ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಎನ್‌ಹೆಚ್‌ಎಐ ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ದೇಶಾದ್ಯಂತವಿರುವ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗಳಲ್ಲಿ ಪ್ರಯಾಣಿಸುವಾಗ ವಿಶೇಷ ಚೇತನರು ಯಾವುದೇ ಶುಲ್ಕ ಪಾವತಿಸುವಂತಿಲ್ಲ.

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಈ ಪ್ರಯೋಜನವನ್ನು ಪಡೆದುಕೊಳ್ಳ ಬಯಸುವ ವಿಶೇಷ ಚೇತನರು ಶೂನ್ಯ ವಹಿವಾಟು (ಜೀರೋ ಟ್ರಾನ್ಸಾಕ್ಷನ್) ಫಾಸ್ಟ್‌ಟ್ಯಾಗ್'ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪಡೆಯಬೇಕಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ದೇಶದಲ್ಲಿರುವ ಎಲ್ಲಾ ವಿಶೇಷ ಚೇತನರ ವಾಹನಗಳಿಗೆ ಟೋಲ್‌ಗೇಟ್‌ಗಳಲ್ಲಿ ಟೋಲ್ ಪಾವತಿಸುವುದರಿಂದ ವಿನಾಯಿತಿ ನೀಡಲು ಬಯಸಿದೆ.

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಭಾರತದಲ್ಲಿ ಇದುವರೆಗೂ ವಿಶೇಷ ಚೇತನರು ಬಳಸುತ್ತಿದ್ದ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳಿಗೆ ಮಾತ್ರ ಟೋಲ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತಿತ್ತು. ವಿಶೇಷ ಚೇತನರಿಗಾಗಿಯೇ ಮಾಡಿಫೈಗೊಂಡ ವಾಹನಗಳು ಟೋಲ್ ಶುಲ್ಕ ಪಾವತಿಸುವಂತಿರಲಿಲ್ಲ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಈ ರೀತಿಯ ವಾಹನಗಳನ್ನು ಕೇಂದ್ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಅಮಾನ್ಯ ವಾಹನಗಳೆಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ವಿಶೇಷ ಚೇತನರು ಬಳಸುವ ಎಲ್ಲಾ ವಾಹನಗಳಿಗೂ ಟೋಲ್ ಶುಲ್ಕದಿಂದ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

2011ರ ಜನಗಣತಿಯ ಪ್ರಕಾರ ಭಾರತದಲ್ಲಿ 2.7 ಕೋಟಿ ವಿಶೇಷ ಚೇತನರಿದ್ದರು. ಆದರೆ ಬೆರಳೆಣಿಕೆಯಷ್ಟು ವಿಶೇಷ ಚೇತನರು ಮಾತ್ರ ವಾಹನಗಳನ್ನು ಚಾಲನೆ ಮಾಡುತ್ತಾರೆ. ಈ ಸುದ್ದಿಯಿಂದ ಅವರು ಖುಷಿಪಡುವುದರಲ್ಲಿ ಸಂಶಯವಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಆದರೆ ಶೂನ್ಯ ವಹಿವಾಟು ಫಾಸ್ಟ್‌ಟ್ಯಾಗ್ ಬಗ್ಗೆ ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ಪಡೆಯುವ ವಾಹನಗಳಲ್ಲಿ ಬಳಸಲು ಸರ್ಕಾರವು ಜೀರೋ ಟ್ರಾನ್ಸಾಕ್ಷನ್ ಫಾಸ್ಟ್‌ಟ್ಯಾಗ್'ಗಳನ್ನು ಬಿಡುಗಡೆಗೊಳಿಸಿದೆ.

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಈ ಫಾಸ್ಟ್‌ಟ್ಯಾಗ್'ಗಳನ್ನು ಸಂಸತ್ ಸದಸ್ಯರು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ವಾಹನಗಳಲ್ಲಿ ಬಳಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಅಗತ್ಯ ಸೇವೆಗಳಲ್ಲಿ ತೊಡಗಿರುವ ವಾಹನಗಳಲ್ಲಿಯೂ ಜೀರೋ ಟ್ರಾನ್ಸಾಕ್ಷನ್ ಫಾಸ್ಟ್‌ಟ್ಯಾಗ್'ಗಳನ್ನು ಬಳಸಲಾಗುತ್ತದೆ. ಟೋಲ್ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ಪಡೆಯದ ಜನರು ಈ ವಿನಾಯಿತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಜೀರೋ ಟ್ರಾನ್ಸಾಕ್ಷನ್ ಫಾಸ್ಟ್‌ಟ್ಯಾಗ್'ಗಳು ತಡೆಯುತ್ತವೆ.

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

2021ರ ಜನವರಿ 1ರಿಂದ ಜಾರಿಗೆ ಬರುವಂತೆ ಎಲ್ಲಾ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್'ಗಳನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇನ್ನೂ ಹಲವಾರು ಜನರು ತಮ್ಮ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್'ಗಳನ್ನು ಅಳವಡಿಸಿಕೊಂಡಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಶೇಷ ಚೇತನರಿಗೆ ಸಿಹಿ ಸುದ್ದಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಈ ಕಾರಣಕ್ಕೆ ಜನವರಿ 1ಕ್ಕೆ ನೀಡಲಾಗಿದ್ದ ಗಡುವನ್ನು ಈಗ ಫೆಬ್ರವರಿ 15ರವರೆಗೆ ಮುಂದೂಡಲಾಗಿದೆ. ಅದರ ನಂತರ ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್'ಗಳನ್ನು ಹೊಂದುವುದು ಕಡ್ಡಾಯವಾಗಲಿದೆ.

Most Read Articles

Kannada
English summary
Specially abled persons exempted from toll fees. Read in Kannada.
Story first published: Friday, January 8, 2021, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X