ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ಕೋವಿಡ್ ಪರಿಣಾಮ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಏರಿಳಿತ ಕಂಡುಬಂದರೂ ಆಟೋ ಉತ್ಪಾದನಾ ಕ್ಷೇತ್ರ ಮಾತ್ರ ಗರಿಷ್ಠ ಮಟ್ಟದ ಬೆಳವಣಿಗೆ ಸಾಧಿಸುತ್ತಿದ್ದು, ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ದೇಶದ ಜನಪ್ರಿಯ ಟಾಟಾ ಮೋಟಾರ್ಸ್ ಕೂಡಾ ಹೊಸ ಕಾರುಗಳ ಮಾರಾಟದಲ್ಲಿ ಕಳೆದ ಆರು ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಳೆದ ವರ್ಷದ ಕಾರು ಮಾರಾಟ ಪ್ರಮಾಣಕ್ಕಿಂತಲೂ ಇದೀಗ ಮೂರು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಗ್ರಾಹಕರ ಬೇಡಿಕೆ ಪೂರೈಕೆ ಸಹಕಾರಿಯಾಗುವಂತೆ ಮಾರಾಟ ಮಳಿಗೆಗಳು ಸೇವಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುತ್ತಿದ್ದು, ಇಂದು ಒಂದೇ ದಿನದಲ್ಲಿ ಸುಮಾರು 10 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ದೆಹಲಿ ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ ಹತ್ತು ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲಾಗಿದ್ದು, ಹೊಸದಾಗಿ ಚಾಲನೆ ಪಡೆದುಕೊಳ್ಳುತ್ತಿರುವ ಶೋರೂಂಗಳಲ್ಲಿ ಕಾರು ಮಾರಾಟದ ಜೊತೆಗೆ ಗ್ರಾಹಕರ ಸೇವಾ ಕೇಂದ್ರಗಳನ್ನು ಸಹ ಒಂದೇ ಸೂರಿನಡಿನಲ್ಲಿ ಆರಂಭಿಸಲಾಗುತ್ತಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ಕಾರುಗಳ ಮಾರಾಟದಲ್ಲಿನ ವಾರ್ಷಿಕ ಬೆಳವಣಿಗೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಳೆದ 9 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಮಾದರಿಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

2020ರ ಮಾರ್ಚ್ ಅವಧಿಯಲ್ಲಿ 5,676 ಯನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಕಂಪನಿಯು 2021ರ ಮಾರ್ಚ್ ಅವಧಿಯಲ್ಲಿ ಒಟ್ಟು 29,654 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕವಾಗಿ ಶೇ.422 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ತಿಂಗಳ ವಾಹನ ಮಾರಾಟದಲ್ಲಿ ಶೇ.9.3 ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಕಂಪನಿಯು ಪ್ರಮುಖ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ಕಾರುಗಳು ಉತ್ತಮ ಬೇಡಿಕೆ ತಂದುಕೊಡುತ್ತಿವೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ಪ್ರಯಾಣಿಕರ ವಾಹನದ ಜೊತೆಗೆ ವಾಣಿಜ್ಯ ವಾಹನ ಮಾರಾಟದಲ್ಲೂ ಕೂಡಾ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಅತ್ಯುತ್ತಮ ದೇಶಿಯ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಬಿಡುಗಡೆಯಾಗಿರುವ ಹೊಸ ವಾಹನಗಳು ಟಾಟಾ ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡುವ ನೀರಿಕ್ಷೆಯಲ್ಲಿವೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನಕ್ಕೇರಿರುವ ಟಾಟಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಮತ್ತಷ್ಟು ಹೊಸ ಕಾರುಗಳ ಮೂಲಕ ಪ್ರತಿ ತಿಂಗಳು 40 ಸಾವಿರ ಯುನಿಟ್ ಮಾರಾಟ ಗುರಿಹೊಂದಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ಇತ್ತೀಚೆಗೆ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಸಫಾರಿ ಮತ್ತು ಬಿಡುಗಡೆಯಾಗಲಿರುವ ಮೈಕ್ರೊ ಎಸ್‌ಯುವಿ ಕಾರು ಮಾದರಿಯು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿದ್ದು, ಸ್ವಂತ ಕಾರುಗಳ ಬಳಕೆಯು ಹೆಚ್ಚುತ್ತಿರುವುದು ಕೂಡಾ ಕಾರುಗಳ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ಟಾಟಾ ಕಂಪನಿಯು ಹೊಸ ಕಾರುಗಳನ್ನು OMEGA ಕಾರು ಉತ್ಪಾದನಾ ತಂತ್ರಜ್ಞಾನದಡಿಯಲ್ಲಿ ಕಾರು ಅಭಿವೃದ್ದಿ ಮಾಡುತ್ತಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಹೊಸ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ಹೀಗಾಗಿ ಹೊಸ ಕಾರುಗಳ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ನ್ಯೂ ಜನರೇಷನ್ ಸಫಾರಿ ಕಾರು ಮಾದರಿಯು ಉತ್ತಮ ಬೆಲೆ ಪಟ್ಟಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಒಂದೇ ದಿನ ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದ ಟಾಟಾ

ಟಿಯಾಗೊ, ಟಿಗೋರ್, ಆಲ್‌ಟ್ರೊಜ್, ನೆಕ್ಸಾನ್, ನೆಕ್ಸಾನ್ ಇವಿ, ಹ್ಯಾರಿಯರ್ ಕಾರು ಮಾದರಿಗಳೊಂದಿಗೆ ಸಫಾರಿ ಎಸ್‌ಯುವಿ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಕಾರುಗಳ ಮಾರಾಟ ಹೆಚ್ಚಳಕ್ಕೆ ಪೂರಕವಾಗಿ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ.

More from DriveSpark

Article Published On: Tuesday, April 6, 2021, 17:03 [IST]
English summary
Tata Motors inaugurates 10 new showrooms across Delhi NCR. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+