ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಭಾರತೀಯ ಕಾರು ಗ್ರಾಹಕರು ಸಣ್ಣ ಎಸ್‌ಯುವಿಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಹಲವು ಕಂಪನಿಗಳ ಸಣ್ಣ ಎಸ್‌ಯುವಿಗಳು ಹ್ಯಾಚ್‌ಬ್ಯಾಕ್ ಕಾರುಗಳ ಬೆಲೆಯಲ್ಲಿ ಮಾರಾಟವಾಗುತ್ತಿವೆ. 4 ಮೀಟರ್‌ಗಳಿಗಿಂತ ಚಿಕ್ಕದಾದ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳು ಹೆಚ್ಚು ಮಾರಾಟವಾಗುತ್ತಿವೆ. ಹ್ಯಾಚ್‌ಬ್ಯಾಕ್ ಕಾರುಗಳ ಬೆಲೆಯಲ್ಲಿಯೇ ಎಸ್‌ಯುವಿಯಲ್ಲಿರುವಂತಹ ಫೀಚರ್ ಹಾಗೂ ಸೌಕರ್ಯಗಳು ಲಭ್ಯವಿರುವುದರಿಂದ ಗ್ರಾಹಕರು ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳತ್ತ ಆಕರ್ಷಿತರಾಗುತ್ತಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಕಾರು ಕಂಪನಿಗಳು ತಮ್ಮ ವಾಹನಗಳನ್ನು ಸುಧಾರಿಸಲು ಹಾಗೂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ತಮ್ಮ ಕಾರುಗಳಲ್ಲಿ ಹೊಸ ಫೀಚರ್ ಗಳನ್ನು ನೀಡುತ್ತಲೇ ಇರುತ್ತವೆ. Maruti Suzuki, Hyundai, Mahindra and Mahindra ಹಾಗೂ Tata Motors ಕಂಪನಿಯ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳು ಭಾರತದಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಈ ಕಂಪನಿಗಳು ಮುಂಬರುವ ದಿನಗಳಲ್ಲಿ ಈಗ ಮಾರುಕಟ್ಟೆಯಲ್ಲಿರುವ ತಮ್ಮ ಎಸ್‌ಯುವಿಗಳನ್ನು ನವೀಕರಿಸಲಿವೆ. ನವೀಕರಣಗೊಂಡ ನಂತರ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

1. Maruti Suzuki Vitara Brezza

Maruti Suzuki Vitara Brezza ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿದೆ. ಮಾಹಿತಿಗಳ ಪ್ರಕಾರ Brezza ಎಸ್‌ಯುವಿಯನ್ನು 2022 ರ ಆರಂಭದಲ್ಲಿ ಹೊಸ ರೂಪದಲ್ಲಿ ಹಾಗೂ ಹೊಸ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಲಾಗುವುದು. Maruti Suzuki ಕಂಪನಿಯು 48 ವೋ ಎಸ್‌ಹೆಚ್‌ವಿ‌ಎಸ್ ಹೈಬ್ರಿಡ್ ವ್ಯವಸ್ಥೆಯನ್ನು 1.5 ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ Brezza ಎಸ್‌ಯುವಿಯ ಹೊಸ ಮಾದರಿಯಲ್ಲಿ ನೀಡುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಇದರ ಹೊರತಾಗಿ, ಅಸ್ತಿತ್ವದಲ್ಲಿರುವ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಅಪ್‌ಗ್ರೇಡ್ ಮಾಡಬಹುದು. ಕಂಪನಿಯು ಹೊಸ Brezza ಎಸ್‌ಯುವಿಯನ್ನು ಹಾರ್ಟೆಕ್ಟ್ ಪ್ಲಾಟ್‌ಫಾರಂನಲ್ಲಿ ಉತ್ಪಾದಿಸಲಿದೆ. ಇದರ ಜೊತೆಗೆ ಹೊಸ Brezza ಎಸ್‌ಯುವಿಯು ಕನೆಕ್ಟೆಡ್ ಕಾರ್ ಟೆಕ್ನಾಲಜಿ ಹಾಗೂ ಫ್ಯಾಕ್ಟರಿ ಫಿಟ್ಟೆಡ್ ಸನ್‌ರೂಫ್ ಪಡೆಯಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

