ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಕಾರುಗಳ ಮಾರಾಟದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಟಾಟಾ ಹೊಸ ಕಾರುಗಳಲ್ಲಿ ಹ್ಯಾರಿಯರ್ ಮತ್ತು ಸಫಾರಿ ಪೆಟ್ರೋಲ್ ಮಾದರಿಯು ಸಹ ಪ್ರಮುಖವಾಗಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಸದ್ಯ ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳಿಂತ ಪೆಟ್ರೋಲ್ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಹ್ಯಾರಿಯರ್ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ ಮತ್ತು ಎಂಜಿ ಹೆಕ್ಟರ್ ಮತ್ತು ಸಫಾರಿ ಪ್ರತಿಸ್ಪರ್ಧಿ ಕಾರುಗಳಾದ ಎಕ್ಸ್‌ಯುವಿ700, ಹೆಕ್ಟರ್ ಪ್ಲಸ್ ಮಾರಾಟದಲ್ಲೂ ಪೆಟ್ರೋಲ್ ಕಾರುಗಳ ಮಾರಾಟವೇ ಅಗ್ರಸ್ಥಾನದಲ್ಲಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಹ್ಯಾರಿಯರ್ ಮತ್ತು ಸಫಾರಿ ಕಾರಿನಲ್ಲೂ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿರುವ ಟಾಟಾ ಸಂಸ್ಥೆಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಮಾಹಿತಿಗಳ ಪ್ರಕಾರ, ಹ್ಯಾರಿಯರ್ ಮತ್ತು ಸಫಾರಿ ಪೆಟ್ರೋಲ್ ಮಾದರಿಗಳು 1.5-ಲೀಟರ್ ಡೈರೆಕ್ಟ್-ಇಂಜೆಕ್ಷನ್ ಟರ್ಬೋ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಪರ್ಫಾಮೆನ್ಸ್‌(150ಬಿಎಚ್‌ಪಿ) ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಹೊಸ ಎಂಜಿನ್ ಆಯ್ಕೆ ಪಡೆದುಕೊಂಡಿರುವ ಹ್ಯಾರಿಯರ್ ಮತ್ತು ಸಫಾರಿ ಪೆಟ್ರೋಲ್ ಮಾದರಿಗಳನ್ನು ಸದ್ಯ ರೋಡ್ ಟೆಸ್ಟಿಂಗ್ ನಡೆಸುತ್ತಿರುವ ಟಾಟಾ ಕಂಪನಿಯು ಹೊಸ ಮಾದರಿಗಳನ್ನು 2022ರ ಮಾದರಿಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಮೈಲೇಜ್ ವಿಚಾರವಾಗಿ ಡೀಸೆಲ್ ಎಂಜಿನ್ ಮಾದರಿಗಳು ಇಷ್ಟು ದಿನ ಹೆಚ್ಚಿನ ಬೇಡಿಕೆ ಹೊಂದಿದ್ದರೂ ಡೀಸೆಲ್ ಮಾದರಿಗಿಂತಲೂ ಕಡಿಮೆ ಬೆಲೆ ಮತ್ತು ನಿರ್ವಹಣೆಯಲ್ಲೂ ಡೀಸೆಲ್ ಮಾದರಿಗಿಂತ ಕಡಿಮೆ ಖರ್ಚು ಹೊಂದಿರುವ ಪೆಟ್ರೋಲ್ ಮಾದರಿಗಳೇ ಇದೀಗ ವ್ಯಯಕ್ತಿಕ ಕಾರು ಬಳಕೆದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಟಾಟಾ ಕಂಪನಿಯು ಸದ್ಯ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಹೊಸ ಕಾರಗಳಲ್ಲಿರುವ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಮಾದರಿಯಲ್ಲಿ 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆ ಹೊಂದಿವೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಹೊಸ ಕಾರುಗಳು ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಡೀಸೆಲ್ ಕಾರುಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಿರುವುದು ಕೂಡಾ ಪೆಟ್ರೋಲ್ ಕಾರುಗಳ ಬಳಕೆಯು ಹೆಚ್ಚುತ್ತಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಇನ್ನು 2018ರ ಆಟೋ ಎಕ್ಸ್‌ಫೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹ್ಯಾರಿಯರ್ ಕಾರು ಮಾದರಿಯು 2019ರ ಜನವರಿಯಲ್ಲಿ ಅಧಿಕೃತ ಬಿಡುಗಡೆಗೊಂಡಿತ್ತು. ಹೊಸ ಕಾರು ಬಿಡುಗಡೆಯ ನಂತರ ಬೇಡಿಕೆಯಲ್ಲಿ ಏರಿಳಿತದೊಂದಿಗೆ ಇದುವರೆಗೆ 50 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟ ಗುರಿತಲುಪಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಬಿಎಸ್-4 ಮಾದರಿಯೊಂದಿಗೆ ಕೇವಲ 17 ಸಾವಿರ ಯುನಿಟ್ ಮಾರಾಟಗೊಂಡಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡ ನಂತರ ಸುಮಾರು 33 ಸಾವಿರ ಯುನಿಟ್ ಮಾರಾಟಗೊಂಡಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಹ್ಯಾರಿಯರ್ ಕಾರು ಮಾದರಿಗೆ ಮೊದಲ ಎರಡು ವರ್ಷದ ಬೇಡಿಕೆ ಪ್ರಮಾಣವು ಕಳೆದ ಹತ್ತು ತಿಂಗಳಿನಲ್ಲಿ ಬೇಡಿಕೆ ಹರಿದುಬಂದಿದ್ದು, 2020ರ ಕೊನೆಯ ತನಕವು 25 ಸಾವಿರ ಯುನಿಟ್ ಕೂಡಾ ಮಾರಾಟಗೊಂಡಿರಲಿಲ್ಲ. ಈ ವರ್ಷದ ಆರಂಭದಿಂದ ಟಾಟಾ ಕಾರುಗಳಿಗೆ ಬೇಡಿಕೆಯು ಹೊಸ ಟ್ರೆಂಡ್ ಸೃಷ್ಠಿಸಿದ್ದು, ಹ್ಯಾರಿಯರ್ ಸೇರಿದಂತೆ ಕಂಪನಿಯ ಪ್ರಮುಖ ಕಾರುಗಳ ಮಾರಾಟವು ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿವೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಕಳೆದ ಜನವರಿಯಿಂದ ಇದುವರೆಗೆ ಹ್ಯಾರಿಯರ್ ಮಾದರಿಯು ಸುಮಾರು 25 ಸಾವಿರ ಯುನಿಟ್‌ ಮಾರಾಟಗೊಂಡಿದ್ದು, ಹೊಸ ಹೊಸ ಬದಲಾವಣೆಗಳೊಂದಿಗೆ ಹ್ಯಾರಿಯರ್ ಕಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಳ್ಳುತ್ತಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಹ್ಯಾರಿಯರ್ ಎಸ್‌ಯುವಿ ಮಾದರಿಯು ಸದ್ಯ ಸ್ಟ್ಯಾಂಡರ್ಡ್, ಡಾರ್ಕ್, ಕ್ಯಾಮೊ ಎಡಿಷನ್‌ ಒಳಗೊಂಡಂತೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.19 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಬರೋಬ್ಬರಿ 26 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಇನ್ನು ಸಫಾರಿ ಕಾರು ಮಾದರಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ.

ಪೆಟ್ರೋಲ್ ಮಾದರಿಗಳಲ್ಲೂ ಬಿಡುಗಡೆಯಾಗಲಿವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ

ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.

Article Published On: Tuesday, December 21, 2021, 11:04 [IST]
English summary
Tata harrier and safari to get petrol version soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+