ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಆಟೋ ಬಿಡಿಭಾಗಗಳ ದರ ಹೆಚ್ಚುತ್ತಿರುವ ಪರಿಣಾಮ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಹೊಸ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಮಾಡುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಹೊಸ ವಾಹನಗಳ ದರ ಪರಿಷ್ಕರಣೆಯ ಮಾನದಂಡಗಳನ್ನು ಬದಲಾವಣೆ ಮಾಡಿರುವ ಆಟೋ ಉತ್ಪಾದನಾ ಕಂಪನಿಗಳು ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಹೆಚ್ಚಿಸುತ್ತಿದ್ದು, ಬಿಡಿಭಾಗಗಳು ದುಬಾರಿಯಾಗುತ್ತಿರುವುದರಿಂದ ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿವೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ವಾಹನಗಳ ಬೆಲೆಯಲ್ಲಿ ನಿರಂತರ ಹೆಚ್ಚಳ ಹಿನ್ನಲೆಯಲ್ಲಿ ವಾಹನ ಮಾಲೀಕತ್ವವು ಮತ್ತಷ್ಟು ಹೊರೆಯಾಗಿ ಪರಿಣಮಿಸುತ್ತಿದ್ದು, ಟಾಟಾ ಕಾರುಗಳು ಸಹ ಇದೀಗ ಮತ್ತಷ್ಟು ದುಬಾರಿಯಾಗಿವೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ಉತ್ಪಾದನಾ ವೆಚ್ಚದ ಆಧಾರದ ಮೇಲೆ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚ ನಿರ್ವಹಣೆಗಾಗಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಳ ಮಾಡುತ್ತಿವೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಬಹುತೇಕ ವಾಹನ ಉತ್ಪಾದನಾ ಕಂಪನಿಗಳು 2021ರಲ್ಲೇ ಎರಡರಿಂದ ಮೂರು ಬಾರಿ ದರ ಹೆಚ್ಚಿಸಿದ್ದು, ಇದೀಗ ಮತ್ತೆ ಬೆಲೆ ಹೆಚ್ಚಿಸಲು ನಿರ್ಧರಿಸಿವೆ. ಇದರಿಂದ ಕಾರು ಮಾಲೀಕತ್ವವು ಸಾಕಷ್ಟು ದುಬಾರಿಯಾಗುತ್ತಿದ್ದು, ಹೊಸ ವಾಹನ ಬಿಡಿಭಾಗಗಳ ಉತ್ಪಾದನೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ದರ ಸಮರಕ್ಕೆ ಪ್ರಮುಖ ಕಾರಣವಾಗಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಹೊಸ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ.50 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ದುಬಾರಿಯಾಗುತ್ತಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಟಾಟಾ ಹೊಸ ಕಾರುಗಳ ದರಪಟ್ಟಿಯಲ್ಲಿ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆಯಲ್ಲಿ ಶೇ. 0.50 ರಿಂದ ಶೇ. 1 ರಷ್ಟು ದುಬಾರಿಯಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.1 ಸಾವಿರದಿಂದ ರೂ. 11 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಹೊಸ ದರ ಪಟ್ಟಿಯಲ್ಲಿ ನೆಕ್ಸಾನ್ ಕಾರು ಮಾದರಿಯು ಇದೀಗ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13.34 ಲಕ್ಷ ಬೆಲೆ ಹೊಂದಿದ್ದು, ಕೆಲವು ವೆರಿಯೆಂಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಹೊಸ ಕಾರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ ಪಡೆದ ನಂತರ ಕಾರು ಮಾರಾಟವು ನಿರಂತವಾಗಿ ಏರಿಕೆಯಾಗುತ್ತಿದ್ದು, ಸ್ವದೇಶಿ ಕಂಪನಿಗಳ ನಿರ್ಮಿತ ವಾಹನ ಬಳಕೆಗೆ ಗ್ರಾಹಕರ ಒಲವು ತೋರುತ್ತಿರುವುದು ಕೂಡಾ ಟಾಟಾ ಕಾರುಗಳ ಮಾರಾಟ ಬೆಳವಣಿಗೆ ಮತ್ತೊಂದು ಕಾರಣವಾಗಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಗ್ರಾಹಕರ ವಿಶ್ವಾಸದಂತೆ ಹೊಸ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ಕಾರುಗಳೊಂದಿಗೆ ಇನ್ನಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಬಿಎಸ್-6 ಎಮಿಷನ್ ನಂತರ ಹಲವಾರು ಬದಲಾವಣೆಗಳೊಂದಿಗೆ ಮಾರಾಟವಾಗುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು, ಕಳೆದ ಕೆಲ ತಿಂಗಳಿನಿಂದ ಪ್ರತಿ ತಿಂಗಳು 10 ಸಾವಿರ ಯುನಿಟ್ ಮಾರಾಟಗೊಳ್ಳುತ್ತಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿರುವ ನೆಕ್ಸಾನ್ ಕಾರು ಮಾದರಿಯು 40ಕ್ಕೂ ಹೆಚ್ಚು ವಿವಿಧ ವೆರಿಯೆಂಟ್ ಹೊಂದಿದ್ದು, ಮಧ್ಯಮ ಕ್ರಮಾಂಕದಲ್ಲಿರುವ ಮಾದರಿಗಳನ್ನು ಸಾಕಷ್ಟು ಬದಲಿಸಲಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಟಾಟಾ ಕಂಪನಿಯು ಹೊಸ ಕಾರುಗಳನ್ನು OMEGA ಕಾರು ಉತ್ಪಾದನಾ ತಂತ್ರಜ್ಞಾನದಡಿಯಲ್ಲಿ ಕಾರು ಅಭಿವೃದ್ದಿ ಮಾಡುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿನ ನೆಕ್ಸಾನ್ ಕಾರು ಮಾದರಿಯು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬೆಲೆ ಹೆಚ್ಚಳ: ಕಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ!

ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಕಾರು ಉತ್ಪನ್ನಗಳನ್ನು ಉನ್ನತೀಕರಿಸುತ್ತಿರುವ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದೆ.

Article Published On: Saturday, November 27, 2021, 20:10 [IST]
English summary
Tata motors hiked nexon price up to rs 11000 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+