ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಎಸ್‌ಯುವಿಗಳ ಮಾರಾಟ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ. ಹಲವು ಕಾರು ತಯಾರಕ ಕಂಪನಿಗಳು ತಮ್ಮ ಎಸ್‌ಯುವಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿವೆ. ಆದರೆ ಕೆಲವು ಕಂಪನಿಗಳ ಎಸ್‌ಯುವಿಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾದ ಕಾರಣ ಭಾರೀ ಹಿನ್ನಡೆ ಅನುಭವಿಸಿವೆ. ಈ ಲೇಖನದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳು ಯಾವುವು ಎಂಬುದನ್ನು ನೋಡೋಣ.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

Mahindra Novosport

ಭಾರತೀಯ ಮೂಲದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ Mahindra and Mahindra ಬಿಡುಗಡೆ ಮಾಡಿದ ಮೊದಲ ಎಸ್‌ಯುವಿ Novosport. ಸಬ್ 4 ಮೀಟರ್ ಎಸ್‌ಯುವಿ ಸೆಗ್ ಮೆಂಟಿಗೆ ಸೇರಿದ ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 8 ಲಕ್ಷಗಳಿಂದ ರೂ. 12 ಲಕ್ಷಗಳಾಗಿದೆ. ಈ ಎಸ್‌ಯುವಿಯು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ವಿಫಲವಾಯಿತು.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

Mahindra ಕಂಪನಿಯು ಈ ಎಸ್‌ಯುವಿಯಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಿದೆ. ಈ ಎಸ್‌ಯುವಿಯನ್ನು ಮ್ಯಾನುಯಲ್ ಹಾಗೂ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯುವಿಯಲ್ಲಿರುವ ಡೀಸೆಲ್ ಎಂಜಿನ್‌ ಗರಿಷ್ಠ 100 ಬಿಹೆಚ್‌ಪಿ ಪವರ್ ಹಾಗೂ 240 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

Renault Capture

Capture ಸ್ಟೈಲಿಶ್ ಹಾಗೂ ಆಧುನಿಕವಾಗಿ Renault ಕಂಪನಿಯ ಎಸ್‌ಯುವಿಯಾಗಿದೆ. Capture ಎಸ್‌ಯುವಿಯು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದ ಹಿನ್ನೆಲೆಯಲ್ಲಿ Renault ಕಂಪನಿಯು Capture ಎಸ್‌ಯುವಿಯ ಮಾರಾಟವನ್ನು ಸ್ಥಗಿತಗೊಳಿಸಿತು.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

ಈ ಎಸ್‌ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್‌ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಪೆಟ್ರೋಲ್ ಎಂಜಿನ್ ಗರಿಷ್ಠ 104 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 108 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

Chevrolet Trailblazer

Trailblazer ದೇಶಿಯ ಮಾರುಕಟ್ಟೆಯಲ್ಲಿ Chevrolet ಕಂಪನಿಯು ಬಿಡುಗಡೆಗೊಳಿಸಿದ ಪೂರ್ಣ ಗಾತ್ರದ ಎಸ್‌ಯುವಿಯಾಗಿದೆ. ಈ ಎಸ್‌ಯುವಿಯನ್ನು 2.8 ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಮಾರಾಟ ಮಾಡಲಾಗುತ್ತಿತ್ತು.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

ಈ ಡೀಸೆಲ್ ಎಂಜಿನ್ 198 ಬಿ‌ಹೆಚ್‌ಪಿ ಪವರ್ ಹಾಗೂ 500 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು. Chevrolet ಕಂಪನಿಯ ಯಾವುದೇ ಕಾರುಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿಲ್ಲ ಎಂಬುದು ಗಮನಾರ್ಹ. Trailblazer ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿ ಕೇವಲ 2 ವರ್ಷಗಳ ಕಾಲ ಮಾರಾಟದಲ್ಲಿತ್ತು.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

Nissan Terrano

Nissan Terrano ಈಗ ಮಾರಾಟದಲ್ಲಿರುವ Renault Duster ಎಸ್‌ಯುವಿ ಮಾದರಿಯ ಸೋದರ ಆವೃತ್ತಿಯಾಗಿದೆ. ಈ ಕಾರಣಕ್ಕೆ Terrano ಕಾರುಗಳನ್ನು ನೋಡಿದ ತಕ್ಷಣ Duster ಕಾರುಗಳನ್ನು ನೋಡಿದ ಭಾವನೆ ಮೂಡುತ್ತದೆ. ಜಪಾನ್ ಮೂಲದ Nissan ಕಂಪನಿಯ ಈ ಎಸ್‌ಯುವಿಯು Renault Duster ಎಸ್‌ಯುವಿಗಿಂತ ನಗರ ಬಳಕೆಗೆ ಹೆಚ್ಚು ಸೂಕ್ತವಾಗಿತ್ತು.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

