಳವನ್ನು ದೂರ ಮಾಡುವ ಉದ್ದೇಶದಿಂದ ವಾರಂಟಿ ಅವಧಿಯನ್ನು ವಿಸ್ತರಿಸಲಾಗಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಈ ಬಗ್ಗೆ ಮಾತನಾಡಿರುವ ಸೋನಾಲಿಕಾ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್ ಮಿತ್ತಲ್, ಸೋನಾಲಿಕಾ ಕಂಪನಿಯು ವಾರಂಟಿ ಅವಧಿಯನ್ನು ವಿಸ್ತರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ರೈತರ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದರು.

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಸೋನಾಲಿಕಾ ಕಂಪನಿಯು ಕಳೆದ ವರ್ಷ ಕೋವಿಡ್ 19 ಸಾಂಕ್ರಾಮಿಕದ ಮೊದಲ ಅಲೆಯಲ್ಲಿ ರೈತರ ಬೆಂಬಲಕ್ಕೆ ನಿಂತಿತ್ತು. ಈ ಬಾರಿಯೂ ಸಹ ತನ್ನ ಗ್ರಾಹಕರ ಬೆಂಬಲಕ್ಕೆ ನಿಲ್ಲುತ್ತಿದೆ ಎಂದು ಅವರು ಹೇಳಿದರು.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಪ್ರೈಮರಿ ವಾರಂಟಿ ಅವಧಿಯನ್ನು ಎರಡು ತಿಂಗಳು ವಿಸ್ತರಿಸುವ ಮೂಲಕ ಸೋನಾಲಿಕಾ ಕಂಪನಿಯು ತನ್ನ ಟ್ರ್ಯಾಕ್ಟರ್‌ಗಳ ಮೇಲೆ ನಂಬಿಕೆ ಇಟ್ಟಿರುವ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಲು ಬಯಸಿದೆ.

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಸೋನಾಲಿಕಾ ಕಂಪನಿ ಮಾತ್ರವಲ್ಲದೇ ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಐಷರ್ ಕಂಪನಿಗಳು ಸಹ ತಮ್ಮ ಟ್ರಾಕ್ಟರುಗಳ ವಾರಂಟಿ ಅವಧಿಯನ್ನು ಎರಡು ತಿಂಗಳು ವಿಸ್ತರಿಸಿವೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಟ್ರಾಕ್ಟರ್'ಗಳ ವಾರಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಸೋನಾಲಿಕಾ ಟ್ರಾಕ್ಟರ್ಸ್

ಸೋನಾಲಿಕಾ ಕಂಪನಿಯು ಕೋವಿಡ್ 19 ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಭರಿಸುವ ಮೂಲಕ ತನ್ನ ಉದ್ಯೋಗಿಗಳಿಗೆ ನೆರವು ನೀಡುತ್ತಿದೆ. ಕಂಪನಿಯು ಕೋವಿಡ್ 19ನಿಂದ ಮೃತಪಡುವ ಕಂಪನಿಯ ನೌಕರರ ರೂ.2 ಲಕ್ಷ ಹಣಕಾಸಿನ ನೆರವು ನೀಡಲಿದೆ. ಇದರ ಜೋಟ್ಗೆ ಕೋವಿಡ್ 19 ಚಿಕಿತ್ಸೆಗಾಗಿ 25 ಸಾವಿರ ರೂಪಾಯಿಗಳ ಆರೋಗ್ಯ ವಿಮೆ ನೀಡಲಿದೆ.

Most Read Articles

Kannada
English summary
Sonalika Tractors extends warranty and free service till 30th June. Read in Kannada.
Story first published: Sunday, May 30, 2021, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X