ವಿವಿಧ ಕಾರು ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದು, ವಿವಿಧ ಕಾರು ಮಾದರಿಗಳ ಮೇಲೆ ಗರಿಷ್ಠ ಪ್ರಮಾಣದ ಡಿಸ್ಕೌಂಟ್ ನೀಡುತ್ತಿದೆ.

ದಸರಾ ಮತ್ತು ದೀಪಾವಳಿ ಆಫರ್‌ಗಳ ನಂತರ ಇದೀಗ ಹೊಸ ವರ್ಷದ ಆಫರ್‌ಗಳನ್ನು ಘೋಷಣೆ ಮಾಡುತ್ತಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಆಕರ್ಷಕ ಆಫರ್‌ಗಳನ್ನು ನೀಡುತ್ತಿದೆ. ಹೊಸ ಆಫರ್‌ಗಳು ಟಾಟಾ ನಿರ್ಮಾಣದ ಟಿಯಾಗೊ, ಟಿಗೋರ್, ನೆಕ್ಸಾನ್ ಮತ್ತು ಹ್ಯಾರಿಯರ್ ಕಾರು ಖರೀದಿಯ ಅನ್ವಯವಾಗಲಿದ್ದು, ಹೊಸ ಆಫರ್ ಈ ತಿಂಗಳ 31ರ ವರೆಗೆ ಲಭ್ಯವಿರಲಿವೆ.

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಕನಿಷ್ಠ ರೂ. 15 ಸಾವಿರದಿಂದ ಗರಿಷ್ಠ ರೂ. 65 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಆರಂಭಿಕ ಕಾರು ಮಾದರಿಯಾದ ಟಿಯಾಗೋ ಹ್ಯಾಚ್‌ಬ್ಯಾಕ್ ಕಾರು ಮಾದರಿಯ ಮೇಲೆ ರೂ. 25 ಸಾವಿರ ಆಫರ್ ಘೋಷಿಸಲಾಗಿದ್ದು, ರೂ.25 ಸಾವಿರದಲ್ಲಿ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 10 ಸಾವಿರ ಎಕ್ಸ್‌ಚೆಂಜ್ ಮಾದರಿಗಳ ಮೇಲೆ ಅನ್ವಯವಾಗುತ್ತದೆ.

ಟಿಯಾಗೋ ನಂತರ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೆ ಟಾಟಾ ಮೋಟಾರ್ಸ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ನೀಡುತ್ತಿದ್ದು, ಟಿಗೋರ್ ಕಾರು ಖರೀದಿಯ ಮೇಲೆ ಗ್ರಾಹಕರು ರೂ.30 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ. ರೂ.30 ಸಾವಿರದಲ್ಲಿ ರೂ. 15 ಸಾವಿರ ಕ್ಯಾಶ್‌ಬ್ಯಾಕ್ ಮತ್ತು ರೂ.15 ಸಾವಿರ ಡಿಸ್ಕೌಂಟ್ ಸೇರ್ಪಡೆಯಾಗಿದ್ದು, ಟಿಗೋರ್ ಮತ್ತು ಟಿಯಾಗೋ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ.

ಟಿಗೋರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.70 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.6.74 ಲಕ್ಷ ಬೆಲೆ ಹೊಂದಿದ್ದರೆ ಟಿಯಾಗೋ ಕಾರು ಮಾದರಿಯು ಆರಂಭಿಕವಾಗಿ ರೂ. 5.39 ಲಕ್ಷದಿಂದ ರೂ. 7.49 ಲಕ್ಷ ಬೆಲೆ ಹೊಂದಿದೆ.

ಟಾಟಾ ಹೊಸ ವರ್ಷದ ಆಫರ್‌ಗಳಲ್ಲಿ ಜನಪ್ರಿಯ ಕಾರು ಮಾದರಿಯಾದ ನೆಕ್ಸಾನ್ ಆವೃತ್ತಿಯ ಮೇಲೆ ಕಂಪನಿಯು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ಮಾತ್ರ ನೀಡುತ್ತಿದೆ. ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.70 ಲಕ್ಷ ಬೆಲೆ ಹೊಂದಿರುವ ನೆಕ್ಸಾನ್ ಕಾರು ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

ಇನ್ನು ಹೊಸ ವರ್ಷದ ಆಫರ್‌ಗಳಲ್ಲಿ ಹ್ಯಾರಿಯರ್ ಎಸ್‌ಯುವಿ ಕಾರು ಮಾದರಿಯ ಮೇಲೆ ಟಾಟಾ ಕಂಪನಿಯು ರೂ. 65 ಸಾವಿರ ಆಫರ್ ನೀಡುತ್ತಿದ್ದು, ರೂ.65 ಸಾವಿರದಲ್ಲಿ ರೂ. 25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 40 ಸಾವಿರ ಎಕ್ಸ್‌ಚೆಂಜ್ ಆಫರ್ ಒಳಗೊಂಡಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಆಫರ್‌ಗಳು ಹ್ಯಾರಿಯರ್ ಸ್ಟ್ಯಾಂಡರ್ಡ್ ಮಾದರಿಗಳ ಮೇಲೆ ಮಾತ್ರ ಅನ್ವಯವಾಗಲಿದ್ದು, ಬ್ಲ್ಯಾಕ್ ಎಡಿಷನ್ ಮತ್ತು ಕ್ಯಾಮೋ ಎಡಿಷನ್ ಮೇಲೆ ಕೇವಲ ಎಕ್ಸ್‌ಚೆಂಜ್ ಬೋನಸ್ ಮಾತ್ರ ಅನ್ವಯವಾಗಲಿದೆ.


Click it and Unblock the Notifications