ಹೊಸ ಮಾಲಿನ್ಯ ನಿಯಮಗಳ ಹಿನ್ನೆಯೆಯಲ್ಲಿ Nissan ಕಂಪನಿಯು 2020 ರಲ್ಲಿ Terrano ಎಸ್‌ಯುವಿಯ ಮಾರಾಟವನ್ನು ಸ್ಥಗಿತಗೊಳಿಸಿತು. ಈ ಎಸ್‌ಯುವಿಯು ಸಹ ದೇಶಿಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಲು ವಿಫಲವಾಗಿತ್ತು.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

Force One

ಜನಪ್ರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ Force One ಎಸ್‌ಯುವಿಯ ಪ್ರಚಾರ ರಾಯಭಾರಿಯಾಗಿದ್ದರು. ಮಹಾರಾಷ್ಟ್ರದಲ್ಲಿ ಉತ್ಪಾದನೆಯಾಗುತ್ತಿದ್ದ ಈ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಇದರಿಂದ ಕಂಪನಿಯು ಈ ಎಸ್‌ಯುವಿಯ ಮಾರಾಟವನ್ನು ಸ್ಥಗಿತಗೊಳಿಸಬೇಕಾದ ವಾತಾವರಣವನ್ನು ಸೃಷ್ಟಿಯಾಯಿತು.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

Force One ಎಸ್‌ಯುವಿಯಲ್ಲಿ 2.2 ಲೀಟರ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ ಗರಿಷ್ಠ 139 ಬಿ‌ಹೆಚ್‌ಪಿ ಪವರ್ ಹಾಗೂ 321 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. Force ಎಸ್‌ಯುವಿಯ ಪ್ಲಾಟ್ ಫಾರಂನಲ್ಲಿಯೇ ಹಳೆಯ ತಲೆಮಾರಿನ Ford Endeavour ಎಸ್‌ಯುವಿಯನ್ನು ಸಹ ನಿರ್ಮಿಸಲಾಗಿತ್ತು ಎಂಬುದು ಗಮನಾರ್ಹ.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

Mahindra Quanto

ಕುಟುಂಬದೊಂದಿಗೆ ಪ್ರಯಾಣಿಸಲು ಸೂಕ್ತವಾದ ಹಲವು ಎಸ್‌ಯುವಿಗಳನ್ನು Mahindra and Mahindra ಕಂಪನಿಯು ಬಿಡುಗಡೆಗೊಳಿಸಿದೆ. ಇವುಗಳಲ್ಲಿ QUanto ಎಸ್‌ಯುವಿ ಸಹ ಒಂದು. ಸ್ವಲ್ಪ ಚಿಕ್ಕ ಗಾತ್ರವನ್ನು ಹೊಂದಿದ್ದ ಈ ಎಸ್‌ಯುವಿಯು ಐದು ಸೀಟುಗಳನ್ನು ಹೊಂದಿತ್ತು.

ಭಾರತೀಯ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಎಸ್‌ಯುವಿಗಳಿವು

ಆದರೆ Mahindra ಕಂಪನಿಯ ಈ ಎಸ್‌ಯುವಿಯು ಭಾರತೀಯ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿಲ್ಲ ಎಂಬುದು ನಿಜ. ಈ ಎಸ್‌ಯುವಿಯಲ್ಲಿ ಅಳವಡಿಸಲಾಗಿದ್ದ 1.5 ಲೀಟರ್ ಡೀಸೆಲ್ ಎಂಜಿನ್ ಗರಿಷ್ಠ 100 ಬಿ‌ಹೆಚ್‌ಪಿ ಪವರ್ ಹಾಗೂ 240 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು.

ಕೇವಲಎಸ್‌ಯುವಿಗಳು ಮಾತ್ರವಲ್ಲದೇ ಹಲವು ಕ್ರಾಸ್ ಓವರ್ ಕಾರುಗಳು ಸಹ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವಿಫಲವಾಗಿ ಸ್ಥಗಿತಗೊಂಡಿವೆ. ಮೂರು ನಾಲ್ಕು ದಿನಗಳ ಹಿಂದೆಯಷ್ಟೇ ಅಮೆರಿಕಾ ಮೂಲದ ಖ್ಯಾತ ಕಾರು ತಯಾರಕ ಕಂಪನಿಯಾದ Ford ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. Ford ಕಂಪನಿಯು ಈಗ ಇರುವ ತನ್ನ ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರೆಸುವುದಾಗಿ ತಿಳಿಸಿದೆ.

Most Read Articles

Kannada
English summary
Suvs which failed to attract indian customers details
Story first published: Monday, September 13, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X