Just In
Don't Miss!
- News
ಜಗನ್ ರೆಡ್ಡಿ ಸಹೋದರಿ ಶರ್ಮಿಳಾರಿಂದ ತೆಲಂಗಾಣದಲ್ಲಿ ಜುಲೈ 8ರಂದು ನೂತನ ಪಕ್ಷ ಸ್ಥಾಪನೆ
- Sports
IPL 2021: CSK vs DC, ಟಾಸ್ ವರದಿ, ಪ್ಲೇಯಿಂಗ್ XI, ಅಪ್ಡೇಟ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 10ರಂದು ಬೆಲೆ ಎಷ್ಟಿದೆ?
- Lifestyle
ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೌಂಡರ್ಸ್ ಎಡಿಷನ್ ಕಾರುಗಳ ವಿತರಣೆಯನ್ನು ಆರಂಭಿಸಿದ ಟಾಟಾ ಮೋಟಾರ್ಸ್
75ನೇ ವಾರ್ಷಿಕೋತ್ಸವ ಹಿನ್ನೆಲೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಸಂಸ್ಥಾಪಕರ ನೆನಪಿಗಾಗಿ ಫೌಂಡರ್ಸ್ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರುಗಳನ್ನು ವಿತರಣೆಗೂ ಚಾಲನೆ ನೀಡಲಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ವರ್ಷ ಪೂರ್ತಿ ವಿವಿಧ ಕಾರು ಮಾದರಿಗಳಲ್ಲಿ ಹಲವು ಹೊಸ ಅಪ್ ಡೇಟ್'ಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದು, 75ನೇ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಫೌಂಡರ್ಸ್ ಎಡಿಷನ್ ಅಭಿವೃದ್ದಿಗೊಳಿಸಿದೆ. ಹೊಸ ಆವೃತ್ತಿಯ ಕಾರುಗಳು ಟಾಟಾ ಮೋಟಾರ್ಸ್ ಉದ್ಯೋಗಿಗಳಿಗೆ ಮಾತ್ರ ಲಭ್ಯವಿರಲಿದ್ದು, ಫೌಂಡರ್ಸ್ ಆವೃತ್ತಿಯು ಜೆಆರ್‌ಡಿ ಟಾಟಾರವರ ಸಹಿ ಹಾಗೂ ನೀಲಿ ಹಿನ್ನೆಲೆ ಹೊಂದಿರುವ ವಿಶೇಷ ಟಾಟಾ ಲೋಗೊವನ್ನು ಹೊಂದಿದೆ.

ಈ ಮಾದರಿಗಳು ಸಾಮಾನ್ಯ ಮಾದರಿ ಕಾರುಗಳು ಹೊಂದಿರುವ ಎಲ್ಲಾ ಫೀಚರ್ ಹಾಗೂ ಉಪಕರಣಗಳನ್ನು ಹೊಂದಿವೆ. ಆದರೆ ಈ ಮಾದರಿಗಳನ್ನು ವಿಭಿನ್ನವಾಗಿಡಲು ಜೆಆರ್‌ಡಿ ಟಾಟಾರವರ ಸಹಿ ಹಾಗೂ ವಿಶೇಷ ಲೋಗೊವನ್ನು ಮಾತ್ರ ಹೊಸದಾಗಿ ನೀಡಲಾಗಿದೆ.

ಜೆಆರ್‌ಡಿ ಟಾಟಾರವರನ್ನು ಭಾರತದ ವಾಹನ ಮಾರುಕಟ್ಟೆಯನ್ನು ಮುಂಚೂಣಿ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಜೆಆರ್‌ಡಿ ಟಾಟಾರವರು ವಿವಿಧ ಉದ್ಯೋಗ ವ್ಯವಹಾರಗಳೊಂದಿಗೆ ದೇಶಾದ್ಯಂತ ಜನಪ್ರಿಯತೆಯನ್ನು ಹೊಂದಿದ್ದಾರೆ.

ಈ ಹಿನ್ನಲೆಯಲ್ಲಿ ಜೆಆರ್‌ಡಿ ಅವರಿಗೆ ಗೌರವ ಸಲ್ಲಿಸುವ ಕಾರಣಕ್ಕೆ ಅವರ ಹೆಸರಿನಲ್ಲಿ ಫೌಂಡರ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರ ಜೊತೆಗೆ ಫೌಂಡರ್ಸ್ ಎಡಿಷನ್ ಪೋಸ್ಟ್‌ಕಾರ್ಡ್ ಅನ್ನು ಸಹ ಕಂಪನಿಯ ಪರವಾಗಿ ನೀಡಲಾಗುತ್ತಿದೆ. ಜೆಆರ್‌ಡಿ ಟಾಟಾರವರ ಸಹಿಯನ್ನು ಕ್ಯಾಬಿನ್‌ನ ಫ್ರಂಟ್ ಫೆಂಡರ್ ಕ್ರೀಸ್, ರೇರ್ ಪಿಲ್ಲರ್ ಹಾಗೂ ಡ್ಯಾಶ್‌ಬೋರ್ಡ್‌ನಲ್ಲಿರಿಸಲಾಗಿದೆ.

