ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ಕೋವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ರೈತರಿಗೆ ನೆರವಾಗುವ ಸಲುವಾಗಿ ಟ್ರ್ಯಾಕ್ಟರ್ಸ್ ಅಂಡ್ ಫಾರ್ಮ್ ಎಕ್ವಿಪ್ಮೆಂಟ್ ಲಿಮಿಟೆಡ್ (ಟಾಫೆ) ಹೊಸ ಯೋಜನೆಯೊಂದನ್ನು ಆರಂಭಿಸಿದೆ.

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ಈ ಯೋಜನೆಯಡಿಯಲ್ಲಿ ಕಂಪನಿಯು ತಮಿಳುನಾಡಿನ ಸಣ್ಣ ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ. ವರದಿಗಳ ಪ್ರಕಾರ ಈ ಯೋಜನೆಯಿಂದ ತಮಿಳುನಾಡಿನಲ್ಲಿರುವ ಸುಮಾರು 50,000 ರೈತರಿಗೆ ಪ್ರಯೋಜನವಾಗಲಿದ್ದು, ಸುಮಾರು 1.2 ಲಕ್ಷ ಎಕರೆಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಲಿದೆ. ಈ ಯೋಜನೆಯು ಈ ವರ್ಷದ ಮೇ ತಿಂಗಳಿನಿಂದ ಈ ವರ್ಷದ ಜುಲೈ ತಿಂಗಳವರೆಗೆ ಲಭ್ಯವಿರಲಿದೆ.

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ಭಾರತದ ಪ್ರಮುಖ ಟ್ರ್ಯಾಕ್ಟರ್ ತಯಾರಕ ಕಂಪನಿಗಳಲ್ಲಿ ಒಂದಾದ ಟಾಫೆ ಎರಡು ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಗೆ ಸುಮಾರು 16,500 ಮಾಸ್ಸಿ ಫರ್ಗುಸನ್ ಹಾಗೂ 26,800 ಐಷರ್ ಟ್ರಾಕ್ಟರುಗಳನ್ನು ಬಾಡಿಗೆಗೆ ಒದಗಿಸಲಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ತಮಿಳುನಾಡು ಸರ್ಕಾರದ ಉಝಾವನ್ ಆ್ಯಪ್‌ನಲ್ಲಿರುವ ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ರೈತರು ಟ್ರ್ಯಾಕ್ಟರ್ ಅಥವಾ ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯಬಹುದು. ತಮಿಳುನಾಡು ರಾಜ್ಯ ಕೃಷಿ ಇಲಾಖೆ ಹಾಗೂ ಜಿಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ಈ ಬಗ್ಗೆ ಮಾತನಾಡಿದ ಟಾಫೆ ಕಂಪನಿಯ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಶ್ರೀನಿವಾಸನ್'ರವರು, ತಮಿಳುನಾಡು ಸರ್ಕಾರದ ಪ್ರೋತ್ಸಾಹ ಹಾಗೂ ಬೆಂಬಲದೊಂದಿಗೆ ರಾಜ್ಯದ ಸಣ್ಣ ರೈತರಿಗೆ ಉಚಿತ ಬಾಡಿಗೆ ಸೇವೆಗಳನ್ನು ಒದಗಿಸಲು ಕಂಪನಿಯು ಹರ್ಷ ವ್ಯಕ್ತಪಡಿಸುತ್ತದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ಈ ಮುಂಗಾರು ಋತುವಿನಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ಮಾಸ್ಸಿ ಫರ್ಗುಸನ್ ಹಾಗೂ ಐಷರ್ ಟ್ರ್ಯಾಕ್ಟರ್'ಗಳನ್ನು ಉಚಿತವಾಗಿ ಬಾಡಿಗೆಗೆ ಪಡೆದು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ಉಚಿತ ಟ್ರಾಕ್ಟರ್ ಬಾಡಿಗೆ ಯೋಜನೆಗೆ ಬೆಂಬಲ ನೀಡಿದ್ದಕ್ಕೆ ಕಂಪನಿಯು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ತಮಿಳುನಾಡು ಕೃಷಿ ಸಚಿವರಿಗೆ ಧನ್ಯವಾದ ಸಲ್ಲಿಸಿದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ಇತ್ತೀಚೆಗೆ ಟಾಫೆ ಕಂಪನಿಯು 500 ಆಕ್ಸಿಜನ್ ಕಾನ್ಸಂಟ್ರೆಟರ್'ಗಳನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದೆ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಟಾಫೆ ಕಂಪನಿಯು ಸರ್ಕಾರದ ಜೊತೆ ಕೈಜೋಡಿಸಿದೆ.

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ನೀಡಲಿದೆ ಈ ಕಂಪನಿ

ಕಂಪನಿಯು ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಪ್ರದೇಶಗಳ ಸಣ್ಣ ಆಸ್ಪತ್ರೆಗಳಿಗೆ ವೈದ್ಯಕೀಯ ಮೂಲ ಸೌಲಭ್ಯ ಕಲ್ಪಿಸುವ ಗುರಿಯನ್ನು ಹೊಂದಿದೆ. ಟಾಫೆ ಕಂಪನಿಯ ಹಿರಿಯ ಅಧಿಕಾರಿಗಳು ಆಕ್ಸಿಜನ್ ಸಿಲಿಂಡರ್‌ಗಳ ಖರೀದಿಗೆ ಎಂ.ಕೆ.ಸ್ಟಾಲಿನ್‌ರವರಿಗೆ ರೂ.1 ಕೋಟಿಗಳ ಚೆಕ್ ಹಸ್ತಾಂತರಿಸಿದರು.

Most Read Articles

Kannada
English summary
TAFE offers free tractor rental scheme for Tamilnadu farmers. Read in Kannada.
Story first published: Tuesday, May 25, 2021, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X