2. Tata Nexon

Tata Motors ಕಂಪನಿಯು ತನ್ನ ಜನಪ್ರಿಯ ಮಾದರಿಗಳಾದ Tigao, Tigor, Altroz ಹಾಗೂ Nexon ಕಾರುಗಳನ್ನು ನವೀಕರಿಸಲು ಸಜ್ಜಾಗಿದೆ. ಹೊಸ ತಲೆಮಾರಿನ Tata Nexon 2023 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯು ಉತ್ತಮ ವಿನ್ಯಾಸ, ಹೆಚ್ಚು ಫೀಚರ್, ಹೆಚ್ಚು ಸಂಸ್ಕರಿಸಿದ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಮಾಹಿತಿಗಳ ಪ್ರಕಾರ ಹೊಸ Nexon ಎಸ್‌ಯುವಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆಯಲಿದೆ. ಹೊಸ ಮಾದರಿಯು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

3. Mahindra XUV 300

Mahindra and Mahindra ಕಂಪನಿಯು ಮುಂದಿನ ಐದು ವರ್ಷಗಳಲ್ಲಿ 9 ಹೊಸ ಎಸ್‌ಯುವಿಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಹೊಸ ತಲೆಮಾರಿನ XUV 300 ಸಹ ಸೇರಿದೆ. ಹೊಸ XUV 300 ಎಸ್‌ಯುವಿಯು 2024 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೊಸ XUV 300 ಎಸ್‌ಯುವಿಯು ನವೀಕರಿಸಿದ ವಿನ್ಯಾಸ ಹಾಗೂ ಹೊಸ ಇಂಟಿರಿಯರ್ ಹೊಂದಿರಲಿದೆ. ಹೊಸ XUV 300 ಎಸ್‌ಯುವಿಯನ್ನು ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ಮಾಹಿತಿ ನೀಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

4. Hyundai Venue

ಹೊಸ Hyundai Venue ಎಸ್‌ಯುವಿಯನ್ನು 2022 ರಲ್ಲಿ ಹೊಸ ವಿನ್ಯಾಸದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಕಂಪನಿಯು ಹೊಸ ಮಾದರಿಯ ಪರೀಕ್ಷೆಯನ್ನು ಆರಂಭಿಸಿದೆ. ಹೊಸ ಎಸ್‌ಯುವಿಯು Hyundai Tucson ನಿಂದ ಪ್ರೇರಿತವಾದ ಹೊಸ ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್ ಹೊಂದಿರಲಿದೆ. ಹೊಸ ಮಾದರಿಯ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ನಲ್ಲಿ ಹಲವು ನವೀಕರಣಗಳನ್ನು ಮಾಡಲಾಗುವುದು.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಹೊಸ Hyundai Venue ಎಸ್‌ಯುವಿಯನ್ನು ಈಗ ಇರುವ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ಗಳ ಆಯ್ಕೆಯೊಂದಿಗೆ ನೀಡಲಾಗುವುದು. ಟ್ರಾನ್ಸ್ ಮಿಷನ್ ಆಯ್ಕೆಗಳಿಗಾಗಿ 5 ಸ್ಪೀಡ್ ಮ್ಯಾನ್ಯುವಲ್, 6 ಸ್ಪೀಡ್ ಆಟೋಮ್ಯಾಟಿಕ್ ಹಾಗೂ 7 ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಯುನಿಟ್ ನೀಡಲಾಗುವುದು.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಭಾರತದಲ್ಲಿ ಕಾಂಪ್ಯಾಕ್ಟ್ ಹಾಗೂ ಮಿಡ್ ಸೈಜ್ ಎಸ್‌ಯುವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತೀಯ ಗ್ರಾಹಕರು ಈಗ ಎಸ್‌ಯುವಿಗಳಿಗೆ ಹೆಚ್ಚು ಆದ್ಯತೆನೀಡುತ್ತಿರುವುದನ್ನು ಅರಿತಿರುವ ಕಾರು ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಎಸ್‌ಯುವಿಗಳನ್ನು ಬಿಡುಗಡೆಗೊಳಿಸುತ್ತಿವೆ. ಪ್ರತಿ ತಿಂಗಳು ಮಾರಾಟವಾಗುವ ಹೊಸ ಎಸ್‌ಯುವಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. 20201ರ ಸೆಪ್ಟೆಂಬರ್ ತಿಂಗಳ ಕಾರುಗಳ ಮಾರಾಟ ಅಂಕಿ ಅಂಶಗಳಿಂದ ಇದು ಸಾಬೀತಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾಗಲಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ 38,199 ಯುನಿಟ್ ಮಧ್ಯಮ ಗಾತ್ರದ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದೆ. ಈ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಸುಮಾರು 16% ನಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 32,930 ಯುನಿಟ್ ಮಧ್ಯಮ ಗಾತ್ರದ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿತ್ತು.

Most Read Articles

Kannada
English summary
Sub compact suvs which will get update soon details
Story first published: Friday, October 29, 2021, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X