2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲಿ ದೆಹಲಿ ಸರ್ಕಾರವು ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ತದನಂತರ ಗುಜರಾತ್, ಮಹಾರಾಷ್ಟ್ರ, ಅಸ್ಸಾಂ ಮತ್ತು ಉತ್ತಾರಾಖಂಡ್ ಸರ್ಕಾರಗಳು ಸಹ ರಾಜ್ಯ ಮಟ್ಟದಲ್ಲಿ ಹೊಸ ಇವಿ ನೀತಿ ಅಳವಡಿಸಿಕೊಂಡಿವೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಕರ್ನಾಟಕದಲ್ಲಿ ಸದ್ಯ ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಹೊರತುಪಡಿಸಿ ರಾಜ್ಯ ಸರ್ಕಾರದಿಂದ ಯಾವುದೇ ಸಬ್ಸಡಿ ನೀಡುತ್ತಿಲ್ಲವಾದರೂ ಗ್ರಾಹಕರು ಇವಿ ವಾಹನಗಳತ್ತ ಮುಖ ಮಾಡುತ್ತಿದ್ದು, ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ಮೆಂಟ್ ಅಂಡ್ ವಾಟರ್(ಸಿಇಇಡಬ್ಲ್ಯು) ಆಯೋಗವು ಬಿಡುಗಡೆ ಮಾಡುವ ಇವಿ ವಾಹನಗಳ ಮಾರಾಟ ಪಟ್ಟಿಯಲ್ಲಿ ಕರ್ನಾಟಕದಲ್ಲೂ ಇವಿ ವಾಹನಗಳಿಗೆ ಉತ್ತಮ ಬೇಡಿಕೆಯಿರುವ ಸ್ವಷ್ಟವಾಗಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಸಿಇಇಡಬ್ಲ್ಯು ಆಯೋಗವು ಬಿಡುಗಡೆ ಮಾಡುವ 2021ರ ಹಣಕಾಸು ವರ್ಷದಲ್ಲಿ ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕೆಲವು ರಾಜ್ಯಗಳಿಗೆ ಇವಿ ವಾಹನಗಳು ಉತ್ತಮ ಬೆಳವಣಿಗೆ ಹೊಂದುತ್ತಿದ್ದು, ದೇಶವ್ಯಾಪಿ ಇವಿ ವಾಹನಗಳನ್ನು ಜನಪ್ರಿಯತೆಗೊಳಿಸಲು ಸಾಕಷ್ಟು ಪ್ರಮಾಣದ ಸಂಪನ್ಮೂಲ ಸೌಲಭ್ಯವು ಅವಶ್ಯವಾಗಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

2021ರ ಹಣಕಾಸು ಅವಧಿಯ ಇವಿ ವಾಹನ ಮಾರಾಟದಲ್ಲಿ ಉತ್ತರಪ್ರದೇಶವು 31,584 ಇವಿ ಮಾರಾಟದೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ತದನಂತರ ಬಿಹಾರವು 13,290 ಇವಿ ಮಾರಾಟದೊಂದಿಗೆ ಎರಡನೇ ಸ್ಥಾನ ಮತ್ತು 12,863 ಇವಿ ವಾಹನಗಳ ಮಾರಾಟದೊಂದಿಗೆ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ತದನಂತರ ತಮಿಳುನಾಡು, ದೆಹಲಿ, ಮಹಾರಾಷ್ಟ್ರ, ಅಸ್ಸಾಂ, ಪಶ್ಚಿಮ ಬಂಗಾಳ, ರಾಜಸ್ತಾನ ಮತ್ತು ಹರಿಯಾಣ ರಾಜ್ಯಗಳಲ್ಲಿ ಇವಿ ವಾಹನ ಮಾರಾಟವು ಬೆಳವಣಿಗೆ ಕಾರಣವಾಗುತ್ತಿದ್ದು, ದೆಹಲಿಯಲ್ಲಿ ಇತರೆ ರಾಜ್ಯಗಳಿಂತಲೂ ಹೆಚ್ಚಿನ ಮಟ್ಟದ ಸಬ್ಸಡಿ ನೀಡುತ್ತಿದ್ದರೂ ಕೂಡಾ ನಿಗದಿತ ಮಟ್ಟದ ಇವಿ ವಾಹನಗಳ ನೋಂದಣಿಯಲ್ಲಿ ಬೆಳವಣೆಗೆ ಕ್ಷೀಣವಾಗಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಆದರೆ ದಹೆಲಿ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯು ಬೆಳರಣಿಕೆಯಿಷ್ಟಿದ್ದರೂ ಇಂಧನ ಬೆಲೆ ಪರಿಣಾಮ ಹೊಸ ವಾಹನ ಖರೀದಿದಾರರು ಇವಿ ವಾಹನಗಳತ್ತ ಮುಖ ಮಾಡುತ್ತಿದ್ದು, ದೆಹಲಿ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಇವಿ ಚಾರ್ಜಿಂಗ್ ನಿಲ್ದಾಣ ಹೆಚ್ಚಿಸಲು ಕೇಂದ್ರ ಸರ್ಕಾರವು ಹೊಸ ಯೋಜನೆಯೊಂದಕ್ಕೆ ಈಗಾಗಲೇ ಚಾಲನೆ ನೀಡಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಇನ್ನು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಯೋಜನೆ ಜಾರಿಗೆ ತರಲಾಗಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (ಸಿಇಎಸ್ಎಲ್) ಸಂಸ್ಥೆಯು ಕೂಡಾ ದೇಶಾದ್ಯಂತ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುತ್ತಿದ್ದು, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೆಷನ್ ಲಿಮಿಟೆಡ್(ಹೆಚ್‌ಪಿಸಿಎಲ್)ನೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಹೊಸ ಒಪ್ಪಂದದ ಪ್ರಕಾರ ಸಿಇಎಸ್ಎಲ್ ಸಂಸ್ಥೆಯು ಹೆಚ್‌ಪಿ ಪೆಟ್ರೋಲ್ ಬಂಕ್‌ಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಒಪ್ಪಿಗೆ ಸೂಚಿಸಿದ್ದು, ಮುಂದಿನ 10 ವರ್ಷಗಳ ಹೊಸ ಒಪ್ಪಂದ ಚಾಲ್ತಿಯಲ್ಲಿರಲಿದೆ.

2021ರಲ್ಲಿ ಅತಿ ಹೆಚ್ಚು ಇವಿ ವಾಹನ ಮಾರಾಟ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಸಿಇಎಸ್ಎಲ್ ಸಂಸ್ಥೆಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ ಡಿಸಿ ಫಾಸ್ಟ್ ಚಾರ್ಜಿಂಗ್ ಮತ್ತು ಎಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಮುಂದಿನ 2 ವರ್ಷದಲ್ಲಿ 2 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

Article Published On: Thursday, September 16, 2021, 8:45 [IST]
English summary
State Wise EV Sales FY-2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+