ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಇತ್ತೀಚೆಗೆ ಹೆಚ್ಚಿನ ಬೇಡಿಕೆಯೊಂದಿಗೆ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರಲ್ಲಿ ಟಾಟಾದ ಹ್ಯಾರಿಯರ್ ಮಿಡ್ ಎಸ್‍ಯುವಿಯು ಮತ್ತು ಸಫಾರಿ ಎಸ್‍ಯುವಿಯು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಕಳೆದ ತಿಂಗಳು ಟಾಟಾ ಸಫಾರಿ ಎಸ್‍ಯುವಿಯ 1,514 ಯುನಿಟ್‌ಗಳು ಮಾರಾಟವಾಗಿದ್ದರೆ, ಟಾಟಾ ಹ್ಯಾರಿಯರ್ ಎಸ್‍ಯುವಿಯ 1,712 ಯುನಿಟ್‌ಗಳು ಮಾರಾಟವಾಗಿವೆ. ಹೀಗಾಗಿ ಎರಡು ಎಸ್‍ಯುವಿಗಳ ಒಟ್ಟು ಮಾರಾಟ ಅಂಕಿ 3,226 ಯುನಿಟ್ ಆಗಿದೆ. ಇನ್ನು ಕಳೆದ ತಿಂಗಳು ಎಂಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‍ಯುವಿಗಳ ಒಟ್ಟು 2,147 ಯುನಿಟ್‌ಗಳು ಮಾರಾಟವಾಗಿವೆ. ಹೀಗಾಗಿ ಟಾಟಾದ ಎಸ್‍ಯುವಿಗಳು ಎಂಜಿ ಹೆಕ್ಟರ್ ಮಾದರಿಗಳಿಗಿಂತ ಮಾರಾಟದಲ್ಲಿ ಶೇ.52.26 ರಷ್ಟು ಹೆಚ್ಚಾಗಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎರಡನ್ನೂ ಬ್ರಾಂಡ್‌ನ ಒಮೆಗಾ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಇದನ್ನು ಲ್ಯಾಂಡ್ ರೋವರ್ ಡಿ8 ಪ್ಲಾಟ್‌ಫಾರ್ಮ್‌ನಿಂದ ಪಡೆಯಲಾಗಿದೆ. ಸಫಾರಿ ಎಸ್‍ಯುವಿಯು ಹ್ಯಾರಿಯರ್ ಮಾದರಿಯ ಮೂರು-ಸಾಲಿನ ಆವೃತ್ತಿಯಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಈ ಎರಡು ಎಸ್‍ಯುವಿಗಳು ವಿನ್ಯಾಸ ಮತ್ತು ಫೀಚರ್ಸ್ ಗಳನ್ನು ಹಂಚಿಕೊಂಡಿದೆ. ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‍ಯುವಿಗಳಲ್ಲಿ 2.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈ ನಾಲ್ಕು ಸಿಲಿಂಡರ್, ಎಂಜಿನ್‌ ಅನ್ನು ಅಳವಡಿಸಲಾಗಿದೆ

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಈ ಎಂಜಿನ್ 168 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎಸ್‍ಯುವಿಗಳಲ್ಲಿ ಟೈರ್ ಪ್ರೆಷರ್ ಮಾನಿಟರ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, ಅಲಾಯ್ ವೀಲ್ಹ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್ಸ್, ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಮೋಡ್ ಅನ್ನು ಹೊಂದಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಇದರೊಂದಿಗೆ ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಮಿಟಿಗೇಷನ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೌಲಭ್ಯವಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಇನ್ನು ಎಂಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‍ಯುವಿಗಳಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಮೊದಲನೆಯದು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ, ಈ ಎಂಜಿನ್ 143 ಬಿಹೆಚ್‍ಪಿ ಪವರ್ ಮತ್ತು 250 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಡಿಸಿಟಿ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಎರಡನೇ ಎಂಜಿನ್ ಆಯ್ಕೆಯು 2.0-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಆಗಿದ್ದು, ಇದು 170 ಬಿಹೆಚ್‍ಪಿ ಪವರ್ ಮತ್ತು 350 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಎಂಜಿ ಹೆಕ್ಟರ್ ಟ್ವಿನ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಟಾಟಾ ಹ್ಯಾರಿಯರ್, ಸಫಾರಿ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‍ಯುವಿಗಳ ಪೆಟ್ರೋಲ್ ಆವೃತ್ತಿಯ ಆಯ್ದ ಟ್ರಿಮ್‌ಗಳಲ್ಲಿ 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಂ ಕೂಡ ಲಭ್ಯವಿದೆ.

Most Read Articles

Kannada
English summary
Tata Harrier, Safari Outsold MG Hector Twins In April 2021. Read In Kannada.
Story first published: Tuesday, May 4, 2021, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X