ಆದರೆ ಫೌಂಡರ್ಸ್ ಎಡಿಷನ್‌ಗಳನ್ನು ಕಂಪನಿಯು ಟಾಟಾ ಗ್ರೂಪ್ ಉದ್ಯೋಗಿಗಳಾಗಿ ಮಾತ್ರ ಖರೀದಿಗಾಗಿ ಅವಕಾಶ ನೀಡುತ್ತಿದ್ದು, ದೇಶಾದ್ಯಂತ ಪ್ರಮುಖ ಡೀಲರ್ಸ್‌ಗಳಲ್ಲಿ ಫೌಂಡರ್ಸ್ ಎಡಿಷನ್ ವಿತರಣೆ ಮಾಡಲಾಗುತ್ತಿದೆ.

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಾರು ಮಾದರಿಗಳಾದ ಟಿಗೋರ್, ಟಿಯಾಗೋ , ಆಲ್‌ಟ್ರೊಜ್, ನೆಕ್ಸಾನ್ ಮತ್ತು ಹ್ಯಾರಿಯರ್ ಕಾರುಗಳಲ್ಲಿ ಫೌಂಡರ್ಸ್ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಸೀಮಿತ ಅವಧಿಗಾಗಿ ಮಾತ್ರ ಈ ಕಾರುಗಳು ಲಭ್ಯವಿರಲಿವೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಗುಂಪಿನ ಒಂದು ಭಾಗವಾಗಿದ್ದು, ಆಟೋ ಕಂಪನಿಯನ್ನು 1945ರಲ್ಲಿ ಸ್ಥಾಪಿಸಲಾಯಿತು. ಟಾಟಾ ಸಮೂಹವನ್ನು ಜೆಮ್ ಷೆಡ್ ಜಿ ಟಾಟಾ ಸ್ಥಾಪಿಸಿದರು. ಟಾಟಾ ಎಂಜಿನಿಯರಿಂಗ್ ಹಾಗೂ ಲೋಕೋಮೋಟಿವ್ ಕಂಪನಿಯನ್ನು (ಈಗ ಟಾಟಾ ಮೋಟಾರ್ಸ್) ಟಾಟಾರವರ ನಾಯಕತ್ವದಲ್ಲಿ ಸ್ಥಾಪಿಸಲಾಯಿತು.

ಟಾಟಾ ಮೋಟಾರ್ಸ್ 1954ರಲ್ಲಿ ಜರ್ಮನಿ ಕಂಪನಿ ಡೈಮ್ಲರ್-ಬೆಂಝ್ ಜೊತೆ ಕೈಜೋಡಿಸಿ ಟ್ರಕ್ ಉತ್ಪಾದಿಸಿತು. ಕಂಪನಿಯು 1977ರಲ್ಲಿ ಕಮರ್ಷಿಯಲ್ ವಾಹನ ಉತ್ಪಾದನೆಯನ್ನು ಆರಂಭಿಸಿತು. ಈ ವಿಭಾಗವನ್ನು ವರ್ಷಗಳ ಕಾಲ ಆಳಿದ ನಂತರ ಕಂಪನಿಯು 1991ರಲ್ಲಿ ಪ್ರಯಾಣಿಕರ ವಾಹನ ವಿಭಾಗವನ್ನು ಪ್ರವೇಶಿಸಲು ನಿರ್ಧರಿಸಿತು. ಟಾಟಾ ತನ್ನ ಮೊದಲ ಕಾರ್ ಆಗಿ ಟಾಟಾ ಸಿಯೆರಾವನ್ನು 1991ರಲ್ಲಿ ಬಿಡುಗಡೆಗೊಳಿಸಿತು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಈ ಕಾರು ಭಾರತದಲ್ಲಿ ವಿನ್ಯಾಸಗೊಂಡ ಹಾಗೂ ಉತ್ಪಾದನೆಯಾದ ಮೊದಲ ಕಾರು. 1997ರಲ್ಲಿ ಕಂಪನಿಯು ರೂ.10,000 ಕೋಟಿಗಳ ಮಾರಾಟವನ್ನು ತಲುಪಿದ ಭಾರತದ ಮೊದಲ ಖಾಸಗಿ ಕಂಪನಿಯಾಯಿತು. ಇದಾದ ಬಳಿಕ ಒಂದು ವರ್ಷದ ನಂತರ ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಇಂಡಿಕಾ ಕಾರ್ ಅನ್ನು ಬಿಡುಗಡೆಗೊಳಿಸಿತು. ಈ ಕಾರ್ ಅನ್ನು ಭಾರತದ ಮೊದಲ ಪ್ರಯಾಣಿಕ ಕಾರು ಎಂದು ಕರೆಯಲಾಗುತ್ತದೆ.