ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ಜಪಾನ್‌ನ ನಾಲ್ಕನೇ ಅತಿದೊಡ್ಡ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ನ ಅಧ್ಯಕ್ಷರಾದ 91 ವರ್ಷದ ಒಸಾಮು ಸುಜುಕಿ ಅವರು ನಿವೃತ್ತಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ, ಈ ವರ್ಷದ ಜೂನ್ ತಿಂಗಳಿನಲ್ಲಿ ತಮ್ಮ ಹುದ್ದೆಯನ್ನು ತೊರೆಯಲಿದ್ದಾರೆ.

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

91 ವರ್ಷದ ಒಸಾಮು ಸುಜುಕಿ 22 ವರ್ಷಗಳ ಕಾಲ ಸುಜುಕಿ ಮೋಟಾರ್‌ನ ಸಿಇಒ ಆಗಿದ್ದರೆ, ನಂತರ 20 ವರ್ಷಗಳ ಕಾಲ ಕಂಪನಿಯ ಅಧ್ಯಕ್ಷರಾಗಿದ್ದರು. ನಿವೃತ್ತಿಯ ನಂತರ ಅವರನ್ನು ಕಂಪನಿಯ ಹಿರಿಯ ಸಲಹೆಗಾರರಾಗಿ ನೇಮಿಸಲಾಗುವುದು ಎಂದು ಹೇಳಲಾಗಿದೆ. ಒಸಾಮು ಸುಜುಕಿಯವರ ಮಗ ತೋಷಿಹಿರೊ ಸದ್ಯಕ್ಕೆ ಸುಜುಕಿ ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ವರದಿಗಳ ಪ್ರಕಾರ ಒಸಾಮು ಸುಜುಕಿಯವರ ಜಾಗದಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸಲಾಗುವುದು. ಅವರು ಹೆಚ್ಚುತ್ತಿರುವ ಕಂಪನಿಯ ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸಲಿದ್ದಾರೆ. ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಕಂಪನಿಯು ಟೆಸ್ಲಾ ಹಾಗೂ ಆಪಲ್ ನಂತಹ ಕಂಪನಿಗಳ ಜೊತೆಗೆ ಪೈಪೋಟಿ ನಡೆಸಲು ಸಜ್ಜಾಗುತ್ತಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ಮಾಧ್ಯಮಗಳೊಂದಿಗೆ ಮಾತನಾಡಿದ ತೋಷಿಹಿರೊ, ಸುಜುಕಿ ಕಂಪನಿಯು ಜಾಗತಿಕವಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಕಂಪನಿಯು ತನ್ನ ವಾಹನಗಳನ್ನು ನಿರಂತರವಾಗಿ ಸುಧಾರಿಸುತ್ತಿದೆ.

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಬೇಡಿಕೆ ಉಂಟಾಗಲಿದೆ. ಕಂಪನಿಯು ಈ ಓಟದಲ್ಲಿ ಹಿಂದೆ ಉಳಿಯಲು ಬಯಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಹೋಂಡಾ ಮೋಟಾರ್ ಕಂಪನಿಯು ಹೊಸ ಸಿಇಒ ನೇಮಕವನ್ನು ಪ್ರಕಟಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ಹೋಂಡಾ ಮೋಟಾರ್‌ನ ಹೊಸ ಸಿಇಒ ಸುಜುಕಿಯೊಂದಿಗಿನ ವ್ಯವಹಾರ ಒಪ್ಪಂದದಡಿಯಲ್ಲಿ ವಾಹನಗಳ ಅಭಿವೃದ್ಧಿಯನ್ನು ಘೋಷಿಸಿದ್ದಾರೆ.ಜಾಗತಿಕ ಕಾರು ಮಾರುಕಟ್ಟೆಯಲ್ಲಿ ಸುಜುಕಿ ಮೋಟಾರ್ ಕಂಪನಿಯ ಪಾಲು ಸಾಕಷ್ಟು ಕಡಿಮೆ.

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ಈ ಕಾರಣಕ್ಕೆ ಕಂಪನಿಯು ಎಲೆಕ್ಟ್ರಿಕ್ ಹಾಗೂ ಆಟೋಮ್ಯಾಟಿಕ್ ಕಾರುಗಳ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಹಣವನ್ನು ಭರಿಸುತ್ತಿದೆ. ಜಪಾನ್‌ನಲ್ಲಿ ಕಾರು ತಯಾರಕ ಕಂಪನಿಗಳಾದ ಸುಬಾರು ಹಾಗೂ ಮಜ್ದಾ ಎಲೆಕ್ಟ್ರಿಕ್ ಮೊಬಿಲಿಟಿ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಲು ಟೊಯೊಟಾ ಕಂಪನಿಯ ಜೊತೆಗೆ ಕೈ ಜೋಡಿಸಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ಈ ಸನ್ನಿವೇಶದಲ್ಲಿ ಸುಜುಕಿ ಕಂಪನಿಯು ಇತರ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಕಂಪನಿಯು ಮಾರುತಿ ಕಂಪನಿಯ ಜೊತೆಗೆ ಕೈಜೋಡಿಸಿ ಕಾರುಗಳನ್ನು ಉತ್ಪಾದಿಸುತ್ತದೆ.

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ಮಾರುತಿ ಸುಜುಕಿ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯು ದೇಶದಲ್ಲಿ ಪ್ರತಿವರ್ಷ 80 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತದೆ. ಮಾರುತಿ ಸುಜುಕಿ ದೇಶದ ಎಲ್ಲಾ ರೀತಿಯ ಗ್ರಾಹಕರಿಗೆ ಕಾರುಗಳನ್ನು ತಯಾರಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ಕಂಪನಿಯು ಹ್ಯಾಚ್‌ಬ್ಯಾಕ್, ಪ್ರೀಮಿಯಂ ಹ್ಯಾಚ್‌ಬ್ಯಾಕ್, ಕಾಂಪ್ಯಾಕ್ಟ್ ಎಸ್‌ಯುವಿ ಹಾಗೂ ಸೆಡಾನ್ ಕಾರುಗಳನ್ನು ಮಾರಾಟ ಮಾಡುತ್ತದೆ. ಮಾರುತಿ ಸುಜುಕಿ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಎನ್‌ಜಿ ಕಾರುಗಳನ್ನು ಉತ್ಪಾದಿಸುತ್ತದೆ.

ನಿವೃತ್ತಿ ಘೋಷಿಸಿದ ಸುಜುಕಿ ಮೋಟಾರ್ ಅಧ್ಯಕ್ಷ

ವರದಿಗಳ ಪ್ರಕಾರ, ಕಂಪನಿಯು 30%ನಷ್ಟು ಸಿಎನ್‌ಜಿ ಮಾದರಿಗಳನ್ನು ತಯಾರಿಸುತ್ತಿದೆ. ಕಂಪನಿಯು ಕಳೆದ ವರ್ಷ 1,06,000 ಯುನಿಟ್ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಕೊನೆಗೆ 1,55,000 ಯುನಿಟ್ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡುವ ನಿರೀಕ್ಷೆಗಳಿವೆ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Suzuki motors chairman announces retirement. Read in Kannada.
Story first published: Thursday, February 25, 2021, 20:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X