ಜುಲೈ ತಿಂಗಳ ವಾಹನ ಮಾರಾಟ- ಶೇ. 92ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ಮೋಟಾರ್ಸ್
ಕೋವಿಡ್ 2ನೇ ಅಲೆಯ ನಂತರ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಮಾರಾಟವು ಬೆಳವಣಿಗೆ ಸಾಧಿಸುತ್ತಿದ್ದು, ಜುಲೈ ಅವಧಿಯ ವಾಹನ ಮಾರಾಟದಲ್ಲಿ ಟಾಟಾ ಮೋಟರ್ಸ್ ಕಂಪನಿಯು ಶೇ.92 ರಷ್ಟು ಬೆಳವಣಿಗೆ ಕಂಡಿದೆ.

ಟಾಟಾ ಮೋಟಾರ್ಸ್ ಕಂಪನಿಯು ಕೋವಿಡ್ ಪರಿಣಾಮ ಮೇ ಮತ್ತು ಜೂನ್ ತಿಂಗಳಿನಲ್ಲಿನ ಹೊಸ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದ್ದರೂ ಜುಲೈ ಅವಧಿಯ ವಾಹನ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, ಶೇ. 92 ರಷ್ಟು ಬೆಳವಣಿಯೊಂದಿಗೆ ಸುಮಾರು 51,918 ವಾಹನಗಳನ್ನು ಮಾರಾಟ ಮಾಡಿದೆ.

ಈ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು 2020ರ ಜುಲೈ ಅವಧಿಯಲ್ಲಿ ವಾಹನ ಮಾರಾಟಕ್ಕಿಂತಲೂ ಮತ್ತು 2021ರ ಜುಲೈ ಅವಧಿಯಲ್ಲಿ ವಾಹನ ಮಾರಾಟದಲ್ಲಿ ಶೇ.92ರಷ್ಟು ಬೆಳವಣಿಗೆ ಸಾಧಿಸಿದ್ದು, ಪ್ರಯಾಣಿಕರ ವಾಹನ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ಪ್ರಯಾಣಿಕರ ಕಾರು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು 30,185 ಯುನಿಟ್ ಮಾರಾಟದೊಂದಿಗೆ ಕಳೆದ ವರ್ಷದ ಜುಲೈ ಅವಧಿಗಿಂತ ಶೇ.101 ರಷ್ಟು ಬೆಳವಣಿಗೆ ಸಾಧಿಸಿದ್ದು, ತಿಂಗಳ ಕಾರು ಮಾರಾಟದಲ್ಲಿ ಜೂನ್ ಅವಧಿಗಿಂತಲೂ ಜುಲೈನಲ್ಲಿ ಶೇ.25ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಹಾಗೆಯೇ ವಾಣಿಜ್ಯ ವಾಹನ ವಿಭಾಗದಲ್ಲೂ ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಅಗ್ರಸ್ಥಾನದಲ್ಲಿದ್ದು, ಒಟ್ಟು 23,848 ಯುನಿಟ್ ಮಾರಾಟ ಮಾಡಿದೆ. ಇದರಲ್ಲಿ 2,052 ಯುನಿಟ್ ವಾಹನಗಳು ವಿದೇಶಿ ಮಾರುಕಟ್ಟೆಗೂ ರಫ್ತುಗೊಂಡಿದ್ದು, ವಾಣಿಜ್ಯ ವಾಹನ ಮಾರಾಟವು ಶೇ. 88 ರಷ್ಟು ಬೆಳವಣಿಗೆ ಕಂಡಿದೆ.

ಇನ್ನು ಕೋವಿಡ್ ಭೀತಿಯಿಂದ ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ವಾಹನ ಖರೀದಿಗೆ ಆಸಕ್ತಿ ತೋರುವುದರ ಜೊತೆಗೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿರುವುದು ಆಟೋ ಕಂಪನಿಗಳಿಗೆ ಉತ್ತಮ ಆಯ್ಕೆಯಾಗುತ್ತಿದೆ.

ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ.

ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದ್ದು, ಇದೀಗ ಟಾಟಾ ಕಂಪನಿಯು ಸಹ ಶೋರೂಂಗಳು ಆರಂಭವಿಲ್ಲವಾದರೂ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಒಂದಿಷ್ಟು ಬೇಡಿಕೆ ಪಡೆದುಕೊಂಡಿದೆ.

ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಾಕಷ್ಟು ಪ್ರಯೋಜಕಾರಿಯಾಗಿದೆ.

ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.


Click it and Unblock the Notifications